ಇಟಲಿಯ ಏಕೀಕರಣ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳುಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Italiya ekikarana.mm

ಪಠ್ಯಪುಸ್ತಕ

9ನೇ ತರಗತಿಗೆ ಕರ್ನಾಟಕ ರಾಜ್ಯದ ಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು &ರಾಷ್ಟ್ರ ಪ್ರಭುತ್ವಗಳ ಏಳಿಗೆ ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಇಟಲಿ &ಜರ್ಮನಿ ಏಕೀಕರಣವನ್ನು ಒಳಗೊಂಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಇಟಲಿಯ ಏಕೀಕರಣದ ಕಾರಣ & ಘಟನೆ , ಪರಿಣಾಮಗಳ ಜೊತೆಗೆ ಇಟಲಿ ಏಕೀಕರಣಕ್ಕಾಗಿ ಶ್ರಮಿಸಿದ ಪ್ರಮುಖ ದೇಶಭಕ್ತರ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ತಮ್ಮ ದೇಶದಲ್ಲಿಯೂ , ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ನಾಯಕರ ಜೀವನ ಚರಿತ್ರೆಯನ್ನು ಓದುವಂತೆ ಮಾಡುವುದು ಹಾಗೂ ಉನ್ನತ ರಾಷ್ಟ್ರೀಯ ಭಾವನೆ ಬೆಳೆಸುವುದು ಪ್ರಮುಖ ಉದ್ಧೇಶವಾಗಿದೆ. ದೇಶದ ವಿಭಜನೆಗೆ ಕಾರಣವಾಗುವ ಅಂಶಗಳ ಬಗ್ಗೆ ಗಮನ ಹರಿಸುವುದು ಹಾಗೂ ದೇಶದ ಐಕ್ಯತೆಗಾಗಿ ಕೈಗೊಳ್ಳ ಬೇಕಾದ ಕ್ರಮಗಳನ್ನು ಚಿಂತಿಸುವ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಈ ಘಟಕದ ಪ್ರಮುಖ ಉದ್ದೇಶವಾಗಿದೆ.

ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಈ ಲಿಂಕ್ ಬಳಸಿ 9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು.

ಮತ್ತಷ್ಟು ಮಾಹಿತಿ

ಇಟಲಿ ಯುರೋಪ್ ಖಂಡದ ದಕ್ಷಿಣದಲ್ಲಿರುವ ಪರ್ಯಾಯ ದ್ವೀಪ ಇಟಲಿ.ತನ್ನ ದಕ್ಷಿಣದ ಬಹುಭಾಗ ಭೂಮಿಯನ್ನು ಮೆಡಿಟರೇನಿಯನ್ ಸಾಗರದಲ್ಲಿ ಚಾಚಿಕೊಂಡಿದೆ.ದೇಶದ ದಕ್ಷಿಣದಲ್ಲಿ ಜೀವಂತ ಅಗ್ನಿ ಪರ್ವತಗಳಿರುವ ಅಪನೈನ್ ಪರ್ವತ ಶಿಖರಗಳು ,ಅವುಗಳಲ್ಲಿ ಕೆಲವು ಕ್ರಿಯಾಶೀಲ ಅಗ್ನಿಪರ್ವತಗಳು.ಇನ್ನೂ ದಕ್ಷಿಣಕ್ಕಿಳಿದರೆ ವೆಸುವಿಯಸ್ ಜ್ವಾಲಾಮುಖಿಗಳು.ಸುಪ್ರಸಿದ್ಧ ರೊಮನ್ ನಗರ ಪಾಂಪೆಯನ್ನು ಹಾಳುಗೆಡವಿದ ವೆಸುವಿಯಸ್ ಜ್ವಾಲಾಮುಖಿ ಇರುವುದು ಇಲ್ಲಿಯೆ. ಜಗತ್ತಿನ ಅತಿ ಪ್ರಾಚೀನ ದೇಶಗಳಲ್ಲಿ ಇಟಲಿಯೂ ಒಂದು.ಪ್ರಾಚೀನ ಕಾಲದ ಜನಜೀವನದ ಕುರುಹುಗಳು ಇಲ್ಲಿ ಕಂಡುಬಂದಿವೆ.ಪಶ್ಚಿಮ ಯುರೋಪಿನ ಸಂಸ್ಕೃತಿ &ಇತಿಹಾಸವನ್ನು ರೂಪಿಸುವುದರಲ್ಲಿ ಇಟಲಿಯ ಪಾತ್ರ ಹಿರಿದು..ಕ್ರಿ.ಶ.476ರಲ್ಲಿ ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ಇಟಲಿ ಛಿದ್ರಗೊಂಡಿತು.16ನೇ ಶತಮಾನದಲ್ಲಿ ನೆಪೋಲಿಯನ್ ಬೋನಾಪಾರ್ಟೆ ಇದರ ಸಾಮ್ರಾಟನಾಗಿದ್ದ. ಚಿತ್ರಕಲಾವಿದ ಲಿಯೋನಾರ್ಡೊ ಡಾ ವಿಂಚಿ,ಮೈಕೆಲ್ ಎಂಜೆಲೋ,ರಾಫೆಲ್ ತಮ್ಮ ಕಲಾಕೃತಿಗಳಿಂದ ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅಂಕಿಅಂಶಗಳು ವಿಸ್ತಿರ್ಣ: 3,01,270 ಚ.ಕೀ.ಮೀ. ಭೂ ಬಳಕೆ ಶೇ.32 ಕೃಷಿ ಯೋಗ್ಯ, ಶೇ.10-ಶಾಶ್ವತ ಬೆಳೆ,,ಶೇ:17 ಹುಲ್ಲುಗಾವಲು&ಗೋಮಾಳ,ಶೇ:22 ಅರಣ್ಯ,ಶೇ:19 ಇತರ ಭೂಮಿ ಜನಸಂಖ್ಯೆ:5,77,82000(ರೋಮನ್ ಕ್ಯಾಥೊಲಿಕರು,ಯೆಹೂದ್ಯರು) ಉದ್ಯಮ ಸ್ವಯಂಚಾಲಿತ ಯಂತ್ರೋಪಕರಣಗಳ ತಯಾರಿ,ಫ್ಯಾಷನ್ ತಂತ್ರಜ್ಞಾನ,ಗಣಿಗಾರಿಕೆ,ತೈಲ&ನೈಸರ್ಗಿಕ ಅನಿಲ ಉತ್ಪಾದನೆ,ವಾಹನಗಳ ತಯಾರಿಕೆ. ನೈಸರ್ಗಿಕ ಸಂಪನ್ಮೂಲ ಸುಣ್ಣದ ಕಲ್ಲು,ಪೊಟ್ಯಾಷ್,ಗಂಧಕ,ಸೀಸ ಪ್ರಮುಖ ನಗರ ರೋಮ್(ರಾಜಧಾನಿ),ಮಿಲಾನ್,ಜಿನೋವ,ನೇಪಲ್ಸ್,ಟ್ಯುರಿನ್ ಮುಖ್ಯ ಬೆಳೆ ಮೆಕ್ಕೆಜೋಳ,ಆಲೂಗಡ್ಡೆ,ಹಣ್ಣು ಹಂಪಲುಗಳು,ತರಕಾರಿ, ಬಾರ್ಲಿ, ಆಲಿವ್ ನಾಣ್ಯ ಲೀರ ವಾಯುಗುಣ ಮೆಡಿಟರೇನಿಯನ್ ವಾಯುಗುಣ, ಅಧಿಕೃತ ಭಾಷೆ-ಇಟಾಲಿಯನ್ ಶಿಕ್ಷಣ 6-14ರ ವಯಸ್ಸಿನ ವರೆಗೆ ಕಡ್ಡಾಯ ಶಿಕ್ಷಣ,ಸಾಕ್ಷರತೆ-ಶೇಕಡ:93

ಮತ್ತಷ್ಟು ಮಾಹಿತಿಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

N C E R T ಪುಸ್ತಕಕ್ಕಾಗಿ ಈ ಲಿಂಕನ್ನು ಸಂಪರ್ಕಿಸಿ

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಇಟಲಿ ಏಕೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಇಟಲಿ ಏಕೀಕರಣ,ಕಾರಣ,ಘಟನೆಗಳು, ಏಕೀಕರಣಕ್ಕಾಗಿ ಶ್ರಮಿಸಿದ ಪ್ರಮುಖ ನಾಯಕರು,ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸಬಹುದು.

ಇಟಲಿ ಏಕೀಕರಣದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಲು ಈ ಲಿಂಕನ್ನು ಸಂಪರ್ಕಿಸಿ

ಇಟಲಿ ಏಕೀಕರಣದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಲು ಈ ಲಿಂಕನ್ನುಸಂಪರ್ಕಿಸಿ

ಈ ಲಿಂಕನ್ನು ಬಳಸಿ ಇಟಲಿ ಏಕೀಕರಣದ ವಿವಿಧ ಹಂತಗಳನ್ನು ಹೆಚ್ಚಿನದಾಗಿ ತಿಳಿಯಬಹುದಾಗಿದೆ


ಈ ನಕಾಶೆಯನ್ನು ಬಳಸಿ 1494 ರಲ್ಲಿ ಇಟಲಿಯ ವಿವಿಧ ಪ್ರಾಂತ್ಯಗಳ ಏಕೀಕರಣದ ಮಾಹಿತಿಯನ್ನು ಪಡೆಯಬಹುದು

ಕ್ರಿ.ಶ.1859ರಲ್ಲಿನ ಇಟಲಿ ಏಕೀಕರಣದ ನಕಾಶೆ

ಕ್ರಿ.ಶ.1860ರಲ್ಲಿನ ಇಟಲಿ ಏಕೀಕರಣದ ನಕಾಶೆ

ಈ ಕೆಳಗಿನ ಲಿಂಕ್ ಗಳು ವಿವಿಧ ಅಂತರ್ಜಾಲ ತಾಣಗಳಿಗೆ ಸಂಬಂಧಿಸಿದ್ದು ಇವುಗಳ ಮೂಲಕ ಇಟಲಿ ಏಕೀಕರಣಕ್ಕೆ ಕಾರಣಕರ್ತರಾದ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು

ಜೊಸೆಫ್ ಮ್ಯಾಜಿನಿಯವರ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಮ್ಯಾಜಿನಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕನನ್ನು ಕ್ಲಿಕ್ಕಿಸಿ

ಇಟಲಿ ಏಕೀಕರಣದ ಪ್ರಧಾನ ಪಾತ್ರಧಾರಿ ಕವೂರ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಗ್ಯಾರಿಬಾಲ್ಡಿ ,ಇಟಲಿ ಏಕೀಕರಣದ ಪ್ರಮುಖ ಶಿಲ್ಪಿಯಾಗಿದ್ದು ,ಕೆಂಪಂಗಿದಳ ಸೈನ್ಯದ ಮೂಲಕ ಏಕೀಕರಣವನ್ನು ಸಾಧಿಸಿದವನು ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕನನ್ನು ಕ್ಲಿಕ್ಕಿಸಿ

ಇಟಲಿ ಏಕೀಕರಣವನ್ನು ಪ್ರೊತ್ಸಾಹಿಸಿ , ಏಕೀಕರಣವನ್ನು ಸಾಧಿಸುವಲ್ಲಿ ನೆರವಾದ ದೊರೆ ವಿಕ್ಟರ್ ಎಮ್ಯಾನ್ಯುಯಲ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ದೊರೆ ವಿಕ್ಟರ್ ಎಮ್ಯಾನ್ಯುಯಲ್ ಜೀವನ , ಸಾಧನೆ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಲಿಂಕನನ್ನು ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

 • ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ
 • ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ

ಬೋಧನೆಯ ರೂಪರೇಶಗಳು

ಇಟಲಿ ಏಕೀಕರಣ ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ ಸಾಕ್ಷಿಯಾಗಿರುವ ಘಟನೆ. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು.

ಪ್ರಮುಖ ಪರಿಕಲ್ಪನೆಗಳು #1 ಇಟಲಿಯ ಏಕೀಕರಣ

ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಇಟಲಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು.ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ ಸಾಕ್ಷಿಯಾಗಿರುವ ಘಟನೆ. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು. ಈ ಅಧ್ಯಾಯದ ಜೊತೆ ಸ್ವಾತಂತ್ರ್ಯ ನಂತರ ನಡೆದ ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು.ಹೆಚ್ಚಿನ ಮಾಹಿತಿಗೆ ಇಲ್ಲಿ ಒದಗಿಸಲಾಗಿರುವ ಲಿಂಕ್ ಗಳನ್ನು ಗಮನಿಸಬಹುದು.

ಕಲಿಕೆಯ ಉದ್ದೇಶಗಳು

 • ಇಟಲಿ ಏಕೀಕರಣದ ಬಗ್ಗೆ ಮಾಹಿತಿ ಪಡೆಯುವುದು.
 • ಇಟಲಿ ಏಕೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುವರು.
 • ಇಟಲಿ ಏಕೀಕರಣದಲ್ಲಿ ಮ್ಯಾಜಿನಿಯ ಪಾತ್ರ ಗುರುತಿಸುವುದು.
 • ಇಟಲಿ ಏಕೀಕರಣದಲ್ಲಿ ಕವೂರ್ ವಹಿಸಿದ ರಾಜನೀತಿಜ್ಞನ ಪಾತ್ರ ಅಭಿನಯಿಸುವುದು.
 • ಇಟಲಿ ಏಕೀಕರಣದ ಪರಿಣಾಮ ಪಟ್ಟಿ ಮಾಡುವುದು.
 • ಇಟಲಿ ಏಕೀಕರಣದ ನಂತರದಲ್ಲಿ ಯುರೋಪ್ ನಲ್ಲಿ ಸಂಭವಿಸಿದ ಮೊದಲ&ಎರಡನೇ ಮಹಾಯುದ್ಧದಲ್ಲಿ ಇಟಲಿಯ ಪಾತ್ರ ಗುರುತಿಸುವುದು.
 • ಇಟಲಿಯ ಏಕೀಕರಣ ಸಾಧ್ಯವಾಗಲು ಕಾರಣವಾದ ಪರಿಸ್ಥಿತಿ ಕುರಿತು ತಿಳಿದುಕೊಳ್ಳುವರು.
 • ಇಟಲಿಯ ಏಕೀಕರಣ ದಲ್ಲಿ ಗ್ಯಾರಿಬಾಲ್ಡಿ ಯ ಪಾತ್ರ ಕುರಿತು ಚರ್ಚಿಸುವರು.


ಶಿಕ್ಷಕರ ಟಿಪ್ಪಣಿ

ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ದೇಶದ ಐಕ್ಯತೆಗಾಗಿ ಸದಾ ಕಾಲ ಹೋರಾಡುವ ಮನೋಭಾವನೆಯನ್ನು ಈ ಘಟಕದ ಮೂಲಕ ಬೆಳೆಸಬಹುದು. ದೇಶದ ಐಕ್ಯತೆಗಾಗಿ ದುಡಿದ ಮಹನೀಯರ ಮಾಹಿತಿ. ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು.

ಚಟುವಟಿಕೆ #1 ಮಾಹಿತಿ ಸಂಗ್ರಹ

 1. ಇಟಲಿ ಏಕೀಕರಣಕ್ಕೆ ಕಾರಣಕರ್ತರಾದ ಪ್ರಮುಖ ನಾಯಕರ ಜೀವನ, ಸಾಧನೆ ಮಾಹಿತಿ ಸಂಗ್ರಹ& ಆಲ್ಬಂ ತಯಾರಿ.
 • ಅಂದಾಜು ಸಮಯ -45 ನಿಮಿಷ
 • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -
 • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಪೇಪರ್, ಪೆನ್, ಚಿತ್ರಗಳು, .ಡ್ರಾಯಿಂಗ್ ಹಾಳೆ .
 • ಬಹುಮಾಧ್ಯಮ ಸಂಪನ್ಮೂಲಗಳು-ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ಇಟಲಿ ಏಕೀಕರಣಕ್ಕೆ ಸಂಬಂಧಿಸಿದ ನಾಯಕರ ಬಗ್ಗೆ ಮಾಹಿತಿ ನೀಡುವುದು
 • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ ಬಳಕೆ
 • ಅಂತರ್ಜಾಲದ ಸಹವರ್ತನೆಗಳು-ಇಟಲಿ ಏಕೀಕರಣದ ನಾಯಕರ ಚಿತ್ರಗಳನ್ನು ಡೌನಲೋಡ್ ಮಾಡಿಕೊಳ್ಳುವುದು.
 • ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು.
 • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
 • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-
 • ಪ್ರಶ್ನೆಗಳು-
 1. ಇಟಲಿ ಏಕೀಕರಣದಲ್ಲಿ ಮ್ಯಾಜಿನಿ ವಹಿಸಿದ ಪಾತ್ರವೇನು?
 2. ಇಟಲಿ ಏಕೀಕರಣವು ಗ್ಯಾರಿಬಾಲ್ಡಿಯ ಹೋರಾಟದ ಫಲವಾಗಿದೆ ಎನ್ನಲು ನೀವು ಕೊಡುವ ಕಾರಣಗಳೇನು

ಚಟುವಟಿಕೆ #2 ಚರ್ಚೆ

 1. ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮವೇ ಆಗಿದೆ. ಚರ್ಚೆ.
 • ಅಂದಾಜು ಸಮಯ -45 ನಿಮಿಷ
 • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್, ಪೆನ್,
 • ಪೂರ್ವಾಪೇಕ್ಷಿತ/ ಸೂಚನೆಗಳು-=ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ವಿದ್ಯಾರ್ಥಿಗಳಿಗೆ ಪರ & ವಿರೋಧದ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಸೂಚನೆ ನೀಡುವುದು.
 • ಬಹುಮಾಧ್ಯಮ ಸಂಪನ್ಮೂಲಗಳು-
 • ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಂಥಾಲಯ ಬಳಕೆ
 • ಅಂತರ್ಜಾಲದ ಸಹವರ್ತನೆಗಳು-
 • ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚರ್ಚೆಗೆ ಒಳಪಡಿಸುವುದು.ವರದಿ ತಯಾರಿಸುವುದು.ಶಿಕ್ಷಕರು ಅಂತಿಮ ನಿರ್ಣಯವನ್ನು ನೀಡುವುದು.
 • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
 • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-
 • ಪ್ರಶ್ನೆಗಳು
 1. ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮ ಎನ್ನಲು ನೀವು ಕೊಡುವ ಕಾರಣಗಳೆನು?
 2. ಇಟಲಿ ಏಕೀಕರಣವು ಆ ದೇಶದ ಜನರ ಜಾಗೃತಿಯ ಫಲ ಎನ್ನಲು ಯಾವ ಕಾರಣ ನೀಡುವಿರಿ?

ಯೋಜನೆಗಳು

 1. ಇಟಲಿಏಕೀಕರಣದ ವಿವಿಧ ಹಂತಗಳ ನಕಾಶೆ ಬರೆಯಿರಿ
 2. ಇಟಲಿ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದವರ ಆಲ್ಬಮ್ ತಯಾರಿಸಿ.

ಸಮುದಾಯ ಆಧಾರಿತ ಯೋಜನೆಗಳು

 1. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಏಕತೆ ಮೂಡಿಸಲು ನಾಗರಿಕರಾಗಿ ನಾವೇನು ಮಾಡಬಹುದು?
 2. ರಾಷ್ಟ್ರೀಯ ಐಕ್ಯತೆಯನ್ನು ಹೇಗೆ ಸಾಧಿಸಬಹದು? ಜನಾಭಿಪ್ರಾಯ ಸಂಗ್ರಹ.
 3. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ಮಾಹಿತಿ ಸಂಗ್ರಹ.


ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ