೬,೭೧೯ bytes added
, ೧೧ ವರ್ಷಗಳ ಹಿಂದೆ
=11(ಬಿ). ಪಾಠ ಯೋಜನೆ (ಮಾದರಿ) =
ಘಟಕ:2 ಪಾಠದ ಹೆಸರು : ನಮ್ಮ ರಾಜ್ಯ - ಕರ್ನಾಟಕ (ಭೂಗೋಳ)
ಎ) ಈ ಪಾಠದಿಂದ ನಿರೀಕ್ಷಿಸುವ ಅಂಶಗಳು (ಸಾಮಥ್ರ್ಯಗಳು)
- `ಕರ್ನಾಟಕ' ರಾಜ್ಯದ ಪರಿಕಲ್ಪನೆಯನ್ನು ಮೂಡಿಸಿಕೊಳ್ಳುವುದು.
- ಕನ್ನಡ ನಾಡಿನ ಹಿರಿಮೆ-ಗರಿಮೆ ಹಾಗೂ ಪರಂಪರೆಗಳ ಬಗ್ಗೆ ಅರಿಯುವುದು.
- ಕರ್ನಾಟಕ ರಾಜ್ಯ ರೂಪುಗೊಂಡ ಬಗೆ ತಿಳಿಯುವುದು.
- `ಕರ್ನಾಟಕ' ಎಂಬ ಹೆಸರಿನ ಹಿನ್ನಲೆಯನ್ನು ಅರ್ಥೈಸಿಕೊಳ್ಳುವುದು.
- ಭೌಗೋಳಿಕವಾಗಿ ಕರ್ನಾಟಕದ ಸ್ಥಾನ, ವಿಸ್ತೀರ್ಣ, ಭೂ ಮತ್ತು ಜಲ ಮೇರೆಗಳು, ನೆರೆ ರಾಜ್ಯಗಳನ್ನು ಗುರುತಿಸುವುದು.
- ರಾಜ್ಯದ ಸಂಪನ್ಮೂಲಗಳ ಪರಿಚಯ ಮಾಡಿಕೊಳ್ಳುವುದು.
ಬಿ) ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು
- ಕರ್ನಾಟಕ ರಾಜ್ಯದ ವೈಶಿಷ್ಟ್ಯತೆ
- ಕರ್ನಾಟಕ ಎಂಬ ಹೆಸರಿನ ಹಿನ್ನಲೆ
- ಭಾರತದ ಭೂಗೋಳದಲ್ಲಿ ಕರ್ನಾಟಕ
- ವಿಶಾಲ ಕರ್ನಾಟಕದ ಪರಿಕಲ್ಪನೆ
- ವಿಕೇಂದ್ರೀಕೃತ ಆಡಳಿತವಾಗಿ ಕರ್ನಾಟಕ
ಸಿ) ಉದ್ದೇಶಿತ ಕಲಿಕಾ ಅಂಶಗಳ ಬಗ್ಗೆ ರೂಪಿಸಿಕೊಳ್ಳಬಹುದಾದ / ಪ್ರಶ್ನೆ ಮತ್ತು ಚಟುವಟಿಕೆಗಳು
1. ಮೌಖಿಕ ಪ್ರಶ್ನೆಗಳು ಉದಾ: ಭಾರತ ಭೂಪಟವನ್ನು ತರಗತಿಯಲ್ಲಿ ಪ್ರದರ್ಶಿಸಿರಿ:
1) ಈ ಭೂಪಟದಲ್ಲಿ ಕರ್ನಾಟಕ ರಾಜ್ಯವನ್ನು ಗುರುತಿಸಿರಿ.
2. ಲಿಖಿತ ಪ್ರಶ್ನೆ ಉದಾ: ಅಭ್ಯಾಸ ಪ್ರಶ್ನೆಗಳು
- ರಸಪ್ರಶ್ನೆ
- ನಕ್ಷೆ ರಚಿಸುವುದು.
ಕರ್ನಾಟಕ ಏಕೀಕರಣ ಕುರಿತ ಚರ್ಚಾತ್ಮಕ ಪ್ರಶ್ನೆಗಳು
3. ನಾಡು ನುಡಿ ಕುರಿತ ಕರ್ನಾಟಕ ರಾಜ್ಯದ ಗಡಿ ಭಾಷೆ, ಜನ ಸಂಸ್ಕೃತಿ, ಕವನಗಳ ಸಂಗ್ರಹ ಪರಂಪರೆ, ಕಲೆ, ವಾಸ್ತುಶಿಲ್ಪ, ರಾಜಕೀಯ, ಸಾಂಸ್ಕೃತಿಕ ಹಿರಿಮೆಗಳನ್ನೊಳಗೊಂಡಂತೆ.
4. ನಾಡು ನುಡಿಯ ಸಾಹಿತ್ಯ, ಕಲೆ, ವಿಜ್ಞಾನ, ಕ್ರೀಡೆ, ರಾಜಕೀಯ, ಸಾಧಕರು ತಂತ್ರಜ್ಞಾನ, ಕುರಿತಂತೆ.
5. ಜೀವ ಸೆಲೆಯಾದ ಹುಟ್ಟು, ಪೌರಾಣಿಕ ಹಿನ್ನಲೆ, ಮಹಿಮೆ, ನದಿಗಳ ಪಟ್ಟಿ ಪ್ರಯೋಜನ.
ಡಿ) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
* ಪ್ರಶ್ನೋತ್ತರ ವಿಧಾನ: ಕರ್ನಾಟಕ ರಾಜ್ಯವನ್ನು ಕುರಿತಂತೆ ಪರಿಕಲ್ಪನೆ ಮೂಡಿಸಲು ಮಕ್ಕಳಲ್ಲಿ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ಸಂಕೀರ್ಣ ಮಾದರಿ ಪ್ರಶ್ನೆಗಳನ್ನು ಕೇಳುವುದು.
* ಘಟಕ ಪದ್ಧತಿ : ಕರ್ನಾಟಕ ರಾಜ್ಯದ ಹಿನ್ನಲೆ, ಪರಂಪರೆ, ವಿಸ್ತೀರ್ಣ ಹಾಗೂ ಭೌಗೋಳಿಕ ಸನ್ನಿವೇಶ ಕುರಿತಂತೆ ಟಕಗಳನ್ನಾಗಿ ವಿಭಾಗಿಸಿಕೊಳ್ಳುವುದು.
* ಪ್ರವಾಸ / ಹೊರ ಸಂಚಾರ ವಿಧಾನ: ಕರ್ನಾಟಕ ರಾಜ್ಯದ ಗಡಿ ಪ್ರದೇಶಗಳು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಹಿರಿಮೆಯನ್ನು ಸಾರುವ ಪ್ರದೇಶಗಳಿಗೆ ಭೇಟಿ ನೀಡುವುದು.
* ಪಠ್ಯ ಪುಸ್ತಕ ಪಾಠ ಅವಲೋಕನ ವಿಧಾನ: ವಿದ್ಯಾಗಳ ಪೂರ್ವ ಜ್ಞಾನವನ್ನು ಬಳಸಿಕೊಂಡು ಪಠ್ಯ ಪುಸ್ತಕವನ್ನು ಅವಲೋಕನ ಮಾಡಿ ವಿದ್ಯಾಗಳಲ್ಲೆ ಪರಸ್ಪರ ಚರ್ಚಾಂಶಗಳನ್ನು ನೀಡಿ, ಕಲಿವನ್ನುಂಟುಮಾಡುವುದು.
ಉದಾ: ಕರ್ನಾಟಕ ರಾಜ್ಯದ ವಿಸ್ತೀರ್ಣ ಕರ್ನಾಟಕ ರಾಜ್ಯದ ವೈಶಿಷ್ಟ್ಯ.
* ಕಲಿಕಾ ಸಾಮಗ್ರಿಗಳು (ಟಿ.ಎಲ್.ಎಂ.)
- ಭಾರತದ ಭೂಪಟ (ರಾಜಕೀಯ)
- ಕರ್ನಾಟಕದ ರಾಜಕೀಯ ಭೂಪಟ.
- ಪ್ರಪಂಚದ ಭೂಪಟ.
- ಕರ್ನಾಟಕದ ಪ್ರಾಕೃತಿಕ ಭೂಪಟ.
- ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಪ್ರತಿಬಿಂಬಿಸು ಪಿ.ಪಿ.ಟಿ.
- ಶ್ರೇಷ್ಠ ಕವಿಗಳ ಚಿತ್ರ (ಕುವೆಂಪು, ಪಂಪ ಇತ್ಯಾದಿ)
- ಕರ್ನಾಟಕದ ರೇಖಾನಕ್ಷೆ.
- ಕರ್ನಾಟಕದ ವಿಜ್ಞಾನಿಗಳ ಭಾವಚಿತ್ರ
- ಕರ್ನಾಟಕದ ನದಿಗಳ ಚಿತ್ರ
- ಕರ್ನಾಟಕ ಪ್ರಮುಖ ಐತಿಹಾಸಿಕ ಸ್ಥಳಗಳ ಪಟ್ಟಿ
* ಸಂಪನ್ಮೂಗಳ ಕ್ರೂಢೀಕರಣ
- 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕ
- ಕರ್ನಾಟಕದ ಇತಿಹಾಸ - ಪಾಲಾಕ್ಷ
- ಅಂತರ್ಜಾಲ
- ಕವಿರಾಜ ಮಾರ್ಗ ಕೃತಿ
- ಕುವೆಂಪು ವಿರಚಿತ ನಾಡಗೀತೆ
- ಕನ್ನಡ ಹಿರಿಮೆ ಸಾರುವ ಪದ್ಯಗಳ ಸಂಗ್ರಹ
- ಕರ್ನಾಟಕ ದಾರ್ಶನಿಕರ ಭಾವಚಿತ್ರ ಸಂಗ್ರಹ
- ಕರ್ನಾಟಕ ರಾಜ್ಯವನ್ನಾಳಿದ ಅರಸು ಮನೆತನಗಳ ಇತಿಹಾಸ ಸಂಗ್ರಹ
- ಕರ್ನಾಟಕ ಕುರಿತ ಲಾವಣಿಗಳ ಸಂಗ್ರಹ
- ಕರ್ನಾಟಕ ಕುರಿತು ಜನಪದ ಕತೆಗಳ ಸಂಗ್ರಹ