ಒಂದೇ ವೃತ್ತಖಂಡದಲ್ಲಿನ ಕೋನಗಳು ಸಮಾನವಾಗಿರುತ್ತದೆ.
Jump to navigation
Jump to search
ಕಲಿಕೆಯ ಉದ್ದೇಶಗಳು :
ಒಂದೇ ವೃತ್ತಖಂಡದ ಮೇಲಿನ ಕೋನಗಳು ಸಮವಾಗಿರುತ್ತವೆ ಎಂದು ಊಹಿಸಲು ಸಾಧ್ಯವಾಗುತ್ತದೆ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಅಳತೆಪಟ್ಟಿ, ಕೈವಾರ, ಕೋನಮಾಪಕ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ರೇಖಾಖಂಡ, ಲಘು ಕಂಸ, ಅಧಿಕ ಕಂಸ, ಅರ್ಧವೃತ್ತ, ವೃತ್ತಖಂಡದಲ್ಲಿನ ಕೋನದ ಬಗ್ಗೆ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- 'A' ಕೇಂದ್ರದೊಂದಿಗೆ ವೃತ್ತದಲ್ಲಿ, BD ಒಂದು ಜ್ಯಾ, 'P' ಅಧಿಕ ಕಂಸ ಮತ್ತು 'D' ಲಘು ಕಂಸವಾಗಿದ್ದು ಇದನ್ನು ಕ್ರಮವಾಗಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ಪ್ರತಿನಿಧಿಸಲಾಗುತ್ತದೆ.
- ವೃತ್ತದ ಲಘು ವೃತ್ತಖಂಡ ಮತ್ತು ಅಧಿಕ ವೃತ್ತಖಂಡದ ಬಗ್ಗೆ ನೀವು ಏನು ಹೇಳುತ್ತೀರಿ?
- ಲಘು ವೃತ್ತಖಂಡ ಮತ್ತು ಅಧಿಕ ವೃತ್ತಖಂಡವನ್ನು ಗುರುತಿಸಿ.
- ಅಧಿಕ ವೃತ್ತಖಂಡದಲ್ಲಿ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ
- ನೀವು ವೃತ್ತದ ತ್ರಿಜ್ಯವನ್ನು ಬದಲಾಯಿಸಿದರೆ, ಕೋನದ ಅಳತೆಯಲ್ಲಿ ಯಾವುದಾದರೂ ಬದಲಾವಣೆಗಳನ್ನು ನೀವು ಗಮನಿಸಿದ್ದೀರಾ? (ಅಥವಾ) ಕೋನದ ಅಳತೆ ವೃತ್ತದ ತ್ರಿಜ್ಯದ ಮೇಲೆ ಅವಲಂಬಿತವಾಗಿದೆಯೇ?
- ಒಂದೇ ವೃತ್ತಖಂಡದಲ್ಲಿರುವ ಎಲ್ಲಾ ಕೋನಗಳು ಸಮವಾಗಿವೆ ಎಂದು ಕಂಡುಕೊಳ್ಳಿ
ಅನ್ವಯಿಸುವಿಕೆ:
- ಲಘು ವೃತ್ತಖಂಡದಲ್ಲಿ ಉಂಟಾದ ಕೋನದ ವಿಧ ಯಾವುದು?
- ಅಧಿಕ ವೃತ್ತಖಂಡದಲ್ಲಿ ಉಂಟಾದ ಕೋನದ ವಿಧ ಯಾವುದು?
- ಅರ್ಧ ವೃತ್ತದಲ್ಲಿ ರ್ಧಉಂಟಾದ ಕೋನದ ವಿಧ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ವೃತ್ತಖಂಡವು 80° ಕೋನವನ್ನು ಪರಿಧಿಯಲ್ಲಿ ಉಂಟುಮಾಡಿದರೆ, ವೃತ್ತದ ಪರಿಧಿಯನಲ್ಲಿನ P ಮತ್ತು Q ಬಿಂದುವಿನಲ್ಲಿ ಅದೇ ವೃತ್ತಖಂಡವು ಉಂಟುಮಾಡಿದ ಕೋನಗಳ ಅಳತೆ ಏನಾಗಿರುತ್ತದೆ?