2021-22 ರ ಬಿ.ಇ.ಎಸ್ ಡಿ.ಇ ಎಲ್.ಎಡ್ ವಿದ್ಯಾರ್ಥಿಗಳಿಗೆ ಐ.ಸಿ.ಟಿ ಸಂಯೋಜಿಸಲಾದ ಕಾರ್ಯಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಐಟಿ ಫಾರ್ ಚೇಂಜ್ ಮತ್ತು ಬಿ.ಇ.ಎಸ್ ಕಾಲೇಜ್ ಆಫ್ ಎಜುಕೇಶನ್ ಎರಡು ಸಂಸ್ಠೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತ್ತಿದ್ದು, ಈ ಅಭ್ಯಾಸಕ್ರಮವನ್ನು ಡಿ.ಎಡ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.ಈ ಅಭ್ಯಾಸಕ್ರಮವನ್ನು "ಕನೆಕ್ಟಿಂಗ್ ಮತ್ತು ಲರ್ನಿಂಗ್" ಹಾಗೂ "ಕ್ರಿಯೇಟಿಂಗ್ ಮತ್ತು ಲರ್ನಿಂಗ್" ಎಂಬ ಎನ್.ಸಿ.ಎಫ಼್ ವಿಷಯಗಳ ಮೇಲೆ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಸ್ವಂತ ವೃತ್ತಿಪರ ಅಭಿವೃದ್ಧಿಗಾಗಿ ಜೊತೆಗೆ ತರಗತಿಯ ಬೋಧನೆಗೆ ನೀವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು (ಇನ್ನು ಮುಂದೆ ಐ.ಸಿ.ಟಿ) ಹೇಗೆ ಬಳಸಬಹುದು ಎಂಬುದನ್ನು ಈ ಅಭ್ಯಾಸಕ್ರಮದಲ್ಲಿ ಚರ್ಚಿಸಲಾಗುವುದು ಮತ್ತು ಸ್ವಯಂ ಕಲಿಕೆ ಬೆಂಬಲಿಸುವ ವಿಭಿನ್ನ ಡಿಜಿಟಲ್ ವಿಧಾನಗಳನ್ನು ಪರಿಚಯಿಸಲಾಗುವುದು. ಅಭ್ಯಾಸಕ್ರಮ ಸೈದ್ಧಾಂತಿಕ ಅಂಶವನ್ನು ಒಳಗೊಂಡಿದೆ, ಅದು ವಿಭಿನ್ನ ಡಿಜಿಟಲ್ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೇಂದ್ರೀಕರಿಸುತ್ತದೆ. ಈ ಅಭ್ಯಾಸಕ್ರಮದಲ್ಲಿ ನೀವು ಐ.ಸಿ.ಟಿ ಯ ಇತಿಹಾಸ ಮತ್ತು ಡಿಜಿಟಲ್ ಐ.ಸಿ.ಟಿ ಯ ಬೆಳವಣಿಗೆ ಬಗ್ಗೆ ಕಲಿಯುವಿರಿ. ಐ.ಸಿ.ಟಿ ಅನ್ನು ನೈತಿಕವಾಗಿ ಹೇಗೆ ಬಳಸುವುದು ಮತ್ತು ಹೆಚ್ಚಿನ ಭಾಗವಹಿಸುವಿಕೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ.


ಈ ಅಭ್ಯಾಸಕ್ರಮ ವಿಭಿನ್ನ ಐ.ಸಿ.ಟಿ ಕೌಶಲ್ಯಗಳ ಕಲಿಕೆಯ ಮೇಲೆ ಕೇಂದ್ರೀಕರಿಸುವ ಅಭ್ಯಾಸ ಘಟಕವನ್ನು ಸಹ ಒಳಗೊಂಡಿದೆ.ನಿಮಗೆ ಉಚಿತ ಮತ್ತು ಮುಕ್ತ ತಂತ್ರಾಶ (ಎಫ್.ಓ.ಎಸ್.ಎಸ್) ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (ಮು.ಶ್ಯೆ.ಸಂ) ಪರಿಚಯಿಸಲಾಗುವುದು. ನಿಮ್ಮ ಪ್ರಯೋಗಾಲಯದಲ್ಲಿ ಐ.ಸಿ.ಟಿ ಮೂಲಸೌಕರ್ಯದ ವಿವಿಧ ಘಟಕಗಳೊಂದಿಗೆ ನೀವು ಪರಿಚಿತರಾಗುತ್ತೀರಿ. ಅಂತರ್ಜಾಲವನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ನೀವು ಕಲಿಯುವಿರಿ ಮತ್ತು ಅಂತರ್ಜಾಲವನ್ನು 'ಜಾಗತಿಕ ಡಿಜಿಟಲ್ ಲೈಬ್ರರಿ' ಎಂದು ನೋಡುತ್ತೀರಿ ಇದರಿಂದ ನೀವು ನಿಮ್ಮ ಸ್ವಂತ ಕಲಿಕೆಗಾಗಿ ಸಂಪನ್ಮೂಲಗಳನ್ನು ಹುಡುಕಬಹುದು ಮತ್ತು ಪ್ರವೇಶಿಸಬಹುದು. ಪ್ರವೇಶಿಸಿದ ಮತ್ತು ನೀವು ರಚಿಸಿದ ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ನಿಮ್ಮ ಸ್ವಂತ 'ವೈಯಕ್ತಿಕ ಡಿಜಿಟಲ್ ಲೈಬ್ರರಿ' ರಚಿಸಲು ನೀವು ಕಲಿಯುವಿರಿ.

ಉದ್ದೇಶಗಳು

  1. ವಿದ್ಯಾರ್ಥಿ-ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತಾ ಕೌಶಲ್ಯಗಳನ್ನು ನಿರ್ಮಾಣಮಾಡುವುದು
  2. ಎಫ್.ಓ.ಎಸ್.ಎಸ್ ಮತ್ತು ಮು.ಶ್ಯೆ.ಸಂ ಗೆ ವಿದ್ಯಾರ್ಥಿ-ಶಿಕ್ಷಕರನ್ನು ಪರಿಚಯಿಸುವುದು.
  3. ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು - ಇಮೇಲ್, ಅಂತರ್ಜಾಲ ಹುಡುಕಾಟ ಮತ್ತು ಡೌನ್ಲೋಡ್, ಪರಿಕಲ್ಪನಾ ನಕ್ಷೆ .
  4. ಗ್ರಾಫಿಕ್ಸ್ ಮತ್ತು ವೀಡಿಯೊ ಸಂಪನ್ಮೂಲ ರಚನೆಯ ಶಕ್ತಿಯನ್ನು ಅರ್ಥೈಸುವುದು.
  5. ವಿದ್ಯಾರ್ಥಿ-ಶಿಕ್ಷಕರನ್ನು ಸ್ವಯಂ ಕಲಿಕೆ, ಸಹಯೋಗದ ಕಲಿಕೆ ಮತ್ತು ಸಂಪನ್ಮೂಲ ಸೃಷ್ಟಿಗಳಿಗಾಗಿ ವಿಭಿನ್ನ ತಾಂತ್ರಿಕ ಸಾಧನಗಳನ್ನು ಪರಿಚಯಿಸುವುದು.
  6. ವಿದ್ಯಾರ್ಥಿ-ಶಿಕ್ಷಕರನ್ನು ತರಗತಿಗಳಲ್ಲಿ ಶೈಕ್ಷಣಿಕ ಉಪಕರಣಗಳನ್ನು ಬಳಸುವುದರೊಂದಿಗೆ ಪರಿಚಿತಗೊಳಿಸುವುದು

ಕಾರ್ಯಸೂಚಿ

Day Session Session Details Resources
1 ಪರಿಚಯ ಕಾರ್ಯಕ್ರಮದ ಅವಲೋಕನ ಮತ್ತು ನಿರೀಕ್ಷೆಗಳು

ಉಬುಂಟು ಅವಲೋಕನ

ವೈಯಕ್ತಿಕ ಡಿಜಿಟಲ್ ಲೈಬ್ರರಿ (ಪಿ.ಡಿ. ಎಲ್) ರಚಿಸಲಾಗುತ್ತಿದೆ

2 ಚಿತ್ರ ಸಂಪಾದನೆ

ಹತ್ತು ಬೆರಳು ಟೈಪಿಂಗ್

ಟಕ್ಸ ಪೈಂಟ್ ಬಳಸಿಕೊಂಡು ಚಿತ್ರಗಳನ್ನು ರಚಿಸುವುದು ಮತ್ತು ಸಂಪಾದಿಸುವುದು

ಹತ್ತು ಬೆರಳುಗಳ ಟೈಪಿಂಗ್ ಕಲಿಯಲು ಟಕ್ಸ್ ಟೈಪಿಂಗ್ ಬಳಸಿ

ಟಕ್ಸ್‌ಪೇಂಟ್ ಕಲಿಯಿರಿ

ಟಕ್ಸ್ ಟೈಪಿಂಗ್ ಕಲಿಯಿರಿ

3 ಸಂಪರ್ಕಿಸುವುದು ಮತ್ತು ಕಲಿಯುವುದು ಅಂತರಜಾಲದಿಂದ ಸಂಪನ್ಮೂಲಗಳನ್ನು ಪ್ರವೇಶಿಸುವುದು ಮತ್ತು ಡೌನ್‌ಲೋಡ್ ಮಾಡುವುದು

ಪ್ರಪಂಚದೊಂದಿಗೆ ಸಂಪರ್ಕಿಸಲಾಗುತ್ತಿದೆ - ವೇದಿಕೆಗಳು, ಪಿ ಎಲ್ ಗಳು

ಫೈರ್ ಫಾಕ್ಸ್ ಕಲಿಯಿರಿ
4 ಪ್ರಸ್ತುತಿಗಳನ್ನು ರಚಿಸುವುದು - 1 ಆಯ್ದ ವಿಷಯದ ಮೇಲೆ ಸ್ಲೈಡ್ ಪ್ರಸ್ತುತಿಯನ್ನು ರಚಿಸುವುದು

- ಮೂಲಭೂತ ಲಕ್ಷಣಗಳು

ಲಿಬ್ರೆ ಆಫೀಸ್ ಇಂಪ್ರೆಸ್ ಕಲಿಯಿರಿ
5 ಪ್ರಸ್ತುತಿಗಳನ್ನು ರಚಿಸುವುದು - 2 ಆಯ್ದ ವಿಷಯದ ಮೇಲೆ ಸ್ಲೈಡ್ ಪ್ರಸ್ತುತಿಯನ್ನು ರಚಿಸುವುದು

- ಮುಂದುವರಿದ ವೈಶಿಷ್ಟ್ಯಗಳು

ಲಿಬ್ರೆ ಆಫೀಸ್ ಇಂಪ್ರೆಸ್ ಕಲಿಯಿರಿ
6 ಪರಿಕಲ್ಪನಾ ನಕ್ಷೆ - 1 ಆಯ್ದ ವಿಷಯದ ಮೇಲೆ ಪರಿಕಲ್ಪನಾ ನಕ್ಷೆಯನ್ನು ರಚಿಸುವುದು

- ಮೂಲಭೂತ ಲಕ್ಷಣಗಳು

ಫ್ರೀಪ್ಲೇನ್ ಕಲಿಯಿರಿ
7 ಪರಿಕಲ್ಪನಾ ನಕ್ಷೆ - 2 ಆಯ್ದ ವಿಷಯದ ಮೇಲೆ ಪರಿಕಲ್ಪನಾ ನಕ್ಷೆಯನ್ನು ರಚಿಸುವುದು

- ಮುಂದುವರಿದ ವೈಶಿಷ್ಟ್ಯಗಳು

ಫ್ರೀಪ್ಲೇನ್ ಕಲಿಯಿರಿ
8 ಪಠ್ಯ ಸಂಪಾದನೆ ಆಯ್ದ ವಿಷಯದ ಮೇಲೆ ಪಠ್ಯ ದಾಖಲೆಯನ್ನು ರಚಿಸುವುದು ಲಿಬ್ರೆ ಆಫೀಸ್ ರೈಟರ್ ಕಲಿಯಿರಿ

ಸಂಪನ್ಮೂಲಗಳು

  1. ಅನ್ವಯಗಳನ್ನು ಅನ್ವೇಷಿಸಿ
  2. ಸ್ಪೋಕನ್ ಟ್ಯುಟೋರಿಯಲ್ - ವೀಡಿಯೊಗಳ ಮೂಲಕ ಎಫ್.ಓ.ಎಸ್.ಎಸ್ ಪರಿಕರಗಳನ್ನು ಕಲಿಯಿರಿ
  3. ಶಿಕ್ಷಣದಲ್ಲಿ ಐ.ಸಿ.ಟಿ ಮಧ್ಯಸ್ಥಿಕೆ - ಡಿ.ಇ ಎಲ್.ಎಡ್ ವಿದ್ಯಾರ್ಥಿಗಳ ಮೂಲ ಪುಸ್ತಕ ಕಾರ್ಯಕ್ರಮ (ಡಿ.ಎಸ್.ಇ. ಆರ್. ಟಿ)
  4. ಎನ್. ಇ. ಪಿ 2020
  5. ಡಿ.ಇ ಎಲ್.ಎಡ್ ಗಾಗಿ ಶಿಕ್ಷಣ ಪಠ್ಯ ಪುಸ್ತಕದಲ್ಲಿ ಐ.ಸಿ.ಟಿ ಮಧ್ಯಸ್ಥಿಕೆ. ಕರ್ನಾಟಕದ ಪಠ್ಯಕ್ರಮ