ಮಾಡ್ಯೂಲ್ ೧೫-ಪುನರಾರ್ವತನೆ ಮತ್ತು ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶ

  • ಲೈಂಗಿಕ ಕಿರುಕುಳ ಎಂದರೇನು ಎನ್ನುವುದನ್ನು ಅರ್ಥ ಮಾಡಿಸುವುದು - (ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಗೊಂದಲಮಯ ಸ್ಪರ್ಶ, ಪುರುಷಪ್ರಧಾನತೆಯಿಂದಾಗಿ ಉಂಟಾದ ಪುರುಷಾಧಿಕಾರ ಇತ್ಯಾದಿ)
  • ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡಲು ಹಿಂಜರಿಯುವುದೇಕೆ ? (ವಿಕ್ಟಿಮ್ ದೂಷಣೆ, ಅಳುಕು/ಭಯ, ಅಪರಾಧಿ ಭಾವ, ನಾಚಿಕೆ ಇತ್ಯಾದಿ)
  • ಇದರ ಬಗ್ಗೆ ಮಾತನಾಡಬೇಕೆಂದರೆ ಅದಕ್ಕಾಗಿ ಇರುವ ದಾರಿಗಳೇನು? ಇದನ್ನು ಅರ್ಥ ಮಾಡಿಸಲು POCSO ಕಾಯ್ದೆಯ ನೆರವನ್ನು ತೆಗೆದುಕೊಳ್ಳುವುದು
  • ಈ ವರ್ಷ ಕಲಿತ ಎಲ್ಲ ವಿಷಯಗಳ ಪುನರ್ಮನನ ಮಾಡುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

  • ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  • ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  • ಎಲ್ಲಾರೂ ಭಾಗವಹಿಸಬೇಕು
  • ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  • ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  • ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು.

ಸಮತೋಲನ ಆಹಾರದಲ್ಲಿ ಏನೇನಿರಬೇಕು ಎಂದು ನೆನಪಿಸುವುದು. 10 ನಿಮಿಷ

ಅವರು ಕೂತಿರುವ ಬೆಂಚಿನಲ್ಲಿಯೇ ಗುಂಪುಗಳನ್ನು ಮಾಡಿ flash card ಗಳನ್ನು ಕೊಡುವುದು. ಅದಲ್ಲಿ ಇಲ್ಲುಯವರೆಗೆ ನಾವು ಅವರ ಜೊತೆ ಮಾತನಾಡಿರುವ ವಿಷಯಗಳಿರುತ್ತವೆ.

ಅವರಿಗೆ ಆ ವಿಷಯಗಳ ಬಗ್ಗೆ ಈ ಕೆಳಗಿನ ಅಂಶಗಳನ್ನು ಬರೆಯಲು ಹೇಳುವುದು.

  1. ಇದರ ಬಗ್ಗೆ ಏನು ತಿಳ್ಕೊಂಡ್ರಿ? ಏನು ಇಷ್ಟ ಆಯ್ತು?
  2. ಇದಲ್ಲದೇ ನಿಮಗೆ ಇನ್ನೂ ಯಾವ ವಿಷಯ ನಿಮಗೆ ಇಷ್ಟ ಆಯ್ತು ? 20 ನಿಮಿಷ

ಬರೆದಾದ ಮೇಲೆ ಅವರಿಗೆ ಎಲ್ಲರ ಜೊತೆ ಹಂಚಿಕೊಳ್ಳಲು ಹೇಳುವುದು. 10 ನಿಮಿಷ

ಎಲ್ಲರ ಹಂಚಿಕೆಯಾದ ನಂತರ presentation ಅನ್ನು ಬಳಸಿಕೊಂಡು ರಿಕ್ಯಾಪ್‌ ಮಾಡುವುದು. 15 ನಿಮಿಷ

ಇದಾದ ನಂತರ ಸಮಯವಿದ್ದರೆ POCSO ವೀಡಿಯೋ ತೋರಿಸುವುದು.

Confidentiality ಬಗೆಗೆ ಅವರಿಗೆ ಹೇಳುವುದು

  1. ಇಲ್ಲಿನ ಮಾತುಕತೆ ನಮ್ಮ ಮಧ್ಯವೇ ಇರಲಿ
  2. ಇಲ್ಲಿನ ಮಾತುಕತೆಯನ್ನು, ಗೆಳತಿಯರು ಹಂಚಿಕೊಂಡ ವಿಷಯಗಳನ್ನು ಹೊರಗಡೆ ಯಾರಿಗೂ ಹೇಳುವುದಿಲ್ಲ
  3. ಏನಾದರೂ ಇದ್ದಲ್ಲಿ ನಮ್ಮ ಬಳಿ, ಅಥವ ಟೀಚರ್‌ ಬಳಿ ಹಂಚಿಕೊಳ್ಳುತ್ತೇವೆ

POCSO DST ಯನ್ನು ತೋರಿಸುವುದು. 20 ನಿಮಿಷ

ವೀಡಿಯೋವನ್ನು ನೋಡಿಯಾದ ನಂತರ ಎಲ್ಲರಿಗೂ flash card ಕೊಟ್ಟು ಇವನ್ನು ಬರೆಯಲು ಹೇಳುವುದು. ಅವರ ಹೆಸರನ್ನು ಬರೆಯಲು ಹೇಳುವುದು.

  1. ನಮಗೆ ಈ ರೀತಿ ಆಗಿದೆ
  2. ವಿಷಯದ ಬಗ್ಗೆ ಗೊತ್ತಾಯ್ತು, ಈ ರೀತಿ ಆಗಿಲ್ಲ
  3. ಹೇಳೋದಕ್ಕೆ ಇಷ್ಟ ಇಲ್ಲ

ನೀವು ಬರೆದಿರುವುದನ್ನು ಉಲ್ಟಾ ಮಾಡಿ ನನಗೆ ಕೊಡಿ. ಮುಂದಿನ ವಾರ ಏನಾದರೂ ಚರ್ಚಿಸುವುದಿದ್ದರೇ ನಾವು ಯಾರ ಬಳಿ ಚರ್ಚಿಸಬೇಕೋ ಅವರ ಬಳಿ ಮಾತ್ರವೇ ಇದರ ಬಗ್ಗೆ ಮಾತನಾಡುತ್ತೇವೆ.

ಕಂಟೆಂಟ್‌ ಬಗ್ಗೆ ಕೇಳುವುದು. ಹೇಗಿತ್ತು ಅರ್ಥ ಆಯ್ತ ಇತ್ಯಾದಿ.

ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ಆದ್ದರಿಮದ ಭಯ ನಾಚಿಕೆ ಬೇಡ, ಎಂದು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. 20 ನಿಮಿಷ

ಇದಾದ ನಂತರ, ಶ್ರೇಯಸ್‌ ಅನ್ನು ಒಳಗೆ ಬರಲು ಹೇಳುವುದು. ಇಲ್ಲಿಯವರೆಗೆ ನಾವು ಅವರ ಜೊತೆಗೆ ಮಾತನಾಡಿದ ವಿಷಯಗಳನ್ನು ಪುನರ್ಮನನ ಮಾಡುವುದು.

  • ಯಾರಾದರೂ ಇದರ ಬಗ್ಗೆ ಕೇಳಿದರೆ ಏನೇಳ್ತೀರ?
  • ಏನಿಷ್ಟ ಆಯ್ತು? ಇತ್ಯಾದಿ

ಇದಾದ ನಂತರ ಮುಂದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು.   30 ನಿಮಿಷ  

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. Speaker
  3. Bedsheets to cover windows
  4. POCSO DSTs
  5. A4 sheets - one side empty
  6. Voice recorder
  7. Flash cards

ಒಟ್ಟೂ ಫೆಸಿಲಿಟೇಟರ್‌ಗಳು - 1

ಇನ್‌ಪುಟ್‌ಗಳು

  1. POCSO DST
  2. Recap presentation

ಔಟ್‌ಪುಟ್‌ಗಳು

  • ಕಿಶೋರಿಯರು ಬರೆದ ಅಂಶಗಳು