ಹೊಸ ಹೆಜ್ಜೆ ಹೊಸ ದಿಶೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search

See in English

ಹೊಸ ಹೆಜ್ಜೆ ಹೊಸ ದಿಶೆ

ಹೊಸ ಹೆಜ್ಜೆ ಹೊಸ ದಿಶೆಯು ಹದಿಹರೆಯದ ಕಿಶೋರಿಯರ ವಯೋಸಹಜ ಅಪಾಯ ಹಾಗೂ ದುರ್ಬಲತೆಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿರುವ ಕಾರ್ಯಕ್ರಮವಾಗಿದೆ. ನಗರ ಪ್ರದೇಶಗಳ ಕಿಶೋರಿಯರು ನಾನಾ ಕಾರಣಗಳಿಂದ (ಹಲವು ಒತ್ತಡಗಳಿಗೆ, ಪ್ರಭಾವಗಳಿಗೆ ಒಳಗಾಗುತ್ತಿದ್ದಾರೆ)ಮೂಲೆ ಗುಂಪಾಗುತ್ತಿದ್ದಾರೆ. ಅವರ ಕೌಟುಂಬಿಕ ಪರಿಸ್ಥಿತಿಗಳು, ಸಾಮಾಜಿಕ ಚೌಕಟ್ಟುಗಳು ವಯೋಸಹಜ ಚಾಂಚಲ್ಯಗಳಿಗೆ ಪೂರಕವಾಗುತ್ತಿವೆ.

ಕಿಶೋರಿಯರು, ಅವರ ವಯೋಸಹಜ ಕಾಳಜಿಗಳನ್ನು ಮತ್ತು ಪ್ರಶ್ನೆಗಳನ್ನು ಚರ್ಚಿಸಲು ವೇದಿಕೆಯನ್ನು ಅನುವುಗೊಳಿಸುವುದು ಹಾಗೂ ಶಾಲೆಯ ನಂತರದ ಬದುಕಿನಲ್ಲಿ ಇರುವ ಅವಕಾಶಗಳನ್ನು ತಿಳಿಯುವ ಮೂಲಕ, ಕಿಶೋರಿಯರು ತಿಳುವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಸ ಹೆಜ್ಜೆ ಹೊಸ ದಿಶೆಯು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಕಿಶೋರಿಯರು, ಅವರ ಶಾಲೆಯ ಶಿಕ್ಷಕರು, ಮತ್ತು ಪೋಷಕರು ಭಾಗೀದಾರರು. ತಂತ್ರಜ್ಞಾನಗಳನ್ನು ಬಳಸಿಕೊಂಡು, ಭಾಗೀದಾರಿ ಚಟುವಟಿಕೆಗಳ ಮೂಲಕ ಕಿಶೋರಿಯರ ಕಲಿಕೆ/ತಿಳುವಳಿಕೆಯನ್ನು ಸಬಲಗೊಳಿಸುವುದು ಕಾರ್ಯಕ್ರಮದ ಉದ್ದೇಶ.

ಮಾಹಿತಿ ಮತ್ತು ಸಂವಹನ ಸಾಧನಗಳನ್ನು ಬಳಸಿಕೊಂಡು, ವಿವಿಧ ಘಟಕಗಳ ಮೂಲಕ ತಮ್ಮ ಬಗ್ಗೆ ತಾವೇ ತಿಳಿದುಕೊಳ್ಳುತ್ತಾರೆ. ತಂತ್ರಜ್ಞಾನದ ಕಲಿಕೆಯ ಬಗ್ಗೆ ಹಾಗು ಇನ್ನೂ ವಿವಿಧ ಕೌಶಲ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುವವರಿಗೆ ಹೆಚ್ಚಿನ ಕಲಿಕೆಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಈ ಮೂಲಕ ಕಿಶೋರಿಯರು ತಮ್ಮ ಬಗ್ಗೆ ಅಷ್ಟೇ ಅಲ್ಲದೇ, ತಕ್ಕ ಮಟ್ಟಿನ ತಂತ್ರಜ್ಞಾನದ ತಿಳುವಳಿಕೆಗಳನ್ನೂ ಕೂಡ ಪಡೆಯುತ್ತಾರೆ. ಈ ಚಟುವಟಿಕಗಳು ಕಿಶೋರಿಯರ ಆಕಾಂಕ್ಷೆಗಳ ರೂಪಣೆಗೆ ಸಹಕಾರಿಯಾಗಬಹುದು.

ಇಷ್ಟೇ ಅಲ್ಲದೆ, ಶಿಕ್ಷಕರಿಗೂ ಕೂಡ ಲಿಂಗ ಸೂಕ್ಷ್ಮತೆಯ ಬಗ್ಗೆ ವಲಯ ಮಟ್ಟದ ಕಾರ್ಯಾಗಾರಗಳನ್ನು ಕೂಡ ಆಯೋಜಿಸಲಾಗುವುದು.

ಪಠ್ಯಕ್ರಮದ ಅವಲೋಕನ

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ಸಂಪನ್ಮೂಲಗಳು

ಆಡಿಯೋ ಸಂಪನ್ಮೂಲ - ನಿಮಗೆ ಊಟ ಅಂದ್ರೆ ಎನು.

ಶಾಲೆಗಳಿಗೆ ಅನುಗುಣವಾದ ಮಾಡ್ಯೂಲ್‌ಗಳು

  1. ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ ಕನ್ನಡ ಮಾಧ್ಯಮ, ವಿಲ್ಸನ್‌ ಗಾರ್ಡನ್‌
  2. ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ ಇಂಗ್ಲಿಷ್‌ ಮಾಧ್ಯಮ, ವಿಲ್ಸನ್‌ ಗಾರ್ಡನ್‌
  3. ಕರ್ನಾಟಕ ಪಬ್ಲಿಕ್‌ ಶಾಲೆ , ಬಸವನಗುಡಿ
  4. ಸೆಂಟ್‌ ಆನ್ಸ್‌ ಬಾಲಕಿಯರ ಪ್ರೌಢಶಾಲೆ, ಹಲಸೂರು