ಸದಸ್ಯ:Rakesh

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search

ಚಿತ್ರ:Rain and thunder (01).ogg

ಅವಲೋಕನ

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಶಾಲೆಗಳಲ್ಲಿನ ಬೋಧನೆ-ಕಲಿಕೆಯನ್ನು ಮಾರ್ಗದರ್ಶಿಸುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ತಂತ್ರಜ್ಞಾನವನ್ನು ಕೇವಲ ಮಾಹಿತಿ ಹಂಚುವ ಮಾದ್ಯಮವಾಗಿ ಅನ್ಯಮಾರ್ಗದಲ್ಲಿ ಶಿಕ್ಷಕರು ಬಳಸುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ. ಹಾಗು ಶಿಕ್ಷಕರು ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಕೇವಲ ಬಳಕೆದಾರರು ಮಾತ್ರವೇ ಆಗಿರದೇ ಉತ್ಪಾದಕರೂ ಸಹ ಆಗಿರಬೇಕು ಎಂಬ ದೃಡ ಹೇಳಿಕೆಯನ್ನು ನೀಡುತ್ತದೆ. ಏಕಮುಖ ವಾಗಿ ಕೇವಲ ಪಡೆದುಕೊಳ್ಳುವುದಷ್ಟೇ ಅಲ್ಲದೇ ದ್ವಿಮುಖವಾಗಿ ಪರಸ್ಪರ ಭಾಗವಹಿಸುವಿಕೆಯು ತಂತ್ರಜ್ಞಾನವನ್ನು ಶೈಕ್ಷಣಿಕವಾಗಿಸುತ್ತದೆ. ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಯ ಪ್ರಸ್ತುತ ಪಠ್ಯಕ್ರಮವು ರಾಷ್ಟ್ರೀಯ ನೀತಿಗಳು ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳ ಗುರಿಯನ್ನು ಅರ್ಥೈಸಿಕೊಳ್ಳುವ ವಿಧಾನವಾಗಿದೆ. ಇದು ತಂತ್ರಜ್ಞಾನದ ತ್ವರಿತ ಬೆಳವಣಿಗೆಯನ್ನು ಮತ್ತು ಭಾರತೀಯ ಶಾಲಾ ವ್ಯವಸ್ಥೆಯ ತಳಮಟ್ಟದ ವಾಸ್ತವಾಂಶಗಳನ್ನು ಅಳವಡಿಸಿಕೊಂಡಿದೆ. ಶಿಕ್ಷಕರಿಗೆ, ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಸಾದ್ಯತೆಗಳನ್ನು ಕಂಡುಕೊಳ್ಳಲು ಆರಂಭವಾಗಿದೆ. ಯಂತ್ರಾಂಶ, ತಂತ್ರಾಂಶ ಮತ್ತು ಐ.ಸಿ.ಟಿ ಮಧ್ಯವರ್ತನೆಗಳ ಸೂಕ್ತ ಆಯ್ಕೆಯ ಬಗ್ಗೆ ಕಲಿಯಲು ಹಾಗು ತಂತ್ರಜ್ಞಾನದ ಮುಖ್ಯ ಕ್ಲಿಷ್ಟ ಬಳಕೆದಾರರಾಗಿ ಅಭಿವೃದ್ದಿ ಹೊಂದಲು ಸಾದ್ಯವಾಗಿದೆ. ಹಾಗೆಯೇ ಇದು ಮಕ್ಕಳಲ್ಲಿ ಸೃಜನಶೀಲತೆಗೆ, ಸಮಸ್ಯೆ ಬಿಡಿಸುವಿಕೆಗೆ (ಪರಿಹರಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಯುಗಕ್ಕೆ ಪರಿಚಿತವಾಗುವಿಕೆಗೆ ಸಾಧ್ಯವಾಗಿದ್ದು ಈ ಮೂಲಕ ವೃತ್ತಿ ಅನ್ವೇಷಣೆಗೆ ಸಹಾಯಕವಾಗಿದೆ. ಕೆಲವು ಸಮಯದಲ್ಲಿ, ಶಾಲೆಯಲ್ಲಿ ಬೋದಿಸಬಹುದಾದ ಐಸಿಟಿ ಪಠ್ಯಕ್ರಮವನ್ನು ವ್ಯಾಖ್ಯಾನಿಸುವ ಸತತ ಪ್ರಯತ್ನಗಳು ಮತ್ತು ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಮೂಲಕ ಐಸಿಟಿಯು ಶಿಕ್ಷಕರು ಮತ್ತು ಮಕ್ಕಳನ್ನು ಇತರೇ ತಂತ್ರಜ್ಞಾನಗಳಿಂದ ಭಿನ್ನವಾಗಿಸುತ್ತದೆ. ನಿರಂತರ ಆಧುನಿಕರಣ, ಅನಿವಾರ್ಯ ಬದಲಾವಣಗೆಳೊಂದಿಗೆ ಬದಲಾಗುತ್ತಿರಬೇಕು ಎಂಬ ಪ್ರತಿಪಾದನೆಯನ್ನು ನೀಡುತ್ತದೆ. ಪ್ರಸ್ತುತ ಕ್ರಿಯಾತ್ಮಕ ವಲಯಗಳ ಸ್ವರೂಪದಲ್ಲಿ ಪಠ್ಯಕ್ರಮವು ಮೂಲ ಶೈಕ್ಷಣಿಕ ಉದ್ದೇಶಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಹಾಗು ಕಲಿಯುವವರ ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಹಾಗು ಹೆಚ್ಚು ಅವಕಾಶಳನ್ನು ಸೃಷ್ಟಿಸುವ ಕಡೆಗೆ ಗಮನ ಮತ್ತು ವಿನ್ಯಾಸ ಮಾಡಲಾಗುತ್ತಿದೆ. ಶಿಕ್ಷಕರು ಐಸಿಟಿಯನ್ನು ವಿವಿಧ ಹಂತಗಳಲ್ಲಿ ಅನಾವರಣಗೊಳಿಸುತ್ತಿರುವ ಗುಂಪಿನ ಪ್ರತಿನಿಧಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿಕ್ಷಕರ ಫಠ್ಯಕ್ರಮವು ಶಿಕ್ಷಕರ ಕಲಿಕಾ ಪಗ್ರತಿಯ ವಿವರಣೆ ಮತ್ತು ಶಿಕ್ಷಕರು ತಮ್ಮ ಸಿದ್ದತೆಯನ್ನು ಅಂದಾಜಿಸುವಂತಹ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಅವರನ್ನು ಪರಿಣಿತ ಐಸಿಟಿ ಬಳಕೆದಾರರಾಗಿ ಸಜ್ಜುಗೊಳಿಸುತ್ತದೆ. ಐ.ಸಿ.ಟಿ ಸೌಲಭ್ಯ ಮತ್ತು ಸಂಪನ್ಮೂಲಗಳ ಲಭ್ಯತೆಯು ಶಾಲೆಗಳ ಗಾತ್ರ, ಮೂಲಭೂತ ಸೌಕರ್ಯಗಳ ಲಭ್ಯತೆ, ವಿದ್ಯುತ್ ಲಭ್ಯತೆ, ಮಕ್ಕಳ ಸಂಖ್ಯೆಯನ್ನು ಆಧರಿಸಿರುತ್ತದೆ. ಆದ್ದರಿಂದ ಮಕ್ಕಳ ಪಠ್ಯಕ್ರಮವನ್ನು 3 ವರ್ಷಗಳ ಅವಧಿಯ 90 ವಾರಗಳ ವಿಸ್ತರಣೆಯ ವಾರಕ್ಕೆ ಮೂರು ತರಗತಿಗಳಿಗೆ ಅನುಗುಣವಾಗಿ ವಿನ್ಯಾಸಮಾಡಲಾಗಿದೆ. ಶಾಲೆಗಳು ಈ ಪಠ್ಯಕ್ರಮವನ್ನು ತನ್ನ 6ನೇ ತರಗತಿಯ ಹಂತದಿಂದಲೇ ಪ್ರಾರಂಭಿಸಬಹುದು. ಯಾವುದೇ ಸಂದರ್ಭದಲ್ಲಿಯೂ ವಿಧ್ಯಾರ್ಥಿಯು ಶಾಲೆಯಿಂದ ಹೊರಗೆ ಹೋಗುವ ಮೊದಲೇ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು. ಐ.ಸಿ.ಟಿ ಪಠ್ಯಕ್ರಮವು ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ. ಅದೇ ರೀತಿ ಶಾಲಾ ಐಚ್ಚಿಕ ವಿಷಯಗಳು ಮತ್ತು NVEQF ನ ವೃತ್ತಿಪರ ಶಿಕ್ಷಣಗಳಂತಹ ಕಾರ್ಯಕ್ರಮಗಳಿಗಿಂತ ವಿಶಿಷ್ಟವಾಗಿರುತ್ತದೆ. ಈ ಪಠ್ಯಕ್ರಮವೂ ಶಾಲಾ ವ್ಯವಸ್ಥೆಯು ಶಿಕ್ಷಕರು ಮತ್ತು ಮಕ್ಕಳು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯ ಮೂಲಕ ಸಾಮರ್ಥ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಸಾಧ್ಯವಾಗುವಂತಹ ಕೆಲವು ಮಾರ್ಗದರ್ಶಿ ತತ್ವಗಳನ್ನೊಳಗೊಂಡಿದೆ. ಇದು ಕೇವಲ ತಂತ್ರಜ್ಞಾನವನ್ನು ಬಳಸುವುದಕ್ಕೆ ಅಷ್ಟೇ ಸೀಮಿತವಾಗದೇ ಅವರ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ವಿವೇಚನೆಯಿಂದ ತೊಡಗಿಸುವುದಾಗಿದೆ. ಪಠ್ಯಕ್ರಮದ ಅಗತ್ಯತೆಗಳು ಕೇವಲ ನಿರ್ಧಿಷ್ಟ ತಂತ್ರಾಂಶ ಮತ್ತು ಯತ್ರಾಂಶಗಳಾಗಿರುವುದಿಲ್ಲ. ತಂತ್ರಾಂಶವನ್ನು ಕೇವಲ ಕಛೇರಿ ಅನ್ವಯಕಯಗಳಿಗೆ ಮಿತಿಗೊಳಿಸುವುದನ್ನು ರದ್ದುಗೊಳಿಸುವುದು ಕೇವಲ ಶೈಕ್ಷಣಿಕ ಉದ್ದೇಗಳಿಗಾಗಿ ಮಾತ್ರವಲ್ಲದೇ ಕಂಪ್ಯೂಟರ್ ಮತ್ತು ಐ.ಸಿ.ಟಿಗಳಿಂದ ಏನು ಮಹಾ ಸಾಧಿಸಬಹುದು ಎಂಬ ನಿರ್ಲಕ್ಷ ದೃಷ್ಟಿಕೋನವನ್ನು ಕಡಿಮೆಗೊಳಿಸುವುದಾಗಿದೆ. ಇದರಿಂದಾಗಿಯೇ ವಿಶೇಷವಾಗಿ ಶಿಕ್ಷಣಕ್ಕಾಗಿಯೇ ವಿನ್ಯಾಸಗೊಂಡ ವಿವಿಧ ತಂತ್ರಾಂಶ ಅನ್ವಯಕಗಳನ್ನು ಪರಿಚಯಿಸಲಾಗಿದೆ. ಹಕ್ಕಸ್ವಾಮ್ಯ ಹೊಂದಿರುವ ತಂತ್ರಾಂಶಗಳ ಬಳಕೆಯು ವೆಚ್ಚದಾಯಕವಾಗಿರುತ್ತದೆ ಮತ್ತು ಅನುಷ್ಟಾನಗೊಳಿಸಲು ಸೂಕ್ತವಾಗಿರುವುದಿಲ್ಲ. ಆದ್ದರಿಂದ ಈ ಪಠ್ಯಕ್ರಮದಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಬಳಸಲು ಸಲಹೆ ನೀಡಲಾಗಿದೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆಯೂ ತಂತ್ರಾಂಶ ನಕಲು ಮಾಡುವುದನ್ನು ತಡೆಯುತ್ತದೆ ಮತ್ತು ಸ್ಥಳೀಯ ಅಗತ್ಯಗಳಿಗನುಗುಣವಾಗಿ ಗ್ರಾಹಕೀರಣವನ್ನು ಸಕ್ರಿಯಗೊಳಿಸುತ್ತದೆ.

ಈ ಪಠ್ಯಕ್ರಮವೂ ಸೂಕ್ತ ಉತ್ತಮ ಗುಣಮಟ್ಟದ ಅಂತರ್ಜಾಲ ಸಂಪರ್ಕದ ಅಗತ್ಯತೆಯನ್ನು ತಿಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ಅಂತರ್ಜಾಲ ಬಳಕೆಯು ಕಡ್ಡಾಯವಾಗಿರುತ್ತದೆ. ಶೈಕ್ಷಣಿಕ ಸಾಮರ್ಥ್ಯಗಳನ್ನೊಳಗೊಂಡ ಅಂತರ್ಜಾಲ ಸಂಪನ್ಮೂಲಗಳು ಮತ್ತು ಚರ್ಚೆಗಳು ಬಹಳ ಮಹತ್ವದ್ದಾಗಿವೆ. ಹಾಗು ಬೇರೆ ಬೇರೆ ಶಿಕ್ಷಕರು ಹಾಗು ಶಾಲೆಗಳ ನಡುವೆ ಸಂಪರ್ಕ ಸಾಧಿಸುವ ಬಹು ಅವಶ್ಯಕ ಉದ್ದೇಶವನ್ನು ಸಾಧಿಸುತ್ತದೆ. ತುಂಬಾ ಅಗತ್ಯವಾಗಿದೆ. contributing to bridging of divides.


ವಿದ್ಯುನ್ಮಾನ ವಿಷಯವು ಪ್ರಸ್ತುತ ಮತ್ತೊಂದು ಬೋಧನಾ ಸಾಮಗ್ರಿಯಾಗಿ, ಅಷ್ಟೇನು ಪ್ರಮುಖವಲ್ಲದ ಹಾಗು ಬೋದನಾ ಕಲಿಕಾ ಪ್ರಕ್ರಿಯೆಯ ಮೇಲೆ ಮತ್ತು ಶಿಕ್ಷಕರ ಪಾತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅವಲೋಕನಕ್ಕೆ ಸ್ಪಂದಿಸುವಂತೆ ಐಸಿಟಿ ಪಠ್ಯಕ್ರಮ ವಿದ್ಯುನ್ಮಾನ ವಿಷಯ ರಚನೆ ಪ್ರಕ್ರಿಯೆಯಲ್ಲಿ ಶಿಕ್ಷಕರ ಭಾಗವಹಿಸುವಿಕೆಗೆ ಮತ್ತು ಸಹಯೋಜಿತವಾದ ಹಂಚಿಕೆ ಮೂಲಕ ಕ್ಲಿಷ್ಟಕರ ಮೌಲ್ಯಮಾಪನಕ್ಕೆ ಈ ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕೆ ಉದಾಹರಣೆಯಾಗಿದೆ ನೋಡುವುದಾದರೆ, ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಪನ್ಮೂಲ ಸಂಗ್ರಹಾಲಯಗಳ (NROER) ಪಠ್ಯಕ್ರಮಗಳು ಶಿಕ್ಷಕರ ಸಹಯೋಜಿತ ವೇದಿಕೆಗಳಲ್ಲಿ ಮೌಲ್ಯಮಾಪನಗೊಂಡ ಸಂಪನ್ಮೂಲಗಳ ರಚನೆ/ ಹಂಚಿಕೆಗಳ ಮೂಲಕ ಶಿಕ್ಷಕರ ಭಾಗವಹಿಸುವಿಕೆಯನ್ನು ಪ್ರೊತ್ಸಾಹಿಸುತ್ತವೆ.

ಮಾರ್ಗದರ್ಶಿ ತತ್ವಗಳು

  1. ಪಠ್ಯಕ್ರಮವು ವಿಸ್ತಾರವಾದ ತಂತ್ರಜ್ಞಾನ ಅನ್ವಯಕಗಳ ಲಕ್ಷಣಗಳನ್ನೊಳಗೊಂಡ ಮತ್ತು ಶೈಕ್ಷಣಿಕ ಉದ್ದೇಶವನ್ನೊಂದಿರುವ ಸಾರ್ವತ್ರಿಕ ಪಠ್ಯಕ್ರಮವಾಗಿರಬೇಕು.
  2. ಪಠ್ಯಕ್ರಮದ ಉದ್ದೇಶವು ವಿವಿಧ ಯಂತ್ರಾಂಶ ಮತ್ತು ತಂತ್ರಾಂಶವನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಕಲಿಯುವುದನ್ನು ಒಳಗೊಂಡಿರುವ ಸಂಯೋಜಿತ ಕಲಿಕೆಯಾಗಿರಬೇಕು. ಐ.ಸಿ.ಟಿ ಸಾಕ್ಷರತೆಯು, ಕಲಿಕಾರ್ಥಿಯು ಪರಿಕರಗಳು ಮತ್ತು ಸಾಧನಗಳ ಮೇಲೆ ನಿಯಂತ್ರಣ ಹೊಂದುವ ಸಾಮರ್ಥ್ಯ ಮತ್ತು ಜ್ಞಾನ ಹೊಂದಿರುವುದು ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದು ಕಲಿಕೆಯ ಹೆಚ್ಚುವರಿ ಫಲಿತಾಂಶವಾಗಿದೆ.
  3. ಪಠ್ಯಕ್ರಮವು ಪ್ರಯಾಯೋಗಿಕೆ ಕಲಿಕೆಗೆ ಮತ್ತು ಐ.ಸಿ.ಟಿ ಅನ್ವಯಕಗಳ ಮುಕ್ತ ಪರಿಶೋಧನೆಗೆ ಪೂರಕವಾದ ಅವಕಾಶವನ್ನು ಒದಗಿಸುವಂತಿರಬೇಕು. ಕಲಿಕೆಯನ್ನು ಹಂಚಿಕೊಳ್ಳುವುದು ಮತ್ತು ಕಲಿಕೆಯನ್ನು ಮೌಲ್ಯಮಾಪನ ಕಾರ್ಯತಂತ್ರದಲ್ಲಿ ಒಳಗೊಂಡಿರಬೇಕು.
  4. ಸಾಮಾಜಿಕ, ಸೈದ್ದಾಂತಿಕ ಮತ್ತು ಶಾಸನಬದ್ದವಾದ ಐ.ಸಿ.ಟಿ ಬಳಕೆಯ ಅಂಶಗಳ ಬಗೆಗಿನ ಬಹಳ ವಿಸ್ತಾರವಾದ ಅರಿವು ಆರೋಗ್ಯಕರವಾದ ಐ.ಸಿ.ಟಿ ವಾತಾವರಣಕ್ಕೆ ಅತ್ಯಗತ್ಯವಾಗಿರುತ್ತದೆ. ತಂತ್ರಾಂಶ ನಕಲು ಮತ್ತು ಕೃತಿಚೌರ್ಯಗಳು ಸ್ಪಷ್ಟವಾಗಿ ವಿರೋದಿಸಲ್ಪಡಬೇಕು. ಮೂಲ ವಿಷಯದ ರಚನೆಯು, ರಚನೆಯಲ್ಲಿ ಹೆಮ್ಮೆಯನ್ನುಂಟು ಮಾಡುತ್ತದೆ ಹಾಗು ಇತರರಿಮದ ಪ್ರಸಂಶಿಲ್ಪಡುತ್ತದೆ ಹಾಗು ಈ ಮೂಲಕ ಸಂಪನ್ಮೂಲ ಕೊಡುಗೆಗಳನ್ನು ಪ್ರೋತ್ಸಾಹಿಸಬೇಕು. ಸುರಕ್ಷಿತ ಮತ್ತು ಭದ್ರತೆಯ ಐ.ಸಿ.ಟಿ ಬಳಕೆಯನ್ನು ಸಹ ಪ್ರೋತ್ಸಾಹಿಸಬೇಕು.
  5. ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ ಗರಿಷ್ಟ ಪರಿಣಾಮವನ್ನು ಸಾಧಿಸುವುದು. ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು.

ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ

ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. . ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ.

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ವ್ಯಾಖ್ಯಾನಿಸಿರುವ ಸಾಮರ್ಥ್ಯಗಳು

'ಹಂತ 1: ಮೂಲ ಹಂತ'
ಕಂಪ್ಯೂಟರ್‌ ಬಗೆಗೆ ಮೂಲ ಕಲಿಕೆ ಮತ್ತು ಟೂಲ್ಸ್ ಮತ್ತು ತಂತ್ರಜ್ಞಾನದ ಮೂಲ ಬಳಕೆ- ಕಂಪ್ಯೂಟರ್ ಆಪರೇಟ್‌ ಮಾಡುವುದು, ಸಂಗ್ರಹ, ಹಂಚಿಕೆ ಮತ್ತು ದಾಖಲೆ ನಿರ್ವಹಣೆ ಮಾಡುವುದು. ಬೇಸಿಕ್ ವರ್ಡ್‌ ಮತ್ತು ದತ್ತಾಂಶ ಪ್ರೊಸೆಸಿಂಗ್ ಕಲಿಯುವುದು, ಸಂಪರ್ಕ, ಸಂಗ್ರಹ, ಇನ್‌ಪುಟ್ ಮತ್ತು ಔಟ್‌ಪುಟ್‌ ಡಿವೈಸ್ ಗಳನ್ನು ಕಲಿಯಲು ಕಂಪ್ಯೂಟರ್ ಬಳಸುವುದು. ಇಂಟರ್‌ನೆಟ್‌ ಗೆ ಸಂಪರ್ಕ ಹೊಂದುವುದು, ಇಮೇಲ್ ಬಳಸುವುದು ಮತ್ತು ವೆಬ್‌ ಹುಡುಕಾಟ, ಸರ್ಚ್‌ ಎಂಜಿನ್ ಬಳಕೆ, ಕಂಪ್ಯೂಟರ್‌ ನ್ನು ಅಪಡೇಟ್‌ ಮಾಡುವುದು ಮತ್ತು ಸುರಕ್ಷಿತವಾಗಿಡುವುದು, ಹೊರಗಿನಿಂದ ಸಂಪರ್ಕಿತಗೊಂಡ ಡಿವೈಸ್‌ಗಳನ್ನು ಬಳಸುವುದು ( ಉದಾ; ಸೌಂಡ್‌ರೆಕಾರ್ಡರ್, ಡಿಜಿಟಲ್ ಕ್ಯಾಮೆರಾ, ಸ್ಕ್ಯಾನರ್ ). ಸಂಪರ್ಕಗೊಳಿಸುವುದು, ಸುರಕ್ಷಿತವಾಗಿ ಸಂಪರ್ಕ ಕಡಿತಗೊಳಿಸುವುದು, ನಿರ್ವಹಿಸುವುದು ಮತ್ತು ಡಿಜಿಟಲ್ ಡಿವೈಸ್‌ಗಳನ್ನು ಸರಿಪಡಿಸುವುದು.

'ಹಂತ 2 : ಮಧ್ಯಂತರ'
ವಿವಿಧ ಡಿಜಿಟಲ್ ಡಿವೈಸ್‌ಗಳು ಮತ್ತು ವಿವಿಧ ತಂತ್ರಾಂಶಗಳನ್ನು ಬಳಸಿಕೊಂಡು ವಿಷಯ ರಚನೆ ಮತ್ತು ನಿರ್ವಹಿಸುವುದು. ವೆಬ್‌ಸೈಟ್‌ಗಳು ಮತ್ತು ಸರ್ಚ್ ಎಂಜಿನ್‌ಗಳ ಮೂಲಕ ವಿಷಯ ರಚನೆ, ಹಂಚಿಕೆ ಮತ್ತು ನಿರ್ವಹಣೆ. ತಂತ್ರಾಂಶಗಳನ್ನು ಇನ್‌ಸ್ಟಾಲ್‌ ಮತ್ತು ಅನ್‌ಇನ್‌ಸ್ಟಾಲ್‌ ಮಾಡುವುದು, ಸಾಧಾರಣಾ ತಂತ್ರಾಂಶ ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು.

'ಹಂತ 3 : ಮುಂದುವರೆದ - ಉನ್ನತ ಮಟ್'ಟ
ಸ್ವಕಲಿಕೆಗಾಗಿ ಹಾಗು ಸ್ವಕಲಿಕೆಯನ್ನು ಪರಿಣಾಮಕಾರಿಗೊಳಿಸಲು ವಿವಿಧ ತಂತ್ರಾಂಶದ ಅನ್ವಯಕಗಳನ್ನು ಬಳಸುವುದು. ದತ್ತಾಂಶ ಬೇಸ್ ಅನ್ವಯಕಗಳು, ದತ್ತಾಂಶ ಬೇಸ್‌ಗಳ ವಿಶ್ಲೇಷಣೆ ಮತ್ತು ಸಮಸ್ಯೆ ಬಿಡಿಸುವಿಕೆ, ಸಂಗ್ರಹ, ವಿನ್ಯಾಸ, ಗ್ರಾಫಿಕಲ್ ಮತ್ತು ಧ್ವನಿ ಸಂವಹನಗಳ ಬಳಕೆ, ಸಂಶೋಧನೆ ಕೈಗೊಳ್ಳುವುದು, ಅಂತರ್ಜಾಲಾಧಾರಿತ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರೋಜೆಕ್ಟ್‌ ತಯಾರಿ, ದಾಖಲೀಖರಣ ಮತ್ತು ಪ್ರಸ್ತುತಿಯಲ್ಲಿ ಐ.ಸಿ.ಟಿ ಬಳಕೆ, ಸಹಯೋಜಿತ ಮತ್ತು ಸಹವರ್ತಿ ಕಲಿಕೆಗಾಗಿ ಅಂತರ್ಜಾಲಾಧಾರಿತ ವೇದಿಕೆಗಳನ್ನು ರಚಿಸುವುದು ಮತ್ತು ಭಾಗವಹಿಸುವುದು. ಸುರಕ್ಷಿತ ಕಂಪ್ಯೂಟರ್‌ ಬಳಕೆ, ಕಾಪಿರೈಟ್ಸ್, ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಹೊಂದಿರುವುದು, ಐ.ಸಿ.ಟಿ ಸಂಪನ್ಮೂಲಗಳನ್ನು ಸುರಕ್ಷಿತವಾಗಿಡಲು ಅವಶ್ಯಕ ವಿಧಾನಗಳನ್ನು ಅನುಸರಿಸುವುದು.

ಪಠ್ಯಕ್ರಮದಲ್ಲಿನ ವಿಷಯವು ಈ ಮೇಲಿನ ವಿವಿಧ ಹಂತದ ಸಾಮರ್ಥ್ಯಗಳನ್ನು ಓಟ್ಟಿಗೆ ತಲುಪಲು ಸಾದ್ಯವಾಗುವಂತಹ ಚಟುವಟಿಕೆಗಳನ್ನು ಒಳಗೊಂಡಿದೆ