ಪ್ರಪಂಚದ ನಾಲ್ಕನೇ ದೊಡ್ಡ ದೇಶ ಅಮೇರಿಕ ಸಂಯುಕ್ತ ಸಂಸ್ಥಾನ (ಅಥವಾ ಸಂಕ್ಷಿಪ್ತವಾಗಿ ಅಮೆರಿಕ).ವಿಸ್ತಾರದಲ್ಲಿ ಭಾರತದ ಐದು ಪಟ್ಟು ದೊಡ್ಡದು.ಅಟ್ಲಾಂಟಿಕ್ ಸಾಗರದಿಂದ ಫೆಸಿಫಿಕ್ ಸಾಗರದವರೆಗೆ ಹರಡಿಕೊಂಡಿರುವ ಈ ನಾಡು ಎಂಟು ವೇಳಾವಲಯಗಳನ್ನು ಹಾಯುತ್ತದೆ.ಇದರ ಪೂರ್ವ &ಪಶ್ಚಿಮ ದಿಕ್ಕುಗಳಲ್ಲಿ ಎರಡು ಪರ್ವತ ಶ್ರೇಣಿಗಳು ಇವೆ.ಎತ್ರವಲ್ಲದ ಅಪಲೇಷಿಯನ್ ಬೆಟ್ಟಸಾಲು ಪೂರ್ವದಲ್ಲಿದ್ದರೆ , ಪಶ್ಚಿಮದಲ್ಲಿ ಎತ್ತರದ ರಾಕಿ ಬೆಟ್ಟಗಳು 4000 ಮೀ ಗೂ ಹೆಚ್ಚು ಎತ್ತರದ ಹಲವು ಶಿಖರಗಳನ್ನು ಹೊಂದಿವೆ.ಅಮೆರಿಕದ ಎತ್ತರದ ಬೆಟ್ಟ ಮ್ಯಾಕ್ ಕಿನ್ಲೆ(6194 ಮೀ.)ಇವುಗಳ ಮದ್ಯೆ ವಿಸ್ತಾರವಾದ ಪ್ರಸ್ಥಭೂಮಿ ಇದ್ದು ಇಲ್ಲಿನ ಬೃಹತ್ ಸರೋವರಗಳು , ಮಿಸಿಸಿಪ್ಪಿ , ಮಿಸ್ಸೋರಿ, ಒಹಾಯೊ ನದಿಗಳು ಈ ದೇಶಕ್ಕೆ ಸಮೃದ್ಧವಾಗಿ ನೀರೊದಗಿಸುತ್ತವೆ.ಉತ್ತರದಲ್ಲಿ ಆರ್ಕಟಿಕ್ ವಲಯವು ಅಲಾಸ್ಕ ರಾಜ್ಯದ ಮೂರನೇ ಒಂದು ಭಾಗ ಅದರಲ್ಲಿ ಚಾಚಿಕೊಂಡಿದೆ.ಇಲ್ಲಿನ ಶೀತ ಪ್ರಮಾಣ -60ಡಿಗ್ರಿ ಸೆ. ವರೆಗೆ ಇರುತ್ತದೆ.
+

( ಕೃಪೆ-ದೇಶ ವಿದೇಶಗಳ ಪರಿಚಯ-ಪಾಂಡುರಂಗ ಶಾಸ್ತ್ರಿ& ಸಿ.ಕೆ. ಎಸ್. ಕೃಷ್ಣರಾವ್- ನವಕರ್ನಾಟಕ ಪುಸ್ತಕ ಪ್ರಕಾಶನ )