ಧರ್ಮಸಮದೃಷ್ಟಿ ಚಟುವಟಿಕೆ ೩ ವೀಡಿಯೋ ನೋಡಿ ಅನಿಸಿಕೆಯನ್ನು ಚಿತ್ರದ ಮೂಲಕ ಅಥವ ಪಠ್ಯದಲ್ಲಿ ಅಭಿವ್ಯಕ್ತಪಡಿಸಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆಯ ಕಲಿಕೋದ್ದೇಶಗಳು

ಚಟುವಟಿಕೆಯ ಉದ್ದೇಶಗಳು

  1. ಜೈನ ಧರ್ಮದ ಮೂಲದ ಬಗ್ಗೆ ತಿಳಿದುಕೊಳ್ಳುವುದು
  2. ಬಾಹುಬಲಿ ಗೊಮ್ಮಟೇಶ್ವರನಾಗಲು ಕಾರಣವನ್ನು ತಿಳಿಯುವುದು

ಭಾಷಾ ಕಲಿಕಾ ಉದ್ದೇಶಗಳು

  1. ಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥೈಸುವ ಸಾಮರ್ಥ್ಯ ವೃದ್ದಿಸುವುದು
  2. ಕೇವಲ ಪಠ್ಯಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ದಿಸುವುದು

ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು

ಮಕ್ಕಳಿಗೆ ಪರದೆಯ ಮೇಲೆ ಪ್ರದರ್ಶನವಾಗುವ ಪಠ್ಯವನ್ನು ಓದುವುದು ಮತ್ತು ಚಿತ್ರಗಳನ್ನು ನೋಡಿ ಕಥೆಯನ್ನು ಊಹಿಸುವ ಕೌಶಲವನ್ನು ಕಲಿಸಿಬೇಕು

ಚಟುವಟಿಕೆಗೆ ಅಗತ್ಯವಿರುವ ಸಮಯ

೧೫ ನಿಮಿಷ - ಪೂರ್ಣ ವೀಡಿಯೋವನ್ನು ಪ್ರದರ್ಶಿಸುವ ಬದಲಿಗೆ ಅಗತ್ಯವಿರುವಷ್ಟು ಪ್ರದರ್ಶನಮಾಡಿದರೆ ಸಾಕು ಅಂದರೆ ೩ - ೪ ನಿಮಿಷದ ಪ್ರದರ್ಶನ ಸಾಕು

ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)

https://www.youtube.com/watch?v=57xPGITarFc

ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ

ವೀಡಿಯೋ ಪ್ರದರ್ಶನದ ನಂತರ ಮಕ್ಕಳನ್ನು ಗುಂಪುಗಳಾಗಿ ಮಾಡುವುದು ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -

ಚಟುವಟಿಕೆಯ ಅಭಿವೃದ್ಧಿ / ಚರ್ಚೆರಯ ಪ್ರಶ್ನೆಗಳು

  1. ಭರತನಿಗೆ ಯಾವ ರಾಜ್ಯವನ್ನು ನೀಡಲಾಯಿತು
  2. ಯುದ್ದದಲ್ಲಿ ಬಾಹುಬಲಿ ಗೆದ್ದಿದ್ದರೆ ಏನಾಗುತ್ತಿತ್ತು ?
  3. ಭರತ ಬಾಹುಬಲಿಯನ್ನು ನೀವು ಯಾರನ್ನು ಮೆಚ್ಚುವಿರಿ ಏಕೆ?

ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ

  1. ಬಾಹುಬಲಿಯು ಗೊಮ್ಮಟೇಶ್ವರನಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಬರುವುದು