೮,೯೩೦ bytes added
, ೧೧ ವರ್ಷಗಳ ಹಿಂದೆ
=8. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಅರ್ಥೈಸಿಕೊಳ್ಳುವ ಬಗೆ =
9ನೇ ತರಗತಿಯ ವಿದ್ಯಾಗಳಿಗಾಗಿ ರಚಿಸಿರುವ ಪ್ರಸ್ತುತ ಸಮಾಜ ವಿಜ್ಞಾನ ಪಠ್ಯಪುಸ್ತಕವು ಬದಲಾಗುತ್ತಿರುವ ವರ್ತಮಾನ ಸಮಾಜದ ಸನ್ನಿವೇಶಗಳಿಗೆ ವಿದ್ಯಾಯು ತನ್ನನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ರಚಿಸಲಾಗಿದ್ದು, ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳನ್ನು ಈ ತರಗತಿಯಲ್ಲಿಯೂ ಮುಂದುವರೆಸಲಾಗಿದೆ.
ನೂತನ ಪಠ್ಯ ಪುಸ್ತಕದಲ್ಲಿ ಕಲಿಕಾ ವಿಧಾನಗಳಾದ ಅಂತರ್ಗತ ವಿಧಾನ (Intergrated Approach) ರಚನಾತ್ಮಕ ವಿಧಾನ (Constructive Approach), ಹಾಗೂ ಸುರುಳಿಯಾಕಾರದ (Spirol Approach) ವಿಧಾನಗಳನ್ನು ಅಳವಡಿಸಲಾಗಿದೆ.
ಅಂತರ್ಗತ (ಸಮ್ಮಿಳಿತ) ವಿಧಾನವೆಂದರೆ ಮಗುವು ಕಟ್ಟಿಕೊಳ್ಳಬೇಕಾದ ಜ್ಞಾನದ ಹಿನ್ನಲೆಯಲ್ಲಿ ಎಲ್ಲಾ ವಿಷಯಾಂಶಗಳನ್ನು ನೋಡುವ ಕ್ರಮ
ಉದಾ:- ವಿಜಯನಗರ ಸಾಮ್ರಾಜ್ಯದ ಬಗ್ಗೆ ಅರ್ಥೈಸಿಕೊಳ್ಳುವಾಗ ಮಗು ಈ ಸಾಮ್ರಾಜ್ಯದ ಐತಿಹಾಸಿಕ ಹಿನ್ನಲೆ, ರಾಜಕೀಯವಾದ ಬೆಳವಣಿಗೆಗಳು ಇದಕ್ಕೆ ಸಂಬಂಧಿಸಿದಂತೆ ಆ ಕಾಲದ ರಾಜರ ಆಡಳಿತ ಕ್ರಮ, ಮುತ್ತು ರತ್ನಗಳಿಂದ ಸಮೃದ್ಧ ಈ ಸಾಮ್ರಾಜ್ಯದ ಆಕ ಪ್ರಭಾವ, ಧಾರ್ಮಿಕವಾದ ಸಮನ್ವಯತೆ ವೈಜ್ಞಾನಿಕ ಹಿನ್ನಲೆಯ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ, ಕಳ್ಳತನ, ಮೋಸ ವಂಚನೆಗಳಿಂದ ಮುಕ್ತವಾಗಿದ್ದ ಹಿನ್ನಲೆಯಲ್ಲಿ ಸಾಮಾಜಿಕ ಭದ್ರತೆ ಮುಂತಾದ ಅಂಶಗಳನ್ನು ವಿಜಯನಗರ ಸಾಮ್ರಾಜ್ಯದ ಕಲಿಕೆಯ ಸಂದರ್ಭದಲ್ಲಿ ಈ ಸಮ್ಮಿಳಿತ ವಿಧಾನವನ್ನು ಅರಿಯುವರು.
ಹಾಗೆಯೇ, ರಚನಾತ್ಮಕ ವಿಧಾನವೆಂದರೆ, ಜ್ಞಾನ ಕಟ್ಟಿಕೊಳ್ಳಲು ಮಗು ತನ್ನ ಅನುಭವಗಳನ್ನು ಸಂಟಿಸಿ ಅನುಭವಾತ್ಮಕವಾಗಿ ಜ್ಞಾನ ಪುನರ್ರಚನೆಗೆ ಅನುಕೂಲಿಸಿಕೊಳ್ಳುವುದೇ ರಚನಾವಾದವಾಗಿದೆ. ಅಂದರೆ ತಮ್ಮದೇ ಆದ ರೀತಿಯಲ್ಲಿ ಜ್ಞಾನ ಕಟ್ಟಿಕೊಳ್ಳುವುದು ಎಂದರ್ಥ.
ಉದಾ:
ಭಾಗ - ಭೂಗೋಳ / ಟಕ: ಕರ್ನಾಟಕದ ಜಲಸಂಪತ್ತು
ಈ ಟಕದಲ್ಲಿ ಮಗು ತನ್ನ ಅನುಭವದ ಮೂಲಕ ಜ್ಞಾನ ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತದೆ.
ಹೇಗೆಂದರೆ ನೀರು ಒಂದು ಸಂಪತ್ತು ಎಂದು ಅರ್ಥೈಸಿಕೊಳ್ಳುವಲ್ಲಿ ಮಗು ತಾನು ಮತ್ತು ತನ್ನ ಸುತ್ತ ನೀರಿನ ಕೊರತೆ ಉಂಟಾದಂತಹ ಸಂದರ್ಭದಲ್ಲಿ ಅದರ ಅವಶ್ಯಕತೆ, ಪ್ರಾಮುಖ್ಯತೆ ಎಷ್ಟೆಂಬುದನ್ನು ಅನುಭವಿಸುವುದರ ಮೂಲಕ ನೀರು ಒಂದು ಸಂಪನ್ಮೂಲ ಹೇಗೆಂಬ ಜ್ಞಾನವನ್ನು ಕಟ್ಟಿಕೊಂಡು, ತನ್ನ ನಿಜ ಜೀವನದಲ್ಲಿ ನೀರಿನ ಬಳಕೆ ಮಾಡಿಕೊಳ್ಳುವಲ್ಲಿ ತನ್ನ ಪಾತ್ರವೇನೆಂಬುದನ್ನು ಅರಿತುಕೊಳ್ಳುತ್ತದೆ.
ಇದೇ ರೀತಿಯಾಗಿ ಸಮಾಜ ವಿಜ್ಞಾನದ ಎಲ್ಲಾ ಟಕಗಳಿಗೂ ಈ ರಚನಾವಾದ ವಿಧಾನವನ್ನು ಶಿಕ್ಷಕರು ಅಳವಡಿಸಿಕೊಳ್ಳಬಹುದು.
ಸುರುಳಿಯಾಕಾರದ ವಿಧಾನವೆಂದರೆ: ಮಗು ತಾನು ಕಟ್ಟಿಕೊಳ್ಳುವ ಜ್ಞಾನವನ್ನು ತನ್ನ ಸಾಮಥ್ರ್ಯಕ್ಕನುಸಾರ ವಯೋಮಾನಕ್ಕೆ ಅನುಗುಣವಾಗಿ ದಿನದಿಂದ ದಿನಕ್ಕೆ ಅನುಭವ ಮತ್ತು ಚಟುವಟಿಕೆಗಳ ಮೂಲಕ ಜ್ಞಾನವನ್ನು ಪಡೆದುಕೊಂಡು ಜೀವನ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳುವುದೇ ಸುರುಳಿಯಾಕಾರದ ಕಲಿಕಾ ವಿಧಾನವಾಗಿದೆ.
ಉದಾ-ಭಾಗ-ಸಮಾಜಶಾಸ್ತ್ರಟಕ : ಕುಟುಂಬ
ಪ್ರಸ್ತುತ ಟಕಕ್ಕೆ ಸಂಬಂಧಿಸಿದಂತೆ ಸುರುಳಿಯಾಕಾರದ ಕಲಿಕಾ ವಿಧಾನವನ್ನು ಈ ಕೆಳಗಿನಂತೆ ಮಗುವನ್ನು ಕಲಿಕೆಯಲ್ಲಿ ಅನುಭವ ಹಾಗೂ ಚಟುವಟಿಕೆಗಳನ್ನು ಒಳಗೊಂಡಂತೆ ಜ್ಞಾನ ಕಟ್ಟಿಕೊಂಡು ಸಮಾಜಮುಖಿಯಾದ ಆಲೋಚನೆಗಳ ಹೊಸ ಹೊಸ ಜ್ಞಾನವನ್ನು ಮನನ ಮಾಡಿಕೊಳ್ಳುತ್ತಾ ವಿಸ್ತರಿಸಿಕೊಳ್ಳುತ್ತದೆ.
ಹೇಗೆಂದರೆ, - ಮಗುವಿಗೆ ತಾಯಿ, ತಂದೆ ಪರಿಕಲ್ಪನೆ
- ಕುಟುಂಬದ ಇತರ ಸದಸ್ಯರು
- ನೆರೆ ಹೊರೆ
- ಶಾಲೆ
- ಸಮಾಜ
- ಊರು
- ತಾಲ್ಲೂಕು - ಜಿಲ್ಲೆ ರಾಜ್ಯ, ದೇಶ - ವಿಶ್ವದ ಪರಿಕಲ್ಪನೆ
- ವಸುದೇವ ಕುಟುಂಬಕಂ ಎಂಬ ಹೊಸ ಅರಿವು.
ಹೀಗೆ ವಿದ್ಯಾಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಈ ಕಲಿಕಾ ವಿಧಾನಗಳೇ ಪೂರಕವಾಗಿವೆ ಎಂಬುದನ್ನು ನಾವು ಮರೆಯಬಾರದು. ಮಗು ಸ್ವತಂತ್ರವಾಗಿ ಕಲಿಯುವುದಕ್ಕೆ ಅವಕಾಶ ಮಾಡಿಕೊಡುವ ಈ ನಿಟ್ಟಿನಲ್ಲಿ ಮಗುವಿಗೆ ಕಲಿಕೆಯಲ್ಲಿ ವ್ಯವಸ್ಥಿತವಾದ ಜ್ಞಾನ ಕಟ್ಟಿಕೊಳ್ಳಲು ಹಾಗೂ ಸವಾಲುಗಳನ್ನು ಎದುರಿಸಲು ಬೇಕಾಗುವ ಚೈತನ್ಯವನ್ನು ತುಂಬುವುದು ಇಂದಿನ ಶಿಕ್ಷಣ ಕ್ರಮದ ತುರ್ತಾಗಿದೆ. ಪಠ್ಯ ಪುಸ್ತಕವನ್ನು ಪೂರ್ಣವಾಗಿ ಅರ್ಥೈಸಿಕೊಂಡು ಅದರ ಸ್ವರೂಪವನ್ನು ವಿಶ್ಲೇಷಿಸಿ ತರಗತಿ ಪ್ರಕ್ರಿಯೆಯಲ್ಲಿ ಅನುಭಾತ್ಮಕವಾದ ಬೇರೆ ಬೇರೆ ಆಯಾಮಗಳೊಂದಿಗೆ ಕಲಿಕೆ ಮುಂದುವರೆಯಬೇಕಾಗಿದೆ.
ಹಾಗೂ ಮಗುವಿನಲ್ಲಿ ಕೌಶಲ್ಯ ಮನೋಧೋರಣೆ, ಆಸಕ್ತಿ, ಅಭಿವ್ಯಕ್ತಿಗಳನ್ನು ಉತ್ತಮೀಕರಿಸಿಕೊಳ್ಳುವಲ್ಲಿ ಜ್ಞಾನದ ಎಲ್ಲಾ ವಿಷಯಗಳನ್ನು ಪೂರಕವಾಗಿ ಕಟ್ಟಿಕೊಳ್ಳುವಲ್ಲಿ ಸಮಾಜ ವಿಜ್ಞಾನ ನೂತನ ಪಠ್ಯ ಪುಸ್ತಕದ ಎಲ್ಲಾ 6 ಭಾಗಗಳ ಟಕಗಳೊಂದಿಗೆ ಮಗುವಿನ ಜ್ಞಾನ ಮನನ, ಹಾಗೂ ಪುನರ್ರಚನೆಯ ಸಾಮಥ್ರ್ಯವನ್ನು ಮಗು ಗಳಿಸಲು ಎಲ್ಲಾ ರೀತಿಯ ಅವಕಾಶಗಳನ್ನು ಶಿಕ್ಷಕರು ತಪ್ಪದೇ ಒದಗಿಸಿಕೊಡುವುದು. ಜೊತೆಗೆ ಈ ಪ್ರಕ್ರಿಯೆಗೆ ಬೇಕಾದ ಎಲ್ಲಾ ಕಲಿಕಾ ಸಂಪನ್ಮೂಲಗಳನ್ನು ಸಂಗ್ರಹಿಸಿಟ್ಟುಕೊಂಡು ಕಲಿಕಾ ಸಂದರ್ಭದಲ್ಲಿ ಸಂದರ್ಭೋಚಿತವಾಗಿ ತಪ್ಪದೇ ಬಳಸುವುದು.