Module 02 Rapport building part 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ:

ನಮ್ಮ ಪರಿಚಯವನ್ನು ಮುಂದುವರೆಸುತ್ತ ಕಿಶೋರಿ ಅಡ್ಡ ಪೋಸ್ಟ್‌ಗಳ ಬಗ್ಗೆ ಕಿಶೋರಿಯರ ಅಭಿಪ್ರಾಯಗಳನ್ನು ತಿಳಿಯುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು.

ಕಟ್ಟುಪಾಡುಗಳನ್ನ introduce ಮಾಡಿ, ಅವುಗಳನ್ನ ಹೇಳಿಸಿ, register ಮಾಡಿಸುವುದು. ಮುಖ್ಯವಾಗಿ, ಗಲಾಟೆಯ ಬಗ್ಗೆ ನಮ್ಮ ನಿಲುವು. ನಾವು ಇಲ್ಲಿ ಇರೋದಿಲ್ಲ, ಕ್ಲಾಸ್ ಮುಗಿಸಿ ಹೊರಡುತ್ತೇವೆ ಎನ್ನುವುದನ್ನೂ ಸಹ ಹೇಳಬೇಕು. (ಫೋಟೋ ಬಗ್ಗೆ ಕೂಡ) 10 ನಿಮಿಷ

ಇವತ್ತಿನ ಸೆಶನ್ ನಲ್ಲಿ ನಿಮಗೆಲ್ಲ ತುಂಬಾ ಮುಖ್ಯವಾದ ಪಾತ್ರ ಇದೆ. ನೀವೇ ನಮ್ಮ ಸಂಪನ್ಮೂಲ ವ್ಯಕ್ತಿಗಳು ಮತ್ತೆ ನಿಮ್ಮ ಅಭಿಪ್ರಾಯ ನಮಗೆ ತುಂಬಾ ಬೇಕಾಗಿದೆ. ನೀವು ಭಾಗವಹಿಸೋದಿಕ್ಕೆ ರೆಡೀನ ಎಂದು ಕೇಳಿ, ಹೂಂ ಅಂತಾರೆ ಅಂದುಕೊಳ್ಳೋಣ.

ನಾವು ನಿಮಗಾಗಿ ಮತ್ತೆ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಅಂತಾನೇ ಇನ್ಸ್ಟಾಗ್ರಾಮ್ ನಲ್ಲಿ ಕಿಶೋರಿ ಅಡ್ಡ ಪ್ರಾರಂಭಿಸಿ ನಡೆಸ್ತಿದೀವಿ ಅಂತ ಹೇಳಿದ್ವಲ್ಲ, ನಿಮ್ಮಲ್ಲಿ ಎಷ್ಟು ಜನಕ್ಕೆ ಅದನ್ನ ಚೆಕ್ ಮಾಡೋಕೆ, ನೋಡೋಕೆ, ಫಾಲೋ ಮಾಡೋಕೆ ಆಯ್ತು ? ಎಂದು ಕೇಳಿ

ಉಳಿದವರಿಗೆ ಯಾಕೆ ಆಗ್ತಿಲ್ಲ ನೋಡೋದಿಕ್ಕೆ ಅಂತ ಹಂಚ್ಕೋಬಹುದ ಎಂದು ಕೇಳಿ.

ಫಾಲೋ ಮಾಡಲು ಶುರುಮಾಡಿದ ೮ ಜನಕ್ಕೆ, ನಿಮಗೆ ಹೇಗನ್ನುಸ್ತು ಎಂದು ಕೇಳಿ. ಆಮೇಲೆ, ಈಗ ನಾವು ನೀವು ಒಂದು ಚಟುವಟಿಕೆ ಮಾಡೋಣ್ವ ಅಂತ ಕೇಳೀ,

ನಾವು ಈಗ ಒಂದೊಂದೇ ಪೋಸ್ಟ್ ನೋಡೋಣ ಅದಾದ್ಮೇಲೆ ಅದರ ಬಗ್ಗೆ ಚರ್ಚೆ ಮಾಡೋಣ ಓಕೇನ ? ಎಂದು ಕೇಳಿ ಮೊದಲನೆ ಪೋಸ್ಟ್ ತೋರಿಸಿ.

ಗಮನಿಸಿ: ಪೋಸ್ಟ್ ಅನ್ನು ವಿವರಿಸಬೇಡಿ. ಅವರಿಗೆ ಓದಲು ಬಿಡಿ. ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನ್ನುವುದೂ ಸಹ ನಮ್ಮ ಕಲಿಕೆಯೇ. ಮೊದಲನೆಯದು ೯ ಸ್ಲೈಡ್ ಆಗಿರಲಿ -

ನೋಡುವುದಕ್ಕೆ ಮುನ್ನ ಇಬ್ಬಿಬ್ಬರ ಜೋಡೀಗಳನ್ನು ಮಾಡಿ ಅವರಿಗೆ A4 ಹಾಳೆಯನ್ನು ಕೊಡಿ,

ಆಮೇಲೆ ಈ ಕೆಳಗಿನ ಪ್ರಶ್ನೆಗಳನ್ನು ಪ್ರೊಜೆಕ್ಟ್ ಮಾಡಿ. ಜೋಡಿಯಲ್ಲಿ ಚರ್ಚಿಸಿ, ಬರೆಯಲು ತಿಳಿಸಿ. ನೀವು ಅವರಿಗೆ ಮನದಟ್ಟು ಮಾಡಬೇಕಿರುವುದು, ಇದರಲ್ಲಿ ಸರಿ, ತಪ್ಪು ಉತ್ತರಗಳಿಲ್ಲ ಮತ್ತು ಅವರು ನಮಗೆ ಸಂಪನ್ಮೂಲ ವ್ಯಕ್ತಿಗಳು ಎಂದು.

೧. ಈ ಪೋಸ್ಟ್ ಯಾವುದರ ಬಗ್ಗೆ ಇತ್ತು?

೨. ಈ ಪೋಸ್ಟಿಂದ ನಿಮಗೆ ಏನು ಗೊತ್ತಾಯ್ತು ?

೩. ನಿಮಗೆ ಇಷ್ಟ ಆಯ್ತ ? ಹೂಂ ಅಂದ್ರೆ ಏನು

೪. ಈ ಪೋಸ್ಟ್ ಬಗ್ಗೆ ನಿಮಗೆ ಇಷ್ಟ ಆಗದೇ ಇರೋದು ಏನು ?

೫. ನಿಮಗೆ ಈ ಭಾಷೆ ಅರ್ಥ ಆಯ್ತ ? ಓದೋದಕ್ಕೆ ಆಯ್ತ ?

೬. ಈ ಥರದ ಪೋಸ್ಟ್ ಕಿಶೋರಿ ಅಡ್ಡ ದಲ್ಲಿ ಇನ್ನು ಮುಂದೇನೂ ಹಾಕಬಹುದ ಅಥವ ಬೇಡ್ವ ? ಯಾಕೆ

ಮೂವಿ ಪ್ಯಾರೊಡಿ: Adyakshya movie

ಗಮನಿಸಿ: ಓದಬೇಡಿ. ಅವರಿಗೆ ಇದು ತಲುಪುತ್ತದೋ ಇಲ್ಲವೋ, ಅವರಿಗೆ ಇದು ತಮಾಷೆ ಎನ್ನಿಸುತ್ತದೋ ಇಲ್ಲವೋ ಎನ್ನುವುದನ್ನು ನೋಡಬೇಕಿದೆ.

(ನಮ್ಮ ಪ್ರಕಾರ ತುಂಬಾ ಫನ್ನಿ ಅನ್ಸೋದನ್ನ ಆಯ್ಕೆ ಮಾಡಿ)

೧. ಈ ಪೋಸ್ಟ್ ಚೆನ್ನಾಗಿತ್ತ ಇಲ್ವ?

೨. ಇದು ಯಾವುದರ ಬಗ್ಗೆ ಇತ್ತು ?

೩. ಈ ಡೈಲಾಗ್ ಯಾಕೆ ಹೇಳ್ತಿದಾರೆ ಅಂತ ಗೊತ್ತಾಯ್ತ?

೪. ನಿಮಗೆ ಏನನ್ನಿಸ್ತು ?

೫. ಈ ಥರದ ಪೋಸ್ಟ್ ಮಾಡಬಹುದ ಮುಂದೆ ಬೇಡ್ವ ? ಯಾಕೆ ?

ಇದನ್ನ ತೋರಿಸೋದಿಕ್ಕೆ ಮುಂಚೆ ಎಲ್ಲರಿಗೂ ಶೀಟ್ ಕೊಡಿ

ಡ್ರಾಪ್ ಔಟ್ ರೀಲ್:

ತೋರಿಸಿದ ಮೇಲೆ, ಎಲ್ಲರೂ ಬರೆಯಬೇಕು,

೧. ಈ ರೀಲ್ ನಿಮಗೆ ಹೇಗನ್ನಿಸ್ತು - ಇಷ್ಟ ಆಯ್ತು, ಆಗ್ಲಿಲ್ಲ, ಯಾಕೆ ?

೨. ನಿಮಗೆ ಈ ಥರದ ರೀಲ್ ನೀವೂನೂ ಮಾಡಬಹುದು ಅನ್ಸುತ್ತ ?

೩. ಯಾವ ವಿಷಯಗಳ ಬಗ್ಗೆ ನೀವು ರೀಲ್ ಮಾಡಬಹುದು ಅಥವ

೪. ನಾವು ಯಾವ ವಿಷಯದ ಬಗ್ಗೆ ರೀಲ್ ಮಾಡಿದ್ರೆ ಚೆನ್ನಾಗಿರುತ್ತೆ ಅನ್ಸುತ್ತೆ ನಿಮ್ಗೆ ?


ಎಲ್ಲರ ಶೀಟ್ ಗಳನ್ನೂ ಸಂಗ್ರಹಿಸಿಕೊಳ್ಳಿ. ಫಾಲೋ ಮಾಡದೆ ಇರುವ ಕಿಶೋರಿಯರಿಗೆ ಫಾಲೋ ಮಾಡಲು, ಲೈಕ್, ಕಾಮೆಂಟ್ ಮಾಡಲು ತಿಳಿಸಿ. ನಂತರ ಮುಂದಿನ ವಾರದಲ್ಲಿ ಭೇಟಿಯಾಗೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. ೩೦ ನಿಮಿಷ

ಒಟ್ಟೂ ಸಮಯ

೪೦ ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: ೪

ಬೇಕಾಗಿರುವ ಸಂಪನ್ಮೂಲಗಳು

  1. Kishori Adda posts/reels -
  2. ಕ್ಯಾಮೆರ
  3. Tripod
  4. ಸ್ಕೆಚ್‌ ಪೆನ್‌ಗಳು - ೪೫
  5. A4  ಶೀಟ್‌ಗಳು  - 100
  6. ಪ್ರೊಜೆಕ್ಟರ್‌
  7. Extension cord
  8. HDMI cable

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

Kishori’s writing about Kishori Adda posts