ಪ್ಲಾಸ್ಟಿಕ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪ್ಲಾಸ್ಟಿಕ್: ಪ್ಲಾಸ್ಟಿಕ್ ಗಳು ಮಾನವ ನಿರ್ಮಿತ ರಾಸಾಯನಿಕ ಕೃತಕವಸ್ತುಗಳು, ಇವು ಸಾವಯವ ಪಾಲಿಮರ್ ಗಳು, ನೈಸರ್ಗಿಕವಾಗಿ ದೊರೆಯುವುದಿಲ್ಲ. ಪ್ರಾಚೀನ ಕಾಲದಲ್ಲಿ ಅಂದರೆ ಕ್ರಿ.ಶ.೧೬೦೦ ರಲ್ಲಿ ಮಧ್ಯಅಮೇರಿಕಾದಲ್ಲಿ ನೈಸರ್ಗಿಕ ರಬ್ಬರನ್ನು ಉಪಯೋಗಿಸುವ ಮೂಲಕ ಬಳಕೆಗೆ ತಂದರು. ಮೊದಲು ಬಳಕೆಗೆ ತಂದ ಪ್ಲಾಸಟಿಕ್ ಗಳನ್ನು ಮೊಟ್ಟೆ ಮತ್ತು ರಕ್ತದಲ್ಲಿನ ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ತಯಾರು ಮಾಡುತ್ತಿದ್ದರು , ದನದ ಕೊಂಬುಗಳನ್ನು ಕಿಟಕಿಗಳನ್ನು ತಯಾರು ಮಾಡಲು ಬಳಸುತ್ತಿದ್ದರು. ನಂತರ ಕ್ರಿ.ಶ.೧೮೦೦ರಲ್ಲಿ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೀಕರಣದ ಮೂಲಕ ಆದುನಿಕವಾಗಿ ಪ್ಲಾಸಟಿಕ್ ಗಳನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದನು. ಮೊದಲು ತಯಾರಾದ ಪ್ಲಾಸ್ಟಿಕ್ ಎಂದರೆ ಬೆಕಲೈಟ್, ಕ್ರಿ.ಶ ೧೯೦೦ ರಲ್ಲಿ ಬೆಲ್ಜಿಯಂ ನ ಲಿಯೋ ಬೆಕ್ಲ್ಯಾಂಡ್ ಮೊದಲ ಬಾರಿಗೆ ಸಂಶ್ಲೇಷಿತ ಪ್ಲಾಸ್ಟಿಕ್ ನ್ನು ತಯಾರಿಸಿದನು. ಇವುಗಳ ಬಳಕೆಯ ಉದ್ದೇಶಗಳೆಂದರೆ ಇವು ತುಂಬಾ ಹಗುರ, ಬಲಿಷ್ಟ, ಸುಲಭವಾಗಿ ಬೇಕಾದ ಬಣ್ಣದಲ್ಲಿ ಬೇಕಾದ ಆಕಾರಕ್ಕೆ ಎರಕ ಒಯ್ಯಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ದೊರೆಯುವ ವಸ್ತುಗಳಾಗಿವೆ. ಇವುಗಳ ಮುಖ್ಯವಾದ ಗುಣವೆಂದರೆ ರಾಸಾಯನಿಕವಾಗಿ ಇತರ ವಸ್ತುಗಳೊಂದಿಗೆ ವರ್ತಿಸುವುದಿಲ್ಲ. ಪ್ಲಾಸ್ಟಿಕ್ ಗಳ ಗುಣಗಳು ಮತ್ತು ರಚನೆಯ ಆಧಾರದ ಮೇಲೆ ಪ್ಲಾಸ್ಟಿಕ್ ಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಥರ್ಮೋಪ್ಲಾಸ್ಟಿಕ್ ಗಳು ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಗಳು
ಥರ್ಮೋಪ್ಲಾಸ್ಟಿಕ್ : ಕಾಯಿಸಿದಾಗ ಮೃದುತ್ವ ಹೊಂದಿ ಆಕಾರ ಕಳೆದುಕೊಂಡು ತಂಪುಗೊಳಿಸಿದಾಗ ಮೊದಲಿನ ಆಕಾರಕ್ಕೆ ಬರುವ ಪ್ಲಾಸ್ಟಿಕ್ ಗಳು ಉದಾ: ಪಿ.ವಿ.ಸಿ, ಪಾಲಿಸ್ಟೈರಿನ್, ಪಾಲಿ ಪ್ರೊಪೈಲಿನ್, ಪಾಲಿಥಿನ್ , ಇತ್ಯಾದಿ. .
ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ : ಕಾಯಿಸಿದಾಗ ಆಕಾರಕಳೆದುಕೊಂಡು ತಂಪುಗೊಳಿಸಿದಾಗ ಶಾಶ್ವತವಾಗಿ ಗಡುಸಾಗುವ ಪ್ಲಾಸ್ಟಿಕ್ ಗಳು. ಉದಾ: ಬೆಕಲೈಟ್, ಮೆಲಮೈನ್, ಎಪಾಕ್ಸಿರಾಳಗಳು
ವ್ಯತ್ಯಾಸ:

ಥರ್ಮೋಪ್ಲಾಸ್ಟಿಕ್ ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್
  1. ಕರಗಿಸಬುದು
  2. ಯಾವ ಆಕಾರಕ್ಕೆ ಬೇಕಾದರೂ ಎಷ್ಟು ಬಾರಿಯಾದರೂ ಅಚ್ಚು ಹಾಕಬಹುದು
  3. ಹಲವಾರು ಬಾರಿ ಕರಗಿಸಿ ಬೇಕಾದ ಬಣ್ಣ ಬಳಸಿ ಬೇಕಾದ ಆಕಾರಕ್ಕೆ ಅಚ್ಚು ಹಾಕಬಹುದು
  4. ಇದನ್ನು ಪುನರ್ ಬಳಕೆ ಮಾಡಬಹುದು
  1. ಕರಗಿಸಲು ಸಾಧ್ಯವಲ್ಲ
  2. ಬೇಕಾದ ಆಕಾರಕ್ಕೆ ಒಮ್ಮೆ ಮಾತ್ರ ಅಚ್ಚು ಹಾಕಬಹುದು
  3. ಪದೇ ಪದೇ ಕರಗಿಸಿ ಬಣ್ಣ ಹಾಕಿ ಬದಲಿಸಲು ಸಾಧ್ಯವಿಲ್ಲ
  4. ಇದನ್ನು ಪುನರ್ ಬಳಕೆ ಮಾಸಲು ಸಾಧ್ಯವಿಲ್ಲ

ಪ್ಲಾಸ್ಟಿಕ್ ನ ಗುಣಗಳು ಮತ್ತು ಉಪಯೋಗ:

  1. ಪ್ಲಾಸ್ಟಿಕ್ ನ ಗುಣಗಳನ್ನು ತಯಾರಿಕೆ ಗೆ ಬಳಸಿರುವ ಸಾವಯವ ಪಾಲಿಮರ್ ನ ಗಡುಸುತನ, ಸಾಂದ್ರತೆ, ಮತ್ತು ಬೆಂಕಿ ನಿರೋಧಕತೆ, ಸಾವಯವ ಸಂಯುಕ್ತಗಳ ಬಳಕೆ ಯ ಮೇಲೆ ತಿಳಿಯ ಬಹುದಾಗಿದೆ.
  2. ಪ್ಲಾಸ್ಟಿಕ್ ಗಳು ಬಿಸಿಯಾಗಿದ್ದಾಗ ಬೇಕಾದ ಆಕಾರಕ್ಕೆ , ಗಾತ್ರಕ್ಕೆ ಅಚ್ಚು ಹಾಕಬಹುದು
  3. ಹೆಚ್ಚಿನ ಖರ್ಚಿಲ್ಲದೆ ಹಗುರ ಹಾಗೂ ಬೇರೆ ಬೇರೆ ಬಣ್ಣಗಳಲ್ಲಿ ದೊರೆಯುತ್ತವೆ
  4. ಅವುಗಳ ಬೆಲೆ ಲೋಹಗಳಿಗಿಂತ ಕಡಿಮೆ
  5. ಅವುಗಳು ಗಟ್ಟಿಯಾಗಿರುತ್ತವೆ, ದೀರ್ಘ ಬಾಳಿಕೆ ಬರುತ್ತವೆ. ತುಕ್ಕು ಹಿಡಿಯುವುದಿಲ್ಲ
  6. ಅವುಗಳು ಶಾಖ ಮತ್ತು ವಿದ್ಯತ್ ನ ಅವಾಹಕ ವಸ್ತುಗಳು
  7. ಅವುಗಳ ಕರಗುವ ಬಿಂದು ಬಹಳ ಕಡಿಮೆ

ಪ್ಲಾಸ್ಟಿಕ್ ನ ಅನಾನುಕೂಲಗಳು:

  1. ಪ್ಲಾಸ್ಟಿಕ್ ಗಳನ್ನು ಉರಿಸುವುದರಿಂದ ವಾತಾವರಣಕ್ಕೆ ವಿಷಾನಿಲಗಳು ಬಿಡುಗಡೆ ಮಾಡುತ್ತವೆ, ಇದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
  2. ಪ್ಲಾಸ್ಟಿಕ್ ಬ್ಯಾಗ್ ಮತ್ತು ಕ್ಯಾನ್ ಗಳಲ್ಲಿ ಆಹಾರ ಸಂಗ್ರಹಿಸುವುದು ಬಹಳ ಅಪಾಯಕಾರಿ.
  3. ಬೇಡವಾದ ಪ್ಲಾಸ್ಟಿಕ್ ಪದಾರ್ಥಗಳ ಸಂಗ್ರಹಣೆಯು ರೋಗ ಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುವುದು
  4. ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ನೀರಿನ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತದೆ.
  5. ಪ್ಲಾಸ್ಟಿಕ್ ಗಳು ಜೈವಿಕ ವಿಘಟನೆಗೆ ಒಳಪಡುವುದಿಲ್ಲ, ಇವು ಪರಿಸರ ಸ್ನೇಹಿಯಲ್ಲ
  6. ಪ್ರಾಣಿಗಳು ಪ್ಲಾ ಸ್ಟಿಕ್ ವಸ್ತುಗಳಲ್ಲಿನ ಆಹಾರವನ್ನು ಸೇವಿಸಿ ಸಾವನ್ನಪ್ಪುತ್ತವೆ

ಪ್ಲಾಸ್ಟಿಕ್ ಬಳಸುವಾಗ ಮುನ್ನೆಚ್ಚರಿಕೆಗಳು: ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯ ಬಾರದು ವಸ್ತುಗಳನ್ನು ಕೊ೦ಡುಕೊಳ್ಳುವಾಗ ಬಟ್ಟೆ ಚೀಲ ಅಥವಾ ಗೋಣಿದಾರದ ಬ್ಯಾಗ್ ಗಳನ್ನು ಬಳಸಿ ಪ್ಲಾಸ್ಟಿಕ್ ಗಳನ್ನು ಪುನರ್ ಬಳಕೆಗಾಗಿ ಶುಷ್ಕವಾಗಿ ಮತ್ತು ಸ್ವಚ್ಛವಾಗಿಡಿ. ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ನಾಲ್ಕು ಅಂಶಗಳನ್ನು ಅನುಸರಿಸಿ : ರೆಡ್ಯೂಸ್, ರೀ ಯೂಸ್, ರೀ ಸೈಕಲ್ ಮತ್ತು ರಿ ಕವರ್. ಜೈವಿಕ ವಿಘಟನೆಯಾಗುವ ಪ್ಲಾಸ್ಟಿಕ್ ಗಳನ್ನು ಬಳಸಿ.

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.