ಮಾಡ್ಯೂಲ್ ೧ ಪರಿಚಯ
ಉದ್ದೇಶ:
- ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಒಂದು ವರ್ಷವಿಡೀ ಪ್ರತಿವಾರ ನಾವು ಜೊತೆಯಾಗಿ ಕಲಿಯುವ /ಕಲಿಸುವ ಅವಕಾಶದ ಬಗ್ಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.
ಪ್ರಕ್ರಿಯೆ
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)
ಮೊದಲಿಗೆ ಫೆಸಿಲಿಟೇಟರ್ ತಮ್ಮ ಹೆಸರು ಇಷ್ಟವಾದ ತಿಂಡಿ ಹಾಗು ಫೆವರೆಟ್ ಹೀರೋ/ ಹೀರೋಯಿನ್ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುವುದು. ಪ್ರತಿ ಕಿಶೋರಿಗೂ ಇದೇ ರೀತಿ ಪರಿಚಯ ಮಾಡಿಕೊಳ್ಳಲು ಹೇಳುವುದು .
(೧೦ ನಿಮಿಷ)
ಈ ಸಮಯದಲ್ಲಿ ಶ್ರೇಯಸ್ ಕ್ಯಾಮೆರ ಸೆಟಪ್ ಮಾಡಿಕೊಳ್ಳುವುದು.
ಪ್ರತಿಯೊಬ್ಬರಿಗೂ ಬಣ್ಣದ ಚೀಟಿಯನ್ನು ಎತ್ತಿಸಿ, 4 ಗುಂಪುಗಳನ್ನು ಮಾಡುವುದು. ಪ್ರತಿಯೊಬ್ಬರಿಗೂ ಅವರ ಗುಂಪಿನಲ್ಲಿ ಕುಳಿತುಕೊಳ್ಳಲು ಹೇಳುವುದು.
ಪ್ರತಿ ಗುಂಪನ್ನು ಒಂದೊಂದಾಗಿ ಫೋಟೋ ತೆಗೆಯಲು ಅನುಷಾ ಕರೆದುಕೊಂಡು ಹೋಗುವುದು. ಪ್ರತಿ ಗುಂಪಿಗೂ ಬೇರೆ ಬೇರೆ ರೀತಿ ಪೋಸ್ ಕೊಡಲು ಹೇಳಿ ಮೂರು ಫೋಟೋಗಳನ್ನು ತೆಗೆಯುವುದು. 20 ನಿಮಿಷ
ತೆಗೆದ ಫೋಟೋಗಳನ್ನು ಜೋಡಿಸಿ DST ಮಾಡಿ ಕಿಶೋರಿಯರಿಗೆ ಅಲ್ಲೇ ತೋರಿಸುವುದು.
ಈ ಸಮಯದಲ್ಲಿ ತರಗತಿಯಲ್ಲಿ ಕಾರ್ತಿಕ್ ಮತ್ತು ಚಾಂದನಿ ಪ್ರಿತಿ ಗುಂಪಿಗೂ ಚಾರ್ಟ್ ಪೇಪರ್ ಅನ್ನು ಕೊಟ್ಟು picture story ಮಾಡಿಸುವುದು.
DST ಯನ್ನು ತೋರಿಸಿಯಾದ ನಂತರ ಕಿಶೋರಿಯರಿಗೆ H2HD ಯ ಪರಿಚಯವನ್ನು ಈ ರೀತಿ ಮಾಡಿಸುವುದು.
ನಾವು IT for Change ಅನ್ನೋ ಸಂಸ್ಥೆಯಿಂದ ಬಂದಿದೀವಿ. IT ಅಂದರೆ information technology ಅಂದರೆ ಮಾಹಿತಿ ಸಂವಹನ ತಂತ್ರಜ್ಷಾನ. ಇದನ್ನ ಬಳಸಿಕೊಂಡು ನಾವು ಬೇರೆ ಬೇರೆ ಶಾಲೆಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳ ಜೊತೆ ಕೆಲಸ ಮಾಡ್ತೀವಿ. ನಮ್ಮ ಬಗ್ಗೆ ಹೋಗ್ತಾ ಹೋಗ್ತಾ ಇನ್ನೂ ಜಾಸ್ತಿ ಗೊತ್ತಾಗ್ತಾ ಹೋಗುತ್ತೆ. ನಿಮ್ಮ ಶಾಲೆಗೆ ನಾವು ಪ್ರತೀ ವಾರ ಬಂದು ನಿಮ್ಮ ಜೊತೆ ಈಗ ಮಾಡಿದ್ವಲ್ಲ, ಆ ರೀತಿಯ ಚಟುಬಟಿಕೆಗಳನ್ನು ಮಾಡಬಹುದ?
ಸರಿ ಹಾಗಿದ್ರೆ, ಮುಂದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು. 10 ನಿಮಿಷ
ಒಟ್ಟೂ ಸಮಯ
೪೦ ನಿಮಿಷಗಳು
ಒಟ್ಟೂ ಫೆಸಿಲಿಟೇಟರ್ಗಳು: ೪
ಬೇಕಾಗಿರುವ ಸಂಪನ್ಮೂಲಗಳು
- ಕ್ಯಾಮೆರ
- Tripod
- ಚಾರ್ಟ್ ಶೀಟ್ಗಳು - 5
- Picture story pictures - 5 sets
- ಸ್ಕೆಚ್ ಪೆನ್ಗಳು
- ಪ್ರೊಜೆಕ್ಟರ್
- ಕಲರ್ ಚೀಟಿಗಳು
ಇನ್ಪುಟ್ಗಳು
DST