೬ನೇ ನವೆಂಬರ್ ೨೦೧೪ ಎರಡನೇ ದಿನ ವರದಿ
ಎರಡನೇ ದಿನದ ವರದಿ
ದಿನಾಂಕ-06:11:2014ರಂದು ಬೇಳಿಗ್ಗೆ ಸ್ವಾಗತ ಕೋರಿ ಕಾರ್ಯಗಾರವು ಪ್ರಾರಂಭವಾಯಿತು .KOERನ ಸಂಪನ್ಮೂಲ ಕ್ರೋಢೀಕರಣದಲ್ಲಿ ಎಲ್ಲಾ ಸಂಪನ್ಮೂಲ ಶಿಬಿರಾರ್ಥಿಗಳು ಮಗ್ನರಾಗಿರುವಾಗ ಬಂದರು ನೋಡಿ RMSA ನಿರ್ದೇಶಕರು, ಕೇಳಿದರು ಜಿಲ್ಲಾವಾರು ಅಹವಾಲುಗಳನ್ನು.
- ೨೦೧೪ ನೇ ಸಾಲಿನ ಸಮಾಜ ವಿಜ್ಞಾನ ವಿಷಯ ೨ನೇ ಹಂತದ ಎಸ್.ಟಿ.ಎಫ್. ಕಾರ್ಯಾಗಾರದಲ್ಲಿ ಶಿಕ್ಷಕರಿಂದ ವ್ಯಕ್ತವಾದ ಅಭಿಪ್ರಾಯಗಳುಮತ್ತು ಬೇಡಿಕೆಗಳು:
- ಸಮಾಜ ವಿಜ್ಞಾನ ವಿಷಯಕ್ಕೆ ವಿಜ್ಞಾನ ವಿಷಯಕ್ಕಿರುವಂತೆ ಪ್ರತ್ಯೇಕ ಲ್ಯಾಬ್ ಇರಬೇಕು ಹಾಗೂ ಅದರ ನಿರ್ವಹಣೆಗೆ ಅನುದಾನ ನೀಡಬೇಕು.
- ಡಿಜಿಟಲ್ ಸಂಪನ್ಮೂಲ ರಚಿಸುತ್ತಿರುವ ಶಿಕ್ಷಕರಿಗೆ ಇಂಟರನೆಟ್ ಸೌಲಭ್ಯಕ್ಕಾಗಿ (ಡಾಟಾ ಯುಸೇಜ್) ನೆರವು ನೀಡಬೇಕು.
- ಲ್ಯಾಪ್‌ಟಾಪ್ ಖರೀದಿಸಲು ಶಿಕ್ಷಕರಿಗೆ ಯಾವುದೇ ತೊಡಕಿಲ್ಲದ ನೇರ ಧನ ಸಹಾಯ ಸೌಲಭ್ಯ ಕಲ್ಪಿಸಬೇಕು.
- ಎಲ್ಲಾ ಬಗೆಯ ತರಬೇತಿಗಳಿಗೆ ಒಬ್ಬರೇ ಶಿಕ್ಷಕರನ್ನು ಬಳಸಿಕೊಳ್ಳಬಾರದು.ಉದಾ:- ಸಿ.ಸಿ.ಇ., ರಚನಾ, ಎಸ್.ಟಿ.ಎಫ್.ಈ ತರಬೇತಿಗಳಿಗೆ ಬೇರೆ ಬೇರೆ ಶಿಕ್ಷಕರನ್ನೇ ನಿಯೋಜಿಸಬೇಕು.
- ಐ.ಸಿ.ಟಿ. ಯೋಜನೆ ಶಾಲೆಗಳ ಶಿಕ್ಷಕರಿಗೆ ನೀಡಿದ ಕೊಯರ್ ತರಬೇತಿ ಎಲ್ಲಾ ಶಿಕ್ಷಕರಿಗೂ ಸಿಗುವಂತಾಗಬೇಕು.
- ಈಗಾಗಲೇ ಕೆಟ್ಟು ಹೋಗಿರುವ ಗಣಕಯಂತ್ರ ಮತ್ತು ಇತರೆ ಸಾಮಗ್ರಿಗಳ ದುರಸ್ತಿ ಮಾಡಿಸಲು ಅನುದಾನ ನೀಡಬೇಕು.
ಎಲ್ಲವೂ ಪರಿಹರಿಸಲು ಸಾದ್ಯವಾಗದಿದ್ದರೂ ಕೆಲವು ಆಶ್ವಾಸನೆಗಳನ್ನು ನೀಡಿದರು. ಅಲ್ಲಿಗೆ ಶಿಕ್ಷಕರು ಸಮಾದಾನದಿಂದ ಸಂಪನ್ಮೂಲ ಕ್ರೋಢೀಕರಣದಲ್ಲಿ ತೊಡಿಗಿದ್ದಾಗ ಬಿಸಿಬಿಸಿ ಚಹದ ಕರೆ. ಸುಮಾರು 11:30ಕ್ಕೆ ಗುರುಸರ್ ರವರಿಂದ ಒಂದು ಪೂರ್ಣಗೊಂಡKOER ನಲ್ಲಿನ 10ನೇ ತರಗತಿಯ ಘಟಕವಾದ "ಗ್ರಾಮೀಣಾಭಿವೃದ್ಧಿ" ಯ ಪ್ರಾತ್ಯಕ್ಷಿಕೆ ನಡೆಯಿತು. ಈ ಪ್ರಾತ್ಯಕ್ಷಿಕೆ ವಿಶಿಷ್ಟತೆ ನೋಡಿ ಎಲ್ಲರೂ ನಿಬ್ಬೆರಗಾದರು. ಯಾರಿಗೂ ಪ್ರಶ್ನೆಗಳೆ ಉದ್ಭವಿಸಲಿಲ್ಲ ಎಕೆಂದರೆ ಯಾರೂ ತಮ್ಮ ಸಂಪನ್ಮೂಲವನ್ನು ಪರಿಪೂರ್ಣಗೋಳಿಸಿರಲಿಲ್ಲ. ಮತ್ತೆ ಇದರಮೇಲೆ ಚರ್ಚೆ ಅದು ಮುಗಿಯದ .ಚರ್ಚೆ. ಇದರಲ್ಲಿ ಪಾವಲ್ಗೋಂಡದ್ದು RMSA ಜಂಟಿ ನಿರ್ದೇಶಕರು. ಹಿಂದಿನಿಂದ play back ರೀತಿ ವಿಷಯ ಸಮರ್ಥನೆ ಮಾಡಿಕೋಳ್ಳುತ್ತಿದ್ದರು."ಗ್ರಾಮೀಣಾಭಿವೃದ್ಧಿ" ಯ ಮೈಂಡ್ ಮ್ಯಾಪ್ ಚೆನ್ನಾಗಿತ್ತು.ಎಲ್ಲಾ ಲಿಂಕುಗಳು NCERT ಪಠ್ಯ ಇತರೆ ಎಲ್ಲವು ನಮಗೆ ಮಾದರಿಯಾದವು.ನಮ್ಮ ಜ್ಞಾನ ಹೆಚ್ಚಾಗುವುದರೋಂದಿಗೆ ದಾಹ ತೀರಿತು.ಅಲ್ಲಿಗೆ ಉಟದ ಸಮಯ. ಚಪಾತಿ ಆಲುಪಲ್ಯ ಎಲ್ಲರನ್ನು ಸಂತೃಪ್ತಿಗೊಳಿಸಿದವು. ಜೊತೆಜೊತೆಯಲ್ಲಿಯೇ ಚರ್ಚೆಯುಸಾಗಿತು.ಊಟದ ಸಮಯದಲ್ಲಿ ಗುರುಸರ್ ಗೆ ಬಂದ ಫೋನ್ಕರೆ ಊಟ ಅರ್ಧಕ್ಕೆ ನಿಲ್ಲಿಸಿತು. ಊಟದ ನಂತರ ಎರಡನೇ ಅವಧಿಗೆ ಗುರು ಸರ್ "ಗ್ರಾಮೀಣಾಭಿವೃದ್ಧಿ"ಯ ಸಂಪನ್ಮೂಲದ ಮಾದರಿಯಲ್ಲಿ ಎಲ್ಲಾ ಘಟಕಗಳ ಸಂಪನ್ಮೂಲ ಸಂಯೋಜನೆ ನಡೆಯುತ್ತಿತ್ತು.ಆದರೆ ಇಂಟರ್ನೆಟ್ ಮಾತ್ರ ಕೈಕೊಡುತ್ತಿತ್ತು. KOER ನಲ್ಲಿ ಪೂರ್ಣಗೊಂಡ ಮಾದರಿ ಸಂಪನ್ಮೂಲವವನ್ನು ಪರಿಚಯಿಸಿದರು.ಮತ್ತು ಎಲ್ಲಾ ಸಮಸ್ಯಗಳಿಗೆ ಪರಿಹಾರವನ್ನು ನೀಡಿದರು.ಅಷ್ಟರಲ್ಲಿ ಚಹಾದ ವಿರಾಮ. ಚಹಾದ ವಿರಾಮದ ನಂತರ ಸಂಪನ್ಮೂಲ ಪೂರ್ಣಗೊಳಿಸುವಲ್ಲಿ ನಿರತರಾದೆವು. ಜೊತೆಗೆ KOER ಸಂಪನ್ಮೂಲ ಫಾರ್ಮ್ ತುಂಬಿ ಆದಿನದ ಕಾರ್ಯಗಾರ ಸಾಯಂಕಾಲ ೫:೩೦ ಪೂರ್ಣಗೊಂಡಿತು. ಅಭಿಪ್ರಾಯ:ಒಟ್ಟಾರೆ ಹೇಳುವುದಾದರೆ STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರದಲ್ಲಿ ಎಲ್ಲಾ ಶಿಕ್ಷಕರು ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಸಂಪನ್ಮೂಲಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಂಪನ್ಮೂಲಗಳ ಪ್ರಾಯೋಗಿಕವಾಗಿ ಮಾಹಿತಿ ಪಡೆದುಕೊಂಡದ್ದು ತುಂಬಾ ಸಂತಸದ ವಿಷಯ. ಪ್ರೇಮನಗೌಡ ಪಾಟೀಲ ಸ ಶಿ ಜಿ ಎಚ್ ಎಸ್ ಜೋಡಿಹೋಚಿಳ್ಳಿ ಕಡೂರು ತಾ/