ಅರ್ಧವೃತ್ತ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವೃತ್ತವನ್ನು ಎರಡು ಭಾಗಗಳಾಗಿ ವಿಭಜಿಸಿ ವ್ಯಾಸವನ್ನು ಎಳೆಯುವ ಮೂಲಕ ಅರ್ಧವೃತ್ತಗಳನ್ನು ರೂಪಿಸುತ್ತದೆ.

ಕಲಿಕೆಯ ಉದ್ದೇಶಗಳು :

  • ಒಂದು ವ್ಯಾಸವು ವೃತ್ತವನ್ನು ಎರಡು ಸಮಾನ ಭಾಗಗಳಾಗಿ ವಿಂಗಡಿಸುತ್ತದೆ ಮತ್ತು ಅಂತಹ ಪ್ರತಿಯೊಂದು ಅರ್ಧವು ಅರ್ಧವೃತ್ತ ಅಥವಾ ಅರ್ಧಗೋಳವಾಗಿರುತ್ತದೆ.
  • ಪರಿಧಿಯ ಯಾವುದೇ ಎರಡು ಬಿಂದುಗಳನ್ನು ವೃತ್ತದ ಕೇಂದ್ರದ ಮೂಲಕ ಸೇರುಸುವುದರಿಂದ ಅರ್ಧವೃತ್ತವನ್ನು ರೂಪಿಸುವುದು, ಅಂದರೆ. ವ್ಯಾಸವನ್ನು ಎಳೆಯುವ ಮೂಲಕ.

ಅಂದಾಜು ಸಮಯ:

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್ ಅಲ್ಲದ: ಬಿಳಿ ಕಾಗದ, ಕೈವಾರ ಮತ್ತು ಬಣ್ಣದ ಪೆನ್ಸಿಲ್‌ಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

  • ವೃತ್ತ ಮತ್ತು ವ್ಯಾಸವನ್ನು ಪರಿಚಯಿಸಿರಬೇಕು.
  • ಕೊಟ್ಟಿರುವ ತ್ರಿಜ್ಯದ ವೃತ್ತಗಳನ್ನು ಕತ್ತರಿಸಿ ತರಲು ಹಿಂದಿನ ದಿನ ಮಕ್ಕಳನ್ನು ಕೇಳಿ.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ವಿಭಿನ್ನ ಗಾತ್ರದ ಕತ್ತರಿಸಿದ ವೃತ್ತಗಳನ್ನು ತನ್ನಿ.
  • ಅವುಗಳನ್ನು ನಿಖರವಾದ ಭಾಗಗಳಾಗಿ ಮಡಿಸಿ.
  • ಅರ್ಧವೃತ್ತಗಳನ್ನು ಗುರುತಿಸಿ ಮತ್ತು ಪ್ರತಿ ಅರ್ಧವನ್ನು ವಿಭಿನ್ನ ಬಣ್ಣದಿಂದ ಬಣ್ಣ ಮಾಡಿ.
  • ವೃತ್ತದ ಕೇಂದ್ರ, ಪರಿಧಿ, ವ್ಯಾಸ ಮತ್ತು ಅರ್ಧವೃತ್ತವನ್ನು ಗುರುತಿಸಿ.
  • ವೃತ್ತವನ್ನು ನಿಖರವಾಗಿ ಅರ್ಧಕ್ಕೆ ಮಡಿಸಿ.
  • ಮಡಿಸಿದ ರೇಖೆಯಲ್ಲಿ ವ್ಯಾಸವನ್ನು ಎಳೆಯಿರಿ ಮತ್ತು ಪ್ರತಿ ಅರ್ಧವನ್ನು ವಿಭಿನ್ನ ಬಣ್ಣದಿಂದ ಬಣ್ಣ ಮಾಡಿ.

ಮೌಲ್ಯ ನಿರ್ಣಯ ಪ್ರಶ್ನೆಗಳು

  • ವೃತ್ತಗಳನ್ನು ಎಳೆಯಲು ಮತ್ತು ಕತ್ತರಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಯಿತೇ?
  • ಮಡಿಸಿದ ರೇಖೆ (ವ್ಯಾಸ) ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತಿದೆಯೇ?
  • ಕೊಟ್ಟಿರುವ ವೃತ್ತಕ್ಕೆ ನೀವು ಎಷ್ಟು ವಿಭಿನ್ನ ರೀತಿಯಲ್ಲಿ ಅರ್ಧವೃತ್ತಗಳನ್ನು ಎಳೆಯಬಹುದು?