ಬೆದರು ಬೊಂಬೆಗಳ ಮೆರವಣಿಗೆ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಹೊಲಗಳಲ್ಲಿ ತೆನೆ ಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳು ಬೆದರಿ ಓಡಿ ಹೋಗುವಂತೆ ಮಾಡಲು ಬೆದರುಬೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ಪುಟ್ಟ ಗೌರಿ ಯೋಚಿಸುವುದೇ ಬೇರೆ! ಅದೇನೆಂದು ಓದಿ ತಿಳಿಯಿರಿ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳೊಂದಿಗೆ ಕನಸುಗಳ ಕುರಿತಾಗಿ ಚರ್ಚಿಸಬಹುದು. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಮಾಡುವ ಸಹಾಯಗಳ ಕುರಿತು ಚರ್ಚಿಸಬಹುದು. ಮಕ್ಕಳೊಂದಿಗೆ ಸಂತೋಷ, ದುಖಃ, ಭಯ ಮುಂತಾದ ಭಾವನೆಗಳ ಬಗ್ಗೆ ಚರ್ಚಿಸಬಹುದು.
ಕಥಾ ವಸ್ತು :ಕುಟುಂಬ,ಕುಟುಂಬ,ಸಹಾಯ - ಸಹಕಾರ,ಭಾವನೆಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
ತಿರುಕನ ಕನಸು ಹಾಡು ಹೇಳಿಸುವುದು.
- ತಿರುಕನೋರ್ವ ಊರ ಮುಂದೆ, ಮುರುಕುಧರ್ಮ ಶಾಲೆಯಲ್ಲಿ ಒರಗಿರುತ್ತಲ್ಲೊಂದು ಕನಸು ಕಂಡನಂತೆ
ಆಲಿಸುವ ಪೂರ್ವದ ಚಟುವಟಿಕೆ
- ನೀವು ಕಂಡ ಕನಸುಗಳ ಅನುಭವವನ್ನು ಹಂಚಿಕೊಳ್ಳಿ
- ಉತ್ತಮ ಆರೋಗ್ಯಕರ ಸಮತೋಲನ ಆಹಾರಗಳು ಯಾವುವು?
- ಆಹಾರ ಬೆಳೆಗಳನ್ನು ಯಾರು ಬೆಳೆಯುತ್ತಾರೆ ಮತ್ತು ಎಲ್ಲಿ ಬೆಳೆಯುತ್ತಾರೆ?
- ನಿಮ್ಮ ಊರಿನಲ್ಲಿ ಬೆಳೆಯುವ ಬೆಳೆಗಳನ್ನು ಪಟ್ಟಿ ಮಾಡಿ.
- ಕಾಳುಗಳನ್ನು ಹೆಚ್ಚು ತಿನ್ನುವ ಜೀವಿಗಳು ಯಾವುವು?
- ಪಕ್ಷಿಗಳಿಗೆ ಕಾಳುಗಳು ಎಲ್ಲಿ ಸಿಗುತ್ತದೆ?
- ಪಕ್ಷಿಗಳಿಂದ ಕಾಳುಗಳನ್ನು ರಕ್ಷಿಸಿಕೊಳ್ಳಲು ರೈತ ಏನು ಮಾಡುತ್ತಾನೆ?
- ಬೆಳೆಗಳನ್ನು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬಹುದು?
ಆಲಿಸುವ ಸಮಯದ ಚಟುವಟಿಕೆ
- ಬೆದರು ಗೊಂಬೆ ತಯಾರಿಸಲು ಏನೆಲ್ಲಾ ಪರಿಕರಗಳು ಬೇಕಾಗುತ್ತದೆ?
- ಬೆದರು ಗೊಂಬೆ ನೋಡಲು ಹೇಗೆ ಕಾಣುತ್ತದೆ?
- ನೀವು ಬಳಸುವ ಇತರೆ ಬಣ್ಣದ ಟೇಪುಗಳಾವುವು?
- ಬೆಳೆಗಳನ್ನು ಏಕೆ ಬೆಳೆಯಬೇಕು?
- ಬೆಳೆಗಳನ್ನು ಹೇಗೆ ಸಂರಕ್ಷಿಸಬೇಕು?
- ಆಲಿಸಿದ ನಂತರದ ಚಟುವಟಿಕೆಗಳು
- ಬೆದರು ಬೊಂಬೆ ಚಿತ್ರ ಬರೆಯಿರಿ
- ಬೆದರು ಬೊಂಬೆಗಳನ್ನು ತಯಾರಿಸಿ
- ಬೆಳೆ ರಕ್ಷಿಸಿಕೊಳ್ಳುವ ಕ್ರಮಗಳನ್ನು ತಂಡದೊಂದಿಗೆ ಚರ್ಚಿಸಿ ತಿಳಿಸಿ.
- ಏಕದಳ/ದ್ವಿದಳ ಧಾನ್ಯಗಳನ್ನು ತಿಳಿಸುವ ಚಾರ್ಟ್ ಸಿದ್ದಪಡಿಸಿ.