ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation
Jump to search
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ
|
ಇಮೇಜ್ ವ್ಯೂವರ್ ಎಂಬುದು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಚಿತ್ರಗಳನ್ನು ಪ್ರದರ್ಶಿಸುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
|
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
|
ಕಥೆ ಹೇಳುವುದರಲ್ಲಿ ಚಿತ್ರಗಳು ಬಹುಮುಖ್ಯವಾದ ಹಾಗು ಪ್ರಬಲವಾದ ಪಾತ್ರವಹಿಸುತ್ತವೆ. ಇಮೇಜ್ ವ್ಯೂವರ್ ಮೂಲಕ ಕಂಪ್ಯೂಟರ್‌ನಲ್ಲಿರುವ ಚಿತ್ರಗಳನ್ನು ಒಂದು ಕಡತಕೋಶದಲ್ಲಿ ಉಳಿಸಿಕೊಂಡು ಪ್ರಸ್ತುತಿ ಪಡಿಸಬಹುದು. ಕಥೆಗೆ ಪೂರಕವಾಗಿ ಕ್ರಮಾನುಗತವಾಗಿ ಚಿತ್ರಗಳನ್ನು ತೋರಿಸಬಹುದು.
|
ಆವೃತ್ತಿ
|
3.18.2
|
ಸಂರಚನೆ
|
ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
|
ಇತರೇ ಸಮಾನ ಅನ್ವಯಕಗಳು
|
|
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
ಆಂಡ್ರಾಯಿಡ್ ಮೊಬೈಲ್ ಪೋನ್‌ಗಳಲ್ಲಿ ಹಲವು ಅನ್ವಯಕಗಳು ಲಭ್ಯವಿವೆ. ಉದಾಹರಣಗೆ : Perfect Viewer, Photo Gallery (Fish Bowl), Image Viewer and Nexus Photo Viewer.
|
ಅಭಿವೃದ್ದಿ ಮತ್ತು ಸಮುದಾಯ ಸಹಾಯ
|
Official EOG ರವರ ಅಧಿಕೃತ ವೆಬ್‌ಪುಟ
|
ಲಕ್ಷಣಗಳ ಮೇಲ್ನೋಟ
ಚಿತ್ರಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ಪ್ರದರ್ಶಿಸಲು ಇಮೇಜ್ ವ್ಯೂವರ್ ಸಾಧ್ಯವಾಗಿಸುತ್ತದೆ. ಇದರಲ್ಲಿ ಚಿತ್ರಗಳನ್ನು ಜೂಮ್ ಮಾಡಬಹುದು ಹಾಗು ತಿರುಗಿಸಿ ನೋಡಬಹುದು. ಚಿತ್ರಗಳ ಕಡತ ನಮೂನೆಯನ್ನು ಬದಲಾಯಿಸಬಹುದು ಹಾಗು ಚಿತ್ರಗಳ ಪ್ರಿಂಟ್ ತೆಗೆಯಬಹುದು.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “
Image Viewer ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
- ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install eog
ಅನ್ವಯಕ ಬಳಕೆ
ಇಮೇಜ್ ವ್ಯೂವರ್ ತೆರೆಯುವುದು
- ಇಮೇಜ್ ವ್ಯೂವರ್ ತೆರೆಯುವುದು
- ಇಮೇಜ್ ವ್ಯೂವರ್ ನ್ನು Application > Graphics > Image Viewer ಮೂಲಕ ತೆರೆಯಬಹುದು .ಇದು ಮೇಲಿನ ಚಿತ್ರದ ರೀತಿ ತೆರೆಯುತ್ತದೆ.
- ಎರಡನೇ ಚಿತ್ರದಲ್ಲಿ, ಮತ್ತೊಂದು ರೀತಿಯಲ್ಲಿ ಇಮೇಜ್ ವ್ಯೂವರ್ ತೆರೆಯುವುದನ್ನು ತೋರಿಸಲಾಗಿದೆ. ಯಾವುದೇ ಚಿತ್ರದ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿರಿ ಅಲ್ಲಿ "Open with Image Viewer" ನ್ನು ಆಯ್ಕೆ ಮಾಡಿಕೊಳ್ಳಿ.
- ಮೊದಲನೇ ಚಿತ್ರವು ಚಿತ್ರದೊಂದಿಗೆ ತೆರೆದಿರುವ ಇಮೇಜ್ ವ್ಯೂವರ್ ನ್ನು ತೋರಿಸುತ್ತಿದೆ. ಚಿತ್ರ ತೆರೆಯಲು Image--->Open ನ್ನು ಆಯ್ಕೆ ಮಾಡಿ.
- Image-->Open ಮೇಲೆ ಒಮ್ಮೆ ಕ್ಲಿಕ್ ಮಾಡಿದ ನಂತರ ಈ ಮೇಲಿನ ಚಿತ್ರದ ರೀತಿಯ ವಿಂಡೋ ತೆರೆಯುತ್ತದೆ. ಇಲ್ಲಿ ನಿಮಗೆ ಬೇಕಾದ ಚಿತ್ರ ಆಯ್ಕೆ ಮಾಡಿಕೊಳ್ಳಬಹುದು.
ಇಮೇಜ್ ವ್ಯೂವರ್ ಮೂಲಕ ಚಿತ್ರ ಸಂಕಲನ ಮಾಡುವುದು
ಇಮೇಜ್ ವ್ಯೂವರ್ ಮೂಲಕ ಚಿತ್ರ ತೆರೆದ ನಂತರ, ಆ ಚಿತ್ರವನ್ನು ನೀವು ಸಂಕಲನ ಮಾಡಬಹುದು.
- ಚಿತ್ರದ ವೀಕ್ಷಣೆಯನ್ನು ಬದಲಿಸುವುದು
ಪ್ರದಕ್ಷಿಣಾಕಾರವಾಗಿ ತಿರುಗಿಸುವುದು
- ಚಿತ್ರವನ್ನು ಅಡ್ಡವಾಗಿ ಅಥವಾ ಉದ್ದವಾಗಿ ತಿರುಗಿಸಬಹುದು. ಮೊದಲನೇ ಚಿತ್ರದಲ್ಲಿ ಅಡ್ಡವಾಗಿ ತಿರುಗಿಸಿರುವುದನ್ನು ನೋಡಬಹುದು.
- ಚಿತ್ರಗಳನ್ನು ನಿಮಗೆ ಬೇಕಾದ ರೀತಿ ತಿರುಗಿಸಬಹುದು. ಎರಡನೇ ಚಿತ್ರದಲ್ಲಿ ಚಿತ್ರ ತಿರುಗಿಸಿರುವುದುನ್ನು ನೋಡಬಹುದು.
ಈ ಬದಲಾವಣೆಗಳ ನಂತರ ಚಿತ್ರವನ್ನು ಹೊಸ ಚಿತ್ರವನ್ನಾಗಿಯೂ ಉಳಿಸಬಹುದು. Image--->Save as ನ್ನು ಆಯ್ಕೆ ಮಾಡಿ.ಒಂದು ವೇಳೆ ನೀವು Image--->Save ಆಯ್ಕೆಯನ್ನು ಬಳಸಿದರೆ ಹಳೇ ಚಿತ್ರವೇ ತಿದ್ದುಪಡಿಯೊಂದಿಗೆ ಉಳಿಯುತ್ತದೆ.
ಇಮೇಜ್ ವ್ಯೂವರ್ ನಲ್ಲಿ ಚಿತ್ರಗಳನ್ನು ನೋಡುವುದು
ಚಿತ್ರಗಳ ಪ್ರಸ್ತುತಿಯನ್ನು ಸಾಧ್ಯವಾಗಿಸುವುದೇ ಇಮೇಜ್ ವ್ಯೂವರ್ ನ ಪ್ರಮುಖ ಉಪಯೋಗವಾಗಿದೆ. ನಿಮ್ಮ ಬಳಿ ಬಹಳಷ್ಟು ಚಿತ್ರಗಳ ಸಂಗ್ರಹವಿದ್ದಾಗ, ಅವುಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ತೋರಿಸಬಹುದು. ಕೆಲವು ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.
- ಚಿತ್ರ ನೋಡುವುದು
ಗ್ಯಾಲರಿಯಲ್ಲಿ ಚಿತ್ರ ನೋಡುವುದು
ಪ್ರಸ್ತುತಿಯಲ್ಲಿ ಚಿತ್ರ ನೋಡುವುದು
- ನೀವು ಚಿತ್ರಗಳನ್ನು ಸಂಗ್ರಹಿಸಿರುವ ಕಡತಕೋಶಕ್ಕೆ ಹೋಗಿ ಅದರಲ್ಲಿ ಒಂದು ಚಿತ್ರವನ್ನು ಇಮೇಜ್ ವ್ಯೂವರ್ ಮೂಲಕ ತೆರೆಯಿರಿ. ನಂತರ ನಿಮ್ಮ ಕೀಬೋರ್ಡ್‌ನಲ್ಲಿರುವ ಬಾಣದ ಕೀಗಳನ್ನು ಬಳಸುವ ಮೂಲಕ ಮುಂದಿನ ಚಿತ್ರಗಳನ್ನು ನೋಡಬಹುದು. ಇದಲ್ಲದೇ ಪೂರ್ಣಪರದೆಯಲ್ಲಿಯೂ ಸಹ ಚಿತ್ರಗಳನ್ನು ನೋಡಬಹುದು. ಇದಕ್ಕಾಗಿ View--->Full Screen ನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಗಳನ್ನು ಕ್ರಮಾನುಗತವಾಗಿ ತೋರಿಸಲು ಬಯಸಿದಲ್ಲಿ, ಮೊದಲು ಕಡತಕೋಶದಲ್ಲಿರುವ ಚಿತ್ರಗಳಿಗೆ ಕ್ರಮ ಸಂಖ್ಯೆಗನುಗುಣವಾಗಿ ಮರುಹೆಸರಿಸಿ. ಈಗ ಚಿತ್ರಗಳು ನೀವು ನೀಡಿರುವ ಕ್ರಮಸಂಖ್ಯೆ ಪ್ರಕಾರವೇ ಪ್ರದರ್ಶಿಸುತ್ತವೆ.
- ಎರಡನೇ ಚಿತ್ರವು ಚಿತ್ರಗಳ ಗ್ಯಾಲರಿ ವೀಕ್ಷಣೆಯನ್ನು ತೋರಿಸುತ್ತದೆ. ಚಿತ್ರವನ್ನು ನೋಡುವಾಗ ಆ ಚಿತ್ರದ ಕೆಳಗೆ ಹಿಂದಿನ ಚಿತ್ರ ಹಾಗು ಮುಂದಿನ ಚಿತ್ರದ ಐಕಾನ್ ಕಾಣುತ್ತದೆ. ಇದಕ್ಕಾಗಿ View ---> Gallery ನ್ನು ಆಯ್ಕೆ ಮಾಡಿಕೊಳ್ಳಬೇಕು.
- ಚಿತ್ರಗಳ ಸ್ಲೈಡ್‌ಶೋ ಆಯ್ಕೆಯನ್ನು ಮೂರನೇ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕಾಗಿ View ---> Slideshow presentation ನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆನುಬಾರ್‌ನ Edit-->Preferences-->Slide show ನಲ್ಲಿ ಸ್ಲೈಡ್‌ಶೋನಲ್ಲಿ ಸಮಯ, ಶೈಲಿ ಸಂಬಂಧಿಸಿದ ಸಂರಚನೆಗಳನ್ನು ಮಾಡಿಕೊಳ್ಳಬಹುದು.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಚಿತ್ರಗಳ ವೀಕ್ಷಣೆಯಲ್ಲಿ ಏನಾದರು ಬದಲಾವಣೆ ಮಾಡಿದ ನಂತರ Image-->Save As ನ್ನು ಆಯ್ಕೆ ಮಾಡಿದರೆ ಪ್ರತ್ಯೇಕವಾದ ಚಿತ್ರ ಕಡತವಾಗಿ ಉಳಿಯುತ್ತದೆ. ಅದೇ ರೀತಿ ಚಿತ್ರ ನಮೂನೆಯನ್ನು png or jpeg or bmp ಗೆ ಬದಲಾಯಿಸಲು "save as" ಬಳಸಬಹುದು.
ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
- ಚಿತ್ರವನ್ನು ನಿಮಗೆ ಬೇಕಾದ ರೀತಿ ವೀಕ್ಷಣೆಗೆ ಒಳಪಡಿಸಿ, ಉಳಿಸಿ ಪಾಠಗಳ ಸಂಪನ್ಮೂಲವಾಗಿ ಬಳಸಬಹುದು.
- ಕಥೆ ಹೇಳಲು ಚಿತ್ರಗಳ ಸಂಗ್ರಹವನ್ನು ಸ್ಲೈಡ್‌ಶೋ ಮೂಲಕ ಬಳಸಬಹುದು.
- ರೆಕಾರ್ಡ್ ಮೈ ಡೆಸ್ಕ್ಟಾಪ್ ಅನ್ವಯಕದ ಮೂಲಕ ಚಿತ್ರಗಳ ದೃಶೀಕರಣವನ್ನು ಮುದ್ರಿಸಿ ಬಳಸಬಹುದು.
ಆಕರಗಳು
ವಿಕಿಪೀಡಿಯಾ
|