ವೃತ್ತದ ಜ್ಯಾಗಳು ಮತ್ತು ವೃತ್ತಖಂಡ
Jump to navigation
Jump to search
ಯಾವುದೇ ಎರಡು ತ್ರಿಜ್ಯಗಳ ನಡುವೆ ಸುತ್ತುವರಿದ ವೃತ್ತದ ಭಾಗವನ್ನು ವೃತ್ತಖಂಡ ಎಂದು ಕರೆಯಲಾಗುತ್ತದೆ. ಅರ್ಧವೃತ್ತ ಮತ್ತು ಚತುರ್ಥವು ವಿಶೇಷ ರೀತಿಯ ಕ್ಷೇತ್ರಗಳಾಗಿವೆ.
ಕಲಿಕೆಯ ಉದ್ದೇಶಗಳು :
ಎರಡು ತ್ರಿಜ್ಯಗಳಿಂದ ಆವೃತವಾದ ಪ್ರದೇಶವನ್ನು ವೃತ್ತಖಂಡ ಎಂದು ಅರ್ಥಮಾಡಿಕೊಳ್ಳುವುದು.
ಅಂದಾಜು ಸಮಯ:
15 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಲ್ಯಾಪ್‌ಟಾಪ್, ಜಿಯೋಜಿಬ್ರಾ ಕಡತ, ಪ್ರೊಜೆಕ್ಟರ್ ಮತ್ತು ಪಾಯಿಂಟರ್.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
- ವಿದ್ಯಾರ್ಥಿಗಳು ವೃತ್ತ, ಕೇಂದ್ರ, ತ್ರಿಜ್ಯ, ಪರಿಧಿ ಮತ್ತು ವೃತ್ತಖಂಡದ ಬಗ್ಗೆ ತಿಳಿದಿರಬೇಕು.
- ವೃತ್ತವು ಒಂದು ಸಮತಲ ಆಕೃತಿ ಎಂದು ಅವರು ತಿಳಿದಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳುತಿ
- ವೃತ್ತಖಂಡದ ಅಂತಿಮ ಬಿಂದುಗಳನ್ನು ಸರಿಸಿ ಮತ್ತು ವೃತ್ತಖಂಡಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿ.
- ಪರಿಧಿಯ ಮೇಲಿನ ಎಲ್ಲಾ ಬಿಂದುಗಳನ್ನು ಹೆಸರಿಸಿ.
- ವೃತ್ತಖಂಡದ ಅಂತಿಮ ಬಿಂದುಗಳನ್ನು ಹೆಸರಿಸಿ.
- ಅಧಿಕ ಮತ್ತು ಲಘು ವೃತ್ತಖಂಡಗಳನ್ನು ಹೆಸರಿಸಿ.
- ವೃತ್ತಖಂಡದ ಎರಡು ನೇರ ರೇಖೆಗಳ ಬಗ್ಗೆ ನೀವು ಏನು ಹೇಳಬಹುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ವಿಶೇಷ ರೀತಿಯ ವೃತ್ತಖಂಡಗಳನ್ನು ಹೆಸರಿಸಿ?
- ವೃತ್ತಖಂಡಗಳಿಗೆ ಕೆಲವು ಉದಾಹರಣೆಗಳನ್ನು ನೀಡಿ.