ಪರಿಸರ ಮಾಲಿನ್ಯ ಮಾಲಿನ್ಯಕಾರಕಗಳ ವಿಧಗಳು ಚಟುವಟಿಕೆ 1
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಮೌಖಿಕ ಪ್ರಶ್ನಾವಳಿ
ಅಂದಾಜು ಸಮಯ
ಸುಮಾರು 10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಂಪ್ಯೂಟರ್ , ಪ್ರೊಜೆಕ್ಟರ್ ,ಚಿತ್ರಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಅಂತರ್ಜಾಲದ ಸಹಾಯದಿಂದ ವಾಯುಮಾಲಿನ್ಯ ,ಸಾಗರ ಮಾಲಿನ್ಯ ,ನೆಲ ಮಾಲಿನ್ಯ ,ಜಲಮಾಲಿನ್ಯಗಳ ಚಿತ್ರ ಸಂಗ್ರಹಿಸಬೇಕು
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಕಂಪ್ಯೂಟರ್ ಮತ್ತು ಪ್ರೋಜೆಕ್ಟರ್ ಬಳಸಿ ಪರಿಸರಮಾಲಿನ್ಯದ ಚಿತ್ರಗಳನ್ನು ತೋರಿಸಿ ಈ ಕೆಳಗಿನ ಮೌಖಿಕ ಪ್ರಶ್ನಾವಳಿಗಳನ್ನು ಬಳಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಿದ್ಯಾರ್ಥಿಗಳಿಗೆ ಪ್ರೋಜೆಕ್ಟರ್ ಪರದೆಯಲ್ಲಿ ಕಾಣುವ ಮಾಲಿನ್ಯದ ಚಿತ್ರಗಳನ್ನು ಗಮನಿಸಿ ಮಾನವನ ಚಟುವಟಿಕೆಗಳನ್ನು ಗರುತಿಸಿ ಹೇಳಲು ತಿಳಿಸುವುದು
- ತಿಳಿಸಿದ ಮಾನವನ ಚಟುವಟಿಕೆಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ಹೇಳುವಂತೆ ತಿಳಿಸುವುದು
- ಪರಿಸರಕ್ಕೆ ಹಾನಿ ಮಾಡುವ ಮಾನವ ಚಟುವಟಿಕೆಗಳು ಹೇಗೆ ಪರಿಸರ ಮಾಲಿನ್ಯಗೊಳಿಸುತ್ತವೆ ?
- ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮನೆ ಮತ್ತು ಶಾಲಾ ವಾತಾವರಣದಲ್ಲಿ ಏನಾದರೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳು ನಡೆಯುತ್ತಿವೇ ? ಅವುಗಳ ಬಗ್ಗೆ ಮಾಹಿತಿ ನೀಡಿ
ಪ್ರಶ್ನೆಗಳು
- ಪ್ರೋಜೆಕ್ಟರ್ ಪರದೆಯಲ್ಲಿ ಕಾಣಿಸುವ ಚಿತ್ರಗಳು ಮಾನವನ ಯಾವ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ ?
- ಇದೇ ರೀತಿ ಮಾನವನ ಇತರ ಚಟುವಟಿಕೆಗಳನ್ನು ತಿಳಿಸಿ
- ಈ ಮಾನವನ ಚಟುವಟಿಕೆಗಳು ಪರಿಸರ ಮಾಲಿನ್ಯಕ್ಕೆ ಹೇಗೆ ಕಾರಣವಾಗಿವೆ ?
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್