ರೊಟ್ಟಿ ಸುರುಳಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಭೋಂಕು ನಾಯಿಯ ರೊಟ್ಟಿ ಕಿತ್ತುಕೊಂಡವರು ಯಾರು? ಆ ರೊಟ್ಟಿ ಕೊನೆಗೂ ಭೋಂಕು ಬಾಯಿ ಸೇರಿತಾ? ತಿಳಿಯಿರಿ.

ಉದ್ದೇಶಗಳು :

ಪರಿಸರದಲ್ಲಿ ಕಂಡುಬರುವ ಪ್ರಾಣಿ-ಪಕ್ಷಿಗಳು ಉಂಟುಮಾಡುವ ಶಬ್ದಗಳು ಹಾಗೂ ಅವುಗಳು ತಮ್ಮ ಆಹಾರಕ್ಕಾಗಿ ಪಡುವ ಸಂಕಷ್ಟಗಳ ಕುರಿತು ತಿಳಿಸಿಕೊಡಬಹುದು. ಅಲ್ಲದೇ ಈ ಕಥೆಯಿಂದ ಸರಳ ವಾಕ್ಯ ರಚನೆ ಮಾಡುವುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು.

ಕಥಾ ವಸ್ತು :ಪ್ರಾಣಿ ಮತ್ತು ಪಕ್ಷಿಗಳು,ಶಬ್ದಕೋಶ,ಸ್ವಾರ್ಥ

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Rotti%20Surali.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಿಗೆ ನೂತನ ಪದಗಳನ್ನು ಹೇಳಿಕೊಡುವುದು.
  2. ಪರಿಸರದಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳು ಹಾಗೂ ಅವುಗಳು ಉಂಟುಮಾಡುವ ಶಬ್ದಗಳ ಕುರಿತು ಚರ್ಚಿಸಬಹುದು.
  3. ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವ ಕುರಿತು ಮಕ್ಕಳಿಗೆ ಆಗಿರುವ ಅನುಭವವನ್ನು ಸಂಗ್ರಹಿಸುವುದು.
  4. ಮಕ್ಕಳ ಆಹಾರವನ್ನು ಇತರರು ಕಸಿದುಕೊಂಡಾಗ ಅವರಲ್ಲುಂಟಾಗುವ ಭಾವನೆಗಳ ಕುರಿತು ಚರ್ಚಿಸುವುದು.
  5. ನಿಮ್ಮ ಸಾಕುಪ್ರಾಣಿಗೆ ನೀವು ನೀಡಿದ ಆಹಾರವನ್ನು ಬೇರೊಂದು ಪ್ರಾಣಿ ಕಿತ್ತಕೊಂಡು ಹೋಯಿತೆಂದರೆ ಆಗ ನೀವೇನು ಮಾಡುತ್ತಿದ್ದಿರಿ?" ಎಂದು ಮಕ್ಕಳನ್ನು ಕೇಳುವುದು.

ಸಂಪೂರ್ಣ ದೈಹಿಕ ಚಟುವಟಿಕೆಗಳು

ಪುರ್ ಚಟುವಟಿಕೆ :

ಪ್ರಾಣಿಯೆಂದರೆ ಪ್ರಾಣೀ ಭಂಗಿಯಲ್ಲಿ ಕೂರುವುದು, ಪಕ್ಷಿಯೆಂದರೆ ಹಾರುವ ಭಂಗಿಯಲ್ಲಿರುವುದು

ಆಲಿಸುವಿಕೆಯ ಪೂರ್ವ ಚಟುವಟಿಕೆಗಳು

ಮಂಗನ ನ್ಯಾಯ ಕಥೆ

ಆಲಿಸುವ ಸಂಧರ್ಭದ ಚಟುವಟಿಕೆಗಳು

  • Pause 1 : ಕುಮಾರ ನಾಯಿಗೆ ಒಂದು ರೊಟ್ಟಿ ನೀಡಿದ
  • ಪ್ರಶ್ನೆ : ರೊಟ್ಟಿ ನೀಡಿದ ಮೇಲೆ ಏನೆಲ್ಲಾ ಆಗಿರಬಹುದು?
  • ಮಕ್ಕಳ ಊಹಾ ಉತ್ತರಗಳು
  • ನಾಯಿ ರೊಟ್ಟಿಯನ್ನು ತಿಂದಿರಬಹುದು
  • ನಾಯಿಗೆ ರೊಟ್ಟಿ ಇಷ್ಟವಾಗದೇ ಇರಬಹುದು
  • ಬೇರೊಂದು ನಾಯಿ ಕಿತ್ತುಕೊಂಡಿರಬಹುದು
  • ಯಾವುದೋ ಪಕ್ಷಿ ಎತ್ತಕೊಂಡು ಹಾರಿ ಹೋಗಿರಬಹುದು
  • Pause 2 : ವಠಾಟದಲ್ಲಿದ್ದ ಅಶ್ವತ್ಥ ಮರದ ಮೇಲೆ ರೊಟ್ಟಿ ಕಚ್ಚಿಕೊಂಡು ಕುಳಿತ ಕಾಗೆಗೆ ಮುಂದೆ ಏನಾಗಿರಬಹುದು?
  • ಮಕ್ಕಳ ಊಹಾ ಉತ್ತರಗಳು
  • ಕಾಗೆ ರೊಟ್ಟಿಯನ್ನು ತಿಂದಿರಬಹುದು
  • ಕಾಲಲ್ಲಿ ಹಿಡಿದಿಟ್ಟುಕೊಂಡಿರಬಹುದು
  • ಮರದ ಮೇಲೆ ಪಕ್ಷಿಗಳು ರೊಟ್ಟಿಗಾಗಿ ಕಾದಾಟ ಮಾಡಿರಬಹುದು
  • ರೊಟ್ಟಿ ಬಿಟ್ಟು ಪಕ್ಷಿ ಹಾರಿ ಹೋಗಿರಬಹುದು
  • Pause 3: ರೊಟ್ಟಿಯ ಚೂರು ನವಿಲಿಗೆ ಕಂಡಿತು
  • ಪ್ರಶ್ನೆ : ನವಿಲು ರೊಟ್ಟಿ ಕಸಿಯಲು ಏನು ಮಾಡಿರಬಹುದು
  • ಮಕ್ಕಳ ಊಹಾ ಉತ್ತರಗಳು
  • ನವಿಲು ನರ್ತಿಸಿ ಕಾಗೆಯ ಮನ ಸೆಳೆದು ರೊಟ್ಟಿ ಪಡೆದಿರಬಹುದು
  • ಕಾಗೆ ರೊಟ್ಟಿ ಬಿಟ್ಟು ಹಾರಿ ಹೋಗಿರಬಹುದು
  • ಕಾಗೆಗೆ ರೊಟ್ಟಿ ಇಷ್ಟವಾಗದೇ ಇರಬಹುದು
  • Pause 4 : ಟಿಂಕು ಜೋರಾಗಿ ಬೊಗಳಿದ
  • ಪ್ರಶ್ನೆ : ಟಿಂಕು ಬೊಗಳಿದ ಮೇಲೆ ಏನಾಗಿರಬಹುದು
  • ಮಕ್ಕಳ ಊಹಾ ಉತ್ತರಗಳು
  • ಮಂಗ, ಕಾಗೆ, ನವಿಲು ಭಯದಿಂದ ಓಡಿರಬಹುದು
  • ಕಾಗೆ ಹೆದರಿದಾಗ ರೊಟ್ಟಿ ಜಾರಿ ಕೆಳಗೆ ಬಿದ್ದಿರಬಹುದು
  • ವಠಾರದಲ್ಲಿದ್ದ ಬೇರೆಲ್ಲಾ ನಾಯಿಗಳು ಜಗಳವಾಡಿರಬಹುದು
  • ಟಿಂಕು ಬೇರೊಂದು ರೊಟ್ಟಿಗಾಗಿ ಕುಮಾರನ ಬಳಿ ಹೋಗಿರಬಹುದು

ಆಲಿಸಿದ ನಂತರದ ಚಟುವಟಿಕೆಗಳು

  • ಕಥಾ ಸರಣಿಯನ್ನು ಕ್ರಮಾನುಗತವಾಗಿ ಜೋಡಿಸಲು ಹೇಳುವುದು
  • ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಕೂಗನ್ನು ಅಭಿನಯಿಸಲು ತಿಳಿಸುವುದು
  • ಪ್ರಾಣಿ ಪಕ್ಷಿಗಳ ಆಹಾರ ಕ್ರಮಗಳ ಬಗ್ಗೆ ತಿಳಿಸುವುದು
  • ಪ್ರಾಣಿ ಪಕ್ಷಿಗಳ ಆವಾಸ ಸ್ಥಾನದ ಬಗ್ಗೆ ತಿಳಿಸುವುದು
  • ಸಾಕು ಪ್ರಾಣಿಗಳ ಹಾರೈಕೆಯ ಕುರಿತು ಚರ್ಚಿಸುವುದು
  • ಪ್ರಾಣಿ ಪಕ್ಷಿಗಳ ಬಗ್ಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸುವುದು
  • ಪ್ರಾಯೋಗಿಕ ಚಟುವಟಿಕೆಗಳು
  • ವಿವಿಧ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸುವುದು
  • ಗೂಡು ಹೆಣೆಯುವುದು
  • ಗುಹೆಯ ಮಾದರಿ ತಯಾರಿಕೆ
  • ಕವಿತೆ ರಚನೆ, ಅಂತ್ಯಾಕ್ಷರದ ಪದಗಳ ರಚನೆ
  • ಪ್ರಾಣಿ ಪಕ್ಷಿಗಳ ಕೂಗಿನ ಧ್ವನಿಯ ಅಭಿವ್ಯಕ್ತಿ
  • ಪರಿಸರ ವೀಕ್ಷಣೆಯ ಕುರಿತು ಸ್ವ ಅನುಭವವನ್ನು ಹಂಚಿಕೊಳ್ಳುವುದು.