ಜಲೀಯ ಅಯಾನಿಕ ಸಂಯುಕ್ತಗಳಲ್ಲಿ ವಿದ್ಯುತ್ ಪ್ರವಾಹ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಜಲೀಯ ಅಯಾನಿಕ ಸಂಯುಕ್ತಗಳಲ್ಲಿ ವಿದ್ಯುತ್ ಪ್ರವಾಹ
ಅಂದಾಜು ಸಮಯ
40 min
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಸೋಡಿಯಂ ಕ್ಲೋರೈಡ್,
ನೀರು,
ಬ್ಯಾಟರಿ,
L.E.D.ಬಲ್ಬ್ ,
ವಯರ್,
ಬೀಕರ್,
ರೆಜಿಸ್ಟಾರ ಇತ್ಯಾದಿ
.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಈ ಪ್ರಯೊಗ ಮಾಡಲು ನಮಗೆ ಮೊದಲಿಗೆ ವಿದ್ಯುತ್ ಮಂಡಲವನ್ನು ಸಿದ್ದಮಾಡಿಕೊಳ್ಳಬೇಕು
- ೯ ವೊಲ್ಟ್ ಬ್ಯಾಟರಿ ತೆಗೆದುಕೊಳ್ಳಬೇಕು , ಕಡಿಮೆ ವೊಲ್ಟ್ ಸಹ ತೆಗೆದುಕೊಳ್ಳಬಹುದು , ಇದಕ್ಕೆ ಕ್ಲಿಪ್ ಇರುತ್ತದೆ ಇದರಲ್ಲಿ ಎರಡು ದ್ರುವಗಳು ( ಒಂದು ಋಣ ವಿದ್ಯುದಾಗ್ರ ಎರಡು ಧನ ವಿದ್ಯುದಾಗ್ರ ) ಈ ಬ್ಯಾಟರಿಯ ಒಂದು ತುದಿಗೆ ತಾಮ್ರದ ತಂತಿಯನ್ನ ಜೋಡಿಸಿಕೊಳ್ಳಬೇಕು. ಇನ್ನೊಂದು ತುದಿಯನ್ನು ಸ್ವತಂತ್ರವಾಗಿ ಬಿಟ್ಟಿರಬೇಕು .
- ಬ್ಯಾಟರಿಯ ಮತ್ತೊಂದು ತುದಿಗೆ ರೆಸಿಸ್ಟರ್ ಅನ್ನು ಜೋಡಿಸಬೇಕು ಈ ಒಂದು ರೆಸಿಸ್ಟರ್ ಗೆ LED ಬಲ್ಬ್ ( ಎರಡು ದ್ರುವಗಳಿರುತ್ತದೆಉದ್ದನೆಯ ತುದಿ ಧನ ವಿದ್ಯುದಾಗ್ರ,ಚಿಕ್ಕನೆಯ ತುದಿ ಋಣ ವಿದ್ಯುದಾಗ್ರ) ನ ಧನ ದ್ರುವವನ್ನು ಜೋಡಿಸಬೇಕು.
ಈಗ LED ಬಲ್ಬ್ ನ ಮತ್ತೊಂದು ತುದಿಗೆ ಮತ್ತೊಂದು ತಾಮ್ರದ ತಂತಿ ಜೋಡಿಸಬೇಕು. ವಿದ್ಯುತ್ ಮಂಡಲವು ಸಿದ್ದವಾಗಿದೆಯೋ ಎಂದು ಪರೀಕ್ಷಿಸಬೇಕು.
- ಒಂದು ಬೀಕರಿನಲ್ಲಿ ೩೦ g ರಷ್ಟು NaCl (ಉಪ್ಪು ) ತೆಗೆದುಕೊಳ್ಳಬೇಕು, ಈಗಾಗಲೆ ಸಿದ್ದಪಡಿಸಿದ ವಿದ್ಯುತ್ ಮಂಡಲದ ಎರಡು ದ್ರುವಗಳನ್ನ ಇರಿಸಬೇಕು. ಬದಲಾವಣೆಯನ್ನು ವೀಕ್ಷಿಸಿ.
- ಈ ಬೀಕರಿಗೆ ನೀರನ್ನ ಹಾಕುತ NaCl ಸಂಪೂರ್ಣವಾಗಿ ವಿಲಿನವಾಗುವವರೆಗು ಕಲಕ ಬೇಕು.
- NaCl ಜಲಿಯ ದ್ರಾವಣ ಸಿದ್ದವಾದಮೇಲೆ ಈಗಾಗಲೆ ಸಿದ್ದ ಪಡಿಸಿರುವ ವಿದ್ಯುತ್ ಮಂಡಲದ ಎರಡು ದ್ರುವಗಳನ್ನು ಈ ಜಲಿಯ ದ್ರಾವಣದಲ್ಲಿ ಅದ್ದಬೇಕು - ಬದಲಾವಣೆಯನ್ನು ವೀಕ್ಷಿಸಿ.
ವೀಕ್ಷಣೆ: ಮೊದಲನೆ ಪ್ರಯೋಗದಲ್ಲಿಘನ ರೂಪದ ಸಂಯುಕ್ತಗಳು ತೆಗೆದುಕೊಳ್ಳುವುದರಿಂದ ಘನರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ್ನು ಪ್ರವಹಿಸುವುದಿಲ್ಲ, ಆದರೆ ಜಾಲಿಯಾ ದ್ರವಣದಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಕೊನೆಯದಾಗಿ ಜಾಲಿಯ ದ್ರವಣ ರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ ಉತ್ತಮ ವಾಹಕಗಳು ಎಂದು ತಿಳಿದು ಬರುತ್ತದೆ.
{{#ev:youtube|LB6UvDYx6Ng| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್