ನಸುನಗೆ ಬೀರಿ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಗೆಳೆಯರ ಜೊತೆ ಓಟದಲ್ಲಿ ಎಲ್ಲರಿಗಿಂತ ಮುಂದೆ ಓಡುತ್ತಿದ್ದ ಜಿಂಕೆಗೆ ಇದ್ದಕ್ಕಿದ್ದಂತೆ ಏನಾಯ್ತು ನೋಡಿ?
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ, ಸರಳ ವಾಕ್ಯ ರಚನೆ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪರಿಚಯವನ್ನು ಮಾಡಿಕೊಡಬಹುದು.
ಕಥಾ ವಸ್ತು :ಸ್ನೇಹ,ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Nasunage%20Beeri.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
ಪ್ರಾಣಿಗಳ ಕೂಗನ್ನು ಕೇಳಿಸುವುದು. ಅದು ಯಾವ ಪ್ರಾಣಿಯ ಕೂಗು ಎಂಬುದನ್ನು ಮಕ್ಕಳು ಗುರುತಿಸುವುದು.
ಪ್ರಾಣಿಗಳ ಹೆಸರುಗಳ ಸಂಗ್ರಹಣೆ
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
ತಿಳಿದಿರುವ ಪ್ರಾಣಿಗಳ ಹೆಸರುಗಳನ್ನು ಬರೆಯುವುದು.
ಕಾಡು ಪ್ರಾಣಿಗಳು ಹಾಗು ಸಾಕು ಪ್ರಾಣಿಗಳನ್ನು ವಿಂಗಡಿಸುವುದು.
ಆಲಿಸುವ ಸಂಧರ್ಭದ ಚಟುವಟಿಕೆಗಳು
ಜಿಂಕೆಯ ಜೊತೆಗಿದ್ದ ಪ್ರಾಣಿಗಳಾವುವು?
ಮಕ್ಕಳೇ ಯಾವ ಆಟಗಳು ನಿಮ್ಮನ್ನು ಖುಷಿ ಪಡಿಸುತ್ತವೆ?
ಆಟವಾಡುವಾಗ ಯಾರಾದರೂ ಬಿದ್ದರೇ ನೀವು ಅವರಿಗೆ ಹೇಗೆ ಸಹಾಯ ಮಾಡುತ್ತೀರಿ?
ಜಿಂಕೆ ಓಡುವಾಗ ಯಾವ ಯಾವ ಅಡೆತಡೆಗಳು ಉಂಟಾದವು?
ಮಕ್ಕಳೇ ನೀವು ಓಡುವಾಗ ಹೀಗೆಯೇ ಅಡೆತಡೆಗಳು ಉಂಟಾದರೆ ಏನು ಮಾಡುವಿರೀ?
ಆಲಿಸಿದ ನಂತರದ ಚಟುವಟಿಕೆಗಳು
ಸ್ಪರ್ಧೆಯಲ್ಲಿ ಯಾರು ಗೆದ್ದರು?
ಈ ಕಥೆಯಿಂದ ನಾವು ಕಲಿಯಬಹುದಾದ ಗುಣಗಳು ಯಾವುವು?
ಕಥೆಯನ್ನು ನಿಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿ.
ಕಥೆಯ ಚಿತ್ರಪಟಗಳ ಕ್ರಮಬದ್ಧ ಜೋಡನೆ.
ನಿಮಗೆ ತಿಳಿದಿರುವ ಆಟಗಳನ್ನು ಪಟ್ಟಿ ಮಾಡಿ ಅದರ ನಿಯಮಗಳನ್ನು ತಿಳಿಸಿ.
ಕೆಲವು ಪ್ರಾಣಿ ಹಾಗೂ ಪಕ್ಷಿಗಳನ್ನು ಚಿನ್ಹೆಗಳಾಗಿ ಬಳಸಿ ಆ ಚಿನ್ಹೆ ಯಾವುದರದೆಂದು ಪತ್ತೆ ಹಚ್ಚುವುದು.
ಕಥೆಯನ್ನು ನಾಟಕ ರೂಪದಲ್ಲಿ ಬರೆಯಿರಿ.
ಆಟದಿಂದ ಆಗುವ ಪ್ರಯೋಜನಗಳೇನು?
ಪ್ರಾಣಿ ಪಕ್ಷಿಗಳಿಂದ ಆಗುವ ಪ್ರಯೋಜನಗಳೇನು?
ಕಾಡಿನ ಪ್ರಯೋಜನಗಳೇನು?