ಪುಸ್ತಕ ಕೊಳ್ಳಲು ಹೋದೆವು ನಾವು - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಮಕ್ಕಳು ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಪುಸ್ತಕ ಕೊಳ್ಳಲು ಹೋಗುವುದು ಅಂತಹ ಅನುಭವಗಳು ಹೇಗೆ ಮಜಾ ಕೊಡುತ್ತವೆಂದು ತಿಳಿಸುತ್ತದೆ.

ಉದ್ದೇಶಗಳು :

ಪುಸ್ತಕಗಳ ಪ್ರಾಮುಖ್ಯತೆಯನ್ನು ಚರ್ಚಿಸುವುದರ ಮೂಲಕ ಮಕ್ಕಳಿಗೆ ಪುಸ್ತಕ ಓದುವಂತೆ ಪ್ರೇರೇಪಿಸುವುದು.

ಕಥಾ ವಸ್ತು : ಕುಟುಂಬ, ದಿನಚರಿ ಮತ್ತು ದೈನಂದಿನ ಅಭ್ಯಾಸಗಳು, ಶಬ್ದಕೋಶ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Pustaka%20Kollevu%20Odeevu.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಕಥೆಯನ್ನು ಮಕ್ಕಳು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು.
  2. ಮಕ್ಕಳಿಗೆ ತಿಳಿದಿರುವ ಪುಸ್ತಕಗಳನ್ನು ಪಟ್ಟಿ ಮಾಡುವುದು.
  3. ಮಕ್ಕಳು ಓದಿರುವ ಪುಸ್ತಕಗಳ ಅನುಭವವನ್ನು ಪರಸ್ಪರ ಗುಂಪಿನಲ್ಲಿ ಹಂಚಿಕೊಳ್ಳುವಂತೆ ತಿಳಿಸುವುದು.
  4. ಪುಸ್ತಕಗಳ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸುವುದು.
  5. ಪುಸ್ತಕಾಲಯದಲ್ಲಿ ಮಕ್ಕಳಿಗೆ ಆಗಿರುವ ಅನುಭವಗಳ ಕುರಿತು ಹಂಚಿಕೊಳ್ಳಲು ತಿಳಿಸುವುದು.
  6. ಮಕ್ಕಳಿಗೆ ಆಸಕ್ತಿಕರವಾದ ಸಣ್ಣ ಪುಸ್ತಕಗಳನ್ನು ಓದುವುದಕ್ಕೆ ಒದಗಿಸುವುದು. ನಂತರ ಅದರ ಅನುಭವವನ್ನು ಹಂಚಿಕೊಳ್ಳಲು ತಿಳಿಸುವುದು.

ಸಂಪೂರ್ಣ ದೈಹಿಕ ಚಟುವಟಿಕೆ

ಮಕ್ಕಳಿಗೆ ಕಲಿಸು ಗುರುವೇ ಕಲಿಸು ಹಾಡನ್ನು ಹೇಳಿಕೊಡುವುದು.

ಆಲಿಸುವ ಪೂರ್ವದ ಚಟುವಟಿಕೆ

ವಿವಿಧ ಧರ್ಮಗಳ ಧರ್ಮ ಗ್ರಂಥಗಳಾವುವು?

ನೀವು ಯಾವೆಲ್ಲಾ ಪುಸ್ತಕಗಳನ್ನು ಓದಿದ್ದೀರಾ?

ಓದುವುದಕ್ಕೆ ಪುಸ್ತಕಗಳು ಎಲ್ಲಿ ಸಿಗುತ್ತದೆ.

ಆಲಿಸುವ ಸಮಯದ ಚಟುವಟಿಕೆ

ನೀವು ಓದಿರುವ ದಿನಪತ್ರಿಕೆ, ಪುಸ್ತಕ, ನಿಯತಕಾಲಿಕೆಗಳನ್ನು ಪಟ್ಟಿಮಾಡಿ.

ಪುಸ್ತಕಗಳಲ್ಲಿ ಯಾವೆಲ್ಲಾ ವಿಧಗಳನ್ನು ಕಾಣಬಹುದು.

ಆಲಿಸಿದ ನಂತರದ ಚಟುವಟಿಕೆಗಳು

ಪುಸ್ತಕಗಳನ್ನು ಓದುವುದರ ಮಹತ್ವವನ್ನು ಚರ್ಚಿಸಿ.

ಸಮೀಪದ ಗ್ರಂಥಾಲಯಕ್ಕೆ ಬೇಟಿ ನೀಡಿ ಯಾವೆಲ್ಲಾ ಬಗೆಯ ಪುಸ್ತಕಗಳಿವೆ ಎಂಬುದನ್ನ ಪಟ್ಟಿ ಮಾಡಿ.

ಪಠ್ಯಪುಸ್ತಕಕ್ಕೆ ಸಂಪರ್ಕಿಬಹುದು

7 ನೇ ತರಗತಿ

ಕನ್ನಡ ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು

8 ನೇ ತರಗತಿ

ಮಗ್ಗದ ಸಾಹೇಬ, ಅಮ್ಮ