ಬಾಯ್ಲ್ ನಿಯಮ
ಚಟುವಟಿಕೆ - ಚಟುವಟಿಕೆಯ ಹೆಸರು
ಬಾಯ್ಲ್ ನಿಯಮದ ಪ್ರಾತ್ಯಕ್ಷಿಕೆ
ಅಂದಾಜು ಸಮಯ
30 ನೀಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- 60 ಮಿ.ಲೀ ಸಿರಿಂಜ್
- ಬಲೂನ್
- ಸೂಜಿ ರಂಧ್ರದ ಮುಚ್ಚಳ (ಗಾಳಿಯನ್ನು ಬಂಧಿಸಲು)
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಹೊಸದಾದ ನಿಷ್ಕ್ರೀಮೀಕರಣ ಗೊಳಿಸಿದ ಸಿರಿಂಜ್ ಬಳಸಿ
- ಸಿರಿಂಜ್ ನ ಜೊತೆ ಬರುವ ಸೂಜಿಯನ್ನು ಸೂಕ್ತವಾಗಿ ವಿಲೇವಾರಿ ಮಾಡಿ
- ಶಿಕ್ಷಕರ ಸೂಕ್ತ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿಧಾನ-ಒಂದು ಬಲೂನನ್ನು ತೆಗೆದುಕೊಳ್ಳಿ,ಗಾಳಿಯನ್ನು ಊದಿ,ಸಿರಿಂಜ್ ನ ಸಿಲಿಂಡರ್ ನ ಗಾತ್ರಕ್ಕೆ ಅನುಗುಣವಾಗಿ ಬೇಬಿ ಬಲೂನನ್ನು ತಯಾರಿಸಿಕೊಳ್ಳಿ, ಸಿರಿಂಜ್ ನ ಪಿಸ್ಟನ್ ಹೊರ ತೆಗೆದು ಬೇಬಿ ಬಲೂನನ್ನು ಸಿರಿಂಜ ನ ಸಿಲಿಂಡರ್ ನ ಒಳಗೆ ಹಾಕಿ, ನಂತರ ಸಿರಿಂಜ್ ಗೆ ಪಿಸ್ಟನ್ ಅಳವಡಿಸಿ, ಗಾಳಿ ಹೊರ ಹೋಗದಂತೆ ಸಿಲಿಂಡರ್ ನ ಸೂಜಿಯ ಬಾಯಿಯನ್ನು ಭದ್ರ ಪಡಿಸಿ. ಪಿಸ್ಟನ್ ನ ಸಹಾಯದಿಂದ ಸಿರಿಂಜ್ ನ ಒಳಗೆ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತಾ ಹೋಗಿ, ಬಲೂನ್ ನ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ. ಇದೇ ರೀತಿ ಪಿಸ್ಟನ್ ನ ಸಹಾಯದಿಂದ ಗಾಳಿಯ ಒತ್ತಡವನ್ನು ಕಡಿಮೆಮಾಡಿ ಬಲೂನ್ ನ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ. ಉಪಸಂಹಾರ-ಸ್ಥಿರ ತಾಪದಲ್ಲಿ ನಿರ್ದಿಷ್ಟ ರಾಶಿಯ ಅನಿಲದ ಒತ್ತಡ ಹೆಚ್ಚಾದಂತೆ ಬಲೂನ್ ನ ಗಾತ್ರವೂ ಕಡಿಮೆಯಾಗುತ್ತದೆ,ಒತ್ತಡ ಕಡಿಮೆಯಾದಂತೆ ಬಲೂನ್ ಗಾತ್ರವೂ ಹೆಚ್ಚಾಗುತ್ತದೆ.ಅಂದರೆ "ಸ್ಥಿರ ತಾಪದಲ್ಲಿ ನಿರ್ದಿಷ್ಟ ರಾಶಿಯ ಅನಿಲದ ಗಾತ್ರವೂ ಅದರ ಒತ್ತಡಕ್ಕೆ ವಿಲೋಮಾನು ಪಾತದಲ್ಲಿರುತ್ತದೆ"-ಬಾಯ್ಲ್ ನಿಯಮ
{{#ev:youtube|MXTQlEhG-Ak| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸ್ಕೂಬಾ ಈಜುಗಾರರು ಸಮುದ್ರದ ಆಳದಿಂದ ಮೇಲೆ ಬರುವಾಗ ತಕ್ಷಣವೇ ಒತ್ತಡ ಕಡಿಮೆಯಾಗುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ನಿಧಾನಗತಿಯಲ್ಲಿ ಮೇಲೆ ಬರುತ್ತಾರೆ .
- ವಿಮಾನವು ಮೇಲೇರುವಾಗ ಗಾಳಿಯ ಒತ್ತಡವು ಕಡಿಮೆಯಾಗುವುದರಿಂದ ಉಂಟಾಗುವ ಅನಾಹುತವನ್ನು ತಪ್ಪಿಸಲು ಪ್ರಯಾಣಿಕರಿಗೆ ಬಾಯಿಯನ್ನು ತೆರೆದುಕೊಳ್ಳಲು ವಿಮಾನದ ಸಿಬ್ಬಂದಿಯು ಸೂಚಿಸುತ್ತಾರೆ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಗಾಳಿಯ ಒತ್ತಡವನ್ನು ಹೆಚ್ಚಿಸಿದಾಗ ಬಲೂನ್ ನ ಗಾತ್ರದಲ್ಲಾದ ಬದಲಾವಣೆಯೇನು?
- ಗಾಳಿಯ ಒತ್ತಡವನ್ನು ಕಡಿಮೆ ಮಾಡಿದಾಗ ಬಲೂನ್ ನ ಗಾತ್ರದಲ್ಲಾದ ಬದಲಾವಣೆಯೇನು?
- ತಾಪವು ಸ್ಥಿರವಾಗಿದ್ದಾಗ ಅನಿಲದ ಗಾತ್ರ ಮತ್ತು ಒತ್ತಡಗಳಿಗಿರುವ ಸಂಬಂಧವನ್ನು ನಿರೂಪಿಸಿ.
- ಬಾಯ್ಲನ ನಿಯಮವನ್ನು ನಿರೂಪಿಸಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಅನಿಲಗಳ ವರ್ತನೆ