ಮಾಡ್ಯೂಲ್ ೧೦-SRHR-ಸಂತಾನೋತ್ಪತ್ತಿ ಅಂಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

  • ಸಂತಾನೋತ್ಪತ್ತಿ ಅಂಗಗಳೂ ಕೂಡ ದೇಹದ ಬೇರೆ ಅಂಗಗಳ ಹಾಗೆಯೇ ದೇಹದ ಭಾಗಗಳು, ನಾವು ಅವುಗಳ ಬಗ್ಗೆ ಸಹಜವಾಗಿ, ಮುಜುಗರವಿಲ್ಲದೆ ಮಾತನಾಡುವಂತಿರಬೇಕು ಎನ್ನುವುದನ್ನು ಮನದಟ್ಟು ಮಾಡಿಸುವುದು
  • ಸ್ತ್ರೀ ಮತ್ತು ಪುರುಷ ಸಂತಾನೋತ್ಪತ್ತಿ ಅಂಗಗಳ ಬಗ್ಗೆ ಮಾತನಾಡುವುದು
  • ಮುಟ್ಟಿನ ಬಗ್ಗೆ ಕಿಶೋರಿಯರಿಗೆ ಇರುವ ಸಂದೇಹಗಳ ಬಗ್ಗೆ ಚರ್ಚೆ ಮಾಡುವುದು

ಪ್ರಕ್ರಿಯೆ

  • ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
  • ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
  1. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  2. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  3. ಎಲ್ಲಾರೂ ಭಾಗವಹಿಸಬೇಕು
  4. ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  5. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  6. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು.

ಬಾಡಿ ಇಮೇಜ್‌ ಅಂದರೇನು ಎಂದು ನೆನಪಿಸುವುದು.05 ನಿಮಿಷ

ಇವತ್ತು ನಾವು ಬೇರೆ ಬೇರೆ ವಿಷಯಗಳ ಕಲಿಕೆಯನ್ನ ಮುಂದುವರೆಸೋಣ ಎಂದು, ಅವರಲ್ಲೇ ನಾಲ್ಕು ಗುಂಪುಗಳನ್ನು ಮಾಡುವುದು.  ಗುಂಪುಗಳನ್ನು ಮಾಡಲು ಅವರಿಗೆ ಬೈಕ್‌, ಕಾರ್‌, ಟ್ರಕ್‌, ವಿಮಾನ ಗಳಿರುವ ಚಿತ್ರಗಳನ್ನು ನೀಡುವುದು.

ಪ್ರತಿ ಗುಂಪಿಗೂ ಚಾರ್ಟ್‌ ಶೀಟ್‌ ಕೊಟ್ಟು - ನಾವು ಪುರುಷ ಪ್ರಧಾನತೆ ಬಗ್ಗೆ ಮಾತನಾಡುವಾಗ ಗಂಡು ಮತ್ತೆ ಹೆಣ್ಣು ಮಕ್ಕಳನ್ನ ಹೇಗೆ ಬೇರೆ ಬೇರೆ ರೀತಿ ನೋಡಲಾಗುತ್ತೆ ಎಂದು ಮಾತಾಡಿದ್ವಿ. ಇವತ್ತು ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಬಾಡೀಲಿ ಏನು ಹೋಲಿಕೆ ಇದೆ, ವ್ಯತ್ಯಾಸ ಇದೆ ಎಂದು ಬರೆಯಿರಿ. ಗೊತ್ತಾಗಿಲ್ಲ ಅಂದರೆ ಈ ಉದಾಹರಣೆ ನೀಡುವುದು. ಇಬ್ಬರಿಗೂ ಕಣ್ಣಿದೆ, ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಉದ್ದ ಕೂದಲಿರುತ್ತೆ, ಗಂಡು ಮಕ್ಕಳಿಗೆ ಗಿಡ್ಡ ಕೂದಲಿರುತ್ತೆ. 20 ನಿಮಿಷ

ದೊಡ್ಡ ಕ್ಲಾಸಿನಲ್ಲಿ, ಅವರು ಬರೆದಿರುವುದನ್ನು ಎಲ್ಲರ ಮುಂದೆ ಹಂಚಿಕೊಳ್ಳಲು ಹೇಳುವುದು. ಕಿಶೋರಿಯರು ಸಂತಾನೋತ್ಪತ್ತಿ ಅಂಗಗಳ ಬಗ್ಗರ ಬರೆದಿದ್ದರೆ, ಅದನ್ನು ರೆಫರೆನ್ಸ್‌ ಆಗಿಟ್ಟುಕೊಂಡು ಮಾತನಾಡುವುದು. ಇಲ್ಲದಿದ್ದರೆ, ನೀವು ಬರೆದಿರುವುದರಲ್ಲಿ ಒಂದು ಅಂಶ ಮಿಸ್‌ ಆಗಿದೆ ಎಂದು ಹೇಳಿ ಸಂತಾನೋತ್ಪತ್ತಿ ಅಂಗಗಳ ಬಗ್ಗೆ ಮಾತನಾಡುವುದು. 10 ನಿಮಿಷ

ನಾವು ನೋಡೋ ಹಾಗೆ ಗಂಡು ಮತ್ತೆ ಹೆಣ್ಣು ಮಕ್ಕಳಲ್ಲಿ ಇರೋ ವ್ಯತ್ಯಾಸ ಅಂದರೆ ಈ ಸಂತಾನೋತ್ಪತ್ತಿ ಅಂಗಗಳು. ಅವುಗಳು ಏನು, ಅವು ಏನು ಮಾಡುತ್ವೆ ಅಂತ ನೋಡೋಣ ಬನ್ನಿ ಇದಾದ ನಂತರ ಸ್ತ್ರೀ ಮತ್ತು ಪುರುಷ ಸಂತಾನೋತ್ಪತ್ತಿ ಅಂಗಗಳ DST ಯಅನ್ನು ತೋರಿಸುವುದು. 15 ನಿಮಿಷ

ಸೋ ಹೆಣ್ಣು ಮತ್ತೆ ಗಂಡಿನ ಬಾಡಿಲಿ ವ್ಯತ್ಯಾಸ ಅಂದ್ರೆ ಬರೆ ಸಂತಾನೋತ್ಪತ್ತಿ ಅಂಗಗಳು.ನೀವು ಕಿಶೋರಾವಸ್ಥೆನಲ್ಲಿ ಇರೋದ್ರಿಂದ ಈಗ ನಿಮ್ಮಲ್ಲಿ ಸಂತಾನೋತ್ಪತ್ತಿ ಅಂಗ ಆಕ್ಟಿವ್‌ ಆಗಿ ಕಾರ್ಯ ಮಾಡೋಕೆ ಶುರು ಮಾಡಿದೆ. ಅದನ್ನೇ ನಾವು ಮುಟ್ಟಾಗೋದು, ಮ್ಯಾಚ್ಯೂರ್‌ ಆಗೊದು, ಪೀರಿಯಡ್ಸ್  ಅಂತ ಎಲ್ಲ ಕರೆಯೋದು.

ಇದರ ನಂತರ, ಮುಟ್ಟಿನ ಬಗ್ಗೆಯ ಪ್ರಶ್ನೋತ್ತರದ ಪ್ರಸ್ತುತಿಯನ್ನು ಬಳಸಿಕೊಂಡು ಮುಟ್ಟಿನ ಬಗ್ಗೆ ಅವರಿಗಿರುವ ಸಂದೇಹ, ಕುತೂಹಲ, ಕಾಳಜಿಗಳ ಬಗ್ಗೆ ಚರ್ಚೆ ಮಾಡುವುದು. ಈ ಪ್ರಸ್ತುತಿಯನ್ನು ಕೇವಲ ರೆಫರೆನ್ಸ್‌ ಆಗಿ ಬಳಸಿಕೊಂಡು ಆಡು ಮಾತಿನಲ್ಲಿ ಅಲ್ಲಿರುವುದನ್ನು ವಿವರಿಸಿದರೆ ಉತ್ತಮ.

ಇನ್ನೇನಾದರೂ ಸಂದೇಹಗಳಿದ್ದರೆ ಅವುಗಳಿಗೆ ಉತ್ತರಿಸಿ, ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಮುಂದಿನ ವಾರ ತಿಳಿಸುತ್ತೇವೆ ಎಂದು ಹೇಳಿ, ಮುಮದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು. ಮುಗಿಸುವ ಮುನ್ನ ಕೀಶೋರಿ ಅಡ್ಡದ ಪೋಸ್ಟ್‌ ಅನ್ನು ತೋರಿಸಿ, ನಿಮಗೆ ಇನ್ನೂ ಐಡಿಯಾಗಳಿದ್ದರೆ ನಮಗೆ ತಿಳಿಸಿ, Instagram ಕೂಡ ವಾಯ್ಸ್‌ ಮೆಸೇಜ್‌ ಕಳಿಸಬಹುದು ಎಂದು ತಿಳಿಸುವುಸು  30 ನಿಮಿಷ

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. ಪ್ರೊಜೆಕ್ಟರ್‌ ಕೇಬಲ್‌
  3. Extension cord
  4. Speaker
  5. Bed sheets to cover windows
  6. SRHR DSTs
  7. Menstruation FAQ presentation
  8. Gum
  9. Printed body parts
  10. Sketch pens
  11. A4 sheets - one side empty
  12. Menstrual cup

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  1. SRHR DST
  2. Menstruation FAQ

ಔಟ್‌ಪುಟ್‌ಗಳು

  • ಕಿಶೋರಿಯರು ಬರೆದ ಅಂಶಗಳು