ವೃತ್ತದ ಜ್ಯಾ
Jump to navigation
Jump to search
ವೃತ್ತದ ಜ್ಯಾಗಳು ವಿಭಿನ್ನ ಅಳತೆಗಳಲ್ಲಿರುತ್ತವೆ. ಜ್ಯಾ ದ ಉದ್ದವು ಕೇಂದ್ರಕ್ಕೆ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತದೆ ಮತ್ತು ಅದು ಕೇಂದ್ರದಿಂದ ದೂರ ಹೋಗುವಾಗ ಕಡಿಮೆಯಾಗುತ್ತದೆ.
ಕಲಿಕೆಯ ಉದ್ದೇಶಗಳು :
- ಜ್ಯಾವು ವೃತ್ತದ ಯಾವುದೇ ಎರಡು ವಿಭಿನ್ನ ಬಿಂದುಗಳನ್ನು ಸೇರುವ ರೇಖಾಖಂಡವಾಗಿದೆ
- ಯಾವುದೇ ವೃತ್ತದಲ್ಲಿನ ಉದ್ದವಾದ ಜ್ಯಾವು ಅದರ ವ್ಯಾಸವಾಗಿರುತ್ತದೆ.
- ವೃತ್ತದಲ್ಲಿ ಎಷ್ಟು ಜ್ಯಾಗಳನ್ನು ಬೇಕಾದರೂ ಎಳೆಯಬಹುದು.
ಅಂದಾಜು ಸಮಯ:
20 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಬಿಳಿ ಕಾಗದದಿಂದ ಕತ್ತರಿಸಿದ ವೃತ್ತಗಳು, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವಿದ್ಯಾರ್ಥಿಗಳಿಗೆ ವೃತ್ತ, ವ್ಯಾಸ, ಪರಿಧಿ ಮತ್ತು ರೇಖಾಖಂಡದ ಪೂರ್ವ ಜ್ಞಾನವಿರಬೇಕು.
ಕತ್ತರಿಸಿದ ವೃತ್ತಗಳನ್ನು ಸಿದ್ಧಗೊಳಿಸಲು ಮಕ್ಕಳಿಗೆ ಸೂಚಿಸಿ.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವಿವಿಧ ಬಿಂದುಗಳಲ್ಲಿ ವೃತ್ತವನ್ನು ಮಡಿಚಿ ಮತ್ತು ಚಿಕ್ಕದಾದ ಮತ್ತು ದೊಡ್ಡ ಜ್ಯಾಗಳನ್ನು ಗುರುತಿಸಲು ಪ್ರಯತ್ನಿಸಿ.
- ಜ್ಯಾ ಮತ್ತು ವ್ಯಾಸದ ನಡುವಿನ ವ್ಯತ್ಯಾಸವೇನು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಜ್ಯಾವನ್ನು ನಿಖರವಾಗಿ ಮಡಿಚಲು ಮತ್ತು ಗುರುತಿಸಲು ಮಕ್ಕಳಿಗೆ ಸಾಧ್ಯವಿದೆಯೇ ಎಂದು ಗಮನಿಸಿ.
- ವೃತ್ತದ ಕೇಂದ್ರದಲ್ಲಿ ಹಾದುಹೋಗುವ ಜ್ಯಾವನ್ನು ಹೆಸರಿಸಿ.
- ಜ್ಯಾವು ಕೇಂದ್ರದಿಂದ ದೂರ ಹೋಗುವಾಗ ಏನಾಗುತ್ತದೆ?