ಬದಲಾವಣೆಗಳು

Jump to navigation Jump to search
ಹೊಸ ಪುಟ: =12. (ಡಿ) ಸಮಾಜ ಶಾಸ್ತ್ರ ವಿಭಾಗ = # ಪಾಠದ ಹೆಸರು : ಸಾಮಾಜೀಕರಣ ಹಾಗೂ ಕುಟುಂಬದ ಸಂಬ...
=12. (ಡಿ) ಸಮಾಜ ಶಾಸ್ತ್ರ ವಿಭಾಗ =
# ಪಾಠದ ಹೆಸರು : ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು
# ಜ್ಞಾನ ರಚನೆಗೆ ಇರುವ ಅವಕಾಶಗಳು:
* ಸಮಾಜ ಮತ್ತು ಕುಟುಂಬ ಪದಗಳ ಅರ್ಥ ವ್ಯತ್ಯಾಸ
* ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಸಾಮಾಜೀಕರಣ
* ಸಾಮಾಜಿಕರಣದ ಮಹತ್ವ ಕಾರ್ಯಗಳು
* ಸಾಮಾಜಿಕರಣದಲ್ಲಿ ನಿಯೋಗಗಳ ಪಾತ್ರ. (ಕುಟುಂಬ, ಸಮವಯಸ್ಕರು, ಧರ್ಮ, ಶಾಲೆ, ಸಮೂಹ ಮಾಧ್ಯಮ, ನೆರೆಹೊರೆ ಕುರಿತಂತೆ).
* ಕುಟುಂಬದ ವಿವಿಧ ರೂಪಗಳು
* ಸಾಮಾಜೀಕರಣದಲ್ಲಿ ಲಿಂಗತಾರತಮ್ಯ.
* ಆಧುನಿಕ ಸಂಕೀರ್ಣ ಸಮಾಜದಲ್ಲಿನ ಸ್ತ್ರೀಯರು.
# ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು
* ಮಗುವಿನ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ನಿರ್ವಹಣೆಯ ಮಹತ್ವವನ್ನು ಕುರಿತು ಚರ್ಚಿಸುವರು.
* ಮನುಷ್ಯನು ಹೇಗೆ ಪ್ರಾಣಿಗಳಿಗಿಂತ ಭಿನ್ನ ಎಂಬುದನ್ನು ಸಾಮಾಜೀಕರಣದ ಹಿನ್ನಲೆಯೊಂದಿಗೆ ವಿಶ್ಲೇಷಿಸುತ್ತಾ, ಸಾಮಾಜೀಕರಣದ ಪ್ರಾಮುಖ್ಯತೆಯನ್ನು ಅರಿಯುವರು.
* ಮಾನವನಿಗೆ ಹುಟ್ಟಿನಿಂದಲೇ ಬರುವ ಕೆಲವು ಸಹಜ ಪ್ರವೃತ್ತಿಗಳು ಹಾಗೂ ಸಂಸ್ಕೃತಿಗಳ ಮೇಲೆ ಆತನ ಕಲಿಕಾ ಸಾಮಥ್ರ್ಯಗಳು ಹೇಗೆ ಹೊಂದಿಕೊಳ್ಳುತ್ತವೆ. ಇದರಿಂದ ವ್ಯಕ್ತಿಯ ವರ್ತನೆಯಲ್ಲಾಗುವ ಬದಲಾವಣೆಗಳಿಗೆ ಸಾಮಾಜಿಕರಣದ ಪಾತ್ರವನ್ನು ಅರ್ಥೈಸಿಕೊಳ್ಳುವರು.
* ಮಗು ಬೆಳೆಯುತ್ತಾ, ತನ್ನ ಮನಸ್ಸು, ಚಲನೆ, ಆಸಕ್ತಿ ಹಾಗೂ ಸಂಬಂಧಗಳಲ್ಲಿ ಅಭಿವೃದ್ಧಿಪಡಿಸಿಕೊಳ್ಳಲು ಸಾಮಾಜೀಕರಣ ಯಾವ ರೀತಿಯಲ್ಲಿ ಪ್ರಚೋದನೆಯನ್ನು ನೀಡುತ್ತದೆ ಎಂಬುದನ್ನು ಚರ್ಚಿಸುವರು.
* ಸುಭದ್ರ ಸಮಾಜದ ರಚನೆಯಲ್ಲಿ, ಸಾಮಾಜೀಕರಣವು ಮಗುವಿನ ಮೇಲೆ ಬೀರುವ ಪ್ರಭಾವದ ಹಿನ್ನಲೆಯಲ್ಲಿ ಮಗು ಪಡೆದುಕೊಳ್ಳುವ ಶಿಸ್ತು, ಕೌಶಲ್ಯ, ಕಲಿಕೆ, ಆಸೆ ಆಕಾಂಕ್ಷೆಗಳು, ತನ್ನ ಗುರಿ ಹಾಗೂ ಸಾಂಸ್ಕೃತಿಕ ಮುಂದುವರಿಕೆಯು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುವ ಸಂದರ್ಭವನ್ನು ಅವಲೋಕಿಸುವರು.
* ಮಗುವಿನ ವಯಸ್ಸು, ಅನುಭವ ಹಾಗೂ ಸಮಾಜದ ಹಿರಿಯರ ಪ್ರಭಾವ ಅದರ ಸಾಮಾಜೀಕರಣದ ಮೇಲೆ ಬೀರುವ ಅಂಶಗಳು ಹಾಗೂ ತಂದೆ, ತಾಯಿ, ಅಧಿಕಾರಿಗಳು, ತನ್ನ ಸಹಪಾಟಿಗಳು ಬೀರುವ ಪ್ರಭಾವವನ್ನು ತುಲನಾತ್ಮಕವಾಗಿ ವಿಮರ್ಶಿಸುವುದು.
* ಮಗುವು ಸಮಾಜದಲ್ಲಿ ಮಲ್ಲಿಗೆ ಮೊಗ್ಗಿನಂತೆ ಅರಳಲು ಕುಟುಂಬ ಅಲ್ಲಿನ ರಕ್ತ ಸಂಬಂಧಗಳು ಬೀರುವ ಪ್ರಭಾವವನ್ನು ಆಧರಿಸಿ ಸಾಮಾಜೀಕರಣದಲ್ಲಿ ಕುಟುಂಬದ ಪಾತ್ರವೇನು? ಇದರಿಂದ ಮಗುವಿನ ವ್ಯಕ್ತಿತ್ವದಲ್ಲಾಗುವ ಬದಲಾವಣೆಗಳು ಏನು ಎಂಬುದನ್ನು ಗ್ರಹಿಸಿಕೊಳ್ಳುವರು.
* ಮಗು ತನ್ನ ಸಾಮಾಜೀಕರಣದಲ್ಲಿ ಸಹಕಾರ, ಹೊಂದಾಣಿಕೆ ಹಾಗೂ ನಾಯಕತ್ವದ ಗುಣಗಳನ್ನು ತನ್ನ ಸಹಪಾಟಿಗಳಿಂದ ಹೇಗೆ ತಿಳಿಯುತ್ತದೆ. ಅಂತಹ ಸಂದರ್ಭಗಳು ಕೂಡ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬುದರ ಹೋಲಿಕೆಯನ್ನು ತಿಳಿಯುವರು.
* ಮಗುವಿನ ಸಾಮಾಜಿಕ ಜೀವನಕ್ಕೆ ಧರ್ಮ ಹೇಗೆ ಆದರ್ಶದ ತಳಹದಿಯಾಗುತ್ತದೆ ಎಂಬುದನ್ನು ವಿಮರ್ಶಿಸಿ ತೀರ್ಮಾನ ಕೈಗೊಳ್ಳುವರು.
* ಮಗುವಿನ ವರ್ತನೆ, ಜ್ಞಾನ, ಶೀಲ ಗುಣಗಳು ವೃದ್ಧಿಯಾಗುವಲ್ಲಿ ಶಾಲೆ ಹಾಗೂ ಇಲ್ಲಿನ ಗುರುವೃಂದದ ಪಾತ್ರ ಮತ್ತು ವಿವಿಧ ವಿಷಯಗಳ ಶಿಕ್ಷಣ ಮತ್ತು ಗ್ರಹಿಕೆಯಿಂದ ಮಗು ಕಲಿತಿರುವುದೇನೆಂಬುದನ್ನು ಶಾಲೆ ಎಂಬ ಸಾಮಾಜೀಕರಣದ ನಿಯೋಗದ ಮೂಲಕ ಪರಾಮರ್ಶಿಸುವರು.
* ಮಗು ತನ್ನ ಸಾಂಸ್ಕೃತಿಕ ಮೌಲ್ಯ ಹಾಗೂ ಸಂಸ್ಕಾರಯುಕ್ತ ಸ್ವಭಾವವನ್ನು ಸಮೂಹ ಮಾಧ್ಯಮಗಳಿಂದ ಗ್ರಹಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳುತ್ತದೆ ಎಂಬುದನ್ನು ವಿವೇಚಿಸುವರು.
* ಮಗುವಿನ ಸಾಮಾಜೀಕರಣದಲ್ಲಿ ನೆರೆಹೊರೆಯವರು ಬೀರುವ ಪ್ರಭಾವವನ್ನು ಗ್ರಾಮೀಣ ಭಾಗದ ಮತ್ತು ನಗದೀಕರಣಗಳ ಸಂದರ್ಭದಲ್ಲಿ ಹೋಲಿಸಿ ಅರ್ಥೈಸಿಕೊಳ್ಳುವರು.
* ಲಿಂಗ ತಾರತಮ್ಯದ ವಿಚಾರವಾಗಿ (ಹೆಣ್ಣು-ಗಂಡು) ಸಮಾಜ, ಕುಟುಂಬಗಳು, ಬೀರುವ ಪ್ರಭಾವ, ಪರಿಣಾಮವನ್ನು ಸಾಮಾಜೀಕರಣ ಹಿನ್ನಲೆಯಲ್ಲಿ ಚರ್ಚಿಸುವರು.
* ಇತ್ತೀಚೆಗೆ ಮಹಿಳೆಯರು ಪುರಷರಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಇನ್ನಿಲ್ಲದಂತೆ ತೊಡಗಿಸಿಕೊಂಡಿರುವುದಕ್ಕೆ ಇಂದಿನ ಸಾಮಾಜೀಕರಣದ ವ್ಯವಸ್ಥೆಯನ್ನು ಕುರಿತು, ಶ್ಲಾಿಸುವರು.
# ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು
* ಮಗು ಸಾಮಾಜೀಕರಣದಿಂದಾಗಿ ತಾನು ಪ್ರಾಣಿಗಳಿಗಿಂತ ಭಿನ್ನ ಎಂಬ ಜ್ಞಾನವನ್ನು ತಿಳಿದುಕೊಳ್ಳುವುದು.

ಉದಾ: ಮಾತನಾಡುವುದು, ಪ್ರಶ್ನಿಸುವುದು, ನಗು, ಅಳು ಇತ್ಯಾದಿ.
* ಸಾಮಾಜೀಕರಣದಿಂದ ಮನುಷ್ಯನು ಹೊಂದಿಕೊಳ್ಳುವ ಸಂಸ್ಕೃತಿ ಆಚರಣೆಗಳನ್ನು ಅನುಸರಿಸುವ, ನೈತಿಕ ನಿಯಮಗಳನ್ನು ಅಳವಡಿಸಿಕೊಳ್ಳುವ ವಿಶಿಷ್ಟವಾದ ಮನಸ್ಥಿತಿಯನ್ನು ಪಡೆಯುತ್ತಾನೆ.
ಉದಾ : - ಕುಟುಂಬದಲ್ಲಿ ಒಟ್ಟಿಗೆ ವಾಸಿಸುವುದು.
* ಹಬ್ಬ ಹರಿದಿನಗಳನ್ನು ಆಚರಿಸುವುದು.
* ಸುಳ್ಳು ಹೇಳದಿರುವುದು
* ಕಾನೂನನ್ನು ಪಾಲಿಸುವುದು
* ಹಿರಿಯರನ್ನು, ಗುರುಗಳನ್ನು, ತಂದೆ ತಾಯಿಗಳನ್ನು ಗೌರವಿಸುವುದು.
* ಮಗು ಸಾಮಾಜೀಕರಣದಿಂದ ಶಿಸ್ತು, ಸಮೂಹ ಜೀವನ ಕೌಶಲ್ಯಗಳ ವೃದ್ಧಿ, ಬಯಕೆ ಮತ್ತು ತನ್ನ ಜೀವನದ ಗುರಿಗಳನ್ನು ರೂಪಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತವೆ.
ಉದಾ : - ಗುಂಪುಗಳಲ್ಲಿ ಆಟವಾಡುವುದು
* ಮಾತಗಾರಿಕೆ, ವಿನಯ, ಸ್ವಚ್ಛತೆ
* ಹೆಸರು ಗಳಿಸುವುದು, ಬಹುಮಾನ, ಹೊಗಳಿಕೆ
* ಅಧಿಕಾರಿ, ಸುಧಾರಕ, ತಾಯ್ತನ
* ಸಮಯಪಾಲನೆ, ಸರಳತೆ, ಮಿತವ್ಯಯ

* ರಕ್ತ ಸಂಬಂಧಗಳ ಬಗ್ಗೆ ಒಲವು, ವ್ಯವಹಾರಜ್ಞಾನ, ನೈತಿಕತೆ ಮತ್ತು ಭಾವನಾತ್ಮಕ ಬೆಳವಣಿಗೆ, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಸಹನೆ, ಸಹೃದಯತೆ, ಸಹಕಾರ ಮತ್ತು ಜೀವನ ಮೌಲ್ಯಗಳ ಜ್ಞಾನವನ್ನು ಸಾಮಾಜೀಕರಣದ ಕುಟುಂಬ ನಿಯೋಗದಿಂದ ಹಿನ್ನಲೆಯಿಂದ ತಿಳಿಯುವರು.

ಉದಾ : - ತಂದೆ, ತಾಯಿ, ಮಗುವಿನ ಸಂಬಂಧ
* ಹಣ ನೀಡಿ ಅಗತ್ಯ ವಸ್ತುಗಳನ್ನು ತರುವುದು
* ಕುಟುಂಬದ, ಸಮಾಜದ ಹಿರಿಯರಿಗೆ ಗೌರವ
* ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಇತ್ಯಾದಿ
* ತಪ್ಪಿಗೆ ಶಿಕ್ಷೆ ನಿಡುವುದು/ಪಡೆಯುವುದು.

* ಆದರ್ಶ ವ್ಯಕ್ತಿತ್ವ, ಧಾರ್ಮಿಕ ಸ್ಥಳಗಳ ಬಗ್ಗೆ ಭಕ್ತಿ, ಸಮಾಜಸೇವೆ ಆಸಕ್ತಿ, ದಾನ, ಧರ್ಮ, ಮುಂತಾದ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವರು.

ಉದಾ : - ತಾಯಿಯೇ ದೇವರು
* ದೇವಾಲಯಗಳಿಗೆ ಭೇಟಿ
* ದಾನ ಗುಣ, ಸರ್ವಧರ್ಮ ಸಮನ್ವಯತೆ
* ದಾನ, ದತ್ತಿ ನೀಡುವುದು.

* ಶಾಲೆ ಎಂಬ ಸಾಮಾಜೀಕರಣದ ನಿಯೋಗವು ಮಗುವಿನಲ್ಲಿ ಸನ್ನಡತೆ, ಸದ್ಭಾವನೆ, ಸಮಾನತೆ, ಪ್ರೀತಿ ವಿಶ್ವಾಸ, ಸಹೃದಯತೆಯ ಜೊತೆಗೆ ಲೈಂಗಿಕತೆ, ಹಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣಗಳ ಅರಿವಿನ ಜ್ಞಾನದಿಂದಾಗಿ ಜೀವನ ಕೌಶಲ್ಯಗಳನ್ನು ತಮ್ಮದಾಗಿಸಿ ಕೊಳ್ಳುವರು.

ಉದಾ : - ಗುರು ಹಿರಿಯರನ್ನು ಗೌರವಿಸುವುದು
* ಶಾಲಾ ನಿಯಮಗಳನ್ನು ಪಾಲಿಸುವುದು
* ಸಹಪಾಟಿರೊಂದಿಗೆ ಸ್ನೇಹಭಾವ
* ಹೆಣ್ಣು ಗಂಡು ಒಂದೇ ಎಂದು ಭಾವಿಸುವುದು
* ಪರಸ್ಪರ ಅಭಿಪ್ರಾಯ ಗೌರವಿಸುವುದು
* ತೀರ್ಮಾನ, ಒಪ್ಪಿತ ಮಾತುಗಳನ್ನು ಆಡುವುದು

* ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ಮಗುವಿನಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಹೆಮ್ಮೆ ಅನ್ವೇಷಣಾ ಭಾವನೆ, ಮನಸ್ಸಿನಲ್ಲಿ ಉಲ್ಲಾಸ ಹಾಗೂ ಕ್ರಿಯಾಶೀಲತೆಯನ್ನು ಬೆಳಸಿಕೊಳ್ಳುವರು.
* ನೆರೆಹೊರೆಯ ಮೂಲದಿಂದ ಮಗುವಿನ ಮೇಲಾಗುವ ಸಾಮಾಜೀಕರಣದಿಂದಾಗಿ, ಮಗುವಿನಲ್ಲಿ ಹಂಚಿಕೊಂಡು ಬಾಳುವುದು ಒಳ್ಳೆಯ ಅಭಿರುಚಿ, ಹಬ್ಬ ಹರಿದಿನಗಳು, ವಿವಾಹ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಪರಸ್ಪರ ಸ್ಪಂದಿಸುವುದು ಮುಂತಾದ ಸಮಾಜಮುಖಿ ಸದ್ಭಾವನೆಗಳು ರೂಪಗೊಳ್ಳುವುದು.

ಉದಾ : - ಪೂಜಾ ವಿಧಾನಗಳಲ್ಲಿ ಭಾಗಿಯಾಗುವುದು
* ನೀರಿನ ಸಮಸ್ಯೆಗೆ ಸಹಾಯಹಸ್ತ ನೀಡುವುದು
* ಒಟ್ಟಿಗೆ ಪ್ರವಾಸ ಕೈಗೊಳ್ಳುವುದು
* ತಾವು ಬೆಳೆದ ಹಣ್ಣು ಹಂಪಲುಗಳನ್ನು ಹಂಚುವುದು.

* ಲಿಂಗ ತಾರತಮ್ಯವನ್ನು ತಿರಸ್ಕರಿಸುವ ಗುಣವನ್ನು ಕಲಿತು ಹಾಗೆ ನಡೆದುಕೊಳ್ಳುವರು.
* ಶ್ರಮ ವಿಭಜನೆಯ ಮಹತ್ವವನ್ನು ಅರಿತು ಮಹಿಳೆಯರ ಇಂದಿನ ಕಾರ್ಯ ಕ್ಷಮತೆಯನ್ನು ಧೈರ್ಯವನ್ನು ಮೆಚ್ಚಿಕೊಳ್ಳುವರು.

ಉದಾ : - ಸ್ತ್ರೀಯರು ವಕೀಲಿ ವೃತ್ತಿ, ವೈದ್ಯಕೀಯ, ಬಾಹ್ಯಾಕಾಶ, ಸಾಗರದಾಳಗಳಲ್ಲಿ ಕೆಲಸ ನಿರ್ವಹಿಸುವುದು.
# ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಕೆಗೆ ಇರುವ ಅವಕಾಶಗಳು
* ಸಾಮಾಜೀಕರಣ ಸಮಾಜಮುಖಿಯಾಗಿ ಬೆಳೆಯಲಿ

ಉದಾ : - ಪ್ರಚಲಿತ ಸಂಪ್ರದಾಯಗಳ ಆಚರಣೆ ಕುರಿತ ಗುಂಪು ಚರ್ಚೆ
* ಆಚಾರ ವಿಚಾರಗಳ ವ್ಯತ್ಯಾಸ
* ಮಗುವಿನ ವರ್ತನೆಗಳ ಪಟ್ಟಿ
* ಸಾಂಸ್ಕೃತಿಕ ಹಿರಿಮೆಗಳ ಸಂಗ್ರಹ
* ಉತ್ತಮ ಸಂಬಂಧಗಳನ್ನು ಪೋಷಿಸುವುದರ ಬಗ್ಗೆ ಅಭಿಪ್ರಾಯ ಸಂಗ್ರಹ
* ಸ್ವತಂತ್ರ ವಿಚಾರಶಕ್ತಿ ಬೆಳವಣಿಗೆಗೆ ಒತ್ತು ಈ ಕುರಿತು ಪ್ರಬಂಧ ರಚನೆ.
* ಮಾನವ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸ ಗುರುತಿಸುವುದು.
* ಮಗು ತನ್ನ ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು.
* ಶಾಲೆಯ ಕಲಿಕಾ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸುವುದು. (ಆಸಕ್ತಿ, ಮೆಚ್ಚುಗೆ, ಪ್ರೇರಣೆ, ಪ್ರೋತ್ಸಾಹಗಳ ಮೂಲಕ)
* ರಾಷ್ಟ್ರ ನಾಯಕನ ಜೀವನ ಚರಿತ್ರೆ ಓದಿಸುವುದು.
* ಶಿಕ್ಷಕರ ಆದರ್ಶ ವ್ಯಕ್ತಿತ್ವವನ್ನು ಅನುಕರಿಸುವಂತೆ ತಿಳಿಸುವುದು.
* ಕಲ್ಪನಾ ಚಾವ್ಲಾ, ವಿವೇಕಾನಂದ, ಶಿವಾಜಿ, ಇವರ ವಿದ್ಯಾಜೀವನವನ್ನು ಗ್ರಹಿಸುವುದು.
* ತಂದೆ ತಾಯಿಗಳನ್ನು ಹಿರಿಯರನ್ನು ಅನುಕರಿಸುವುದು.
* ಎನ್.ಸಿ.ಸಿ. ಎನ್.ಎಸ್.ಎಸ್. ಸ್ಕೌಟ್ಸ್ ಗೈಡ್ಸ್ಗಳಲ್ಲಿ ಭಾಗವಹಿಸುವುದು
* ತಮ್ಮ ಸುತ್ತಲಿನಲ್ಲಿ ಕಷ್ಟಪಟ್ಟು ಗುರಿಸಾಧಿಸಿದ ವ್ಯಕ್ತಿಯ ಸಂದರ್ಶನ

* ಕೌಶಲ್ಯಗಳ ಬೆಳಣಿಗೆ
* ಗ್ರಾಮೀಣ ಕಸುಬುಗಳ ಅವಲೋಕನ
* ಉತ್ತಮಗೃಹ ಕಸುಬು ಹೊಂದಿರುವವರ ಸಂದರ್ಶನ
* ಗಾಂಧೀಜಿಯವರ `ಚರಕತತ್ವದ ವಿಶ್ಲೇಷಣೆ'
* ರೈತ ಕಸಬುಗಳ ಪರಿಚಯ
* ಹೊಲಿಗೆ, ಚಿತ್ರಕಲೆ, ತೋಟಗಾರಿಕೆ, ಮುಂತಾದ ಕಸುಬುಗಳನ್ನು ಶಾಲಾ ಅವಧಿಯಲ್ಲಿ ಕಲಿಸುವುದು.
* ಸಮಾಜದೊಂದಿಗೆ ಹೊಂದಿಕೆ, ಸಹಕಾರ, ಕೊಡುಕೊಳ್ಳುವಿಕೆಗಳ ಕುರಿತು ಚರ್ಚೆ
* ಕೂಡಿ ಬಾಳುವುದು ಹೇಗೆ ಎಂದು ವಿಶ್ಲೇಷಣೆ
* ಬದುಕಿ, ಬದುಕಲು ಬಿಡುವುದು ಯಾವ ರೀತಿ ಎಂಬುದಾಗಿ ಪರಾಮರ್ಶೆ.

* ಕುಟುಂಬ ಜೀವನ

* `ಮನೆಯೇ ಮೊದಲ ಪಾಠಶಾಲೆ' - ಚರ್ಚೆ
* ತಾಯಿಯೇ ಮೊದಲ ಗುರು, ನಾಣ್ಣುಡಿ ಅರ್ಥೈಸುವುದು.
* ಪ್ರೀತಿ, ವಾತ್ಸಲ್ಯ, ವಿಶ್ವಾಸ, ಸಹನೆ, ಸಹೃದಯತೆ ಸಹಕಾರ ಮುಂತಾದ ಜೀವನ ಮೌಲ್ಯಗಳ ಕಥೆ ಹೇಳುವುದು.
* ಬದುಕಿನ ತಪ್ಪು ಮತ್ತು ಸರಿಗಳ ಪರಾಮರ್ಶೆ-ಉದಾಹರಣೆಗಳೊಂದಿಗೆ
* ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳನ್ನು ಕುರಿತು ಅಭಿಪ್ರಾಯ ಸಂಗ್ರಹ.
* ಅಂಬೇಡ್ಕರ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರ ಕುಟುಂಬದ ಜೀವನ ಕುರಿತ ಪಿ.ಪಿ.ಟಿ. ತಯಾರಿಕೆ

* ಸ್ನೇಹ ಸಂಬಂಧ ವೃದ್ಧಿಸುವುದು
* ಉತ್ತಮ ಸಹಪಾಟಗಳ ವ್ಯಕ್ತಿತ್ವ ಕುರಿತು ಚರ್ಚೆ
* ಆಟ ಕೂಟಗಳನ್ನು ಏರ್ಪಡಿಸುವುದು.
* ಗ್ರಾಮ ಪಂಚಾಯಿತಿ ಸಭೆಗಳಿಗೆ ಭೇಟಿ
* ವೈವಿಧ್ಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು
* ಹಬ್ಬ ಹರಿದಿನಗಳ ಆಚರಣೆ
* ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದು
* ಸಾಮೂಹಿಕ ಕೃಷಿ ಚಟುವಟಿಕೆಗಳ ವೀಕ್ಷಣೆ
* ಭೋಜನ ಕೂಟಗಳಲ್ಲಿ ಭಾಗಿಯಾಗುವುದು
* ಪ್ರವಾಸಗಳನ್ನು ಏರ್ಪಡಿಸುವುದು.

* ಸರ್ವಧರ್ಮ ಸಮನ್ವಯತೆ
* ಧಾರ್ಮಿಕ ಸ್ಥಳಗಳಿಗೆ ಭೇಟಿ - ಉದಾ: ಧರ್ಮಸ್ಥಳ
* ಪೂಜೆ, ಜಾತ್ರೆ, ಉತ್ಸವ, ಹಬ್ಬಗಳ ಸಾಮ್ಯತೆ ಕುರಿತು ಪ್ರಬಂಧ ರಚನೆ.
* ಧಾರ್ಮಿಕ ಆಚರಣೆಗಳಿಗೆ ಪರಸ್ಪರ ಭೇಟಿ.
* ಧಾರ್ಮಿಕ ಗುರುಗಳ ಸಂದರ್ಶನ.
* ವಿವಿಧ ಧಾರ್ಮಿಕ ತತ್ವಗಳ ಪಟ್ಟಿ.
* ಅಂತರ್ಜಾತಿ ವಿವಾಹಗಳನ್ನು ಕುರಿತು ಚರ್ಚೆ.
* ಧಾರ್ಮಿಕ ಗೋಷ್ಠಿಗಳಲ್ಲಿ ಭಾವಹಿಸುವುದು.
* ಸರ್ವಧರ್ಮ ಸಮನ್ವಯತೆ ಮತ್ತು ಸಂವಿಧಾನ ಕುರಿತು ಗುಂಪು ಚರ್ಚೆ.
* ಸಮಾಜಕ್ಕೆ ವಿವಿಧ ಧರ್ಮ ಸುಧಾರಕರು ನೀಡಿರುವ ಕೊಡುಗೆಗಳ ವಿಚಾರವಾಗಿ ಮಾಹಿತಿ ಸಂಗ್ರಹ.

* ಸಾಮಾಜೀಕರಣದ ನಿಯೋಗವಾಗಿ ಶಾಲೆ
* ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ವಿಶ್ಲೇಷಣೆ.
* ಶಾಲೆಯ ಶೈಕ್ಷಣಿಕ ಚಟುವಟಿಕೆ ಕುರಿತು ಚರ್ಚೆ.
* ಆದರ್ಶ ಶಿಕ್ಷಕರಾಗಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ ಅವಲೋಕನ.
* ಆದರ್ಶ ವಿದ್ಯಾಯಾಗಿ ಶಿವಾಜಿ ಜೀವನ ಚರಿತ್ರೆ ಓದುವುದು.
* `ಶಾಂತಿನಿಕೇತನ' ಕುರಿತು ವಿಷಯ ಸಂಗ್ರಹ.
* ನೀನು ಮೆಚ್ಚೊ ಸಹಪಾಠಿ ಯಾರು? ಏಕೆ? ಹೇಗೆ?

* ಸಾಮಾಜೀಕರಣದಲ್ಲಿ ಪರಿಣಾಮಕಾರಿ ಸಮೂಹ ಮಾಧ್ಯಮಗಳು
* ಸಮೂಹ ಮಾಧ್ಯಮಗಳ ಪಟ್ಟಿ
* ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ದೂರದರ್ಶನದ ಪಾತ್ರ ವಿಶ್ಲೇಷಣೆ.
* ಕಲಿಕೆಯಲ್ಲಿ ರೇಡಿಯೋ ಮಹತ್ವ ಕುರಿತ ಚರ್ಚೆ.
* ಗಾಂಧೀಜಿಯವರ ಮೇಲೆ ಬೀರಿದ ಎರಡು ನಾಟಗಳ ಪರಿಚಯ.
* ನನ್ನ ಮೇಲೆ ಪ್ರಭಾವ ಬೀರಿದ ಒಂದು ಪುಸ್ತಕ (ಪ್ರಬಂಧ ರಚನೆ).
* ಸಮಾಜದ ಇಂದಿನ ಸ್ಥಿತಿಗೆ ಸಮೂಹ ಮಾಧ್ಯಮಗಳೇ ಕಾರಣ ಪರ, ವಿರೋಧದ ಚರ್ಚೆ.
* ಜಾಹಿರಾತುಗಳು ಕುರಿತ ನಿಮ್ಮ ಅಭಿಪ್ರಾಯ.
* ದಿನಪತ್ರಿಕೆ, ನಿಯತಕಾಲಿಕೆಗಳಿಂದ ಪ್ರಭಾವಿತರಾದ ಸಂದರ್ಭ, ಪರಿಣಾಮ.
* ವಿವಿಧ ಸಂಸ್ಕೃತಿಗಳನ್ನು ಸುದ್ಧಿ ಮಾಧ್ಯಮಗಳಿಂದ ಸಂಗ್ರಹಿಸಿ ಪಟ್ಟಿ ಮಾಡುವುದು.

* ನೆರೆಹೊರೆಯ ಮಹತ್ವ
* `ಅರಮನೆಗಿಂತ ನೆರಮನೆಯೇ ಲೇಸು' ಹೇಗೆ?
* `ಆಪತ್ತಿಗಾದವನೇ ನೆಂಟ'. ಸಮರ್ಥನೆ
* `ಹಣದ ಗಂಟಿದ್ದರೆ ಊರೆಲ್ಲ ನೆಂಟರು'. ಅರ್ಥೈಸಿ.
* ನಗರ ಮತ್ತು ಗ್ರಾಮೀಣ ನೆರೆಹೊರೆಗಳಿರುವ ವ್ಯತ್ಯಾಸ.
* ಸುಖ ದುಃಖ, ಹಬ್ಬ ಹರಿದಿನ, ಜಾತ್ರೆಯ ಉತ್ಸವಗಳಲ್ಲಿ ನೆರೆ ಹೊರೆಯವರ ಪಾತ್ರ.

* ಲಿಂಗ ತಾರತಮ್ಮ
* ಹೆಣ್ಣು ಹುಟ್ಟುವುದಿಲ್ಲ. ರೂಪುಗೊಳ್ಳುತ್ತದೆ ಹೇಗೆ ವಿಶ್ಲೇಷಣೆ
* ಆಧುನಿಕ ಸಮಾಜದಲ್ಲಿ ಹೆಣ್ಣಿಗಿರುವ ಸಮಾನತೆ ಕುರಿತು ಚರ್ಚೆ, ತೀರ್ಮಾನ.
* ಹೆಣ್ಣು ಇಂದು ಅನುಭವಿಸುತ್ತಿರುವ ಎಲ್ಲಾ ಅವಗಡಗಳಿಗೂ ಸಮಾಜ ನೀಡಿರುವ ಸ್ವಾತಂತ್ರ್ಯವೇ ಕಾರಣ, ಒಪ್ಪಿಕೊಳ್ಳುವಿರಾ? ಚರ್ಚಿಸಿ ತೀರ್ಮಾನಕ್ಕೆ ಬನ್ನಿರಿ.
* ಹೆಣ್ಣು ಭ್ರೂಣಹತ್ಯೆಯ ಬಗ್ಗೆ ನಿಮ್ಮ ತೀರ್ಮಾನ
* ಹೆಣ್ಣು, ಗಂಡಿನ ನಡುವಿನ ಅನುಪಾತ, ಅಂತರದಲ್ಲಿನ ವ್ಯತ್ಯಾಸ. ಕಾರಣ, ಪರಿಣಾಮ.
* ಮಹಿಳಾ ಮೀಸಲಾತಿ ಕುರಿತು ಅಭಿಪ್ರಾಯ.
* ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಏಕೆ?
* ತಾಯಿಯಾಗಿ ಹೆಣ್ಣು-ವಿವರಿಸಿ.
# ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
* ಸಮಾಜದ ಉತ್ತಮ ವ್ಯಕ್ತಿಗಳ ಸಂದರ್ಶನ

ಉದಾ : - ಊರಿನ ಸಮಾಜ ಸೇವಕನೊಬ್ಬನ ಸಂದರ್ಶನ.
*- ಅವಿಭಕ್ತ ಕುಟುಂಬ ವ್ಯವಸ್ಥೆಯಿರುವ ಕುಟುಂಬಕ್ಕೆ ಭೇಟಿ.
*- ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಹೋಲಿಕೆ ಮತ್ತು ವ್ಯತ್ಯಾಸ ಸಂಗ್ರಹ ಗುಂಪು ಚರ್ಚೆ.
*- ಮಗುವಿನ ಬೆಳವಣಿಗೆ ಕುರಿತ ಸಾಕ್ಷ್ಯ ಚಿತ್ರ.
*- ಸಮಾಜದ ವಿವಿಧ ವರ್ಗದ ಜನರ ಜೀವನ ಕ್ರಮ ಕುರಿತು ವಿಷಯ ಸಂಗ್ರಹ (ಉದಾ: ನಗರ ಜೀವನ, ಗ್ರಾಮೀಣ ಜೀವನ, ಗುಡ್ಡಗಾಡು ಜನರ ಜೀವನ).
*- ತಮ್ಮ ಕುಟುಂಬ ಜೀವನವನ್ನು ಕುರಿತು ಪ್ರಬಂಧ ರಚನೆ.
*- ಸಮವಯಸ್ಕರಲ್ಲಾಗುವ ಮಾನಸಿಕ ಮತ್ತು ಹಿಕ ಬೆಳವಣಿಗೆ ಕುರಿತ ಟಪ್ಪಣಿ.
*- ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಧರ್ಮದ ಪಾತ್ರ, ಚರ್ಚೆ.
*- ಸಾಮಾಜೀಕರಣದಲ್ಲಿ ಶಾಲೆಯ ಮಹತ್ವ ಈ ವಿಷಯ ಕುರಿತಂತೆ ಅನುಭವದ ಹಂಚಿಕೆ.
*- ಗಾಂಧೀ, ಅಂಬೇಡ್ಕರ್, ಅಬ್ದುಲ್ಕಲಾಂ, ನೇತಾಜಿ ಇಂತಹ ವ್ಯಕ್ತಿಗಳ ಶಾಲಾ ಜೀವನ ಕುರಿತು ಮಾಹಿತಿ ಸಂಗ್ರಹ.
*- ರೇಡಿಯೋ ಮಕ್ಕಳ ನಾಟಕಗಳನ್ನು ಆಲಿಸುವುದು.
*- ಮಕ್ಕಳ ಸಾಹಸಮಯ ಚಿತ್ರಗಳ ವೀಕ್ಷಣೆ.
*- ಸಾಮಾಜೀಕರಣ ಕುರಿತು ಸಂವಾದ.
*- ಇತ್ತೀಚಿನ ದಿನಗಳಲ್ಲಿ ನೆರೆ ಹೊರೆ ಸಂಬಂಧ ಉತ್ತಮಗೊಳ್ಳುತ್ತಿಲ್ಲ. ಈ ವಿಷಯ ಕುರಿತು ಚರ್ಚಾ ಸ್ಪರ್ಧೆ.
*- ನಿಮ್ಮ ಸುತ್ತ ಮುತ್ತಲಿನ ಸ್ತ್ರೀ ಪುರುಷರ ಸಂಖ್ಯೆ ಪಟ್ಟಿಮಾಡಿ
*- ನಿಮ್ಮ ಸುತ್ತ ಮುತ್ತಲಿನವರಲ್ಲಿ ಹೆಚ್ಚು ಉದ್ಯೋಗ (ಹೊರಗೆಹೋಗಿ) ಹೊಂದಿರುವ ಸ್ತ್ರೀ, ಪುರುಷರ ಪ್ರಮಾಣವನ್ನು ಹುಡುಕಿ ಸಂಗ್ರಹಿಸುವುದು.
# ಸಂಪನ್ಮೂಲಗಳ ಕ್ರೂಢೀಕರಣ
*- 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕ.
*- ಪಿ.ಯು. ಮತ್ತು ಪದವಿ ತರಗತಿಗಳ ಸಮಾಜ ಶಾಸ್ತ್ರ ಪಠ್ಯಪುಸ್ತಕ.
*- ಗುಡ್ಡಗಾಡು ಜನರ ಜೀವನ ಶೈಲಿ ಕುರಿತು ಸಾಕ್ಷ್ಯಚಿತ್ರ.
*- ದೂರದರ್ಶನದಲ್ಲಿ ಪ್ರಸಾರವಾಗುವ ಜನಜೀವನದ ಕುರಿತು ಕಾರ್ಯಕ್ರಮ ವೀಕ್ಷಣೆ.
*- ಮಹಾತ್ಮರ ಅಮೃತವಾಣಿಗಳ ಸಂಗ್ರಹ.
*- ಸತ್ಯಹರಿಶ್ಚಂದ್ರ, ಶ್ರವಣಕುಮಾರ, ಕುವೆಂಪು ಮಕ್ಕಳ ನಾಟಕಗಳ ಸಂಗ್ರಹ.
*- ಅಂತರ್ಜಾಲದಲ್ಲಿ ವಿವಿಧ ವರ್ಗದ ಕುಟುಂಬ, ಜನಾಂಗಗಳ ಮಾಹಿತಿ ಸಂಗ್ರಹ.
*- ಬೇಂದ್ರೆ, ಕಾರಂತ, ಮಾಸ್ತಿ, ಎ.ಎನ್. ಮೂರ್ತಿರಾವ್ ಇವರು ರಚಿಸಿದ ಮಕ್ಕಳ ನಾಟಕಗಳ ಸಂಗ್ರಹ.
*- ಚಲನಚಿತ್ರಗಳು. ಉದಾ: ಸ್ಲಂಬಾಯ್.....
*- ದೂರದರ್ಶನ ಚಂದನದ ರಸಪ್ರಶ್ನೆ ಕಾರ್ಯಕ್ರಮ.
*- ಯು.ಜಿ.ಸಿ. ಕಾರ್ಯಕ್ರಮ, (ದೂರದರ್ಶನ)
*- ಹಬ್ಬದ ಆಚರಣೆಯ ಬಗೆಗಿನ ಮಾಹಿತಿಗಳು.
*- ಎನ್.ಸಿ.ಸಿ. ಎನ್.ಎಸ್.ಎಸ್. (ಸ್ಕೌಟ್, ಗೈಡ್ಸ್ ಗ್ರಾಮ ಸಭೆಗಳು ಖಆಒಅ ಸಭೆ) ಕುರಿತು ಮಾಹಿತಿ ಅಂಕಿ ಅಂಶಗಳು.
*- ಸಮಾಜದಲ್ಲಿ ಸ್ತ್ರೀ ನಡೆದುಬಂದ ದಾರಿ ಕುರಿತ ಪ್ರಬಂಧಗಳ ಸಂಗ್ರಹ.
*- ಮಹಿಳಾ ಉದ್ಯೋಗ ಕುರಿತ ಸಾಕ್ಷ್ಯ ಚಿತ್ರ ಸಂಗ್ರಹ.
*- ಸಾಧನೆ ಮಾಡಿರುವ ಮಹಿಳೆಯರನ್ನು ಕುರಿತು ಮಾಹಿತ ಸಂಗ್ರಹ.
# ಬೋಧನೋಪಕರಗಳು
*- ಶಾಲೆಯ ಚಿತ್ರಣ
*- ವಿಭಕ್ತ, ಅವಿಭಕ್ತ ಕುಟುಂಬಗಳ ಚಿತ್ರಣ, ಮಕ್ಕಳು ಆಟವಾಡುತ್ತಿರುವ ಚಿತ್ರಗಳು.
*- ಸಾಕ್ಷ್ಯ ಚಿತ್ರಗಳು, (ಹಬ್ಬ, ಜಾತ್ರೆ, ಮಹಿಳಾ ಉದ್ಯೋಗ ಇತ್ಯಾದಿ).
*- ರೇಡಿಯೋ ಕಾರ್ಯಕ್ರಮಗಳ ಬಳಕೆ (ಮಕ್ಕಳ ನಾಟಕ)
*- ಚಲನಚಿತ್ರಗಳು ತೊತ್ತೋಚಾನ್ ತುತ್ತೂರಿ, ಕೇರ್ಆಫ್ ಫುಟ್ಬಾತ್, ಬೂಟ್ ಪಾಲಿಶ್ (ಬೂಕರ್), ಸ್ಲಂಡಾಗ್ ಮಿಲೇಸಾರ್ಖ ಇತ್ಯಾದಿ) ಕೊಡುಗೆಗಳು.
*- ಕುಟುಂಬದಲ್ಲಿ ಹೆಣ್ಣು ಮಗು ಮತ್ತು ಗಂಡು ಮಗುವನ್ನು ನಡೆಸಿಕೊಳ್ಳುವ ರೀತಿ ಕುರಿತ ರೂಪಕ ಪ್ರದರ್ಶನ.
# ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
*- ಮನುಷ್ಯ ಸಂ ಜೀವಿ
*- ಮಾನವ ಪ್ರಾಣಿಗಳಿಗಿಂತ ವಿಭಿನ್ನ
*- ಹೊಂದಿಕೊಂಡು ಬಾಳುವುದು.
*- ಸಾಮಾಜೀಕರಣ ಎಂದರೆ ಒಂದು ಸಂಸ್ಕೃತಿ
*- ಧರ್ಮನಿರಾಪೇಕ್ಷತೆ
*- ಜೀವನದಲ್ಲಿ ಶಿಸ್ತು
*- ಕೌಶಲ್ಯಯುಕ್ತ ಜೀವನ
*- ಮನೆಯೇ ಮೊದಲ ಪಾಠಶಾಲೆ
*- ಪ್ರೀತಿ ಸ್ನೇಹ, ಸಹನೆ, ಸಹೃದಯತೆ
*- ಗೆಳೆತನ
*- ಆದರ್ಶ ಸಮಾಜ ಜೀವನಕ್ಕೆ ಧರ್ಮವೇ ತಳಹದಿ
*- ಜೀವನದ ಗುರಿಗೆ ಗುರು ಅನಿವಾರ್ಯ
*- ಹಣ ಗಂಟಿದ್ದರೆ ಊರೆಲ್ಲಾ ನೆಂಟರು.
*- ಸಾಮಾಜೀಕರಣದಲ್ಲಿ ಪರಿಣಾಮಕಾರಿ ಸಮೂಹ ಮಾಧ್ಯಮಗಳು ಅಗತ್ಯ. (ಮಹಾತ್ಮರ) ಹಿರಿಯರ ದಾರಿ ನಮಗೆ ಹೆದ್ದಾರಿಯಾಗಬೇಕು.
*- ಸರ್ವರಲ್ಲೂ ಸಮಾನತೆ ಕಾಣುವುದು.
*- ಮಹಿಳೆಯರೂ ಪುರುಷರಂತೆ ಬದುಕಬಲ್ಲರು.
*- ಉತ್ತಮ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ.
*- ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
*- ಉತ್ತಮ ಸಾಮಾಜಿಕ ಸಂಬಂಧದಿಂದ ಮಾತ್ರ ಆರೋಗ್ಯವಂತ ಮನಸ್ಸು ಸೃಷ್ಟಿ.
೫೭

edits

ಸಂಚರಣೆ ಪಟ್ಟಿ