"ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_LibreOffice_Calc See in English]''</div> | ||
===ಪರಿಚಯ=== | ===ಪರಿಚಯ=== | ||
ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ. | ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ. | ||
೧೭ ನೇ ಸಾಲು: | ೨೦ ನೇ ಸಾಲು: | ||
|- | |- | ||
|ಇತರೇ ಸಮಾನ ಅನ್ವಯಕಗಳು | |ಇತರೇ ಸಮಾನ ಅನ್ವಯಕಗಳು | ||
− | | [https://products.office.com/en-us/excel ಮೈಕ್ರೋಸಾಪ್ಟ್ ಎಕ್ಸೆಲ್], [https://www.openoffice.org/download/ ಓಪನ್ ಆಫೀಸ್ ಕ್ಯಾಲ್ಕ್] (ಪ್ರಸ್ತುತ ಚಾಲನೆಯಲ್ಲಿಲ್ಲ), [https://www.google.co.in/sheets/about/ ಗೂಗಲ್ ಸ್ಪ್ರೆಡ್‌ಶೀಟ್] ಮುಂತಾದವು. | + | | |
+ | *[https://products.office.com/en-us/excel ಮೈಕ್ರೋಸಾಪ್ಟ್ ಎಕ್ಸೆಲ್], | ||
+ | *[https://www.openoffice.org/download/ ಓಪನ್ ಆಫೀಸ್ ಕ್ಯಾಲ್ಕ್] (ಪ್ರಸ್ತುತ ಚಾಲನೆಯಲ್ಲಿಲ್ಲ), | ||
+ | *[https://www.google.co.in/sheets/about/ ಗೂಗಲ್ ಸ್ಪ್ರೆಡ್‌ಶೀಟ್] ಮುಂತಾದವು. | ||
|- | |- | ||
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ |
೧೩:೩೮, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ. ಈ ಅನ್ವಯಕವು ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು. ಅನುಸ್ಥಾಪನೆ
ಅನ್ವಯಕ ಬಳಕೆಸ್ಪ್ರೆಡ್ಶೀಟ್ ತೆರೆಯುವುದುಲಿಬ್ರೆ ಆಫೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು ‘work book’ ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ. ಹಂತ 1 -ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್" ಎನ್ನುತ್ತೇವೆ. ಯಾವುದೇ ಸೆಲ್ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇರಿಸಬಹುದು. ಉದಾಹರಣಗೆ: I ಈ ಮೇಲಿನ ಚಿತ್ರದಲ್ಲಿನ ಸೆಲ್ “A1” ನಲ್ಲಿ ಮೌಸ್ ಕ್ಲಿಕ್ ಮಾಡಿ “Name of city” ಎಂದು ನಮೂದಿಸಿ, ಕೆಳಗಿನ ಸೆಲ್ ಗೆ ಹೋಗಲು Enter ಒತ್ತಿರಿ, ಬಲ ಅಥವಾ ಎಡಬದಿಯ ಸೆಲ್‌ಗೆ ಹೋಗಲು ಕೀಲಿಮಣೆಯ ಬಾಣದ ಕೀಗಳನ್ನು ಬಳಸಿ. ಈಗ ಬಲ ಬಾಣದ ಕೀಯನ್ನು ಬಳಸಿ “B1” ಸೆಲ್ ನಲ್ಲಿ “Average annual rainfall (cms)” ಎಂದು ನಮೂದಿಸಿ. ನಂತರ “A” ಲಂಬಗೆರೆಯಲ್ಲಿ ನಗರಗಳ ಹೆಸರುಗಳನ್ನು ನಮೂದಿಸಿ. “B" ಲಂಬಗೆರೆಯಲ್ಲಿ 'M' ಮಳೆಯ ಸರಾಸರಿ ಪ್ರಮಾಣವನ್ನು ನಮೂದಿಸಿ. ಕಾಲಂ Hit enter, and ಈಗ A1 & B1 ಸೆಲ್‌ಗಳನ್ನು ಆಯ್ಕೆ ಮಾಡಿಕೊಂಡು CTRL+B ಒತ್ತುವ ಮೂಲಕ ಈ ಅಕ್ಷರಗಳನ್ನು bold ಮಾಡಬಹುದು. ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಸ್ಪ್ರೆಡ್‌ಶೀಟ್ ರಚನೆಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್‌ಗಳನ್ನಯ ಆಯ್ಕೆ ಮಾಡಬಹುದು. ಸಾಲಿನ ಮೊದಲ ಹಾಗು ಕೊನೆಯ ಸೆಲ್‌ಗೆ ಹೋಗಲು CTRL+Home (cell A1) ಮತ್ತು CTRL+End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು.
ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು. ಮೆನು ಬಾರ್‌ನಲ್ಲಿ Sheet > rows/ columns ಬಳಸಬಹುದು. ಸ್ಪ್ರೆಡ್‌ಶೀಟ್ ನಮೂನೀಕರಿಸುವುದುಲಿಬ್ರೆ ಆಫೀಸ್ ರೈಟರ್‌ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ದಿನಾಂಕ, ಸಮಯ, ಕರೆನ್ಸಿ ಮುಂತಾದ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ. ಸಂಖ್ಯೆಗಳ ಮಾಹಿತಿಯನ್ನು ನಮೂದಿಸುವಾಗ ಸಂಖ್ಯೆಗಳು ಯಾವ ರೀತಿ ಕಾಣಿಸಬೇಕು ಹಾಗು ಬಿಂದುವಿನ ನಂತರದ ಸಂಖ್ಯೆಗಳು ಹೇಗೆ ಕಾಣಬೇಕು ಎಂಬುದನ್ನು ಸಂರಚಿಸಿಕೊಳ್ಳಬಹುದು. ದತ್ತಾಂಶಕ್ಕೆ ತಲೆಬರಹ ನಮೂದಿಸುವುದು“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ. ಲೆಕ್ಕಾಚಾರಗಳಿಗೆ ಫಾರ್ಮಲಾಗಳನ್ನು ಸೇರಿಸುವುದುಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ. ಇಲ್ಲಿ ಕಾಲಂ B ನ ಕೊನೇ ಸೆಲ್ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು “=” ನ್ನು ನಮೂದಿಸಬೇಕು. ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು. ಒಟ್ಟು ಮೊತ್ತ ನಮೂದಾಗಿರುವ ಸೆಲ್ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್‌ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್‌ನಲ್ಲಿ ಕಾಣಿಸುತ್ತದೆ. ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್ ನ ಫಾರ್ಮುಲಾವನ್ನು ಮತ್ತೊಂದು ಸೆಲ್ ಗೆ ಕಾಪಿ ಮಾಡಬಹುದು. ಒಂದೇ ಕಾಲಂ ನ ಸೆಲ್ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ. ದತ್ತಾಂಶ ವಿಂಗಡಣೆನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು. ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು. ಈ ರೀತಿಯಾಗಿ ವಿಂಗಡಿಸಲು, ಇಡೀ ಶೀಟ್‌ನ್ನು ಆಯ್ಕೆ ಮಾಡಿಕೊಳ್ಳಬೇಕು (CTRL+A). ನಂತರ ಮೆನುಬಾರ್ ನಲ್ಲಿ Data > Sort ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಮಗೆ ಬೇಕಾದ ರೀತಿಯ ವಿಂಗಡಣೆ ಮಾಡಿಕೊಳ್ಳಬಹುದು. ಚಾರ್ಟ್ ಮತ್ತು ಬಾರ್‌ಗಳ ರಚನೆ
ಸ್ಪ್ರೆಡ್‌ಶೀಟ್ ಮುದ್ರಿಸುವುದುಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
ಸ್ಥಳೀಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಅನುದಾನ. ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯನ್ನು ಲಿಬ್ರೆ ಆಫೀಸ್ ಕ್ಯಾಲ್ಕ್ ನ ದತ್ತಾಂಶ ಕೋಷ್ಟಕದಲ್ಲಿ ನಮೂದಿಸಿ, ವಿಶ್ಲೇಷಿಸಿ ನಂತರ ಅದನ್ನು ಕೋಷ್ಟಕ ರೂಪದಲ್ಲಿ ಅಥವಾ ಗ್ರಾಫ್ ರೂಪದಲ್ಲಿ ಪ್ರಸ್ತುತಿಪಡಿಸಬಹುದು.
ಆಕರಗಳು
|