ರಚನಾ ಸಮಾಜ ವಿಜ್ಞಾನ 9 ತರಬೇತಿಯ ಸಂದರ್ಭದಲ್ಲಿನ ಸಂಪನ್ಮೂಲ ವ್ಯಕ್ತಿಗಳಿಗೆ ಸೂಚನೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

4. ತರಬೇತಿಯ ಸಂದರ್ಭದಲ್ಲಿನ ಸಂಪನ್ಮೂಲ ವ್ಯಕ್ತಿಗಳಿಗೆ ಸೂಚನೆಗಳು

ಸಮಾಜ ವಿಜ್ಞಾನ ತರಗತಿ ಪ್ರಕ್ರಿಯೆಯಲ್ಲಿ ಕಲಿಕೆಯು ರಚನವಾದಿ ನೆಲೆಗಳಿಂದ ಹೇಗೆ ಅನುಕೂಲಿಸಲ್ಪಡುವುದು ಎನ್ನುವುದರ ಹುಡುಕಾಟವೇ ಈ ರಚನಾ ಸಾಹಿತ್ಯದ ಹಾಗೂ ಇಂತಹ ತರಬೇತಿಗಳ ಮುಖ್ಯ ಕಾಳಜಿಯಾಗಿದೆ. ಸಮಾಜ ವಿಜ್ಞಾನದ ಪಾಠಗಳಲ್ಲಿ ಜ್ಞಾನ ರಚನೆಗೆ, ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಕಲಿಕೆದಾರರಲ್ಲಿ ಜ್ಞಾನದ ಪುನರ್ರಚನೆ, ಮತ್ತು ನಿರಂತರ ಹಾಗೂ ಸಮಗ್ರ ಮೌಲ್ಯ ಮಾಪನಗಳನ್ನು ಅಳವಡಿಸಿಕೊಳ್ಳುವುದು ಕೂಡ ಅಗತ್ಯವಾಗಿರುವುದರಿಂದ ತರಬೇತಿಯಲ್ಲಿ ನೀಡಲಾಗುವ ಸಲಹೆ ಸೂಚನೆಗಳನ್ನು, ವಿಚಾರಗಳನ್ನು ತಾವೆಲ್ಲರೂ ಮತ್ತೊಮ್ಮೆ ವಿಮರ್ಶೆಗೊಳಪಡಿಸಿಕೊಂಡು ಈ ರೂಪದ ಕಲಿಕೆಯ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ತರಬೇತಿಯ ಸಂದರ್ಭದ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಶಿಕ್ಷಕರಿಗೆ (ಅನುಕೂಲಿಸುವವ) ಕೆಲವು ಪೂರಕ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಆದ್ದರಿಂದ ತಾವು ತಪ್ಪದೆ ಈ ಸೂಚನೆಗಳನ್ನು ಗಮನಿಸಿ, ಕಲಿಕಾ ಪ್ರಕ್ರಿಯೆಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ರಚನಾ ತಂಡವು ಆಶಿಸುತ್ತದೆ.

  • ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005, ಹಾಗೂ ಸಿ.ಸಿ.ಇ. 2009ರ ಆಶಯದಂತೆ ನೂತನವಾಗಿ ರಚಿಸಲ್ಪಟ್ಟಿರುವ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಕಲಿಕೆಯ ಬಗ್ಗೆ ಮಕ್ಕಳಿಗೆ ಜ್ಞಾನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮಾರ್ಗದರ್ಶನವಾಗಿ ರಚಿಸಿರುವ ರಚನಾ ಸಾಹಿತ್ಯವನ್ನು ತಪ್ಪದೇ ಓದಿ ಅರ್ಥೈಸಿಕೊಳ್ಳುವುದು.
  • ತರಬೇತಿಯ ಸಂದರ್ಭದ ವಿಚಾರಗಳ ಚರ್ಚೆ, ನೀಡಲಾಗಿರುವ ರಚನಾ ಸಾಹಿತ್ಯ ಶಿಕ್ಷಕರು ಕಲಿಕಾ ಪ್ರಕ್ರಿಯೆ ಬೇಕಾಗುವ ಜ್ಞಾನ ಮತ್ತು ಅನ್ವಯ ಸಾಮಥ್ರ್ಯವನ್ನು ಪಡೆದುಕೊಳ್ಳುವ ಸಾಧನವಾಗಿದ್ದು, ಸಂಪನ್ಮೂಲ ವ್ಯಕ್ತಿಗಳು ಈ ಸಂದರ್ಭದಲ್ಲಿ ಉತ್ತಮ ಸಾಮಥ್ರ್ಯವನ್ನು ಅಭಿವ್ಯಕ್ತಿ ಕೌಶಲ್ಯವನ್ನು ಪಡೆದು ತರಬೇತಿಗೆ ಬರಲಿರುವ ಶಿಕ್ಷಕರಿಗೆ ಅಗತ್ಯ ಉದಾಹರಣೆಗಳ ಮೂಲಕ ತಿಳಿಸುವುದು ಅಗತ್ಯವಾಗಿದೆ.
  • ತರಬೇತಿಗೆ ಮುನ್ನ ಪೂರ್ವ ತಯಾರಿಯನ್ನು ಅಗತ್ಯ ಸಲಕರಣೆಗಳೊಂದಿಗೆ ಮಾಡಿಕೊಳ್ಳುವುದು.
  • ತರಬೇತಿ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಮಯ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸುವುದು.
  • ಉತ್ತಮ ಅಭಿವ್ಯಕ್ತಿ ಕೌಶಲ್ಯವನ್ನು ಸಂಪನ್ಮೂಲ ವ್ಯಕ್ತಿಗಳು ಹೊಂದಿ ತರಬೇತುದಾರರಿಗೆ, ಆಸಕ್ತಿದಾಯಕವಾದ ವಿಷಯ ಮನನಕ್ಕೆ ಸ್ಪಷ್ಟತೆ, ನಿರ್ದಿಷ್ಟತೆ ಹಾಗೂ ಪ್ರೇರಣಾ ರೂಪದ ಮಾತುಗಾರಿಕೆಯನ್ನು ಹೊಂದಿರಬೇಕು.
  • ತರಬೇತಿಯ ಅಷ್ಟು ದಿನಗಳು ಸ್ನೇಹಪೂರ್ವಕವಾಗಿ ತರಬೇತಿದಾರರನ್ನು ನೋಡಿಕೊಳ್ಳಬೇಕು.
  • ತರಬೇತುದಾರರು ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ, ಎಲ್ಲರೂ ಭಾಗಿಗಳಾಗುವಂತೆ ತರಬೇತಿಯ ತರಗತಿಯನ್ನು ಅನುವುಗೊಳಿಸುವುದು.
  • ಸಂಪನ್ಮೂಲ ವ್ಯಕ್ತಿಗಳು ತಪ್ಪದೇ ತರಬೇತಿಗೆ ಮುನ್ನ ಎನ್.ಸಿ.ಎಫ್. 2005, ಸಿ.ಸಿ.ಇ. 2009 ಹಾಗೂ `ನಿರಂತರ' 2011ನ್ನು ಓದಿಕೊಳ್ಳುವುದು ಹಾಗೂ ಇವುಗಳ ಚೌಕಟ್ಟಿನಲ್ಲಿಯೇ ತರಬೇತಿ ಮೂಡಿಬರುವುದನ್ನು ಮರೆಯಬಾರದು.
  • ಸಂಪನ್ಮೂಲ ವ್ಯಕ್ತಿಗಳು ನೀಡುವ ಪ್ರಾತ್ಯಕ್ಷಿಕೆ ಪಾಠಗಳು ತರಬೇತುದಾರರು ಪೂರ್ಣ ಪ್ರಮಾಣದ ತರಗತಿ ಪ್ರಕ್ರಿಯೆಯ ಜ್ಞಾನವನ್ನು ಕಟ್ಟಿಕೊಳ್ಳುವಂತಿರಬೇಕು.
  • ಸಮಾಜ ವಿಜ್ಞಾನ ಪಠ್ಯದ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬಹುದಾದ ಕಲಿವಿನ ವಿಧಾನಗಳನ್ನು ಸಮಗ್ರವಾಗಿ ಪರಿಚಯ ಮಾಡಿಕೊಡುವುದು ಹಾಗೂ ಈ ಎಲ್ಲ ವಿಧಾನಗಳನ್ನು ಟಕವಾರು ಹೇಗೆ ಬಳಸಿಕೊಳ್ಳಬೇಕು ಎಂಬ ಸ್ವಾತಂತ್ರ್ಯವನ್ನು ಶಿಕ್ಷಕರಿಗೆ ಬಿಡುವುದು.
  • ತರಗತಿಯಲ್ಲಿ ನೀಡಲಾಗುವ ಟಕವಾರು ಚಟುವಟಿಕೆಗಳು ವಿಭಿನ್ನವಾಗಿರಲು ಸಂಪನ್ಮೂಲ ವ್ಯಕ್ತಿಗಳು ವಿವಿಧ ಬಗೆಯ ಚಟುವಟಿಕೆಗಳನ್ನು ತರಬೇತಿ ಸಂದರ್ಭದಲ್ಲಿ ಪರಿಚಯ ಮಾಡಿಕೊಡುವುದು.
  • ಬಳಸುವ ಬೋಧನೋಪಕರಣಗಳಿಗೆ ಆಕ ಹೊರೆಯಾಗದಂತೆ ಎಚ್ಚರ ವಹಿಸುವುದು.
  • ತರಬೇತಿ ಅರ್ಥಪೂರ್ಣವಾಗಿ ಮೂಡಿಬರುವಂತೆ ಎಚ್ಚರವಹಿಸುವುದು.