ಚಕ್ರೀಯ ಚತುರ್ಭುಜಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ಆವರ್ತಕ ಚತುರ್ಭುಜಗಳು ಇಂದ ಪುನರ್ನಿರ್ದೇಶಿತ)
Jump to navigation Jump to search

ಉದ್ದೇಶಗಳು

  • ಚಕ್ರೀಯ ಚತುರ್ಭುಜಗಳ ಬಗ್ಗೆ ಅರ್ಥಮಾಡಿಕೊಳ್ಳುವುದು
  • ಅಭಿಮುಖ ಕೋನಗಳು ಪೂರಕವಾಗಿದ್ದರೆ ಮಾತ್ರ ಚತುರ್ಭುಜವು ಚಕ್ರೀಯ ವಾಗಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ

ಅಂದಾಜು ಸಮಯ

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ದಿಕ್ಸೂಚಿ, ಅಳತೆಪಟ್ಟಿ, ಕೋನಮಾಪಕ

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಶೃಂಗಗಳು, ರೇಖಾಖಂಡಗಳು, ಕೋನಗಳು, ವೃತ್ತಗಳು, ಚತುರ್ಭುಜಗಳು ಮತ್ತು ಅದರ ವಿಧಗಳು ಹಾಗಳ ಪೂರಕ ಕೋನಗಳ ಬಗ್ಗೆ ಪೂರ್ವ ಜ್ಞಾನ

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ಕೇಂದ್ರ O ದಿಂದ ವೃತ್ತವನ್ನು ಎಳೆಯಿರಿ.
  • ವೃತ್ತದ ಪರಿಧಿಯ ಮೇಲೆ A, B, C, D ನಾಲ್ಕು ಬಿಂದುಗಳನ್ನು ತೆಗೆದುಕೊಳ್ಳಿ.
  • ವೃತ್ತದ ಮೇಲೆ AB, BC, CD, DA ಯನ್ನು ಸೇರಿಸಿ.
  • ವೃತ್ತದಲ್ಲಿನ ಚತುರ್ಭುಜವನ್ನು ಗುರುತಿಸಿ
  • ಈ ರೀತಿಯ ಚತುರ್ಭುಜಗಳಿಗೆ ನೀವು ಏನು ಕರೆದಿದ್ದೀರಿ?
  • ಚಕ್ರೀಯ ಚತುರ್ಭುಜಗಳು ಎಂದರೇನು?
  • ಚಕ್ರೀಯ ಚತುರ್ಭುಜಗಳಲ್ಲಿನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ?
  • ಚಕ್ರೀಯ ಚತುರ್ಭುಜಗಳಲ್ಲಿ ಒಂದು ಜೋಡಿ ಅಭಿಮುಖ ಕೋನಗಳನ್ನು ಗುರುತಿಸಿ?
  • ಚಕ್ರೀಯ ಚತುರ್ಭುಜದ ಅಭಿಮುಖ ಕೋನಗಳ ಮೊತ್ತ ಎಷ್ಟು? ನಿಮ್ಮ ತೀರ್ಮಾನವೇನು?
ಕ್ರಮ ಸಂಖ್ಯೆ ಚತುರ್ಭುಜ ಕೋನಗಳು ಜೋಡಿ ಅಭಿಮುಖ ಕೋನಗಳು 1 ಜೋಡಿ ಅಭಿಮುಖ ಕೋನಗಳು 2 ಅಭಿಮುಖ ಕೋನಗಳು1 ರ ಮೊತ್ತ ಜೋಡಿ ಅಭಿಮುಖ ಕೋನಗಳು 2 ರ ಮೊತ್ತ ನಿರ್ಣಯ/ತೀರ್ಮಾನ
1 2 3 4
1

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಚಕ್ರೀಯ ಚತುರ್ಭುಜದ ಒಂದು ಕೋನವು 30 ಡಿಗ್ರಿ ಆಗಿದ್ದರೆ, ಅದರ ಅಭಿಮುಖ ಕೋನದ ಮೌಲ್ಯ ಏನು?
  • ಕೋನ B 60 ಡಿಗ್ರಿ ಆಗಿದ್ದರೆ, ಚಕ್ರೀಯ ಚತುರ್ಭುಜದ ಕೋನ D ಮೌಲ್ಯವನ್ನು ಕಂಡುಹಿಡಿಯಿರಿ?