ಭಾರತದ ಪ್ರಾಕೃತಿಕ ವಿಭಾಗಗಳು ಚಟುವಟಿಕೆ2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಭಾರತದ ಪ್ರಾಕೃತಿಕ ನಕ್ಷೆಯಲ್ಲಿ ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.

ಅಂದಾಜು ಸಮಯ

೪೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಾರ್ಡಶೀಟ್ ಗಳು,ಮಾರ್ಕರ್ /ಸ್ಕೆಚ್ ಪೆನ್,ಭಾರತದ ಪ್ರಾಕೃತಿಕ ನಕ್ಷೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಭಾರತದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರೊಜೆಕ್ಟರ್,ಭಾರತದ ಪ್ರಾಕೃತಿಕ ನಕ್ಷೆ

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==----

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಭಾರತದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ ಭಾರತದ ನಕ್ಷೆ ರಚಿಸಿ,ಪ್ರಾಕೃತಿಕ ವಿಭಾಗಗಳನ್ನು,ಪ್ರಮುಖ ಪರ್ವತ-ಬೆಟ್ಟಗಳನ್ನು,ನದಿಗಳನ್ನು ಗುರುತಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಭಾರತದ ಪ್ರಾಕೃತಿಕ ವಿಭಾಗಗಳಾವುವು ?
  2. ನೀವಿರು ವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ ?
  3. ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು?
  4. ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ?
  5. ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
  6. ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ?
  7. ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು ?
  8. ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ
  9. ಪರ್ಯಾಯ ಪ್ರಸ್ಥ ಭೂಮಿಯು ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಇದೆ? ?
  10. ಪರ್ಯಾಯ ಪ್ರಸ್ಥ ಭೂಮಿಯ ಪ್ರಮುಖ ಬೆಟ್ಟಗಳನ್ನು ಹೆಸರಿಸಿ.
  11. ಭಾರತದ ಕರಾವಳಿ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ?
  12. ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಹಿಮಾಲಯ ಪರ್ವತಗಳನ್ನು ಯಾವ ಅಂಶದ ಆಧಾರದ ಮೇಲೆ ಮೂ ರು ಶ್ರೇಣಿಗಳಾಗಿ ವಿಭಜಿಸಲಾಗಿದೆ?
  2. ಭಾರತದ ಅತ್ಯಂತ ಹಳೆಯ ಭೂಸ್ವರೂಪ ಯಾವುದು ?
  3. ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ವ್ಯತ್ಯಾಸಗಳನ್ನು ನಕ್ಷೆಯ ಸಹಾಯದಿಂದ ವಿವರಿಸಿ.
  4. ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹು ದು?
  5. ಪೂ ರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು ?
  6. ಪಶ್ಚಿಮ ಕರಾವಳಿಯು ಪೂರ್ವ ಕರಾವಳಿಗಿಂತ ಕಿರಿದಾಗಿರಲು ಕಾರಣವೇನು?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು