ರಚನಾ ಸಮಾಜ ವಿಜ್ಞಾನ 9 ಆಶಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

2. ಆಶಯ

ಪಠ್ಯಕ್ರಮ ಬದಲಾಗಬೇಕು ಎಂಬ ಮಾತು ಸಾರ್ವಜನಿಕರಿಂದ ನಿರಂತರವಾಗಿ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ 2005ನೇ ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಪಠ್ಯ ಪುಸ್ತಕಗಳ ನೂತನ ರಚನಾ ಕಾರ್ಯದಲ್ಲಿ ತೊಡಗಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ಮತ್ತು 9ನೇ ತರಗತಿಗಳ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ನೂತನ ಪಠ್ಯ ಪುಸ್ತಕವು ರಚನೆಯಾಗಿದ್ದು ಎಂದಿನಂತೆ ನೂತನ ಪಠ್ಯಕ್ಕೆ ಸಂಬಂಧಿಸಿದಂತೆ ಪೂರ್ಣ ಪರಿಕಲ್ಪನೆಯ ಜ್ಞಾನವನ್ನು ಹೊಸ ಶಿಕ್ಷಣ ಕ್ರಮದ ನಿರ್ದೇಶನದಂತೆ ಕಟ್ಟಿಕೊಳ್ಳಲು, ರಾಜ್ಯದ ವಿಷಯವಾರು ಅನುಕೂಲಕಾರರಿಗೆ (ಶಿಕ್ಷಕರಿಗೆ) ತರಬೇತಿ ಕಾರ್ಯಾಗಾರವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯು ರಾಜ್ಯದ ಪ್ರತಿಯೊಬ್ಬ ಅನುಕೂಲಕಾರರಿಗೂ ತಲುಪಬೇಕಿದ್ದು, ಹೊಸ ಪಠ್ಯ ಪುಸ್ತಕವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಮಕ್ಕಳಿಗೆ ಅನುಕೂಲಿಸುವ ಬಗ್ಗೆ ಹೇಗಿರಬೇಕೆಂಬುದರ ಬಗ್ಗೆ ಸ್ಥೂಲವಾಗಿ ರಚನಾ ಸಾಹಿತ್ಯದಲ್ಲಿ ಕೊಡಮಾಡುತ್ತಿದ್ದು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪೂರ್ಣ ಪರಿಕಲ್ಪನೆ ಕಲಿವಿನ ಸಂದರ್ಭದಲ್ಲಿ ಮೂಡಿಬರಲು ಅನುಕೂಲವಾಗುವಂತೆ ರಚನಾ ಸಾಹಿತ್ಯದ ಚೌಕಟ್ಟಿನಲ್ಲಿ ತರಬೇತಿಯಿಂದ ನೀಡಲಾಗುವುದು.

ಇದರ ಪರಿಣಾಮವಾಗಿ ಒಂಭತ್ತನೆ ತರಗತಿಯ ವಿದ್ಯಾಗಳು ಪ್ರಸ್ತುತ ಈ ಸಮಾಜ ವಿಜ್ಞಾನ ಪಠ್ಯವನ್ನು ಬದಲಾಗುತ್ತಿರುವ ವರ್ತಮಾನದ ಸಮಾಜದ ಸನ್ನಿವೇಶಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತಹ ಅವಕಾಶಗಳನ್ನು ತಾವು ಕಲ್ಪಿಸಿಕೊಡಬೇಕೆಂಬ ಆಶಯ ನಮ್ಮೆಲ್ಲರದ್ದಾಗಿದೆ.

ಹಾಗೆಯೇ ನೂತನ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕಲಿಕಾ ಪ್ರಕ್ರಿಯೆಗೆ ಕಲ್ಪಿಸಲಾಗಿರುವ ಹೊಸ ವಿಧಾನಗಳಾದ ಅಂತರ್ಗತ ವಿಧಾನ, ರಚನಾತ್ಮಕ ವಿಧಾನ ಹಾಗೂ ಸುರುಳಿಯಾಕಾರದ ವಿಧಾನಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಸಮಾಜ ವಿಜ್ಞಾನ ಪಠ್ಯದ ವಿಷಯ ಹಾಗೂ ಅಭ್ಯಾಸಗಳು ವಿದ್ಯಾಗಳನ್ನು ಯೋಚನೆ ಮಾಡುವಂತೆ ಮಾಡಿ ಚಟುವಟಿಕೆಗಳ ಮೂಲಕ ಜ್ಞಾನ ಮತ್ತು ಸಾಮಥ್ರ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿರುವುದರಿಂದ ಪ್ರತಿಯೊಬ್ಬ ಅನುಕೂಲಕಾರರೂ ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಕಲಿವಿನ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಕೆಂಬುದು ಇಂದಿನ ತುರ್ತಾಗಿದೆ.

ನೂತನ ಪಠ್ಯವು ಪರೀಕ್ಷಾ ದೃಷ್ಟಿಯಿಂದ ರಚಿತವಾಗಿಲ್ಲದೇ ಇರುವುದರಿಂದ ಕಲಿಕೆಯನ್ನು ಕಂಠಪಾಠ ವಿಧಾನದಿಂದ ಕಡ್ಡಾಯವಾಗಿ ದೂರಮಾಡಿ ಮಗುವಿನ ಅನುಭವಗಳ ಮೂಲಕ ಜೀವನ ಅವಶ್ಯಕತೆಗಳಿಗೆ ಸ್ಪಂದಿಸಲು ಅನುವಾಗುವಂತೆ ಪ್ರತಿ ಟಕವನ್ನು ಅರ್ಥೈಸಿಕೊಂಡು ಮಗುವಿನ ಭವಿಷತ್ತಿನ ಜೀವನ ಮಾನವೀಯ ಮೌಲ್ಯಗಳ, ಅನುಷ್ಠಾನದೊಂದಿಗೆ, ಕೌಶಲ್ಯಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಂಡು ಸನ್ನಡೆಯ ಮನೋಧೋರಣೆಯ ನೂತನ ಯುಗ ಸೃಷ್ಟಿಯಾಗುವುದು ಇಂತಹ ಶಿಕ್ಷಣ ಕ್ರಮ ಅಳವಡಿಕೆಯಿಂದ ಮಾತ್ರ ಎಂದು ಆಶಿಸುತ್ತೇವೆ.

-ಪಠ್ಯ ಪುಸ್ತಕ ಸಮಿತಿ