ಡಿಕ್ಷನರಿ ಕಲಿಯಿರಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಇದು ಸಂಪೂರ್ಣ ಯೂನಿಕೋಡ್ ಆಧಾರಿತವಾಗಿದ್ದು, ಸ್ಥಳೀಯ ಭಾಷೆಯ ಎಲ್ಲಾ ಪದಗಳು, ಕಠಿಣಪದಗಳು ಹಾಗು ಒತ್ತಕ್ಷರಸಹಿತ ಪದಗಳನ್ನು ಸುಲಭವಾಗಿ ನಮೂದಿಸಬಹುದು. ಕೇವಲ ಭಾಷಾ ಅನುವಾದವನ್ನು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿನ ಪದಗಳ ಸಮಾನಪದ ವಿರುದ್ದಪದ ಮೊದಲಾದ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಸಹ ಈ ಅನ್ವಯಕದಲ್ಲಿ ಕಾಣಬಹುದು. ಅನುಸ್ಥಾಪನೆ
ಅನ್ವಯಕ ಬಳಕೆಗೋಲ್ಡನ್ ಡಿಕ್ಷನರಿ ತೆರೆಯುವುದುApplication > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್‌ಲೋಡ್ (ಆಫ್‌ಲೈನ್‌ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡುವುದುಗೋಲ್ಡನ್ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪುಟಕ್ಕೆ ಭೇಟಿ ನೀಡಿ. ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷನರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ ನಾವು ಡೌನ್‌ಲೋಡ್ ಮಾಡಿದ ಡಿಕ್ಷನರಿಗಳು ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್‌ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ. ಗೋಲ್ಡನ್ ಡಿಕ್ಷನರಿಗೋಲ್ಡನ್ ಡಿಕ್ಷನರಿ ಅನ್ವಯಕವನ್ನು ತೆರೆದ ನಂತರ "Lookup" ಎಂಬ ಸ್ಥಳದಲ್ಲಿ ನಿಮ್ಮ ಪದವನ್ನು ನಮೂದಿಸಿ ನಂತರ "Enter" ಒತ್ತಿರಿ. ಚಿತ್ರದಲ್ಲಿ ಕಾಣುವಂತೆ ಆ ಪದದ ಶಬ್ದಕೋಶವನ್ನು ಕಾಣಬಹುದು. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಅನ್ವಯವಾಗುವುದಿಲ್ಲ ಸಂಪನ್ಮೂಲ ರಚನೆಯ ಆಲೋಚನೆಗಳುಆಕರಗಳು |