MDRS ಮಾಡ್ಯೂಲ್ ೭ - -ಪುರುಷ ಪ್ರಧಾನತೆ ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

  • ಪುರುಷ ಪ್ರಧಾನತೆಯನ್ನು ಹೇಗೆ ಮಾಧ್ಯಮಗಳು ನಮ್ಮ ಮೇಲೆ ಹೇರುತ್ತವೆ ಎಂದು ಅರ್ಥ ಮಾಡಿಕೊಳ್ಳುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು (10 ನಿಮಿಷ)

ಕಳೆದ ಸೆಶನ್‌ನಲ್ಲಿ ಚರ್ಚಿಸಿದ ಪುರುಷಪ್ರಧಾನತೆ ಬಗ್ಗೆ ಅವರನ್ನು ಕೇಳುವುದು. ನಾವು ನೋಡಿದ ಜಾಹಿರಾತುಗಳ ಬಗ್ಗೆ ಮಾತನಾಡುವುದು. ಕಂಪನಿಗಳು ಹೇಗೆ ತಮ್ಮ ಲಾಭಕ್ಕೋಸ್ಕರ ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದನ್ನು ನೆನಪಿಸುವುದು.

ಪುರುಷಪ್ರಧಾನತೆಯ ಅರ್ಥವನ್ನು ಮತ್ತೊಮ್ಮೆ ನೆನೆಸಿಕೊಂಡು ಮುಂದಿ ಸಾಗುವುದು.

ಪುರುಷ ಪ್ರಧಾನತೆ ಅಂದರೆ ಪುರುಷರಿಗೇ ಹೆಚ್ಚಿನ ಅಧಿಕಾರ, ಅವಕಾಶ, ಮನ್ನಣೆ ಕೊಡುವ ಸಾಮಾಜಿಕ ವ್ಯವಸ್ಥೆ.

ನೀವು ನೋಡಿದವು ಟಿ.ವಿ.ಯಲ್ಲಿ ಬರುವ ಜಾಹಿರಾತುಗಳಾದರೆ, ಇನ್ನು ಧಾರಾವಾಹಿಗಳು ಹಾಗು ಚಲನಚಿತ್ರಗಳಲ್ಲಿ ಹೇಗಿದೆ ಎಂದು ನೋಡೋಣ? ಎಂದು ಕೇಳಿ ನಂತರ ಕ್ಲಿಪ್‌ಗಳನ್ನು ತೋರಿಸುವುದು. ಪ್ರತಿ ಕ್ಲಿಪ್‌ಗಳಿಗೂ ಅಲ್ಲಿ ಏನಾಗುತ್ತಿದೆ ಗಮನಿಸಿ ಎಂದು ಹೇಳುವುದು.

  • Upendra slapping chandani
  • Habba film
  • Hero fighting for heroine
  • Jaanu film
  • Kalasipalya harassment scene
  • Karabu song
  • Lucky film scene
  • Om film
  • Poojisalende huvugala tande
  • Preetse anta praana thinnu
  • Rara rakkamma
  • Sesamma song
  • Shake it pushpavathi
  • Sooryavamshi film
  • Annange love aagide
  • Upavasa ee kannige
  • Villian kidnapping scene
  • Yajamana darshan film

ಸಿರಿಯಲ್ಸ್‌ ಉದಾಹರಣೆಗಳು :

  • Agnisakshi
  • Jothe jotheyali serial 20 ನಿಮಿಷಗಳು

ಇಲ್ಲಿ ನೀವು ಏನೇನು ನೋಡಿದ್ರಿ? ಎಂದು ಕೇಳುವುದು.

ಹೀರೋ ಹೇಗೆ ಹೀರೋಇನ್‌ ಅನ್ನು ಹೊಡೆಯುವುದು, ರೇಗಿಸುವುದು, ನನಗೆ ನೀನು ಇಷ್ಟವಿಲ್ಲ ಎಂದರೂ ಕೇಳದೆ ಹಿಂದೆ ಬೀಳುವುದು ಹೀಗೆ ಹೆಣ್ಣನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು.

ಗಂಡೆಂದರೆ ದೇವರು, ರಕ್ಷಕ ಎನ್ನುವ ಭಾವವನ್ನು ತೋರುವುದು

ನಟಿಯರನ್ನು ಕೇವಲ ಐಟಮ್‌ ಸಾಂಗ್‌ಗಳಿಗೆ ಸೀಮಿತಗೊಳಿಸುವುದು. (ರಕ್ಕಮ್ಮ, ಸೇಸಮ್ಮ, ಪುಷ್ಪವತಿ ಹಾಡುಗಳು)

ಹೀಗೆ ಪುರುಷ ಪ್ರಧಾನತೆ ಹೆಣ್ಣು ಗಂಡು ಅಂದ್ರೆ ಯಾರು? ಅವರ ಪಾತ್ರ ಯಾವುದಕ್ಕೆ ಸೀಮಿತ. ಹೇಗಿರಬೇಕು ಎನ್ನುವುದನ್ನು ನಮ್ಮ ಮೇಲೆ ಹೇರುತ್ತಾ ಹೋಗುತ್ತೆ.

ಇವಾಗ ಇವೆ ಟಿ.ವಿ ಮಾಧ್ಯಮಗಳ ಪ್ರಭಾವವನ್ನು ಅವರದೇ ಮಾತುಕತೆಗಳಲ್ಲಿ ನೋಡೋಣ ಬನ್ನಿ ಎಂದು ಹೇಳಿ ಸಂದರ್ಶನಗಳನ್ನು ತೋರಿಸುವುದು.  

ರಚಿತಾ ರಾಮ್ ಸಂದರ್ಶನ - 0:45 to 4:27

8:10 to 10:20

ಹೇಗಿತ್ತು ಈ ಸಂದರ್ಶನ ಎಂದು ಕಿಶೋರಿಯರನ್ನು ಕೇಳುವುದು. ಇದರಲ್ಲಿ ಯಾವ ರೀತಿಯ ಪ್ರಶ್ನೆಗಳಿದ್ದವು ಎನ್ನುವುದರ ಕಡೆಗೆ ಅವರನ್ನು ದೂಡುವುದು. ನಂತರ ಮುಂದಿನ ಸಂದರ್ಶನವನ್ನು ತೋರಿಸುವುದು.

ಯಶ್‌ ಸಂದರ್ಶನ - 0 to 6 mins

ಈ ಸಂದರ್ಶನ ಹೇಗಿತ್ತು?

ಇಲ್ಲಿ ಯಾವ ಥರದ ಪ್ರಶ್ನೆಗಳನ್ನ ಕೇಳಲಾಗುತ್ತಿದೆ ಎಂದು ಕಿಶೋರಿಯರಿಗೆ ಕೇಳುವುದು.

ಹೆಣ್ಣಿಗೆ ಆಕೆಯ ದೇಹದ ಬಗ್ಗೆ, ತೂಕದ ಬಗ್ಗೆ, ಗಂಡು ನಟರ ಜೊತೆಗೆ ಆಕೆ ಹೇಗೆ ನಟಿಸಿದ್ದಾಳೆ, ಆಕೆಯ ಅನುಭವ ಹೇಗಿತ್ತು, ಗಂಡು ನಟರ ಒಡನಾಟ ಹೇಗಿತ್ತು ಇತ್ಯಾದಿ ಪ್ರಶ್ನೆಗಳನ್ನ ಕೇಳಲಾಗುತ್ತಿದೆ. ಆದರೆ ಯಶ್‌ಗೆ ಆ ಚಿತ್ರ ಹಾಗು ಅದರ ಸುತ್ತಲಿನ ಸ್ವಾರಸ್ಯಕರ ಕಥೆಗಳನ್ನು ಕೇಳಲಾಗುತ್ತಿದೆ.

ಯಾಕಿರಬಹುದು ಇದು?

ಮಾಧ್ಯಮಗಳು ಹೇಗೆ ಪುರುಷಪ್ರಧಾನತೆಯನ್ನು ನಮ್ಮ ಮೇಲೆ ಹೇರುತ್ತಿವೆ ಎನ್ನುವುದನ್ನು ಗಮನಿಸಿ ಎಂದು ಹೇಳುವುದು. 20 ನಿಮಿಷಗಳು

ಇವುನ್ನೆಲ್ಲಾ ಮಾಧ್ಯಮಗಳು ಅಂತಾರೆ. ಇವು ಇದರಿಂದ ಹಣ ಮಾಡುವ ಯೋಜನೆಗಳನ್ನು ಹಾಕುತ್ತವೆ.

ಜಾಹಿರಾತುಗಳ ಮೂಲಕ ಪ್ರಭಾವ ಬೀರುವ ಮಾರುಕಟ್ಟೆಗಳು ಹಾಗು ಈ ಮಾಧ್ಯಮಗಳ ಬಗ್ಗೆ ನಾವು ಗಮನಿಸಬೇಕು. ಇನ್ಮೇಲೆ ನೀವು ಎಲ್ಲೇ ಈ ರೀತಿಯ ಜಾಹಿರಾತುಗಳು, ಹಾಡುಗಳು, ಸೀರಿಯಲ್‌ಗಳು ಹಾಗು ಸಿನೆಮಾಗಳನ್ನು ನೋಡುವಾಗ ಅಲ್ಲಿ ಬರುವ ಸಂದೇಶಗಳ ಬಗ್ಗೆ ಗಮನವಿಟ್ಟಿರಿ ಎಂದು ಹೇಳುವ ಮೂಲಕ ನಮ್ಮ ಮಾತುಕತೆಯನ್ನು ಮುಗಿಸುವುದು.

ಮುಂದಿನ ವಾರ ಮತ್ತೆ ಸಿಗೋಣ ಎಂದು ಹೇಳಿ ನಮ್ಮ ಮಾತನ್ನು ಮುಗಿಸುವುದು. 10 ನಿಮಿಷಗಳು

ಒಟ್ಟು ಸಮಯ

೬೦ ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 1

ಬೇಕಾಗಿರುವ ಸಂಪನ್ಮೂಲಗಳು

  • Projector
  • Speaker
  • Laptop

ಇನ್‌ಪುಟ್‌ಗಳು

Videos for showing in the session

ಔಟ್‌ಪುಟ್‌ಗಳು