ಪರಿಪೂರಕ ಕೋನಗಳು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಎರಡು ಕೋನಗಳ ಮೊತ್ತವು ೧೮೦° ಇದ್ದರೆ ಅವುಗಳು ಪರಿಪೂರಕ ಕೋನಗಳು. ಸರಳ ರೇಖೆಯ ಒಂದೇ ಭಾಗದಲ್ಲಿ ಎರಡು ಕೋನಗಳು ಉಂಟಾದಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ.

ಉದ್ದೇಶಗಳು

ಮಕ್ಕಳನ್ನು ಪರಿಪೂರಕ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಸರಳ ಕೋನವೆಂದು ಗಮನಿಸಿ).
  • ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
  • ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು.
  • ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ?
  • ರೂಪುಗೊಂಡ ಸರಳಕೋನವು X- ಅಕ್ಷೆಗೆ ಸಮಾಂತರವಾಗಿದೆಯೇ?
  • ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಸರಳ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ.
  • ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ?
  • ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪರಿಪೂರಕ ಕೋನವನ್ನು ರೂಪಿಸುತ್ತವೆ.
  • ಉಂಟಾದ ಕೋನವನ್ನು ಗಮನಿಸಲು ಪಾರ್ಶ್ವ ಕೋನಗಳನ್ನು ಮತ್ತೆ ಮಾಡಲು ಮರುಹೊಂದಿಸಿ.
  • ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು.
  • ಪರಿಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ
  • ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
ಕ್ರಮ

ಸಂಖ್ಯೆ

ಜಾರುಕ α ದ ಮೌಲ್ಯ ಕೋನ ABC ಕೋನ DEF ಕೋನ ABC + ಕೋನ DEF ಕೋನ DEF ಗೆ ಕೋನ ABC ಪರಿಪೂರಕವಾಗಿದೆಯೇ?

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಪರಿಪೂರಕ ಜೋಡಿ ಕೋನಗಳು ಎಂದರೇನು?
  2. ಯಾವ ವಿಧದ ಕೋನಗಳು ಪರಿಪೂರಕ ಜೋಡಿಯನ್ನು ರೂಪಿಸುತ್ತವೆ?
  3. ಜೋಡಿ ಕೋನಗಳು ಪರಿಪೂರಕವಾಗಿರಲು ಕೋನಗಳು ಪಕ್ಕದಲ್ಲಿರುವುದು ಅಗತ್ಯವಿದೆಯೇ?