"ರಾಸಾಯನಿಕ ಸ್ಥಾನಪಲ್ಲಟ/Chemical Displacement" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: =ಚಟುವಟಿಕೆ -1 ರಾಸಾಯನಿಕ ಸ್ಥಾನಪಲ್ಲಟ= '''ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದೊಂ...) |
( ಯಾವುದೇ ವ್ಯತ್ಯಾಸವಿಲ್ಲ )
|
೧೫:೨೯, ೪ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ -1 ರಾಸಾಯನಿಕ ಸ್ಥಾನಪಲ್ಲಟ
ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಸತುವಿನ ವರ್ತನೆಯನ್ನು ತಿಳಿಯುವುದು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪ್ರನಾಳಗಳು,
- ಪ್ರನಾಳದ ಸ್ಟಾಂಡ್ ,
ಸತು ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ ಸ್ಪಿರಿಟ್ ದೀಪ ಗಾಜಿನ ನಳಿಕೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಚಟುವಟಿಕೆ 1ನ್ನು ಬೇರೆ ಬೇರೆ ಲೋಹಗಳನ್ನು ಉಪಯೋಗಿಸಿ (ಉದಾಹರಣೆಗೆ Mg, Zn, Feಹಾಗೂ ಬೇರೆ ಬೇರೆ ದು. ಆಮ್ಲಗಳನ್ನು ( ದು. HCl, ದು. H2SO4, ದು. HNO3) ಉಪಯೋಗಿಸಿ ಮಾಡಿ ತೀರ್ಮಾನ ತೆಗೆದುಕೊಳ್ಳಬಹುದು.
- ಈ ಪ್ರಯೋಗಗಳನ್ನು ಮಾಡುವಾಗ ವಿದ್ಯಾರ್ಥಿಗಳನ್ನು ಸ್ವಲ್ಪ ದೂರ ಇರಲು ತಿಳಿಸುವುದು
- ಲಭ್ಯವಿದ್ದಲ್ಲಿ ಕೈಗೆ ಗ್ಲೌಸ್ ಗಳನ್ನು ಧರಿಸುವುದು.
- ತಾಮ್ರದ ಸಲ್ಫೇಟ್ ವಿಷಯುಕ್ತವಾಗಿರುವುದರಿಂದ ಬರಿ ಕೈಯಲ್ಲಿ ಮುಟ್ಟಬೇಡಿ.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರಾತ್ಯಾಕ್ಷಿಕೆಯ ಪ್ರತಿಲಿಪಿ / Transcript of demonstration
- ಒಂದು ಪ್ರನಾಳದಲ್ಲಿ ಗಾಜಿನ ನಳಿಕೆಯ ಸಹಾಯದಿಂದ 5ml ನಷ್ಟು ದು.ಹೈಡ್ರೋಕ್ಲೋರಿಕ್ ಆಮ್ಲವನ್ನು ತೆಗೆದುಕೊಳ್ಳಿ.
- ಇದಕ್ಕೆ ಸತುವಿನ 2-3 ಚೂರುಗಳನ್ನು ಸೇರಿಸಿ.
- ಈಗ ಪ್ರನಾಳದಲ್ಲಿ ಸತುವು ದು. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸುವುದನ್ನು ಗಮನಿಸಬಹುದು.
- ಈಗ ಪ್ರನಾಳದ ಬಾಯಿಯನ್ನು ಬೆರಳಿನಿಂದ ಮುಚ್ಚಿ ಅನಿಲ ಸಂಗ್ರಹವಾಗುವವರೆಗೆ ಇದ್ದು ನಂತರ ಸ್ಪಿರಿಟ್ ದೀಪದ ಜ್ವಾಲೆಯ ಸಮೀಪದಲ್ಲಿ ಬೆರಳನ್ನು ತೆರೆಯಿರಿ.
- ಈಗ 'ಪಾಪ್' ಶಬ್ದವನ್ನು ಕೇಳಬಹುದು
- ಇದು ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದನ್ನು ಸೂಚಿಸುತ್ತದೆ.
- ಈ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ಈ ರೀತಿ ಬರೆಯಬಹುದು.
ರಾಸಾಯನಿಕ ಕ್ರಿಯೆಯ ಸಮೀಕರಣ
Zn + 2 HCl----> ZnCl2+ H2
ಚಟುವಟಿಕೆ -2 ರಾಸಾಯನಿಕ ಸ್ಥಾನಪಲ್ಲಟ
ತಾಮ್ರದ ಸಲ್ಫೇಟ್ ದ್ರಾವಣದೊಂದಿಗೆ ಕಬ್ಬಿಣದ ಪ್ರತಿವರ್ತನೆಯನ್ನು ತಿಳಿಯುವುದು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ತಾಮ್ರದ ಸಲ್ಫೇಟ್,
- ನೀರು,
- ಕಬ್ಬಿಣದ ಮೊಳೆಗಳು,
- ದಾರ,
- ಕೋನಿಕಲ್ ಫ್ಲಾಸ್ಕ್ / ಬೀಕರ್
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರಾತ್ಯಾಕ್ಷಿಕೆಯ ಪ್ರತಿಲಿಪಿ / Transcript of demonstration
- ಒಂದು ಬೀಕರಿನಲ್ಲಿ ಸುಮಾರು 20 ml ತಾಮ್ರದ ಸಲ್ಫೇಟ್ ದ್ರಾವಣವನ್ನು ತಯಾರಿಸಿಕೊಳ್ಳಿ.
- ಈ ದ್ರಾವಣವನ್ನು ಎರಡು ಪ್ರನಾಳಗಳಲ್ಲಿ ತೆಗೆದುಕೊಳ್ಳಿ.
- ಒಂದು ಪ್ರನಾಳಕ್ಕೆ ಕಬ್ಬಿಣದ ಮೊಳೆಯನ್ನು ದಾರದ ಸಹಾಯದಿಂದ ಇಳಿಬಿಡಿ.
- ಸುಮಾರು 30 ನಿಮಿಷಗಳ ನಂತರ ಮೊಳೆಯನ್ನು ಪ್ರನಾಳದಿಂದ ಹೊರಗೆ ತೆಗೆದು ಗಮನಿಸಿ.
- ವೀಕ್ಷಣೆ : ಅ) ಕಬ್ಬಿಣದ ಮೊಳೆಯ ಮೇಲೆ ತಾಮ್ರ ಸಂಗ್ರಹವಾಗಿರುವುದನ್ನು ಹಾಗೂ
ಆ) ತಿಳಿ ನೀಲಿ ಬಣ್ಣದ ದ್ರಾವಣವು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಬಹುದು.
- ಈ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ಈ ರೀತಿ ಬರೆಯಬಹುದು.
ರಾಸಾಯನಿಕ ಕ್ರಿಯೆಯ ಸಮೀಕರಣ
CuSO4+Fe--->FeSO4 + Cu
{{#ev:youtube|rTnuvd_OJ84| 400}}
https://youtu.be/rTnuvd_OJ84
ವಿವರಣೆ / ತೀರ್ಮಾನ :
ಮೊದಲನೇ ಚಟುವಟಿಕೆಯಲ್ಲಿ ಸತುವು ದು. ಹೈಡ್ರೋಕ್ಲೋರಿಕ್ ಆಮ್ಲದಿಂದ ಹೈಡ್ರೋಜನ್ ನ್ನು ಸ್ಥಾನಪಲ್ಲಟಗೊಳಿಸಿದೆ ಅಥವಾ ಲೋಹಗಳು ದುರ್ಬಲ ಆಮ್ಲಗಳೊಂದೆಗೆ ವರ್ತಿಸಿದಾಗ ಹೈಡ್ರೋಜನ್ ನ್ನು ಬಿಡುಗಡೆ ಮಾಡುತ್ತದೆ ಎಂದು ತೀರ್ಮಾನಿಸಬಹುದು. ಎರಡನೇ ಚಟುವಟಿಕೆಯಲ್ಲಿ ಕಬ್ಬಿಣವು ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ವಿಸ್ಥಾಪಿಸಿದೆ ಹಾಗೂ ಪ್ರನಾಳದಲ್ಲಿ ಫೆರಸ್ ಸಲ್ಫೇಟ್ ಉಂಟಾಗಿದೆ (ಹಸಿರು ಬಣ್ಣದ ದ್ರಾವಣ). ಇದರಿಂದ ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಪ್ರತಿವರ್ತನೀಯ ಎಂದು ತಿಳಿಯುತ್ತದೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಹೈಡ್ರೋಜನ್ ಅನಿಲದ ಬಿಡುಗಡೆಯಾಗುವುದನ್ನು ಹೇಗೆ ಪರೀಕ್ಷಿಸುವಿರಿ ?
- ಒಂದು ಪ್ರನಾಳದಲ್ಲಿರುವ ದುHCl ಕ್ಕೆ ಕೆಲವು Zn ವಿನ ಚೂರುಗಳನ್ನು ಸೇರಿಸಿದೆ.ನಿಮ್ಮ ವೀಕ್ಷಣೆ ಏನು ? ನಿಮ್ಮ ತೀರ್ಮಾನವೇನು ?
- ಒಂದು ಪ್ರನಾಳದಲ್ಲಿರುವ ದುHCl ಕ್ಕೆ ಕೆಲವು Zn ವಿನ ಚೂರುಗಳನ್ನು ಸೇರಿಸಿದೆ. ಈ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ಬರೆಯಿರಿ.
- ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಪ್ರತಿವರ್ತನೀಯ ಎಂದು ಹೇಗೆ ನಿರೂಪಿಸುವಿರಿ.
- ಒಂದು ಬೀಕರಿನಲ್ಲಿರುವ CuSO4 ದ್ರಾವಣದಲ್ಲಿ ಕಬ್ಬಿಣದ ಮೊಳೆಯನ್ನು ಮುಳುಗಿಸಿದೆ. ಈ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ಬರೆಯಿರಿ.