ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. | ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. |