ಭಾರತದ ಪ್ರಾಕೃತಿಕ ವಿಭಾಗಗಳು ಚಟುವಟಿಕೆ1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಕಲಿಕಾ ನಿಲ್ದಾಣ ಚಟುವಟಿಕೆ

ಅಂದಾಜು ಸಮಯ

೪೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸಿರುವ ಭಾರತದ ನಕ್ಷೆಗಳು
  2. ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳ ರಚನೆ,ಸ್ಥಾನ, ವಿಸ್ತೀರ್ಣ ಮೊದಲಾದ ಪ್ರಮುಖ ಅಂಶಗಳ ವಿವರಣೆ ಇರುವ ಚಾರ್ಟಗಳು
  3. ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳ ವಿಡಿಯೋಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ವಿದ್ಯಾರ್ಥಿಗಳು ಸಾಲಿನಲ್ಲಿ ಶಾಂತತೆಯಿಂದ ಕಲಿಕಾ ನಿಲ್ದಾಣಗಳಲ್ಲಿ ಚಲಿಸುವುದು .
  2. ಗಮನವಿಟ್ಟು ಚುತ್ರಗಳನ್ನು ,ಚಾರ್ಟಗಳನ್ನು ಹಾಗೂ ವಿಡಿಯೋಗಳನ್ನು ವೀಕ್ಷಿಸುವುದು.
  3. ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರೊಜೆಕ್ಟರ್,ಕಂಪ್ಯೂಟರ್

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==------

  1. ಭಾರತದ ಪ್ರಾಕೃತಿಕ ವಿಭಾಗಗಳ ಚಿತ್ರಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ppt on physical features of india
  1. important mountains,plains,rivers,plateaus of india

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರತಿಯೊಂದು ಗುಂಪಿನ ವಿದ್ಯಾರ್ಥಿಗಳು ಒಂದೊಂದು ಕಲಿಕಾ ನಿಲ್ದಾಣದಲ್ಲಿ ಸುಮಾರು ಐದು ನಿಮಿಷಗಳ ಕಾಲ ಅಲ್ಲಿರುವ ಅಂಶಗಳನ್ನು ಅವಲೋಕಿಸಿ,ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಂಡು , ಮುಂದಿನ ಕಲಿಕಾ ನಿಲ್ದಾಣಕ್ಕೆ ಸಾಗುವುದು.ಪ್ರತಿಯೊಂದು ಕಲಿಕಾ ನಿಲ್ದಾಣಗಳನ್ನು ಅವಲೋಕಿಸಿದ ನಂತರ ಗುಂಪು ಚರ್ಚೆ ಏರ್ಪಡಿಸುವುದು. ಚರ್ಚಿಸುವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ, ಸ್ವಯಂ ಕಲಿಕಾ ಸಾಮರ್ಥ್ಯವನ್ನು ಅವಲೋಕಿಸುವುದು. 1)ವಿಷಯ ಮಂಡನ2) ತೊಡಗಿಸಿಕೊಳ್ಳುವಿಕೆ 3) ವಿಷಯದ ಬಗ್ಗೆ ಪೂರ್ವಜ್ಞಾನ4)ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ 5)ವಿಷಯ ವಿಶ್ಲೇಷಣಾ ಸಾಮರ್ಥ್ಯetc.

  1. )ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
  2. )ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು
  3. )ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
  4. )ಅಗತ್ಯವಾದ ಹಿಮ್ಮಾಹಿತಿ ನೀಡು ವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ?
  2. ಉತ್ತರದ ಮಹಾ ಮೈದಾನದ ಜನಸಂಖ್ಯಾ ಪ್ರಮಾಣದ ಬಗ್ಗೆ ವಿಶ್ಲೇಷಿಸಿ.
  3. ಉತ್ತರದ ಮಹಾ ಮೈದಾನ ಹೇಗೆ ರಚನೆಯಾಗಿದೆ ?
  4. ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ?
  5. ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು?ಮತ್ತು ಏಕೆ?
  6. ಪರ್ಯಾಯ ಪ್ರಸ್ಥ ಭೂಮಿ ಹೇಗೆ ರಚನೆಯಾಗಿದೆ?
  7. ಕರಾವಳಿ ಮೈದಾನದ ಪ್ರಾಮುಖ್ಯತೆ ಏನು?
  8. ಸಂಚಯನ ಮೈದಾನ ಹೇಗೆ ರಚನೆಯಾಗುತ್ತದೆ?
  9. ಪೂರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು?
  10. ನೀವಿರುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಹಿಮಾಲಯ ಪರ್ವತಗಳ ಪ್ರಯೋಜನಗಳೇನು?
  2. ಭಾರತದ ಅತ್ಯಂತ ಹಳೆಯ ಭೂ ಸ್ವರೂಪ ಯಾವುದು ?
  3. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ವ್ಯತ್ಯಾಸಗಳೇನು ?
  4. ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹುದು?
  5. ಭಾರತದ ಪ್ರಾಕೃತಿಕ ವಿಭಾಗಗಳಾವುವು ?
  6. ಉತ್ತರದ ಪರ್ವತಗಳ ಉದ್ದ ಎಷ್ಟು ?
  7. ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು
  8. ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
  9. ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ.
  10. ಪರ್ಯಾಯ ಪ್ರಸ್ಥಭೂಮಿಯು ಯಾವ ಭೂರಾಶಿಯ ಭಾಗವಾಗಿದೆ ?
  11. ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು