ಸಮುದಾಯ ಸಮೀಕ್ಷೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮುದಾಯ ಸಮೀಕ್ಷೆ ಕೈಪಿಡಿ ಇಲ್ಲಿ ಡೌನ್ ಲೋಡ್ ಮಾಡಬಹುದು

ಶಾಲಾ ಸ್ಥಳೀಯ ಸಾರ್ವಜನಿಕ ಸ್ಥಳ ಸಮೀಕ್ಷೆ

ಉದ್ದೇಶಗಳು

  1. ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯುವುದು
  2. ಸಾಮಾನ್ಯ ಜನರ ಬಗ್ಗೆ ಮತ್ತು ಅವರ ಚಟುವತಿಕೆಗಳ ಬಗ್ಗೆ ಮಾಹಿತಿ ಸಂಗ್ರಹ
  3. ವಿದ್ಯುನ್ಮಾನವಾಗಿ ಕಥೆ ಹೇಳುವ ಕೌಶಲ ಅಭವೃದ್ದಿಸಿಕೊಳ್ಳುವುದು
  4. ತರಗತಿ ವಿಷಯಗಳಿಗೆ ಸಂಬಂಧೀಕರಿಸಿಕೊಳ್ಳುವ ಮೂಲಕ ಕಲಿಕೆ

ಪೂರ್ವಸಿದ್ದತೆ

  1. ಮೊದಲು ಸಮೀಕ್ಷೆಯ ಸ್ಥಳಗಳನ್ನು ನಿರ್ಧರಿಸಬೇಕು . ಭೇಟಿ ನೀಡಲು ನಿರ್ಧರಿಸಿದ ಸ್ಥಳಗಳ ಮೇಲ್ವಚಾರಕರನ್ನು ಸಂಪರ್ಕಿಸಿ ಅವರಿಗೆ ಈ ಸಮೀಕ್ಷೆಯ ಬಗ್ಗೆ ಹಾಗು ಇದರ ಉದ್ದೇಶದ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಅವರ ಅನುಮತಿ ಮತ್ತು ಸಹಕಾರ ಕೋರುವುದು.
  2. ಸಮುದಾಯ ಸಮೀಕ್ಷೆಯ ಯೋಜನೆಯನ್ನು ತಯಾರಿವ ಮೊದಲು ಶಿಕ್ಷಕರು ಕೆಲವು ಪ್ರಶ್ನೆಗಳನ್ನು ಚರ್ಚಿಸುವುದು ಉತ್ತಮ, ಅವುಗಳೆಂದರೆ, ಏನು, ಏಕೆ, ಹೇಗೆ, ಯಾವಾಗ ಮತ್ತು ಯಾರು ಯಾರು ಎಂಬ ಚರ್ಚೆ ನಡೆಯಬೇಕು.ಈ ಪ್ರಶ್ನೆಗಳನ್ನು ಶಿಕ್ಷಕರು ಬುದ್ಧಿಮಂಥನದ ಮೂಲಕ ಚರ್ಚಿಸಿ ಈ ಸಮೀಕ್ಷೆ ಕಾರ್ಯಕ್ರಮಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳುವರು..
  3. ಶಿಕ್ಷಕರು ಜವಾಬ್ದಾರಿ ಹಂಚಿಕೆ ಮಾಡಿಕೊಳ್ಳುವುದು . ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನವಹಿಸುವುದು.
  4. ಮಕ್ಕಳಲ್ಲಿ ನಾಯಕರನ್ನು ಗುರುತಿಸಿ ಶಿಸ್ತಿನಿಂದ ಈ ಕಾರ್ಯಕ್ರಮ ನಡೆಯಲು ಸೂಚನೆ ನೀಡುವುದು .
  5. ಸಮೀಕ್ಷೆಗೆ ಬೇಕಾದ ಪರಿಕರಗಳನ್ನು ಸಿದ್ದಪಟಿಸಿಕೊಳ್ಳುವುದು . ಕ್ಯಾಮೆರಾ, ನೋಟ್ ಪುಸ್ತಕ ಗಳು ಇತ್ಯಾದಿ ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಿದ ನಂತರ , ಶಾಲೆಯ ಸಮುದಾಯದಲ್ಲಿರುವ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ತಿಳಿಸುವುದು. ಒಂದು ವೇಳೆ ಶಾಲೆಯ ಮಕ್ಕಳ ಸಂಖ್ಯೆ 40 ಇದ್ದು 4ತಂಡಗಳಾಗಿ ವಿಂಗಡಿಸಿದ್ದಾಗ , ಒಂದು ತಂಡ ಅಂಚೆ ಕಛೇರಿಗೂ, ೨ನೇ ತಂಡ ಸ್ಥಳೀಯ ಬ್ಯಾಂಕ್ ಗೂ ೩ನೇ ತಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ, ೪ನೇ ತಂಡ ಹತ್ತಿರದ ರೈತ ಕೇಂದ್ರಕ್ಕೂ ಭೇಟಿ ನೀಡಬಹುದು. ಪ್ರತೀ ತಂಡವನ್ನು ಆ ಯಾ ತಂಡದ ನಾಯಕನೇ ಮುನ್ನೆಡೆಸುತ್ತಿದ್ದು , ಒಬ್ಬೊಬ್ಬ ಶಿಕ್ಷಕರು ಆ ತಂಡಗಳ ಜೊತೆಯಿರುತ್ತಾರೆ.

ಈ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಮಕ್ಕಳು , ಅಲ್ಲಿನ ಸೌಲಭ್ಯಗಳು, ನೀತಿ ನಿಯಮಗಳು, ಕಾರ್ಯ ವ್ಯವಸ್ಥೆ, ಸಿಬ್ಬಂದಿ ಮತ್ತು ಸಾರ್ವಜನಿಕರು ಇಲ್ಲಿಂದ ಪಡೆಯಬಹುದಾದ ಪ್ರಯೋಜನಗಳು … ಹೀಗೆ ಮುಂತಾದ ವಿವರಗಳನ್ನು ಪಡೆಯಬಹುದು... ಮಕ್ಕಳಿಗೆ ಮೂಡುವ ಯಾವುದೇ ರೀತಿಯ ಪ್ರಶ್ನೆಯನ್ನೂ ಸಹ ಕೇಳಲು ಅವಕಾಶವಾಗಬೇಕು . ಕೆಲವು ಮಕ್ಕಳು ತಮಗೆ ಸಿಗುವ ಮಾಹಿತಿಯನ್ನು ಟಿಪ್ಪಣಿ ಮಾಡಿಕೊಳ್ಳಬಹುದು, ಇನ್ನು ಕೆಲವರು ಪೋಟೋ ತೆಗೆದುಕೊಳ್ಳಬಹುದು. ಉದಾಹರಣೆಗೆ:ಗ್ರಾಮಪಂಚಾಯಿತಿ ಗೆ ಭೇಟಿ ನೀಡಿದಾಗ , ಮಕ್ಕಳು ಅಲ್ಲಿನ ಅಧಿಕಾರಿಯನ್ನು ಭೇಟಿ ಮಾಡಿ ತಮ್ಮ ಪರಿಚಯ ಮಾಡಿಕೊಳ್ಳುವರು , ನಂತರ ತಾವು ಬಂದಿರುವ ಉದ್ದೇಶವನ್ನು ವಿವರಿಸಿ ತಮಗೆ ಗ್ರಾಮ ಪಂಚಾಯಿತಿ ಬಗೆಗಿನ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡುವರು . ನಂತರ ಗ್ರಾಮ ಪಂಚಾಯಿತಿ ಬಗೆಗಿನ ತಮ್ಮ ಪ್ರಶ್ನಗಳನ್ನು ಕೇಳುವ ಮೂಲಕ ಮಾಹಿತಿ ಪಡೆಯುವರು.
ಕೆಲವು ಪ್ರಶ್ನೆಗಳು

  • ಗ್ರಾಮ ಪಂಚಾಯಿತಿಯ ಸ್ಥಾಪನೆಯ ಹಿನ್ನೆಲೆಯ ಬಗ್ಗೆ ಮಾಹಿತಿ
  • ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾರ್ಯದರ್ಶಿಗಳ ಸಂಖ್ಯೆ ಮತ್ತು ಕಾರ್ಯದ ಬಗ್ಗೆ ಮಾಹಿತಿ.
  • ಗ್ರಾಮ ಪಂಚಾಯಿತಿಯು ,ಗ್ರಾಮದ ಅಭಿವೃಧಿಗಾಗಿ ಕೈಗೊಂಡ ಅಭಿವೃಧಿ ಕಾರ್ಯಗಳ ಬಗ್ಗೆ ಮಾಹಿತಿ.
  • ಗ್ರಾಮ ಪಂಚಾಯಿತಿಗು ಗ್ರಾಮದ ಶಾಲೆಗಳಿಗಿರುವ ಸಂಬಂಧದ ಬಗ್ಗೆ ಮಾಹಿತಿ.
  • ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ.
  • ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನಸಂಖ್ಯೆ.
  • ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಭೆಗಳ ಮಾಹಿತಿ
  • ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳ ಜವಾಬ್ದಾರಿಗಳೇನು ?
  • ಮಾಹಿತಿ ಹಕ್ಕು ಕಾಯಿದೆಯ ವಿವರಗಳು

ಹೀಗೆ ಮಕ್ಕಳ ತಲೆಯಲ್ಲಿ ಮೂಡಿಬರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ/ಮಾಹಿತಿ ಸಿಕ್ಕ ನಂತರ ಮಕ್ಕಳು ಪೂರಕವಾದ ಪೋಟೋಗಳನ್ನು ತೆಗೆದುಕೊಳ್ಳಬಹುದು. ಈ ಸಮೀಕ್ಷೆಯ ಮೂಲಕ ಮಕ್ಕಳಿಗೆ ತಮ್ಮ ಸಮೀಪದಲ್ಲೇ ಇರುವ ಗ್ರಾಮ ಪಂಚಾಯಿತಿಯ ಬಗೆಗಿನ ಅರಿವು ಮೂಡುವುದು ಹಾಗು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಗ್ರಾ.ಪಂ.ಯಿಂದ ಪಡೆದುಕೊಳ್ಳಬೇಕಾದ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ತಮ್ಮ ಪರಿಸರದಲ್ಲಿ ಹೇಗೆ ಅಳವಡಿಸಿಕೊಳ್ಳಬಹದು ಎಂಬ ಚಿಂತನೆ ನಡೆಸುತ್ತಾರೆ.

ಕಾರ್ಯವಿಧಾನ

ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಸಮೀಕ್ಷೆಯ ದಿನ ನಿಗದಿ ಮಾಡಿಕೊಂಡ ನಂತರ ಸಮೀಕ್ಷೆಯ ದಿನ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ದರಾಗುತ್ತಾರೆ. ಆಯ್ಕೆ ಮಾಡಿಕೊಂಡಿರುವ ತರಗತಿ ಹಾಗು ಭೇಟಿ ಮಾಡಬೇಕಿರುವ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಹಮ್ಮಿಕೊಳ್ಳುತ್ತಾರೆ. ಮೊದಲು ತರಗತಿ ಕೋಣೆಗೆ ತೆರಳಿ ಮಕ್ಕಳೊಡನೆ ಈ ದಿನದ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಾರೆ, . ಈ ಕಾರ್ಯಕ್ರಮದ ಉದ್ದೇಶ ಮತ್ತು ಇದರಿಂದಾಗುವ ಪ್ರಯೋಜನವನ್ನು ಮಕ್ಕಳಿಗೆ ತಿಳಿಸುವುದು . ನಂತರ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸುವುದು . ಒಂದು ಗುಂಪಿನಲ್ಲಿ ಕನಿಷ್ಟ 6 ಮತ್ತು ಗರಿಷ್ಟ 10 ಮಕ್ಕಳು ಇರುವಂತೆ ನೋಡಿಕೊಳ್ಳುವುದು . ಈ ಗುಂಪಿಗೆ ನಾಯಕರನ್ನು ಆಯ್ಕೆ ಮಾಡುವುದು . ಪ್ರತಿಯೊಂದು ತಂಡಕ್ಕೂ ಒಂದೊಂದು ಸ್ಥಳಗಳನ್ನು ಆಯ್ಕೆ ಮಾಡಿಕೊಡುವುದು. ಆನಂತರ ಮಕ್ಕಳಿಗೆ ಈ ದಿನದ ಪ್ರಕ್ರಿಯೆ ಬಗ್ಗೆ ಕೆಲವು ಸೂಚನೆ ನೀಡುವುದು. ಅವುಗಳೆಂದರೆ :-

  1. ಭೇಟಿ ನೀಡುತ್ತಿರುವ ಸ್ಥಳದ ಬಗ್ಗೆ ಮಾಹಿತಿ ನೀಡುವುದು
  2. ಅಲ್ಲಿ ಹೇಗೆ ಶಿಸ್ತಿನಿಂದ ವರ್ತಿಸಬೇಕು ಎಂಬುದನ್ನು ತಿಳಿಸುವುದು
  3. ಪ್ರಶ್ನೆಗಳನ್ನು ಯಾರು ಕೇಳಬೇಕು, ಹಾಗು ತಂಡವನ್ನು ನಿರ್ವಹಿಸುವ, ಪೋಟೋ ತೆಗೆದುಕೊಳ್ಳುವ, ಟಿಪ್ಪಣಿ ಬರೆದುಕೊಳ್ಳುವ ಕೆಲಸಗಳನ್ನು ಹಂಚಿಕೊಳ್ಳಲು ಸೂಚಿಸುವುದು.
  4. ಭೇಟಿ ನೀಡಿರುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸೂಚಿಸುವುದು ತಂಡದ ನಾಯಕನಿಗೆ ಜವಾಬ್ದಾರಿ ವಹಿಸುವುದು
  5. ಒಂದು ಚಿತ್ರ ೧೦೦೦ ಪದಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ನಾವು ಯಾವುದಾದರು ಸಮುದಾಯದ ಚಿತ್ರವನ್ನು ತೋರಿಸಿದಾಗ ಅದನ್ನು ನೋಡಿದವರಿಗೆ ಆ ಸಮುದಾಯದ ಬಗ್ಗೆ ಹೆಚ್ಚು ವಿವರಗಳು ದೊರೆಯುತ್ತವೆ. ಪ್ರಸ್ತುತ ನಮಗೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿರುವುದರಿಂದ ಸ್ಥಳೀಯ ಹಬ್ಬಗಳು, ಸ್ಥಳೀಯ ಪರಿಸರದ ಸ್ಥಿತಿ , ಶಾಲೆ, ಸಾರ್ವಜನಿಕ ಸ್ಥಳಗಳ ಕಾರ್ಯಕ್ರಮಗಳು , ಸಮುದಾಯ ಸಭೆಗಳ ವಿವರಗಳನ್ನು ಸೆರೆಹಿಡಿಯಬಹುದು ಹಾಗು ವೀಡಿಯೋ ಮಾಡಿಕೊಳ್ಳಬಹುದು .
  6. ಕಲೆಹಾಕುವ ಮಾಹಿತಿಯನ್ನು ತಪ್ಪದೇ ದಾಖಲಿಸಿಕೊಳ್ಳುವುದು , ಸ್ಥಳದಲ್ಲಿನ ಮಾಹಿತಿಗಳ ಪೋಟೋ ತೆಗೆದುಕೊಳ್ಳುವುದು, ವೀಡಿಯೋ ಅಥವಾ ಆಡಿಯೋ ರೆಕಾರ್ಡಿಂಗ್ ಸಹ ಮಾಡಿಕೊಳ್ಳಬಹುದು (ಸಾಧ್ಯವಾದಲ್ಲಿ) .

ಯಾದಗಿರಿ ಹೊನಗೇರಾ ಶಾಲೆಯ ಚಿತ್ರಗಳು ಮತ್ತು ವೀಡಿಯೋ

ವಿದ್ಯುನ್ಮಾನ ಮಾಹಿತಿ ಮಂಡನೆ - Digital Story Telling

ಸಮುದಾಯ ಸಮೀಕ್ಷೆಯ ನಂತರ ವಿಧ್ಯಾರ್ಥಿಗಳು ತಮ್ಮ ತಂಡದವರೊಡನೆ ಕುಳಿತು ಎಲ್ಲರೂ ಚರ್ಚಿಸಿ ಈ ಕಾರ್ಯಕ್ರಮದಲ್ಲಿ ತಾವು ಪಡೆದುಕೊಂಡ ಮಾಹಿತಿಯನ್ನು ಒಂದೆಡೆ ದಾಖಲಿಸುವುದು. ಟಿಪ್ಪಣಿಗಳು, ಪೋಟೋಗಳು, ವೀಡಿಯೋಗಳು ಹಾಗು ಪೋಟೂಗಳನ್ನು ಒಂದೆಡೆಗೆ ಸಂಗ್ರಹಿಸಿಕೊಳ್ಳುವುದು.. ತಂಡದಲ್ಲಿ ಚರ್ಚಸಿ, ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಶಿಕ್ಷಕರ ಸಹಾಯದಿಂದ ಪೋಟೋಗಳನ್ನು ಹಾಗು ವೀಡಿಯೋಗಳನ್ನು ಹಾಗು ತಾವು ಪಡೆದ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಮಂಡನೆಗೆ ಸಿದ್ದಗೊಳಿಸುವುದು . ಸಮೀಕ್ಷೆ ಸಂದರ್ಭದಲ್ಲಿ ತಾವು ಕಂಡುಕೊಂಡ ಅಂಶಗಳು/ಅನುಭವಗಳು/ಮಾಹಿತಿಗಳನ್ನು ಕಥೆಯ ರೂಪದಲ್ಲಿ ಹಂಚಿಕೊಳ್ಳಬೇಕು . ತಾವು ಸಂಗ್ರಹಿಸಿದ ಪೋಟೋಗಳನ್ನು ವೀಡಿಯೋಗಳನ್ನು ಕಂಪ್ಯೂಟರ್ ನ ಮೂಲಕ ಪ್ರಸ್ತುತಪಡಿಸಬಹುದು. ಇದು ಅವರ ಕಲಿಕೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಕಥೆಯ ರೂಪದಲ್ಲಿ ಹಂಚಿಕೊಂಡಾಗ , ಇತರೆ ಗುಂಪಿನವರಿಗೂ ಆಸಕ್ತಿ ಮೂಡಿಸಲು ಹಾಗು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯುನ್ಮಾನ ಮಾಹಿತಿ ಮಂಡನೆಯನ್ನು ಮಾಡಲು ಕಂಪ್ಯೂಟರ್, ಪ್ರೋಜೆಕ್ಟರ್, ಸ್ಪೀಕರ್ ಗಳ ಅವಶ್ಯಕತೆ ಇರುತ್ತದೆ, ಈ ಸಾಮಗ್ರಿಗಳನ್ನು ಬಳಸಿ ಮಂಡನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿಸಬಹದು. ಸಮೀಕ್ಷೆ ಭೇಟಿಯ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳು, ಪೋಟೋಗಳು, ವೀಡಿಯೋಗಳ್ನು ನೇರವಾಗಿ ಪ್ರದರ್ಶಿಸುವ ಮೂಲಕ ಪ್ರತ್ಯೇಕ್ಷ ಚಿತ್ರಣವನ್ನು ನೀಡಬಹುದು. . ಈ ಮೂಲಕ ಮಂಡನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ಮತ್ತು ಪ್ರಸ್ತುತಿ ಕೌಶಲ ದ ಕಲಿಕೆಯೂ ಸಾಧ್ಯವಾಗುತ್ತದೆ. ಬರವಣಿಗೆ ಮೂಲಕ ಅಥವಾ ಭಾಷಣದ ಮೂಲಕ ನೇರವಾಗಿ ವಿಷಯವನ್ನು ತಿಳಿಸುವುದಕ್ಕಿಂತ ಈ ರೀತಿಯ ವಿದ್ಯುನ್ಮಾನವಾಗಿ ಮಂಡನೆ ಮಾಡುವುದರಿಂದ , ಆ ಸ್ಥಳಕ್ಕೆ ಭೇಟಿ ನೀಡದ ಮಕ್ಕಳಿಗೂ ಸಹ ಸಂಪೂರ್ಣವಾದ ಪ್ರತ್ಯೇಕ್ಷ ಅನುಭವವನ್ನು ನೀಡಬಹದು.

ಭೇಟಿ ಮುಗಿಸಿದ ನಂತರ ಸುರಕ್ಷಿತವಾಗಿ ಶಾಲೆಗೆ ಮರಳುವುದು. ನಂತರ ತಮ್ಮ ತಂಡದವರೊಡನೆ ಕುಳಿತು ಎಲ್ಲರೂ ಚರ್ಚಿಸಿ ಈ ಬೇಟಿಯಲ್ಲಿ ತಾವು ಪಡೆದುಕೊಂಡ ಮಾಹಿತಿಯನ್ನು ಒಂದೆಡೆ ದಾಖಲಿಸುವುದು. ಟಿಪ್ಪಣಿಗಳು, ಪೋಟೋಗಳು, ವೀಡಿಯೋಗಳು ಹಾಗು ಪೋಟೂಗಳನ್ನು ಒಂದೆಡೆಗೆ ಸಂಗ್ರಹಿಸಿಕೊಳ್ಳುವುದು.. ತಂಡದಲ್ಲಿ ಚರ್ಚಸಿ, ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಶಿಕ್ಷಕರ ಸಹಾಯದಿಂದ ಪೋಟೋಗಳನ್ನು ಹಾಗು ವೀಡಿಯೋಗಳನ್ನು ಹಾಗು ತಾವು ಪಡೆದ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಮಂಡನೆಗೆ ಸಿದ್ದಗೊಳಿಸುವುದು . ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಬಂದಿರುವ ಇತರೆ ಗುಂಪಿಗಳೆಲ್ಲವೂ ಒಂದೆಡೆ ಸೇರಿ ತಮ್ಮ ಮಂಡನೆಯನ್ನು ಪ್ರಸ್ತುತಿ ಪಡಿಸುವುದು. ಶಿಕ್ಷಕರು ಪ್ರತೀ ತಂಡದ ಜೊತೆಯಿದ್ದು ತಾಂತ್ರಿಕವಾಗಿ ಸಹಾಯ ನೀಡುವರು .

ನಿರೀಕ್ಷಿತ ಫಲಿತಾಂಶ:

  1. ಮಕ್ಕಳಗೆ ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.
  2. ಸಾಮಾನ್ಯಜನರ ಬಗ್ಗೆ ಮತ್ತು ಅವರ ಚಟುಟವಿಕೆಗಳ ಬಗ್ಗೆ ಮಾಹಿತಿ ಪಡೆಯುವುದು
  3. ವಿದ್ಯುನ್ಮಾನವಾಗಿ ಕಥೆ ಹೇಳುವ ಕೌಶಲ ಅಭವೃದ್ದಿಸಿಕೊಳ್ಳುವುದು
  4. ತರಗತಿ ವಿಷಯಗಳಿಗೆ ಸಂಬಂಧೀಕರಿಸಿಕೊಳ್ಳುವುದು
  5. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಮತ್ತು ನಾಯಕತ್ವ ಪಾತ್ರಗಳನ್ನು ನಿರ್ವಹಿಸುವುದಕ್ಕೆ ಇದು ಉತ್ತಮ ಅವಕಾಶ ಒದಗಿಸುತ್ತದೆ.
  6. ಕಲಿಕಾ ಪ್ರಕ್ರಿಯೆಯಲ್ಲಿ ಆಸಕ್ತಿ ಮತ್ತು ಉತ್ತೇಜನವನ್ನು ಉಂಟು ಮಾಡುತ್ತದೆ.. ಯೋಚಿಸಲು, ತರಗತಿಯ ಕಲಿಕೆ ಮತ್ತು ಪರಿಸರದ ಜೊತೆ ಸಂಬಂಧವನ್ನು ಸೃಷ್ಟಿಸಲು, ಸಮನ್ವಯಗೊಳಿಸಲು ಮತ್ತು ಅರ್ಥಗಳನ್ನು ಕಂಡುಕೊಳ್ಳಲು ಇದು ವಿದ್ಯಾರ್ಥಿಗಳಿಗೆ ಪ್ರಜ್ಞಾಪೂರ್ವಕವಾದ ಅವಕಾಶಗಳನ್ನು ಒದಗಿಸುತ್ತದೆ.
  7. ಸ್ಥಳೀಯ ಸಂಪನ್ಮೂಲಗಳು , ಸಾರ್ವಜನಿಕ ಸಂಸ್ಥೆಗಳು, ಸಮಾಜ, ಜನರು, ಕರಕುಶಲ ಕಲೆಗಳು, ಜನಪದ ಮುಂತಾದವುಗಳ ಬಗ್ಗೆ ತಿಳುವಳಿಕೆ ಮತ್ತು ಗೌರವವನ್ನು ಇದು ಮೂಡಿಸುತ್ತದೆ.
  8. ಗುಂಪಿನಲ್ಲಿ ಕೆಲಸ ಮಾಡುವ ಮತ್ತು ಪರಸ್ಪರರಿಂದ ಕಲಿಯುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಹೆಚ್ಚಿಸುತ್ತದೆ.
  9. ತರಗತಿಯ ಜ್ಞಾನಕ್ಕೆ ಶಾಲೆಯ ಹೊರಗಿನ ಜೀವನದೊಂದಿಗೆ ಸಂಬಂಧ ಕಲ್ಪಸಿ ರೂಢಿಗತ ವಿಧಾನಗಳಿಂದ ಭಿನ್ನವಾಗಿ ಕಲಿಕೆಯನ್ನು ಸಾಧ್ಯವಾಗಿಸುವುದು ಮತ್ತು ಪಠ್ಯ ಪುಸ್ತಕವನ್ನು ದಾಟಿ ಸಾಗುವಂತೆ ಕಲಿಕೆಯನ್ನು ಸಮೃದ್ದಗೊಳಿಸುವುದು.
  10. ಸ್ಥಳೀಯ ಜ್ಞಾನ ಮತ್ತು ಆ ಪ್ರದೇಶದ ಪದ್ದತಿಗಳಲ್ಲಿ ತೊಡಗಿಕೊಳ್ಳುವದು ಮತ್ತು ಸಾಧ್ಯ ಇರುವಲ್ಲೆಲ್ಲ ಶಾಲೆಯಲ್ಲಿ ಪಡೆದುಕೊಂಡ ಜ್ಞಾನ ಮತ್ತು ತಮ್ಮ ದೈನಂದಿನ ಜೀವನದ ಚಟುವಟಿಕೆಗಳ ಜೊತೆ ಸಂಬಂಧ ಕಲ್ಪಿಸಲು ಮಕ್ಕಳಿಗೆ ಸಾಧ್ಯವಾಗುತ್ತದೆ.
  11. ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳ ನಡುವೆ ಸಹೋದ್ಯೋಗಿತ್ವ ಮತ್ತು ಸಹಭಾಗಿತ್ವ ಸಾದ್ಯವಾಗಿಸುತ್ತದೆ ಮತ್ತು ಆ ಮೂಲಕ ಶಾಲಾ ವಾತಾವರಣ ಉತ್ತಮವಾಗುತ್ತದೆ.
  12. ಇದಲ್ಲದೇ ಸಮುದಾಯವು ಶಾಲಾ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಒದಗಿಸುತ್ತದೆ. ಸಮುದಾಯದ ಜೊತೆಗಿನ ನಂಟನ್ನು ಬಲಗೊಳಿಸುತ್ತದೆ.

ಮೌಲ್ಯಮಾಪನ ಅಂಶಗಳು

  1. ಭಾಗವಹಿಸುವಿಕೆ
  2. ವಿಮರ್ಶನಾತ್ಮಕ ಯೋಚನೆ
  3. ಪ್ರಶ್ನೆ ಕೇಳುವಿಕೆ
  4. ತಂಡಕಾರ್ಯ/ ನಾಯಕತ್ವ
  5. ಭಾಷಾ ಕೌಶಲ
  6. ಪ್ರಸ್ತುತಿ ಕೌಶಲ
  7. ವಿದ್ಯುನ್ಮಾನ ಕೌಶಲ

ಪಠ್ಯಕ್ರಮಕ್ಕೆ ಸಂಬಂಧೀಕರಣ