ಮೀನು ಕೇಳಿದ ವಾರ್ತೆ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಇದು ಅಂತಿಂಥ ಮೀನಲ್ಲ ಮನೆಯಲ್ಲಿ ರೇಡಿಯೋ ಇರುವ ಘನತೆವೆತ್ತ ಮೀನು. ವಾರ್ತಾ ಪ್ರಸಾರ ಕೇಳಿ ತನ್ನ ಕುಟುಂಬ ಮಾತ್ರವಲ್ಲದೇ, ಸಮಸ್ತ ಜಲಚರಗಳನ್ನೂ ರಕ್ಷಿಸಿದ ಅಪೂರ್ವ ಕಥೆಯೇ ಈ ‘ಮೀನು ಕೇಳಿದ ವಾರ್ತೆ'

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಸುದ್ದಿ ಮಾಧ್ಯಮದ ಪ್ರಾಮುಖ್ಯತೆಯ ತಿಳುವಳಿಕೆ ನೀಡಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು.

ಕಥಾ ವಸ್ತು : ಕುಟುಂಬ, ಪ್ರಾಣಿ ಮತ್ತು ಪಕ್ಷಿಗಳು, ಬುದ್ಧಿವಂತಿಕೆ ಮತ್ತು ಚತುರತೆ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Meenu%20Kelida%20Varthe.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಿಗೆ ದಿನಪತ್ರಿಕೆ ನೀಡಿ ಅದರಲ್ಲಿ ಬರುವ ವಿವಿಧ ಭಾಗಗಳನ್ನು ಪಟ್ಟಿ ಮಾಡಲು ತಿಳಿಸಿವುದು.
  2. ಮಕ್ಕಳೊಡನೆ ದಿನಪತ್ರಿಕೆ ಹಾಗೂ ವಾರ್ತೆಯ ಮೂಲಕ ಪ್ರಸಾರವಾಗುವ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಬಹುದು.
  3. ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತಾಗಿ ಚರ್ಚಿಸಬಹದು.
  4. ನಿಮ್ಮ ಮನೆಯ ಸದಸ್ಯರೊಬ್ಬರು ವಾರ್ತೆ ಕೇಳುವ ಸಮಯದಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಪ್ರಸಾರವಾಗುತ್ತಿದ್ದರೆ ನೀವು ಏನು ಮಾಡುತ್ತಿದ್ದಿರಿ" ಎಂದು ಕೇಳುವ ಮೂಲಕ ಅವರ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.
  5. ಈ ಕಥೆಯನ್ನು ಕೇಳಿದ ನಂತರ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಅಂಶಗಳಾವುವು ಎಂದು ಚರ್ಚಿಸುವುದು.