ಬದಲಾವಣೆಗಳು

Jump to navigation Jump to search
ಹೊಸ ಪುಟ: <center>Imಚಿge:</center> <center>'''ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ತುಮಕೂರು.'''</center> ...
<center>[[Imಚಿge:]]</center>


<center>'''ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ತುಮಕೂರು.'''</center>


<center>'''2015-16ನೇ ಸಾಲಿನಲ್ಲಿ ಸರ್ವ ಶಿಕ್ಷಾ ಅಭಿಯಾನ ಕಾರ್ಯಕ್ರಮಗಳ ಮೌಲ್ಯಮಾಪನ'''</center>


<center>“ತುಮಕೂರು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸಮುದಾಯದತ್ತ ಶಾಲಾ</center>

<center>ಕಾರ್ಯಕ್ರಮದ ಮೌಲ್ಯಮಾಪನ”</center>


ಸಹಕಾರ ಮತ್ತು ಮಾರ್ಗದರ್ಶನ : ಪ್ರಾಂಶುಪಾಲರು, ಡಯಟ್ ತುಮಕೂರು.


'''ಮೌಲ್ಯಮಾಪನಕಾರರು''' ''': ಶ್ರೀಮತಿ ಬಿ.ಮಂಗಳಗೌರಮ್ಮ'''.

ಹಿರಿಯ ಉಪನ್ಯಾಸಕರು

ಡಯಟ್, ತುಮಕೂರು.


<center>'''ಮೌಲ್ಯಮಾಪನ ಮಾಡಿದ ಕಾರ್ಯಕ್ರಮ : ಸಮುದಾಯದತ್ತ ಶಾಲೆ.'''</center>

“ತುಮಕೂರು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಿರ್ವಹಣೆ” ಕುರಿತಂತೆ ಮೌಲ್ಯಮಾಪನ ಕಾರ್ಯವನ್ನು 2015-16ನೇ ಸಾಲಿನಲ್ಲಿ ಕೈಗೊಳ್ಳಲಾಯಿತು.

'''ಮೌಲ್ಯಮಾಪನದ ಹಿನ್ನೆಲೆ''' : ಶಿಕ್ಷಣದ ಸಾರ್ವತ್ರೀಕರಣ ಮತ್ತು ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ವ್ಯವಸ್ಥೆಯ ಭಾಗೀದಾರರಾದ ಪೋಷಕರು, ಸಮುದಾಯದ ಪಾತ್ರ ಮಹತ್ವಪೂರ್ಣ. ಅಂತೆಯೇ ಶಿಕ್ಷಣದ ಪ್ರಕ್ರಿಯೆಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಶೈಕ್ಷಣಿಕ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿಸಲು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಒಂದು ವಿನೂತನ ಕಾರ್ಯಕ್ರಮವೇ ಸಮುದಾಯದತ್ತ ಶಾಲೆ. ಸಮುದಾಯದ ಕೇಂದ್ರ ಬಿಂದುವಾಗಿರುವ ಸರ್ಕಾರಿ ಶಾಲೆಯ ಕಾರ್ಯನಿರ್ವಹಣೆಯನ್ನು ಸಮುದಾಯದ ಸಾರ್ವಜನಿಕರು, ಜನಪ್ರತಿನಿಧಿಗಳು, ಧಾನಿಗಳು, ಎಸ್.ಡಿ.ಎಂ.ಸಿ. ಅದ್ಯಕ್ಷರು ಸದಸ್ಯರು ಸೇರಿದಂತೆ ಇತರೆ ಭಾಗೀದಾರರು ಸಾಮಾಜಿಕವಾಗಿ ಮೌಲ್ಯಮಾಪನ ಮಾಡಲು ಇರುವ ಪಾರದರ್ಶಕ ವ್ಯವಸ್ಥೆಯೇ ಸಮುದಾಯದತ್ತ ಶಾಲಾ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಉಸ್ತುವಾರಿ ಮೇಲ್ವಿಚಾರಣೆ ಮಾಡುವ ಸಂದರ್ಭದಲ್ಲಿ ಅನೇಕ ಅಂಶಗಳನ್ನು ಗಮನಿಸಲಾಗಿತ್ತು. ಹಾಗಾಗಿ ಈ ಕಾರ್ಯಕ್ರಮವು ಶಾಲೆಗಳಲ್ಲಿ ಹೇಗೆ ನಿರ್ವಹಣೆಯಾಗುತ್ತಿದೆ? ಯಶಸ್ವಿ ನಿರ್ವಹಣೆಯಾಗದೆ ಇರಲು ಕಾರಣಗಳೇನು? ಉತ್ತಮ ಹಾಗೂ ಪರಿಣಾಮಕಾರಿ ನಿರ್ವಹಣೆಗೆ ವಹಿಸಬೇಕಾದ ಕ್ರಮಗಳೇನು? ಎಂಬುದನ್ನು ಅರಿಯುವ ಹಿನ್ನೆಲೆಯಲ್ಲಿ ಈ ಮೌಲ್ಯಮಾಪನ ಕಾರ್ಯವನ್ನು ಕೈಗೊಂಡಿದೆ.

'''ಉದ್ದೇಶಗಳು :-'''

1.ಸಮುದಾಯದತ್ತ ಶಾಲಾ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ನಿರೀಕ್ಷೆಯಂತೆ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆಯೇ?

2.ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಲ್ಲಿ ಇರುವ ತೊಡಕುಗಳೇನು?

3ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಪೂರಕವಾಗಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು?

ಈ ಎಲ್ಲ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಅಭಿಪ್ರಾಯ ಸಂಗ್ರಹಣೆಯ ಮೂಲಕ ಪಡೆಯುವುದು.


<center>'''-: ಮೌಲ್ಯಮಾಪನದ ಕ್ರಿಯಾ ಯೋಜನೆ ಮತ್ತು ನಿರ್ವಹಣೆ :-'''</center>

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2015-16ನೇ ಸಾಲು) ದಿನಾಂಕ:7/10/2015 ರಂದು ಇಲಾಖಾ ನಿರ್ದೇಶನದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮವು ನಡೆಯಿತು. ಡಯಟ್ ನ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಉಪನ್ಯಾಸಕರು ಸದರಿ ಕಾರ್ಯಕ್ರಮದ ದಿನದಂದು ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಿರುತ್ತಾರೆ. ಒಟ್ಟು 22 ಮಂದಿ ಪುನ್ಯಾಸಕರು 46 ಶಾಲೆಗಳಿಗೆ ಭೇಟಿ ನೀಡಿ, ಕಾರ್ಯಕ್ರಮದ ನಿರ್ವಹಣೆ ಶಾಲೆಗಳಲ್ಲಿ ಹೇಗೆ ನಡೆಯುತ್ತಿದೆ? ಎಂಬುದನ್ನು ಅಭಿಪ್ರಾಯ ಸಂಗ್ರಹಣೆ ಪ್ರಶ್ನಾವಳಿಯನ್ನು ಸಾಧನವಾಗಿ ಬಳಸಿ, ಮೇಲ್ವಿಚಾರಣೆ ನಡೆಸಿ ವರದಿ ನೀಡಿರುತ್ತಾರೆ.

ಮುಖ್ಯಶಿಕ್ಷಕರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ವಿಷ್ಲೇಶಣೆಯನ್ನು ಪರಿಮಾಣಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಮಾಡಲಾಗಿದೆ.

'''ಸಮುದಾಯದತ್ತ ಶಾಲಾ ಕಾರ್ಯಕ್ರಮ ನಿರ್ವಹಣೆ ಕುರಿತಂತೆ ಶಾಲೆಗಳ ಮುಖ್ಯಶಿಕ್ಷಕರು ನೀಡಿರುವ ಅಭಿಪ್ರಾಯಗಳ ವಿಶ್ಲೇಷಣೆಯಿಂದ ವ್ಯಕ್ತವಾದ ಅಂಶಗಳೆಂದರೆ...'''

# '''ಪೋಷಕರು ಸಮುದಾಯದತ್ತ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ತಿಳಿಸಿ 93% ರಷ್ಟು ಶಾಲೆಗಳವರು ಪೋಷಕರಿಗೆ ಮಾಹಿತಿ ನೀಡಿರುತ್ತಾರೆ. ಆದರೆ ನಿರೀಕ್ಷೆಯಂತೆ ಎಲ್ಲಾ ಶಾಲೆಗಳಲ್ಲಿ ಎಲ್ಲಾ ಮಕ್ಕಳ ಪೋಷಕರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಕಂಡು ಬಂದಿದೆ.'''
# '''ಎಲ್ಲಾ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು 95% ರಷ್ಟು ಶಾಲೆಗಳವರು ನೀಡಿದ್ದರೂ(ಸಭೆ ಮತ್ತು ಪತ್ರ ಮಖೇನ) ಅವರ ಭಾಗವಹಿಸುವಿಕೆ ಪೂರ್ಣಪ್ರಮಾಣದಲ್ಲಿ ಕಂಡುಬರುವುದಿಲ್ಲ. ಒಟ್ಟು 46 ಶಾಲೆಗಳಿಂದ 240 ಮಂದಿ ಮಾತ್ರ ಭಾಗವಹಿಸಿರುವುದು ತಿಳಿದುಬರುತ್ತದೆ.'''

'''ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಶಾಲೆಗಳಿಗೆ ಸದರಿ ದಿನ ಹಾಜರಾಗಿದ್ದರೂ ಏಕಕಾಲದಲ್ಲಿ ನಿಗದಿತವಾದ ವೇಳೆಯಲ್ಲಿ ಎಲ್ಲರೂ ಹಾಜರಾಗಿ ಶಾಲಾಭಿವೃದ್ಧಿ. ಮಕ್ಕಳ ಗೈರುಹಾಜರಿ, ಶೈಕ್ಷಣಿಕ ಪ್ರಗತಿ, ಶಾಲೆಯ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿರುವುದಿಲ್ಲ. ಬಹುತೇಕ ಶಾಲೆಗಳಲ್ಲಿ ಕಾರ್ಯಕ್ರಮ ಮುಗಿದ ನಂತೆ ಸಭೆಯ ನಡಾವಳಿಯನ್ನು ಮುಖೈಶಿಕ್ಷಕರೇ ದಾಖಲಿಸಿ ಅವರಿಂದ ಸಹಿ ಪಡೆಯುವರೆಂಬ ಅಂಶ ಮುಖ್ಯ ಶಿಕ್ಷಕರ ಜತೆ ಚರ್ಚಿಸಿದಾಗ ತಿಳಿದು ಬಂದಿತು.'''

# '''ಭೇಟಿಯ ವೇಳೆಯಲ್ಲಿ ಗಮನಿಸಿದಂತೆ 97% ರಷ್ಟು ಶಾಲೆಗಳಲ್ಲಿ ಸ.ದ.ಶಾಲಾ ಕಾರ್ಯಕ್ರಮದ ನಿರ್ವಹಣೆಗೆ ಸಿದ್ಧತೆ ನಡೆಸಿದ್ದು ಶಲೆಯನ್ನು ತಳಿರು-ತೋರಣ ಮತ್ತು ಬ್ಯಾನರ್ ಗಳಿಂದ ಅಲಂಕರಿಸಿದ್ದುದು ಕಂಡುಬಂದಿತು.'''
# '''ಭೇಟಿ ನೀಡಿದ ಶಾಲೆಗಳ ಪೈಕಿ 93% ರಷ್ಟು ಶಲೆಗಳಲ್ಲಿ ಮಕ್ಕಳು ಸದರಿ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಕಂಡುಬಂದಿದೆ. ಆದರೆ ಪರೀಕ್ಷೆ ಮುಗಿದ ಮರುದಿನದಿಂದ ಬಹುತೇಕ ಮಕ್ಕಳು ಶಾಲೆಗೆ ಬರುವುದಿಲ್ಲವೆಂದು ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಜರಿದ್ದ ಎಲ್ಲಾ ಮಕ್ಕಳು ಸದರಿ ದಿನ ತಮ್ಮ ಪೂಷಕರನ್ನು ಕರೆತರುವಲ್ಲಿ ವಿಫಲರಾಗಿದ್ದಾರೆ.'''

5 .ಸಮುದಾಯದತ್ತ ಶಾಲಾ ಕಾರ್ಯಕ್ರಮವು ಶಾಲೆ ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂಬುದಾಗಿ 91% ಮುಖ್ಯಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

6.ಕಾರ್ಯಕ್ರಮದ ನಿರೀಕ್ಷೆಯಂತೆ ಸದರಿ ದಿನ ತಮ್ಮ ಶಾಲೆಯ ಎಲ್ಲ ತರಗತಿಯ ಎಲ್ಲ ಮಕ್ಕಳ ಪ್ರಗತಿಪತ್ರ ಸಿದ್ಧಪಡಿಸಿ ಪೋಷಕರಿಗೆ ಕಲಿಕಾ ಪ್ರಗತಿಯನ್ನು ಖಾತ್ರಿಪಡಿಸಲು ಶೇ.58 ಮುಖ್ಯಶಿಕ್ಷಕರು ಸಾಧ್ಯವೆಂದು ಶೇ.42 ಮುಖ್ಯಶಿಕ್ಷಕರು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದ್ದಾರೆ.

7.ಈ ಕಾರ್ಯಕ್ರಮವನ್ನು ಇಲಾಖಾ ಮಾರ್ಗಸೂಚಿಯಂತೆ ಪಠ್ಯ ಮತ್ತು ಸಹಪಠ್ಯ/ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಪೋಷಕರಿಗೆ ಖಾತ್ರಿ ಪಡಿಸಲು78%ರಷ್ಟು ಮು.ಶಿ.ರು ಸಾಧ್ಯವೆಂದು, ಉಳಿದ 22%ರಷ್ಟು ಮು.ಶಿ.ರು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ.ಕಲಿಕೆಯನ್ನು ಪೋಷಕರ ಮುಂದೆ ಅಭಿವ್ಯಕ್ತಿಸಲು ಶಿಕ್ಷಕರು ಮಕ್ಕಳನ್ನು ತರಬೇತು ಗೊಳಿಸಿದ್ದರೂ ಪೋಷಕರ ಹಾಜರಾತಿ ಕೊರತೆಯಿಂದ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ.

8 .ಕಾರ್ಯಕ್ರಮದಂದು ಎಲ್ಲಾ ಶಾಲೆಗಳಲ್ಲಿ ಎಲ್ಲಾ ಮಕ್ಕಳ ಪೋಷಕರು ಹಾಜರಾಗಿ ತಮ್ಮ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿರುವುದಿಲ್ಲ. ಕೇವಲ ಶೇ.58% ರಷ್ಟು ಶಾಲೆಗಳಲ್ಲಿ ಮಾತ್ರ ಪೋಷಕರು ಭಾಗವಹಿಸಿರುವುದು ವಿಶ್ಲೇಷಣೆಯಿಂದ ವ್ಯಕ್ತವಾಗುತ್ತದೆ. ಹಾಜರಾಗಿರುವ ಶಾಲೆಗಳಲ್ಲಿ ಕೂಡ ಇಲ್ಲಾ ಮಕ್ಕಳ ಪೋಷಕರು ಹಾಜರಾಗಿ ತಮ್ಮ ಮಕ್ಕಳ ಪ್ರಗತಿಯನ್ನು ಪರಶೀಲಿಸಿರುವುದಿಲ್ಲ.

9. ಸಿ,ಸಿ.ಇ. ಅನವಯ ಶೈಕ್ಷಣಭಿಕ ದಾಖಲೆಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ಪ್ರಗತಿಪತ್ರವನ್ನು ವಿತರಿಸುವ ಚಟುವಟಿಕೆ ಬಗ್ಗೆ ಪರೀಲಿಸಿದಾಗ ಯಾವುದೇ ಶಾಲೆಯಲ್ಲಿ ಪ್ರಗತಿಪತ್ರ ವಿತರಿಸಿಲ್ಲ. ಆದರೆ ಇಲ್ಲಾ ಶಾಲೆಗಳಲ್ಲಿ ಎಲ್ಲಾ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಶೈಕ್ಷಣಿಕ ದಾಖಲೆಗಳನ್ನು ನಿರ್ವಹಿಸಿರುತ್ತಾರೆ. ಹಾಜರಾದ ಪೋಷಕರಿಗೆ ಉತ್ತರ ಪತ್ರಕೆಗಳನ್ನು ನೀಡಿ ಶೈಕ್ಷಣಿಕ ಪ್ರಗತಿಯನ್ನು ವಿವರಿಸಿದ್ದಾರೆ.

9.ಸದರಿ ದಿನದಂದು ಕಾರ್ಯಕ್ರಮದ ನಿರೀಕ್ಷೆಯಂತೆ ಶಾಲಾಭಿವೃದ್ಧಿ ಯೋಜನೆ ಕುರಿತಂತೆ ಚರ್ಚಿಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆಂದು ಶೇ.74ರಷ್ಟು ಮು.ಶಿ.ರು, ಸಾಧ್ಯವಾಗುತ್ತಿಲ್ಲವೆಂದು ಶೇ.26ರಷ್ಟು ಮು.ಶಿ.ರು ಅಭಿಪ್ರಾಯಪಟ್ಟಿದ್ದಾರೆ.


10. ಎಸ್.ಡಿ.ಎಂ.ಸಿ. ಸಭೆ ನಡೆಸಿ ಶಾಲಾಭಿವೃದ್ಧಿ ಬಗ್ಗೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಸ.ದ.ಶಾ. ಕಾರ್ಯಕ್ರಮದ ದಿನ ಸಾಧ್ಯವಾಯಿತೆಂದು 67% ರಷ್ಟು ಶಾಲೆಗಳ ಮುಖೈ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಭೇಟಿಯ ವೇಳೆಯಲ್ಲಿ ಪರಿಶೀಲಿಸಿದಂತೆ ಬಹುತೇಕ ಶಾಲೆಗಳಲ್ಲಿ ಹಿಂದಿನ ಸ.ದ.ಶಾ.ಕಾರ್ಯಕ್ರದ ದಿನದಂದು ದಾಖಲಿಸಿದ ನಡಾವಳಿಯ ಅನುಪಾಲನೆಯಾಗಿರುವುದಿಲ್ಲ.

10.ಸಮುದಾಯದ ಜನ ಪ್ರತಿನಿಧಿಗಳು ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆಂದು ಶೇ.71 ರಷ್ಟು ಶಾಲೆಗಳ ಮು.ಶಿ.ರು ಮು.ಶಿ.ರು ಅಭಿಪ್ರಾಯಪಟ್ಟಿದ್ದಾರೆ. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಒಂದು ಶಾಲೆಯಲ್ಲಿ ಮಾತರ್ ಗ್ರಾಮಪಂಚಾಯ್ತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

11. ಕಾರ್ಯಕ್ರಮದ ದಿನ 95% ರಷ್ಟು ಶಾಲೆಗಳಲ್ಲಿ ಬಿಸಿಯೂಟವನ್ನು ವಿಶೇಷವಾಗಿ ತಯಾರಿಸಿ ಸಿಹಿಯೊಂದಿಗೆ ಮಕ್ಕಳಿಗೆ ನೀಡಿರುತ್ತಾರೆ.

ಭೇಟಿ ನೀಡಿದ ಶಾಲೆಗಳ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿದಂತೆ ಸ.ದ.ಶಾ.ಕಾರ್ಯಕ್ರಮವು ಯಶಸ್ವಿಯಾಗದಿರಲು ನೀಡಿದ '''ಕಾರಣಗಳನ್ನು ಕ್ರೋಢೀಕರಿಸಿದಾಗ ಉಲ್ಲೇಖಿಸಬಹುದಾದ ಕಾರಣಗಳು ಇಂತಿವೆ'''.

<nowiki>*ಸಮುದಾಯದತ್ತ ಶಾಲಾ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು ಮೂಡಿಸದಿರುವುದು. ಮತ್ತು ವ್ಯಾಪಕ ಪ್ರಚಾರದ ಕೊರತೆ.</nowiki>

ಕಾರ್ಯಕ್ರಮದ ಉದ್ದೇಶ ಹಾಗೂ ಪ್ರಯೋಜನಗಳನ್ನು ಸಮುದಾಯ/ಪೋಷಕರಿಗೆ ಮನವರಿಕೆ ಮಾಡಿಕೊಡದಿರುವುದು.

ಜನಪ್ರತಿನಿಧಿಗಳು ಮತ್ತು ಎಸ್.ಡಿ.ಎಂ.ಸಿ. ಯವರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಸದೆ ಇರುವುದು.

ಪ್ರಗತಿಪತ್ರಗಳು ಸಕಾಲದಲ್ಲಿ ಶಾಲೆಗಳಿಗೆ ಸರಬರಾಜಗದಿರುವುದು.

ಪರೀಕ್ಷೆ ಮುಗಿದ ನಂತೆ ಮೌಲುಮಾಪನ ಮಾಡಿ ಶೈಕ್ಷಣಿಕ ದಾಖಲೆಗಳನ್ನು ಸಿದ್ಧಪಡಿಸಲು ಶಿಕ್ಷಕರಿಗೆ ಸಾಕ್ಷಟು ಸಮಯ ದೊರೆಯದೆ ಇರುವುದು.

ಪ್ರಾಥಮಿಕ ಹಂತದಲ್ಲಿ ಒಬ್ಬರೇ ಶಿಕ್ಷಕರು ಹೆಚ್ಚು ವಿಷಯಗಳನ್ನು ಮೌಲ್ಯಮಾಪನ ಮಾಡಿ, ಸಿ.ಸಿ.ಇ. ಅನ್ಯ ದಾಖಲೆಗಳನ್ನು ಸಿದ್ಧಪಡಿಸಲು ಕಷ್ಟ.

ಪರೀಕ್ಷೆ ಮುಗಿದ ನಂತೆ ಮಕ್ಕಳು ಪೂರ್ಣಪ್ರಮಾಣದಲ್ಲಿ ಶಾಲೆಗಳಿಗೆ ಹಾಜರಾಗದಿರುವುದು.

<nowiki>*ಪೋಷಕರ ನಿರಾಸಕ್ತಿ </nowiki>ಹಾಗೂ ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ.

<nowiki>*ಪರೀಕ್ಷೆ ಮುಗಿದ ಮಾರನೆ ದಿನವೇ ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗುವುದರಿಂದ ಮೌಲ್ಯಮಾಪನ ಮಾಡಲು </nowiki>ಕ್ರೋಢೀಕೃತ ದಾಖಲೆ ನಿರ್ವಹಿಸಲು, ಪೋಷಕರಿಗೆ ಹಿಮ್ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ.


ಎಸ.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಏಕಕಾಲದಲ್ಲಿ ಬರದೆ ಒಬ್ಬೊಬ್ಬರಾಗಿ ಶಾಲೆಗೆ ಬಂದು ಹೊಗುತ್ತಾರೆ. ಶಾಲೆಗೆ ಬಂದವರು ಯಾವುದೇ ಶಾಲಾ ಅಭಿವೃದ್ಧಿ ಸಂಬಂಧಿತವಾಗಿ ಚರ್ಚಿಸದೆ ಹಿಂತಿರುಗುತ್ತಾರೆ.

ಮಾರ್ಗದರ್ಶಿ ಶಿಕ್ಷಕರು ಶಾಲೆಗಳಿಗೆ ನಿಯೋಜನೆಯಾದರೂ ಸಹ ಅವರಿಗೆ ಸದರಿ ಕಾರ್ಯಕ್ರಮದ ಮೇಲ್ವಿಚಾರಣೆ ಕುರಿತಂತೆ ಯಾವುದೇ ರೀತಿಯ ಸಲಹೆ ಸೂಚನೆ ನೀಡದಿರುವುದು.


<nowiki>*ಪ್ರೌಢಶಾಲೆಗಳಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗುತ್ತಿದೆ. ಅವರು ಕಡ್ಡಾಯವಾಗಿ ಹಾಜರಾಗುವುದಿಲ್ಲಾ. ಪ್ರೌಢಶಾಲೆಗಳಿಗೆ ಮಾರ್ಗದರ್ಶನ ನೀಡಲು ಅವರಲ್ಲಿ ಮಾಹಿತಿ ಕೊರತೆ.</nowiki>

<nowiki>*ಪ್ರೌಢಶಾಲೆಗಳಿಗೆ </nowiki>ಆಗಮಿಸುವ ಮಾರ್ಗದರ್ಶಕರಿಗೆ(ಅನುದಾನಿತ ಶಾಲಾ ಕಾಲೇಜುಗಳ) ಸಮುದಾಯದತ್ತ ಶಾಲಾ ಕಾರ್ಯಕ್ರಮದ ಬಗ್ಗೆ ಅರಿವು ಇರುವುದಿಲ್ಲ. ಶಾಲೆಗಳ ಭೇಟಿ ನೀಡಿ ವರದಿ ಸಿದ್ಧಪಡಿಸಿಕೊಳ್ಳುತ್ತಾರೆ.

'''15.''' '''ಸಮುದಾಯದತ್ತ ಶಾಲಾ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಮುಖ್ಯಶಿಕ್ಷಕರು ನೀಡಿರುವ '''

'''ಸಲಹೆ ಇಂತಿದೆ.'''


'''ಎಲ್ಲಾ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಯವರು ಕಡ್ಡಾಯವಾಗಿ ಭಾಗವಹಿಸುವಂತೆ ಎಲ್ಲಾ ಹಂತಗಳಲ್ಲಿ ವ್ಯಾಪಕ ಪ್ರಚಾರವಾಗಬೇಕು ಮತ್ತು ಪ್ರತಿ ಹಂತದಲ್ಲಿ ಕಾರ್ಯಕ್ರಮ ನಿರ್ವಹಣೆಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕು.'''

<nowiki>*ಸಿದ್ದತೆಯೊಂದಿಗೆ ಕಾರ್ಯಕ್ರಮ ನಡೆಸಬೇಕು. ಸಿದ್ದತೆಯೊಂದಿಗೆ ನಡೆಸಲು ಕಾಲಾವಕಾಶ </nowiki>

ನೀಡಬೇಕು.


ಸಂಕಲನಾತ್ಮಕ ಪರೀಕ್ಷೆಯನ್ನು ಸೆಪ್ಟಂಬರ್ 2ನೇ ವಾರ ಮತ್ತು ಮಾರ್ಚ್ ಎರಡನೇ ವಾರ ನಡೆಸಿ ಸಮುದಾಯದತ್ತ ಶಲಾ ಕಾರ್ಯಕ್ರಮದ ಸಿದ್ಧತೆಗೆ ಹೆಚ್ಚು ಸಮಯ ದೊರೆಯುವಂತೆ ಮಾಡಬೇಕು.


<nowiki>*ಎಸ್.ಡಿ.ಎಂ.ಸಿ. ಜನ ಪ್ರತಿನಿಧಿಗಳು ಆಸಕ್ತಿಯಿಂದ ಭಾಗವಹಿಸುವಂತೆ ಕ್ರಮವಹಿಸಬೇಕು.</nowiki>

<nowiki>*ಸಮುದಾಯದತ್ತ ಶಾಲಾ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿಯಾಗಿ ಪ್ರಚಾರ ನೀಡಿ </nowiki>

ಸಮುದಾಯ/ ಪೋಷಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು.

ಮಾರ್ಗದರ್ಶಿ ಶಿಕ್ಷಕರ ಸಭೆಯನ್ನು ಪೂರ್ವಭಾವಿಯಾಗಿ ನಡೆಸಿ ಅವರಿಗೆ ಸೂಕ್ತ ಸಲಹೆ ಮಾರ್ಘದರ್ಶನ ನೀಡಿ ನಂತೆ ನಿಯೋಜಿಸಬೇಕು ಮಾರ್ಗದರ್ಶಕರು ಕಡ್ಡಾಯವಾಗಿ ಹಾಜರಿರಬೇಕು. ಹಾಜರಿದ್ದವರು ಮಾರ್ಗದರ್ಶನ ನೀಡಬೇಕು.

<nowiki>*ಪ್ರಗತಿ ಪತ್ರಗಳನ್ನು ವರ್ಷದ ಪ್ರಾರಂಭದಲ್ಲಿಯೇ ಪಠ್ಯ ಪುಸ್ತಕಗಳು ಸರಬರಾಜಾಗುವ </nowiki>

ಸಂದರ್ಭದಲ್ಲಿಯೇ ಸರಬರಾಜಾಗಬೇಕು ಮತ್ತು ಈ ಪ್ರಗತಿ ಪತ್ರಗಳು ಆಕರ್ಷಕವಾಗಿದ್ದು

ಗುಣಮಟ್ಟದಿಂದ ಕೂಡಿರಬೇಕು.

ಪೋಷಕರ ಸಭೆಯನ್ನು ತಿಂಗಳಿಗೊಮ್ಮೆ ನಡೆಸಿ ಶಾಲಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡುಸಲು ಶಾಲಾ ಹಂತದಲ್ಲಿ ಯೋಜಿಸಿಕೊಳ್ಳಬೇಕು.

ಮಕ್ಕಳ ಕಲಿಕಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಶಾಲೆಯವರು ಸಿದ್ಧತೆ ನಡೆಸಬೇಕು.

ಎಸ್.ಡಿ.ಎಂ.ಸಿ. ಯವರು ಕಡ್ಡಾಯವಾಗಿ ಹಾಜರಾಗಿ ಆ ದಿನ ಸಭೆ ನಡೆಸಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ, ಶಾಲಾಭಿವೃದ್ಧಿ ಅಂಶಗಳನ್ನು ಚರ್ಚಿಸಬೇಕು. ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಗೊಳಿಸುವಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಎಸ್.ಡಿ.ಎಂ.ಸಿ. ತರಬೇತಿ ಸಂದರ್ಭವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು.

ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿಯೇ ಎಸ್.ಡಿ.ಎಂ.ಸಿ. ಯವರಿಗೆ ಶಾಲೆಗಳು ಸಿದ್ಧಪಡಿಸಿಕೊಂಡಿರುವ ವಾರ್ಷಿಕ ಯೋಜನೆಯನ್ನು ವಿವರಿಸಿ, ಕಾರ್ಯಕ್ರಮದ ನಿರ್ವಹಣೆಯಲ್ಲಿ ಅವರ ಪಾತ್ರ ಮತ್ತು ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಟ್ಟು ಅವರ ಸಹಕಾರವನ್ನು ಕೋರಬೇಕು.


16. '''ಕಾರ್ಯಕ್ರಮವನ್ನು ಹೇಗೆ ಯೋಜಿಸಿಕೊಳ್ಳಬೇಕೆಂಬುದರ ಬಗ್ಗೆ ಮುಖ್ಯಶಿಕ್ಷಕರು ನೀಡಿರುವ ಸಲಹೆ ಇಂತಿದೆ.'''


<nowiki>*ಎಸ್.ಡಿ.ಎಂ.ಸಿ. ಸದಸ್ಯರು, ಅಧ್ಯಕ್ಷರು, ಮತ್ತು ಶಿಕ್ಷಕರು ಪೂರ್ವಭಾವಿಯಾಗಿ ಚರ್ಚಿಸಿ ಕಾರ್ಯಕ್ರಮವನ್ನು ಯೋಜಿಸಿಕೊಂಡು ಸಿದ್ಧತೆಯೊಂದಿಗೆ ನಡೆಸಬೇಕು.</nowiki>

<nowiki>*ಪೋಷಕರಿಗೆ ಅರಿವು ಮೂಡಿಸಿ ಕಾರ್ಯಕ್ರಮವನ್ನು ನಡೆಸುವ ಮುನ್ನ ಹೆಚ್ಚಿನ ಪ್ರಚಾರ ನೀಡಬೇಕು.</nowiki>

<nowiki>*ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮಾಧ್ಯಮಗಳ ಮೂಲಕ ಪೋಷಕರ ಮನವೋಲಿಸಬೇಕು.</nowiki>

<nowiki>*ಸಮುದಾಯದತ್ತ ಶಾಲಾ ಕಾರ್ಯಕ್ರಮದ ದಿನ ಪೋಷಕರನ್ನು ಶಾಲೆಯತ್ತ ಸೆಳೆಯಲು ವಿಶೇಷ ಕಾರ್ಯಕ್ರಮವನ್ನು ಅವರಿಗಾಗಿ ಹಮ್ಮಿಕೊಳ್ಳಬೇಕು.</nowiki>

<nowiki>*ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಿದ ನಂತರ ಶಿಕ್ಷಕರನ್ನು ತರಬೇತಿ, ಪರೀಕ್ಷೆ ಹಾಗೂ ಇತರೆ ಕಾರ್ಯಗಳಿಗೆ ನಿಯೋಜಿಸಬಾರದು ಅಥವಾ ತೊಡಗಿಸಬಾರದು.</nowiki>

<nowiki>*ಪರೀಕ್ಷೆ ಮುಗಿದ ನಂತರ 10 ದಿನಗಳ ಅಂತರದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ದಿನಾಂಕ ನಿಗದಿಯಾಗಬೇಕು.</nowiki>


'''ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮೌಲಮಾಪನದಿಂದ ಕಂಡು ಬಂದ ಪ್ರಧಾನ ಅಂಶಗಳೆಂದರೆ :-'''


# ಸಮುದಾಯದತ್ತ ಶಾಲಾ ಕಾರ್ಯಕ್ರಮವು ಶೇ.100 ರಷ್ಟು ಸರ್ಕಾರಿ ಪ್ರಾಥಮಿಕ ಹಾಗೂ

ಪ್ರೌಢಶಾಲೆಗಳಲ್ಲಿ ಇಲಾಖೆ ನಿಗದಿಪಡಿಸಿದ ದಿನಾಂಕದಂದು ನಡೆಯುತ್ತದೆ.


# ಯಶಸ್ವಿಯಾಗಿ ನಿರ್ವಹಿಸುವಲ್ಲಿ ಹಲವಾರು ತೊಡಕುಗಳಿರುವುದು ಕಂಡುಬಂದಿದೆ.

* ಪೋಷಕರ ನಿರಾಸಕ್ತಿ, ಪೋಷಕರಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಇಲ್ಲದಿರುವುದು.
* ನಿರೀಕ್ಷಿತ ಮಟ್ಟದಲ್ಲಿ ಪೋಷಕರು ಹಾಜರಾಗದಿರುವುದು,
* ಕಾರ್ಯಕ್ರಮದ ಸಿದ್ಧತೆಗೆ ಕಾಲಾವಕಾಶವಿಲ್ಲದಂತೆ ದಿನಾಂಕ ನಿಗದಿಪಢಿಸುವುದು.
* ಪ್ರಗತಿ ಪತ್ರಗಳು ಸಕಾಲದಲ್ಲಿ ಸರಬರಾಜಾಗದಿರುವುದು.
* ಮಾರ್ಗದರ್ಶಕರ ಹಾಜರಾತಿ ಕಡ್ಡಾಯವಾಗಿಲ್ಲದಿರುವುದು.
* ಸರ್ಕಾರಿ ಶಾಲೆಗಳಿಗೆ ಅನುದಾನಿತ ಶಾಲೆಗಳ ಶಿಕ್ಷಕರು ಮಾರ್ಗದರ್ಶಕರಾಗಿ ಹಾಜರಾಗುವುದು ಅವರಿಗೆ ಮಾಹಿತಿಯ ಕೊರತೆ ಇರುತ್ತದೆ. ಮಾರ್ಗದರ್ಶನ ನೀಡುವಲ್ಲಿ ವಿಫಲರಾಗುತ್ತಾರೆ.

# ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಪೂರಕವಾದ ಸಲಹೆಗಳನ್ನು ಮುಖ್ಯಶಿಕ್ಷಕರು ನೀಡಿರುತ್ತಾರೆ.

* ಪೋಷಕರಲ್ಲಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು.
* ಪೋಷಕರ ಹಾಜರಾತಿಯನ್ನು ಕಡ್ಡಾಯಗೊಳಿಸುವುದು.
* ಮಾಧ್ಯಮಗಳ ಮೂಲಕ ಪೋಷಕರ ಮನವೊಲಿಸುವುದು.
* ಶಾಲೆಯತ್ತ ಪೋಷಕರನ್ನು ಸೆಳೆಯಲು ಅವರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದು.
* ಪರೀಕ್ಷೆ ನಡೆದ 10 ದಿನಗಳ ಅಂತರದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸುವುದು. ಸಕಾಲದಲ್ಲಿ ಪ್ರಗತಿ ಪತ್ರಗಳನ್ನು ಸರಬರಾಜು ಮಾಡುವುದು. ಇದೇ ಮೊದಲಾದ ಬದಲಾವಣೆಗಳನ್ನು ಕಾರ್ಯಕ್ರಮದಲ್ಲಿ ತರುವುದರ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಸಂಚರಣೆ ಪಟ್ಟಿ