ಶೃಂಗಾಭಿಮುಖ ಕೋನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಎರಡು ಸರಳ ರೇಖೆಗಳು ಪರಸ್ಪರ ಛೇದಿಸಿದಾಗ ನಾಲ್ಕು ಕೋನಗಳು ಉಂಟಾಗುತ್ತವೆ. ಛೇದಕ ಬಿಂದುವಿನ ಎದುರು ಬಾಹುಗಳಲ್ಲಿ ರೊಪುಗೊಳ್ಳುವ ಜೋಡಿ ಕೋನಗಳು ಶೃಂಗಾಭಿಮುಖ ಕೋನಗಳಾಗಿರುತ್ತವೆ.

ಉದ್ದೇಶಗಳು

ಮಕ್ಕಳನ್ನು ಶೃಂಗಾಭಿಮುಖ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
  • ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ
  • ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ
  • ಉಂಟಾದ ಕೋನಗಳಿಗೆ ಸಂಬಂಧವಿದೆಯೇ?
  • AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
  • CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
  • ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ?
  • AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
  • ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ?
  • ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌) ಪಟ್ಟಿ ಮಾಡಿ
ಕ್ರಮ

ಸಂಖ್ಯೆ

ಜಾರುಕ α ದ ಮೌಲ್ಯ AB ಮೇಲಿನ ಕೋನಗಳು ∠DOA+ ∠BOD CD ಮೇಲಿನ ಕೋನಗಳು ∠ DOA+∠AOC ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ
∠ DOA ∠ BOD ∠ DOA ∠ AOC
.

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು?
  2. ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?