ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಕಥೆಗಳನ್ನು ಹೇಳಬಹುದು
Jump to navigation
Jump to search
ದತ್ತಾಂಶ ಕಥೆಗಳನ್ನು ಹೇಳಬಹುದು
ಈ ಚಟುವಟಿಕೆಯಲ್ಲಿ, ನೀವು ದತ್ತಾಂಶದ ವಿಭಿನ್ನ ಸ್ವರೂಪಗಳನ್ನು ನೋಡಲು ಮತ್ತು ದತ್ತಾಂಶವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತೀರಿ.
ದತ್ತಾಂಶ ಕಥೆಗಳನ್ನು ಹೇಳಬಹುದು
ಉದ್ದೇಶಗಳು
- ದತ್ತಾಂಶವು ಬೇರೆ ಬೇರೆ ಶೈಲಿಯಲ್ಲಿ ಇರುತ್ತದೆ ಎನ್ನುವುದನ್ನು ಅರ್ಥೈಸುವುದು.
- ವಿವಿಧ ದತ್ತಾಂಶಗಳನ್ನು ಅರ್ಥಪೂರ್ಣವಾಗಿ ಓದುವುದು
- ದತ್ತಾಂಶವನ್ನು ವಿಶ್ಲೇಷಿಸುವುದು ಹಾಗು ವ್ಯಕ್ತಪಡಿಸುವುದು.
ಮುಂಚೆಯೇ ಇರಬೇಕಾದ ಕೌಶಲಗಳು
- ಕಡತಕೋಶವನ್ನು ಸೃಷ್ಟಿಸುವುದು ಹಾಗು ಕಡತಗಳನ್ನು ಸೇರಿಸುವುದು
- ಸರಿಯಾದ ಅನ್ವಯಕದಲ್ಲಿ ನೀಡಿರುವ ಕಡತವನ್ನು ತೆರೆಯುವುದು
- ಕೀಲಿಮಣೆಯನ್ನು ಬಳಸುವ ಅಭ್ಯಾಸವಿರುವುದು.
ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ
- ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್
- ಉಬುಂಟು ಹೊಂದಿರುವ ಕಂಪ್ಯೂಟರ್
- ಅಂತರ್ಜಾಲ ವ್ಯವಸ್ತೆ.
- ನಕ್ಷೆ ಹಾಗು ಚಿತ್ರಗಳಿರುವ ದತ್ತಾಂಶ
- ಉಬುಂಟು ಕೈಪಿಡಿ
- ಟಕ್ಸ್ ಟೈಪಿಂಗ್ ಕೈಪಿಡಿ
- ಲಿಬ್ರೆ ಆಫೀಸ್ ಕೈಪಿಡಿ
- ಫ್ರೀಪ್ಲೇನ್ ಕೈಪಿಡಿ
ನೀವು ಯಾವ ಕೌಶಲ್ಯಗಳನ್ನು ಕಲಿಯುವಿರಿ
- ಕಡತಗಳನ್ನು ಸೃಷ್ಟಿಸುವುದು ಹಾಗು ಬಳಸುವುದು
- ಹಲವು ಕಡತಗಳನ್ನು ಹಲವು ಅನ್ವಯಕಗಳೊಂದಿಗೆ ತೆರೆಯುವುದು
- ಪಠ್ಯ ನಮೂದು (ಸ್ಥಳೀಯ ಭಾಷೆಗಳು)
ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ
ಶಿಕ್ಷಕರ ನೇತೃತ್ವದ ಚಟುವಟಿಕೆ
ವಿದ್ಯಾರ್ಥಿ ಚಟುವಟಿಕೆಗಳು
- ಪ್ರತಿಯೊಂದು ಕಂಪ್ಯೂಟರ್ಗಳಲ್ಲಿ, ಕಡತಕೋಶಗಳನ್ನು ವಿವಿಧ ದತ್ತಾಂಶ ಗುಂಪುಗಳೊಂದಿಗೆ ನೀವು ಕಾಣಬಹುದು.
- ಪ್ರತಿ ಗುಂಪಿನ ವಿದ್ಯಾರ್ಥಿಗಳೂ ಒಂದು ದತ್ತಾಂಶದ ಗುಂಪನ್ನು ಕೆಲಸ ಮಾಡಲು ಪಡೆಯುತ್ತವೆ - ಇದು ನಕ್ಷೆಗಳು, ಉಪಗ್ರಹ ಚಿತ್ರಗಳು, ಚಿತ್ರಸಂಕೇತಗಳು ಮತ್ತು ಬಾರ್ ಗ್ರಾಫ್ಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುರುತಿಸಲಾದ ಗುಂಪಿಗೆ ನಿಮ್ಮ ಶಿಕ್ಷಕರು ಒಂದು ದತ್ತಾಂಶದ ಗುಂಪನ್ನು ನೀಡುತ್ತಾರೆ.
- ದತ್ತಾಂಶದೊಂದಿಗೆ ನೀವು ಏನನ್ನು ಅರ್ಥಮಾಡಿಕೊಂಡಿದ್ದೀರಿ ಎಂಬ ಪರಿಕಲ್ಪನೆಯ ನಕ್ಷೆಯನ್ನು ರಚಿಸಿ
- ಲಿಬ್ರೆ ಆಫಿಸ್ ರೈಟರ್ ಅನ್ನು ಬಳಸಿಕೊಂಡು ನಿಮ್ಮ ಶೋಧನೆಗಳನ್ನು ಪಠ್ಯ ದಸ್ತಾವೇಜಲ್ಲಿ ಸೇರಿಸಬಹುದು. ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಠ್ಯವನ್ನು ನಮೂದಿಸಬಹುದು
ಮಳೆ
ಭಾರತದ ಅರಣ್ಯಗಳು
ಕರ್ನಾಟಕದ ನಕ್ಷೆ
ಕಾವೇರಿಯ ಕಥೆ
ಗುಣಾತ್ಮಕ ಚಿತ್ರ ನಕ್ಷೆಗಳು
ಪರಿಮಾಣಾತ್ಮಕ ಚಿತ್ರ ನಕ್ಷೆಗಳು
ಪೋರ್ಟ್ಪೋಲಿಯೋ
- ನಿಮ್ಮ ಪರಿಶೋಧನೆಗಳನ್ನು ಹಂಚಿಕೊಳ್ಳಲು ಒಂದು ಪರಿಕಲ್ಪನೆಯನ್ನು ನಕ್ಷೆ ಮಾಡಿ:
- ಇದರ ಬಗ್ಗೆ ದತ್ತಾಂಶ ಏನು?
- ದತ್ತಾಂಶವನ್ನು ಹೇಗೆ ನಿರೂಪಿಸಲಾಗಿದೆ?
- ಪ್ರತಿ ಪ್ರಾತಿನಿಧ್ಯದ ಬಗ್ಗೆ ವಿಶೇಷ ಏನು?
- ದತ್ತಾಂಶದಿಂದ ನೀವು ಏನು ತೀರ್ಮಾನಿಸಿದ್ದೀರಿ?
- ಇದರ ಬಗ್ಗೆ ನೀವು ಮೊದಲು ಅಧ್ಯಯನ ಮಾಡಿದ್ದೀರಾ?
- ನೀವು ಇನ್ನೂ ಏನನ್ನು ಹೆಚ್ಚು ತಿಳಿಯಲು ಬಯಸುತ್ತೀರಿ?
- 2. ರೇಖಾಚಿತ್ರಗಳಿಗೆ, ನೀವು ಅಧ್ಯಯನ ಮಾಡಿದ ದತ್ತಾಂಶವನ್ನು ನಿಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳಲು ಪರಿಕಲ್ಪನೆಯನ್ನು ನಕ್ಷೆ ಮಾಡಿ.
- 3. ಪರಿಕಲ್ಪನೆ ನಕ್ಷೆ ಕಾಗದದ ಮೇಲೆ ಅಭಿವೃದ್ಧಿಪಡಿಸಿದ ನಂತರ, ನಿಮ್ಮ ಶಿಕ್ಷಕರ ಸಹಾಯದಿಂದ, ಅದನ್ನು ಡಿಜಿಕರಿಸಿ ಮತ್ತು ನಿಮ್ಮ ಕಡತಕೋಶದಲ್ಲಿ ಉಳಿಸಿ.