* ಸೂರ್ಯನು ಭೂಮಿಗಿಂತ ೩೦೦,೦೦೦ಕ್ಕಿಂತ ಹೆಚ್ಚು ದ್ರವ್ಯರಾಶಿ ಮತ್ತು ಸುಮಾರು ಮಿಲಿಯನ್ ಮೈಲಿಗಳಷ್ಟು ವ್ಯಾಸವನ್ನು ಹೊಂದಿರುವ ಅನಿಲದ ಗೋಳಾಕೃತಿ. ಅಂದರೆ ನಮ್ಮ ಸೌರವ್ಯೂಹದಲ್ಲಿರುವ ಗುರು ಗ್ರಹಕ್ಕಿಂತ ಸಾವಿರ ಪಟ್ಟು ಹೆಚ್ಚು ದ್ರವ್ಯರಾಶಿ ಮತ್ತು ಸಾವಿರ ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದ್ದು, ನೀರಿನ ಸಾಂದ್ರತೆಗಿಂತ 30%ನಷ್ಟು ಅಧಿಕ ಸಾಂದ್ರತೆಯುಳ್ಳ ಅನಿಲದ ಗೋಳಾಕೃತಿಯಾಗಿದೆ.
+
* ಸೂರ್ಯ ದ್ರವೀಕೃತ ಜಲಜನಕ ಮತ್ತು ಹೀಲಿಯಂನಿಂದ ಉಂಟಾಗಿರುವ ಸಂಪೂರ್ಣ ಅನಿಲಗಳಿಂದಾದ ಗೋಳಾಕೃತಿ. ಇದರಿಂದ ಹಾಗೂ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳಿಂದ ಸೂರ್ಯನ ಮೇಲ್ಮೈ ತಾಪಮಾನ ಕಡಿಮೆ ಎಂದರೂ ಸುಮಾರು 6000 ಕೆಲ್ವಿನ್ ಮತ್ತು ಗರ್ಭದಲ್ಲಿ ಸುಮಾರು 15 ಮಿಲಿಯನ್ ಕೆಲ್ವಿನ್ ನಷ್ಟಿದೆ. ಈ ಅತ್ಯಧಿಕ ಉಷ್ಣಾಂಶವು ಸೂರ್ಯನಲ್ಲಿರುವ ಜಲಜನಕ ಮತ್ತು ಹೀಲಿಯಂನ್ನು ಮತ್ತೆ ವಿಭಜಿಸಲಾಗದಷ್ಟು ಸಣ್ಣ-ಸಣ್ಣ ಕಣಗಳಂತೆ ಮಾಡುತ್ತಿರುವುದರಿಂದ ಸುಮಾರು ಐದು ಬಿಲಿಯನ್ ವರ್ಷಗಳಾದರು ಸೂರ್ಯ ಅನಿಲಗಳಿಂದ ಕೂಡಿದ ಗೋಳಾಕೃತಿಯಾಗೆ ಉಳಿದಿದೆ.
+
* ಸೂರ್ಯ ತನ್ನ ಅಧಿಕ ಗಾತ್ರದಿಂದ ಮತ್ತು ಅತ್ಯಧಿಕ ಉಷ್ಣಾಂಶದಿಂದ ಬೆಳಕಿನ ಪ್ರಚಂಡ ಪ್ರಮಾಣವನ್ನು ಹಾಗು ಸ್ವಲ್ಪ ಮಟ್ಟಿಗೆ ವಿದ್ಯುತ್ಕಾಂತೀಯ ವಿಕಿರಣಗಳನ್ನು ಹೊರಸೂಸುತ್ತದೆ. ಇದು ಸರಿ-ಸುಮಾರು 400 ಕೋಟಿ ಟ್ರಿಲಿಯನ್ (4X1026ವ್ಯಾಟ್)ನಷ್ಟು ವಿದ್ಯುತ್ ಉತ್ಪಾದನೆಗೆ ಸಮವಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳು.
+
* ಸೂರ್ಯನಿಗಿಂತ ನೂರು ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ, ಸಾವಿರ ಪಟ್ಟು ಹೆಚ್ಚು ವ್ಯಾಸವುಳ್ಳ ಹಾಗು ಮಿಲಿಯನ್ ಪಟ್ಟು ಹೆಚ್ಚು ಹೊಳಪುಳ್ಳ ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ. ಸೂರ್ಯ ಒಂದು ಸರಾಸರಿ ನಕ್ಷತ್ರವಾದರೂ, ಭೂಮಿಯ ಮೇಲಿನ ಜೀವನ ಕ್ರಿಯೆಗೆ ಅಥವಾ ಜೈವಿಕ ಕ್ರಿಯೆಗೆ ಸೂರ್ಯನ ಶಾಖ ಮತ್ತು ಬೆಳಕು ಪ್ರಮುಖ ಆಧಾರವಾಗಿದೆ. ಇದರ ಜೊತೆಗೆ ಉಳಿದ ಎಲ್ಲಾ ನಕ್ಷತ್ರಗಳಿಗಿಂತ ಸೂರ್ಯನೇ ಭೂಮಿಗೆ ಸಮೀಪವಿರುವ ನಕ್ಷತ್ರವಾದ್ದರಿಂದ, ಸೂರ್ಯನ ಬಗ್ಗೆ ಹೆಚ್ಚು ವಿವರವಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ.