MDRS ಮಾಡ್ಯೂಲ್ ೯ - ಸಮತೋಲನ ಆಹಾರ ಮತ್ತು ಅನೀಮಿಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ:

  • ಅನೀಮಿಯ ಅಂದರೇನು ಅದು ಹೇಗೆ ಬರುತ್ತದೆ ಹಾಗು ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ಅರ್ಥ ಮಾಡಿಸುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 05 ನಿಮಿಷ

ಇಲ್ಲಿಯವರೆಗೆ ಮಾತನಾಡಿದ ವಿಷಯಗಳ ಬಗ್ಗೆ ನೆನಪಿಸುವುದು. ಕಿಶೋರಿಯರು ಕೆಲವು ವಿಷಯಗಳನ್ನು ಹೇಳಬಹುದು. ಕೆಲವು ವಿಷಯಗಳ ಬಗ್ಗೆ ಹೇಳದೇ ಇರಬಹುದು.

ಸಮತೋಲನ ಆಹಾರದ ಬಗ್ಗೆ ತಯಾರಿಸಿದ ಪ್ರೆಸೆಂಟೇಶನ್‌ ತೋರಿಸುತ್ತ ಅದರ ಬಗ್ಗೆ ರಿಕ್ಯಾಪ್‌ ಮಾಡುವುದು.

ನಾವು ಮಾಡುವ ಊಟದಿಂದ ನಮ್ಮ ದೇಹ ನಮ್ಮಿಂದ ಬಯಸೋದು ೩ ಮುಖ್ಯ ಅಂಶಗಳಿಗೆ ಬೇಕಿರೋ ಬೆಂಬಲ. ಅವೇನಂದ್ರೆ,

೧. ನಮ್ಮ ದೇಹದ ಶಕ್ತಿಗಾಗಿ ಬೇಕಿರೋ ಅಂಶ

೨. ನಮ್ಮ ದೇಹದ ಬೆಳವಣಿಗೆಗಾಗಿ ಬೇಕಿರೋ ಅಂಶ ಮತ್ತೆ

೩. ನಮ್ಮ ದೇಹದ ಆರೋಗ್ಯಕ್ಕಾಗಿ ಬೇಕಿರೋ ಅಂಶ

ದೇಹದ ಶಕ್ತಿಗಾಗಿ ಬೇಕಿರೋ ಅಂಶ ಅಂದ್ರೆ ತನ್ನ ಎಲ್ಲಾ ಕ್ರಿಯೆಗಳನ್ನ ಮಾಡಲು ಮತ್ತು ನಾವು ಇಷ್ಟ ಪಡೋ ಎಲ್ಲಾ ಕೆಲಸಗಳನ್ನ ಮಾಡಲು ಬೇಕೇ ಬೇಕಿರುವ ಸಾಮರ್ಥ್ಯ

ನಮ್ಮ ದೇಹಕ್ಕೆ ಬೆಳವಣಿಗೆಯ ಅಗತ್ಯ ಸದಾ ಇದ್ದೇ ಇರುತ್ತದೆ. ಇದು ನಿಮ್ಮ ದೇಹಕ್ಕೆ ಸಿಗಬೇಕು ಅಂತಿದ್ರೆ ನೀವು ತೆಗೆದುಕೊಳ್ಳ ಬೇಕಿರುವ ಆಹಾರದಲ್ಲಿ  ಎಲ್ಲ ರೀತಿಯ ಕಾಳುಗಳು, ಬೇಳೆ ಕಾಳುಗಳು, ಹಾಲು, ಮೊಟ್ಟೆ ಮತ್ತು ಮಾಂಸ ಇರಬೇಕು.

ನಮ್ಮ ದೇಹದ ಆರೋಗ್ಯಕ್ಕಾಗಿ ಬೇಕಿರುವ ಅಂಶ, ಅಂದ್ರೆ, ನಮ್ಮ ದೇಹ ಶಕ್ತಿಯುತವಾಗಿ ಮತ್ತೆ ಸಮರ್ಪಕವಾಗಿ ಬೆಳೆಯಲು ಸದಾ ಪ್ರೋತ್ಸಾಹಿಸುವ ಪ್ರಕ್ರಿಯೆ

ಮುಖ್ಯವಾಗಿ ಈ ಮೂರನ್ನ ನೆನಪಿಟ್ಟುಕೊಂಡು ಇವು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಂಡರೆ ಸಾಕು

ಉದಾಹರಣೆ

ಉದಾಹರಣೆ ೧. ಶಕ್ತಿಗಾಗಿ ರೊಟ್ಟಿ, ಬೆಳವಣಿಗೆಗಾಗಿ ದಾಲ್‌ ಮತ್ತೆ ಆರೋಗ್ಯಕ್ಕಾಗಿ ಕಾಳಿನ ಪಲ್ಯ

ಉದಾಹರಣೆ ೨. ಶಕ್ತಿಗಾಗಿ ರಾಗಿ ಮುದ್ದೆ, ಬೆಳವಣಿಗೆಗಾಗಿ ಕಾಳಿನ ಪಲ್ಯ ಮತ್ತೆ ಆರೋಗ್ಯಕ್ಕಾಗಿ ಸೊಪ್ಪಿನ ಸಾರು

ಉದಾಹರಣೆ ೩. ಶಕ್ತಿಗಾಗಿ ಮತ್ತು ಬೆಳವಣಿಗೆಗಾಗಿ ಚಿಕನ್ ಬಿರಿಯಾನಿ/ಮಟನ್ ಬಿರಿಯಾನಿ, ಆರೋಗ್ಯಕ್ಕಾಗಿ ಬಾಳೆ ಹಣ್ಣು15 ನಿಮಿಷಗಳು

ಇದಾದ ನಂತರ ಅನೀಮಿಯದ ಬಗೆಗಿನ  DST ಯನ್ನು ತೋರಿಸುವುದು. 10 ನಿಮಿಷಗಳು

ಇದಾದ ನಂತರ ಈ ಚಟುವಟಿಕೆ ಮಾಡಲು ಹೇಳುವುದು

ಪ್ರತಿ ಬೆಂಚಿನಲ್ಲಿ ಕುಳಿತಿರುವ ಕಿಶೋರಿಯರಿಗೆ ಅನೀಮಿಯದಲ್ಲಿ ಏನೇನಾಗುತ್ತದೆ ಎಂದು ಮಾತನಾಡಿಕೊಳ್ಳಲು ಹೇಳುವುದು. ಅವರಿಗೆ ಗೊತ್ತಾಗಿಲ್ಲ ಅಂದರೆ ನಾವೇ ಹೇಳುವುದು.10 ನಿಮಿಷಗಳು

ಅನೀಮಿಯದಿಂದ ಹೊರಬರಲು ಸಮತೋಲನ ಆಹಾರ ನೀವು ಪ್ರತಿದಿನ ತಿನ್ನಲು ಸಾಧ್ಯವೇ ಎಂದು ಕೇಳಿ (ಎಲ್ಲ ಆದಾಯಗಳ ಮನೆಯಲ್ಲೂ ಆದಷ್ಟೂ ಸಮತೋಲಿತ ಆಹಾರ ತಿನ್ನುವ ಸಾಧ್ಯತೆ ಇದ್ದೇ ಇದೆ. ಇದನ್ನು ಕಿಶೋರಿಯರು ಮನಗಾಣಬೇಕು 10 ನಿಮಿಷಗಳು

ಒಟ್ಟೂ ಸಮಯ

೬0 ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: 3

ಬೇಕಾಗಿರುವ ಸಂಪನ್ಮೂಲಗಳು

  1. Projector
  2. Projector cable
  3. Speaker
  4. A4 sheets
  5. Sketch pens

ಇನ್‌ಪುಟ್‌ಗಳು

  1. Balanced diet DST
  2. Anaemia DST

ಔಟ್‌ಪುಟ್‌ಗಳು

ಕಿಶೋರಿಯರು  ಹೇಳಿದ ಅಂಶಗಳು