"ಚಿಗುರು ೩ - ಹದಿಹರೆಯದ ವ್ಯಾಖ್ಯಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(Created blank page)
 
೧ ನೇ ಸಾಲು: ೧ ನೇ ಸಾಲು:
 +
= ಸಾರಾಂಶ =
 +
ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ  ಹಾಗೂ  ಅವು  ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ.
  
 +
ಫೆಸಿಲಿಟೇಟರ್‌ - ಆನುಷಾ
 +
 +
ಕೊ-ಫೆಸಿಲಿಟೇಟರ್‌ಗಳು - ಅಪರ್ಣ, ಕಾರ್ತಿಕ್‌, ಶ್ರೇಯಸ್‌
 +
 +
= ಊಹೆಗಳು =
 +
1. ಎರಡನೇ ಮಾಡ್ಯೂಲ್‌ನಲ್ಲಿ ಕಿಶೋರಿಯರ ಸಮಸ್ಯೆಗಳನ್ನು ಗುರುತಿಸಲಾಗಿದೆ.
 +
 +
2. ಕಿಶೋರಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ವ್ಯಕ್ತವಾಗಿಲ್ಲ.
 +
 +
3. ಹಿಂದಿನ ವಾರಗಳ ಮಾತುಕತೆಯಲ್ಲಿ ವೀಡಿಯೋ ತೋರಿಸಿರುವುದರಿಂದ  ಈ  ವಾರ ಕೂಡ ವೀಡಿಯೋ ತೋರಿಸಬಹುದು ಎಂದು ಅಂದುಕೊಂಡಿರಬಹುದು.
 +
 +
4. ಎರಡನೇ ಮಾಡ್ಯುಲ್‌ನಲ್ಲಿ ಮಾಡಿದ ಸುರುಳಿ ಚಟುವಟಿಕೆ ಎಲ್ಲರಿಗೂ ತಿಳಿದಿರುವುದರಿಂದ, ಪುನಃ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ.
 +
 +
5. ಈ ಮಾಡ್ಯೂಲ್‌ನಲ್ಲಿ ಕೂಡ ಚಾರ್ಟ್‌ಗಳನ್ನು ಬಳಸಿದರೆ ಇವರು ಕೇವಲ ಇವುಗಳನ್ನೇ ಬಳಸುತ್ತಾರೆಂದು ಅನಿಸಬಹುದು. ಆದ್ದರಿಂದ ಬೇರೆ ತರಹದ ಚಟುವಟಿಕೆಗಳನ್ನು ಮಾಡಬೇಕು.
 +
 +
6. ಮೂರನೇ ಮಾಡ್ಯೂಲ್‌ ಆಗಿರುವುದರಿಂದ  ಹಾಗೂ ನಾವು ಸುಮಾರು ೨ ತಿಂಗಳಿನಿಂದ ಶಾಲೆಗೆ ಭೇಟಿ ಕೊಡುತ್ತಿರುವುದರಿಂದ, ಕಿಶೋರಿಯರ ಹಿನ್ನಲೆಗಳ ಬಗ್ಗೆ ಸ್ವಲ್ಪ ಗೊತ್ತಿದೆ. ಮನೆಯಲ್ಲಿ ಕಷ್ಟ ಇದೆ, ಜಗಳ ಅಗುತ್ತದೆ, ಮನೆಗೆಲಸ ಮಾಡಬೇಕು, ಬಣ್ಣದ ಬಟ್ಟೆ ಹಾಕಲು ಹಿಂಸೆ ಅಗುತ್ತಿದೆ ಎಂದು ಕಿಶೋರಿಯರು ಹೇಳಿದ್ದಾರೆ.
 +
 +
7. ಶಾಲೆ ಅನ್ನುವುದು ಅವರ ಹಿನ್ನಲೆಗಳಿಗೆ ಸ್ಪಂದಿಸಿ ಅವರ ಅವಶ್ಯಕತೆಗಳಿಗೆ ಪೂರಕವಾಗುವಂತೆ ಇಲ್ಲ.
 +
 +
8. ಹಿಂದಿನ ಮಾತುಕತೆ ಹಾಗು ಈ ಮಾತುಕತೆಯ ನಡುವೆ ಸಮಯದ ಅಂತರ ಜಾಸ್ತಿ ಇರುವುದರಿಂದ, ಕಿಶೋರಿಯರಿಗೆ ಉತ್ಸಾಹ ತರಿಸುವಂತೆ ಹಿಂದಿನ ವಾರಗಳ ಬಗ್ಗೆ ಮೆಲುಕು ಹಾಕಿಕೊಳ್ಳಬೇಕು.
 +
 +
9. ಹಿಂದಿನ ವಾರಗಳಲ್ಲಿ ಗುಂಪುಗಳಲ್ಲಿ ಕ್ಲಾಸಿನಿಂದ ಹೊರಗಡೆಗೆ ಕರೆದುಕೊಂಡು ಹೋಗಿರುವುದರಿಂದ, ಈ ವಾರ ಕೂಡ ಹೊರಗಡೆ  ಕರೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆ ಇರಬಹುದು.
 +
 +
= ಉದ್ದೇಶ =
 +
ಕಿಶೋರಾವಸ್ಥೆಯ ಬಗ್ಗೆ ಎಲ್ಲರೂ ಸೇರಿ ವ್ಯಾಖ್ಯಾನಿಸುವಂತೆ ಮಾಡುವುದು.
 +
 +
= ಬೇಕಾಗಿರುವ ಸಾಮಗ್ರಿಗಳು =
 +
* ಫೆಸಿಲಿಟೇಟರ್‌ಗಳು - ಒಬ್ಬ ಮುಖ್ಯ ಫೆಸಿಲಿಟೇಟರ್‌ ಹಾಗೂ ೩ ಫೆಸಿಲಿಟೇಟರ್‌ಗಳು ಗುಂಪಿನ ಜೊತೆಗೆ ಮಾತನಾಡಲು
 +
* ಸ್ಕೆಚ್‌ಪೆನ್‌ಗಳು (ಗುಂಪು ಮಾಡಲು), ಚಿತ್ರಗಳ ಪ್ರಿಂಟ್‌ ಔಟ್‌ಗಳು,
 +
 +
= ಪ್ರಕ್ರಿಯೆ =
 +
ಈ ಮಾಡ್ಯುಲ್‌ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್‌ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ.
 +
 +
===== ಗುಂಪುಗಳನ್ನು ಮಾಡುವುದು                                 ೨೦ ನಿಮಿಷ                                                                                                        =====
 +
• ಮೂರು ಗುಂಪುಗಳನ್ನು ಮಾಡಿಕೊಳ್ಳಬೇಕು.
 +
 +
• ಗುಂಪುಗಳನ್ನು ಮಾಡಿಕೊಳ್ಳಲು ಸ್ಕೆಚ್ ಪೆನ್‌ಗಳನ್ನು (೧೨ ಬೇರೆ ಬೇರೆ ಬಣ್ಣಗಳು, ೪ ಬಣ್ನಗಳು ಒಬ್ಬೊಬ್ಬರ ಗುಂಪಿಗೆ. ೩ ಗುಂಪುಗಳಲ್ಲಿರುತ್ತವೆ ) ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಸ್ಕೆಚ್‌ ಪೆನ್‌ ಆರಿಸಿಕೊಳ್ಳತ್ತಾರೆ. ಪೂರ್ವ ನಿರ್ಧಾರದಂತೆ  ೩ ಫೆಸಿಲಿಟೇಟರ್‌ಗಳು ೩ ತರಹದ ಬಣ್ಣಗಳನ್ನು ತೆಗೆದುಕೊಡು ಗುಂಪು ಮಾಡಿಕೊಳ್ಳುತ್ತಾರೆ.
 +
 +
===== ಗುಂಪುಗಳ ಬಣ್ಣದ ಸಂಯೋಜನೆಗಳು =====
 +
• ಗಿಳಿ ಹಸಿರು, ಹಸಿರು, ನೀಲಿ, ಆಕಾಶ ನೀಲಿ
 +
 +
• ಕೆಂಪು, ಗುಲಾಬಿ, ಕಂದು, ಕಿತ್ತಳೆ
 +
 +
• ಹಳದಿ, ಬಾದಾಮಿ, ನೇರಳೆ, ಕಪ್ಪು
 +
 +
ಕಿಶೋರಿಯರ ಜೊತೆಗಿನ ಹಿಂದಿನ ವಾರದ ಮಾತುಕತೆಗಳ ಆಧಾರದ ಮೇಲೆ ಪಾತ್ರಾಭಿನಯಗಳ ತಯಾರಿ ಮಾಡಿಕೊಂಡು ಹೋಗಿರುತ್ತೇವೆ. ಇವುಗಳಲ್ಲಿ ಪುರುಷ ಪಾತ್ರಗಳನ್ನು ಮಹಿಳಾ ಫೆಸಿಲಿಟೇಟರ್‌ಗಳು ಹಾಗೂ, ಮಹಿಳೆಯ ಪಾತ್ರಗಳನ್ನು ಪುರುಷ ಫೆಸಿಲಿಟೇಟರ್‌ಗಳು ಮಾಡುವಂತೆ ಉದ್ದೇಶ ಪೂರ್ವಕವಾಗಿ ರಚಿಸಲಾಗಿದೆ.
 +
 +
===== ಸ್ಕಿಟ್ ಪೂರ್ವತಯಾರಿ                             ೫ ನಿಮಿಷ   =====
 +
 +
===== ಪಾತ್ರಾಭಿನಯಗಳು                                 ೧೬ ನಿಮಿಷ =====
 +
 +
===== ಪಾತ್ರಾಭಿನಯ ೧ – ಬ್ಯೂ...ಟಿ =====
 +
 +
===== ಪಾತ್ರಗಳು =====
 +
ಮೊನಿಷಾ - ಕಿಶೋರಿ
 +
 +
ಇಬ್ಬರು ಪೋಕರಿ ಹುಡುಗರು
 +
 +
ಮೊನಿಷಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾಳೆ. ಅವಳನ್ನು ನೋಡಿ ಹುಡುಗರು ಶಿಳ್ಳೆ ಹೊಡೆದು, ಬ್ಯೂಟಿ…. ಮೊ...ನಿ...ಷಾ... ಎಂದು ಚುಡಾಯಿಸುತ್ತಾರೆ.
 +
 +
ಸಮಯಾವಕಾಶದ ಆಧಾರದ ಮೇಲೆ ಪೋಕರಿ ಹುಡುಗರಿಗೆ ಸಂಭಾಷಣೆಗಳನ್ನು ಇಟ್ಟುಕೊಳ್ಳಬಹುದು. ಈ ಸಂಭಾಷಣೆಯು, ಅವರು ಪೋಕರಿ ಹುಡುಗರು ಎನ್ನುವುದನ್ನು ಬಿಂಬಿಸುವಂತೆ ಇರಬೇಕು.
 +
 +
===== ಪಾತ್ರಾಭಿನಯ ೨ - ಬಸ್ಸು                                      ೨ ನಿಮಿಷ =====
 +
 +
===== ಪಾತ್ರಗಳು =====
 +
ಶ್ರೇಯಾ, ಮೊನಿಷಾ - ಕಿಶೋರಿಯರು
 +
 +
೧ ಪುರುಷ ಬಸ್‌ ನಿರ್ವಾಹಕ
 +
 +
೧ ಪುರುಷ ಪ್ರಯಾಣಿಕ
 +
 +
ಶ್ರೇಯಾ ಮತ್ತು ಮೊನಿಷಾ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುತ್ತಾರೆ. ಕಂಡಕ್ಟರ್‌ ಟಿಕೆಟ್‌ ಕೊಡಲು ಬಂದವನು ಮೈಮೇಲೆ ಬೀಳುತ್ತಾನೆ. ಪುರುಷ ಪ್ರಯಾಣಿಕ ಅವರನ್ನೇ ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಕಂಡಕ್ಟರ್‌ ಅವನನ್ನು ಹಿಂದೆ ಹೋಗಿ ಅಂದಾಗ ಹುಡುಗಿಯರ ಮೈಸವರಿ, ಅವರ ಕಾಲು ಮೆಟ್ಟಿ ಹೋಗುತ್ತಾನೆ.
 +
 +
ಸಂಭಾಷಣೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ, ಸಮಯಾವಕಾಶವನ್ನು ನೋಡಿಕೊಂಡು ಹಾಕಿಕೊಳ್ಳಬಹುದು. ಹುಡುಗಿಯರ ಮಾತುಗಳು ಅವರ ವಯಸ್ಸು ಹಾಗೂ ಅವರ ಶಾಲೆಯ ವಿಷಯಗಳ ಸುತ್ತ ಇದ್ದರೆ ಉತ್ತಮ. ಬಸ್‌ ನಿರ್ವಾಹಕನ ಮಾತುಗಳು ಶಾಲಾ ಮಕ್ಕಳ ಬಗ್ಗೆ ನಿರ್ವಾಹಕರ ಕಿರಿಕಿರಿಯನ್ನು ಸೂಚಿಸುವಂತಿರಬಹುದು.
 +
 +
===== ಪಾತ್ರಾಭಿನಯ ೩ – ಹುಡುಗಿ, ಒಪ್ಪಿಗೆನಾ?                              ೫ ನಿಮಿಷ =====
 +
 +
===== ಪಾತ್ರಗಳು =====
 +
ಮೊನಿಷಾ - ಕಿಶೋರಿ
 +
 +
೧ ಕಿಶೋರಿಯ ಅಮ್ಮ
 +
 +
೧ ಕಿಶೋರಿಯ ಅಪ್ಪ
 +
 +
೧ ಮದುವೆ ಗಂಡು
 +
 +
ಮೊನಿಷಾ ಓದುತ್ತಿರುತ್ತಾಳೆ.
 +
 +
ಅವಳ ಅಮ್ಮ ಬಂದು "ಏ ಮೊನಿಷಾ, ರೆಡಿ ಆಗು. ನಿನ್ನ ನೋಡೋಕೆ ಗಂಡು ಬಂದಿದಾನೆ. ಬಂದು ಕಾಫಿ ಕೊಡು" ಅಂತ ಹೇಳ್ತಾಳೆ.
 +
 +
“ನನಗೆ ಇಷ್ಟು ಬೇಗ ಮದುವೆ ಬೇಡ. ನಾನು ರೆಡಿ ಆಗಲ್ಲ"  ಅಂತ ಮೊನಿಷಾ ಹೇಳ್ತಾಳೆ.
 +
 +
“ನನಗೊತ್ತು, ನೀನು ಚೆನ್ನಾಗಿ ಓದ್ತೀಯಾ ಅಂತ. ಆದ್ರೆ ಇವತ್ತು ಒಂದು ದಿವಸ ಹೋಗಿ ಕಾಫಿ ಕೊಡು. ಆಮೇಲೆ ಅಪ್ಪನ ಹತ್ರ ಮಾತಾಡೋಣ", ಅಂತ ಅಮ್ಮ ಹೇಳ್ತಾಳೆ.
 +
 +
ಮೊನಿಷಾ ಬಂದು ಮದುವೆ ಗಂಡಿಗೆ ಕಾಫಿ ಕೊಡುತ್ತಾಳೆ. ಮದುವೆ ಗಂಡು ಅವಳನ್ನು ನುಂಗುವಂತೆ ನೋಡಿ, ನನಗೆ  ಹೆಣ್ಣು ಒಪ್ಪಿಗೆ ಎಂದು, ಇನ್ನೊಮ್ಮೆ ಕೆಕ್ಕರಿಸಿ ನೋಡಿ, ಹೊರಡುತ್ತಾನೆ.
 +
 +
ಅವನು ಹೋದ ಮೇಲೆ, ಅಮ್ಮ - ಮಗಳು ಪಿಸು-ಪಿಸು ಮಾತನಾಡುತ್ತಿರುವುದನ್ನು ಕೇಳಿ, ಅಪ್ಪ ಏನು ಮಾತನಾಡುತ್ತಿರುವಿರಿ? ಎಂದು ಗದರುತ್ತಾನೆ. ಆಗ ಕಿಶೋರಿ ಏನೂ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸುತ್ತಾಳೆ.
 +
 +
ಹುಡುಗ ಹೋದಮೇಲೆ ಅಪ್ಪನ ಮಾತುಗಳು ಮನೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿರುತ್ತವೆ.
 +
 +
ಸಮಯಾವಕಾಶವನ್ನು ನೋಡಿಕೊಂಡು ಮದುವೆ ಗಂಡು ಹಾಗು ಕಿಶೋರಿಯ ಅಪ್ಪನ ನಡುವಿನ ಮಾತುಕತೆಯನ್ನು ಹಾಕಿಕೊಳ್ಳಬಹುದು. ಈ ಮಾತುಕತೆಯು ವರದಕ್ಷಿಣೆ, ಮದುವೆಯ ಬೇರೆ ಬೇರೆ ವಿಷಯಗಳ ಬಗ್ಗೆ ಇದ್ದರೆ ಉತ್ತಮ.
 +
 +
===== ಪಾತ್ರಾಭಿನಯ - ೪ - ಚಿಕ್ಕ ಹುಡುಗಿ                             ೪ ನಿಮಿಷ =====
 +
 +
===== ಪಾತ್ರಗಳು =====
 +
ಶ್ರೇಯಾ - ಕಿಶೋರಿ ೧ - ವಯಸ್ಸಿನಲ್ಲಿ ದೊಡ್ಡವಳು
 +
 +
ಮೊನಿಷಾ - ಕಿಶೋರಿ ೨ - ವಯಸ್ಸಿನಲ್ಲಿ ಚಿಕ್ಕವಳು
 +
 +
ಶ್ರೇಯಾ ಮತ್ತು ಮೊನಿಷಾ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರು ಭಾರವಾದ ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡಿರತ್ತಾರೆ.
 +
 +
ಶ್ರೇಯಾ ನನಗೆ ಹೊಟ್ಟೆ ನೋವು ಎಂದು ಅಂತ ಹೇಳುತ್ತಾಳೆ.
 +
 +
ಆಗ ಮೊನಿಷಾ "ನೀನು ನಿನ್ನೆ ಆ ಕೆಟ್ಟ ನೀರಿನ ಗೋಲಗುಪ್ಪಾ ತಿಂದಿರ್ತೀಯಾ, ಅದಕ್ಕೆ ಬಂದಿರುತ್ತೆ ಹೊಟ್ಟೆ ನೋವು ನಿಂಗೆ" ಅಂತ ಹೇಳುತ್ತಾಳೆ.
 +
 +
ಶ್ರೇಯಾ ಏನೂ ಉತ್ತರ ನೀಡಲ್ಲ. ಹಾಗೆಯೇ ಆ ನೋವಲ್ಲೇ ನಡೆದುಕೊಂಡು ಹೋಗುತ್ತಿರುತ್ತಾಳೆ.
 +
 +
ಪುನಃ ಮೊನಿಷಾ "ಗೋಲಗುಪ್ಪಾ ಅಲ್ಲ ಅಂದ್ರೆ, ಬೇರೆ ಇನ್ನೇನೋ ತಿಂದಿರ್ತೀಯಾ. ಅಥವಾ ಗೋಭಿ ಮಂಚೂರಿ ತಿಂದ್ಯಾ? ಅಷ್ಟೊಂದು ದುಡ್ಡು ಎಲ್‌ ಸಿಕ್ತೆ? ಯಾರಾದ್ರೂ ಕೊಡ್ಸದ್ರ?” ಅಂತ ಎಲ್ಲಾ ಕೇಳುತ್ತಾಳೆ.
 +
 +
ಆಗ ಶ್ರೇಯಾಗೆ ಕಿರಿಕಿರಿಯಾಗಿ "ನೀನು ಚಿಕ್ಕ ಹುಡುಗಿ ನಿನಗೆ ಏನೂ ಗೊತ್ತಾಗಲ್ಲ, ಸುಮ್ಮನೆ ಇರು ನೀನು" ಅಂತ ಮೊನಿಷಾಳನ್ನು ಗದರಿಸುತ್ತಾಳೆ.
 +
 +
===== ಪಾತ್ರಾಭಿನಯ - ೫ -  ಹಾಡು ಕೇಳ್ತೀಯಾ?                             ೪ ನಿಮಿಷ =====
 +
 +
===== ಪಾತ್ರಗಳು =====
 +
೧ ಪೋಲಿ ಹುಡುಗ
 +
 +
ಮೊನಿಷಾ - ಕಿಶೋರಿ
 +
 +
ಶಾರದಾ - ಕಿಶೋರಿಯ ಅಕ್ಕ
 +
 +
ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.
 +
 +
ಮೊನಿಷಾ ಮನೆಯ ಬಾಗಿಲಿನ ಹತ್ತಿರ ನಿಂತುಕೊಂಡು ಇಯರ್‌ ಫೋನ್‌ ಹಾಕಿಕೊಂಡು ಹಾಡು ಕೇಳುತ್ತಾ ಹುಡುಗನನ್ನೇ ನೋಡುತ್ತಿರುತ್ತಾಳೆ.
 +
 +
ಹಿನ್ನಲೆಯಲ್ಲಿ ಪ್ರೇಮಗೀತೆ ಬರುತ್ತಿರುತ್ತದೆ.
 +
 +
ಆಗ ಶಾರದ ಬಂದು, ಶ್ರೇಯಾಳನ್ನು ನೋಡಿ ಅವಳಿಗೆ, "ದಾರೀಲಿ ಹೋಗೊರನ್ನ ನೊಡ್ಕೊಂಡು ಹಲ್ಲು ಗಿಂಜಿಕೊಂಡಿರುತ್ತೀಯಾ, ಕೊಡೆ ಇಲ್ಲಿ ಮೊಬೈಲ್, ಮನೇಲಿ ಏನೂ ಕೆಲ್ಸ ಮಾಡಲ್ಲ, ನಡಿ" ಎಂದು, ಇಯರ್‌ ಫೋನ್‌  ತೆಗೆದುಕೊಂಡು ಫೋನ್ ಕಸಿದುಕೊಳ್ಳುತ್ತಾಳೆ.
 +
 +
ಆಗ ಮೊನಿಷಾ "ಈ ಹಾಡನ್ನಾದ್ರೂ ಕೇಳಿ ಕೊಡ್ತೀನಿ, ಫೋನ್ ಕೊಡೆ" ಅಂತ ಗೋಗರಿಯುತ್ತಾಳೆ. ಆದರೆ ಶ್ರೇಯಾ, ಮೊನಿಷಾಳನ್ನು ದರದರನೆ ಎಳೆದುಕೊಂಡು ಹೋಗುತ್ತಾಳೆ.
 +
 +
ಈ ೫ ಪಾತ್ರಾಭಿನಯಗಳನ್ನು ಮಾಡಿ ಮುಗಿಸಿದ ನಂತರ ತರಗತಿಯು ತಹಬಂದಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
 +
 +
ಕಿಶೋರಿಯರನ್ನು ಪಾತ್ರಾಭಿನಯಗಳನ್ನು ನೋಡಿ ನಿಮಗೆ ಏನನ್ನಿಸಿತು ಎಂದು ಕೇಳುತ್ತೇವೆ.
 +
 +
ಅವರು "ತುಂಬಾ ಚೆನ್ನಾಗಿತ್ತು”, "ಸೂಪರ್‌ ಆಗಿತ್ತು" ಎಂದು ಹೇಳಬಹುದು. ಕೆಲವರು ಪಾತ್ರಾಭಿನಯದ ಸಂಭಾಷಣೆಗಳನ್ನು ಹೇಳಬಹುದು.
 +
 +
ಇದಾದ ನಂತರ, ಅವರನ್ನು ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುತ್ತೇವೆ. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ.
 +
 +
ಗುಂಪಿನಲ್ಲಿ ಕುಳಿತುಕೊಂಡ ನಂತರ ಪಾತ್ರಾಭಿನಯಗಳ ಶೀರ್ಷಿಕೆಗಳನ್ನು ಬಳಸಿಕೊಂಡು ಗುಂಪಿನ ಚರ್ಚೆಯನ್ನು ಪ್ರಾರಂಭಿಸಬಹುದು.
 +
 +
ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು
 +
# ಯಾವ ಪಾತ್ರಾಭಿನಯ ಇಷ್ಟ ಆಯಿತು? ಯಾಕೆ?
 +
# ಯಾವ ಪಾತ್ರ ಇಷ್ಟ ಆಯಿತು? ಯಾಕೆ?
 +
# ಕಥೆ ಇಷ್ಟ ಆಯ್ತು ಅಂದರೆ, ಯಾವ ಕಥೆ ಇಷ್ಟ ಆಯ್ತು?
 +
ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ  ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು. ಹೀಗೆಯೇ ಪ್ರತಿ ಕಥೆಯ ಬಗ್ಗೆಯೂ ಕೇಳುವುದು.
 +
 +
ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಗುಂಪಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು.
 +
 +
"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.
 +
 +
"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್‌, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.
 +
 +
"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”
 +
 +
ಹೀಗೇಯೇ ಎಲ್ಲಾ ಕಥೆಗಳ ಬಗ್ಗೆಯೂ ಒಂದೊಂದಾಗಿ ಏನನ್ನಿಸಿತು ಎಂದು ಕೇಳವುದು.
 +
 +
"ಹಾಡು ಕೇಳ್ತೀಯಾ?ಕಥೆ ಬಗ್ಗೆ ಏನು ಅನ್ನಿಸಿತು?” ಎಂದು ಕೇಳಿದರೆ ಈ ಕೆಳಗಿನ ಅಂಶಗಳನ್ನು ಹೇಳಬಹುದು.
 +
 +
• ಚೆನ್ನಾಗಿತ್ತು.
 +
 +
• ಹುಡುಗಿನೇ ಹುಡುಗನನ್ನು ಹೆಚ್ಚು ನೋಡುತ್ತಿದ್ದಳು.
 +
 +
• ಅಕ್ಕ ಬಂದು ಬೈದಳು.
 +
 +
ಹೀಗೆ ಎಲ್ಲಾ ಕಥೆಗಳ ಬಗ್ಗೆ ಕೇಳುತ್ತೇವೆ.
 +
 +
ಇದಾದ ನಂತರ ಕಿಶೋರಿಯರಿಗೆ ಪಾತ್ರಾಭಿನಯಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.
 +
 +
"ಇದನ್ನೆಲ್ಲಾ ನೊಡಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.
 +
 +
• ಚುಡಾಯಿಸುವುದು.
 +
 +
• ಕಾಲು ತುಳಿಯುವುದು.
 +
 +
• ಹೊಟ್ಟೆ ನೋವು.
 +
 +
• ಹುಡುಗ ಹುಡುಗಿ ಕಥೆ
 +
 +
ಇಲ್ಲಿಯವರೆಗೆ ಒಂದು ವಾರದ ಸಮಯ ಮುಗಿದಿರುತ್ತದೆ.
 +
 +
ಎರಡನೇ ವಾರದ ಚಟುವಟಿಕೆಗಳು
 +
 +
ಚಟುವಟಿಕೆಗಳನ್ನು ಹಿಂದಿನ ವಾರದ ಗುಂಪುಗಳಲ್ಲೇ ಮುಂದುವರೆಸುತ್ತೇವೆ. ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುತ್ತೇವೆ.
 +
 +
೧ ಮಗುವಿನ ಚಿತ್ರ ೨ ಕಿಶೋರಿಯರ ವಯಸ್ಸಿನ ಚಿತ್ರ
 +
 +
<ಕಿಶೋರಿಯರ ಚಿತ್ರಗಳು>
 +
 +
೯-೧೦ ಜನರ ಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು ಹಾಗೂ ಅವರಲ್ಲೇ ೩ ಜನರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು.
 +
 +
ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
 +
 +
“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.
 +
 +
ಅನ್ವಯ ಆದರೆ, ಏನೇನು ಅನ್ವಯ ಅಗುತ್ತವೆ? ಆಗಿಲ್ಲ ಅಂದರೆ ಏಕೆ ಆಗಲ್ಲ?
 +
 +
ಮಗುವಿನ ಚಿತ್ರದ ಬಗ್ಗೆ ಮೊದಲು ಕೇಳುತ್ತೇವೆ.  
 +
 +
"ಮಗುವಿಗೆ ಹೊಟ್ಟೆ ನೋವು ಬರುತ್ತೆ" ಎಂದು ಕಿಶೋರಿಯರು ಹೇಳಬಹುದು.
 +
 +
ಆಮೇಲೆ ಉಳಿದ ಎರಡು ಗುಂಪುಗಳಿಗೆ ಬಂದ ಚಿತ್ರಗಳಿಗೆ ಏನೇನು ಅನ್ವಯ ಆಗುತ್ತದೆ ಎಂದು ಕೇಳುತ್ತೇವೆ.
 +
 +
• ಕಿಶೋರಿಯರು ಎಲ್ಲ ಕಥೆಗಳ ಬಗ್ಗೆ ಹೇಳಬಹುದು.
 +
 +
ಇದಾದ ನಂತರ ಈ ಕಿಶೋರಿಯರಿಗೆ ಏಷ್ಟು ವರ್ಷ ಇರಬಹುದು ಎಂದು ಕೇಳುತ್ತೇವೆ.
 +
 +
ಇದಾದ ನಂತರ ಗುಂಪಿನಿಂದ, ಕ್ಲಾಸ್‌ರೂಮಿಗೆ ಬರುತ್ತೇವೆ.
 +
 +
ಪ್ರತಿ ಫಸಿಲಿಟೇಟರ್‌ಗಳು ಅವರವರ ಗುಂಪುಗಳಲ್ಲಿ ಬಂದ ಅಂಶಗಳನ್ನು ಎಲ್ಲರ ಮುಂದೆ ಓದುತ್ತಾರೆ
 +
 +
ಮುಖ್ಯ ಫೆಸಿಲಿಟೇಟರ್‌ “ಈ ಚಿತ್ರಗಳಲ್ಲಿ ನಿಮ್ಮನ್ನ ಯಾವ ಚಿತ್ರಕ್ಕೆ ಹೋಲಿಕೆ ಮಾಡ್ಕೋತೀರಾ?”
 +
 +
ಕಿಶೋರಿಯರು ಒಂದು ಚಿತ್ರವನ್ನು ಹೇಳುತ್ತಾರೆ.
 +
 +
"ಏಕೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.
 +
 +
• ಒಂದೇ ವಯಸ್ಸು.
 +
 +
• ಒಂದೇ ತರಹದ ಸಮಸ್ಯೆಗಳು.
 +
 +
• ಒಂದೇ ತರಹದ ಸನ್ನಿವೇಶಗಳು.
 +
 +
• ಅವರಿಗೆ ಆಗಿರೋದೆಲ್ಲಾ ನಮಗೂ ಅಗುತ್ತೆ.
 +
 +
= ಉಪಸಂಹಾರ =
 +
ಫೆಸಿಲಿಟೇಟರ್‌ ಈ ಕೆಳಗಿನ ಅಂಶಗಳನ್ನು ಹೇಳಬಹುದು. ಹೇಳುವ ರೀತಿ ವಿಧಾನಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು.
 +
 +
ಹಿಂದಿನ ವಾರಗಳಲ್ಲಿ ನಿಮ್ಮ ಜೊತೆ ಮಾತನಾಡಿದಾಗ ಬೇರೆ ಬೇರೆ ಸಮಸ್ಯೆಗಳನ್ನು ಗುರುತಿಸಿದ್ದೇವೆ.
 +
 +
ಉದಾಹರೆಣೆಗೆ
 +
 +
• ಸ್ಕೂಲಿನಿಂದ ಹೋಗುವಾಗ ರೇಗಿಸುತ್ತಾರೆ
 +
 +
• ಬಸ್‌ನಲ್ಲಿ ಕಾಲು ತುಳಿಯುತ್ತಾರೆ.
 +
 +
ಹಾಗೂ, ಈ ಸಮಸ್ಯೆಗಳು ಕೇವಲ ನಮ್ಮದೊಂದೇ ಅಲ್ಲ, ಎಲ್ಲರದ್ದೂ ಅಂತ ತಿಳಿದುಕೊಂಡಿದ್ದೇವೆ.  
 +
 +
ಆಮೇಲೆ ಹಿಂದಿನ ವಾರ ಪಾತ್ರಾಭಿನಯಗಳ ಮಾಡಿದ್ದೆವು. ಈ ಪಾತ್ರಾಭಿನಯಗಳ ಮೂಲಕ ಹಾಗೂ ಗುಂಪಿನ ಚರ್ಚೆಗಳ ಮೂಲಕ ಯಾವ ವಯಸ್ಸಿನ ಹೆಣ್ಣುಮಕ್ಕಳಿಗೆ ಪಾತ್ರಾಭಿನಯಗಳಲ್ಲಿ ಹೇಳಿರುವ ಸಮಸ್ಯೆಗಳು ಬರಬಹುದು ಅಂತ ಗುರುತಿಸಿದ್ದೇವೆ.
 +
 +
ಆಮೇಲೆ ನೀವು ಹೇಳಿದ ಹಾಗೆ ಇವರೆಲ್ಲಾ ನಿಮ್ಮ ವಯಸ್ಸಿನ ಹುಡುಗಿಯರೇ ಅಂತ.
 +
 +
೧೨ ವರ್ಷಕ್ಕಿಂತ ಕಮ್ಮಿ ವಯಸ್ಸನ್ನ ಬಾಲ್ಯಾವಸ್ಥೆ ಅಂತ ಹೇಳಬಹುದು. ೧೯ ವರ್ಷಕ್ಕಿಂತ ಜಾಸ್ತಿ ವಯಸ್ಸನ್ನ ಪ್ರೌಢಾವಸ್ಥೆ ಅಂತ ಹೇಳಬಹುದು. ಹಾಗೇ ಆ ಮಧ್ಯದಲ್ಲಿ ಇರುವ ೧೨- ೧೯ ವಯಸ್ಸು. ಅದನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.
 +
 +
ಈ ವಯಸ್ಸನ್ನೇ ಅಥವಾ ನಿಮ್ಮ ವಯಸ್ಸನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.
 +
 +
ಇದನ್ನ '''''ಹದಿಹರೆಯ, ಟೀನೇಜ್‌''''' ಎಂದು ಹೇಳಬಹುದು.  
 +
 +
ನಾವು ತರಗತಿಯಲ್ಲಿ ಏನೆಂದು ಕರೆಯೋಣ ಎಂದು ನಿರ್ಧರಿಸಿಕೊಳ್ಳುತ್ತೇವೆ.
 +
 +
ನಿಮಗೆ ಗೊತ್ತಿರುವ ಹಾಗೆ, ಟೀನೇಜ್‌ನಲ್ಲಿ, ಶಾರೀರಿಕ ಬದಲಾವಣೆ, ಮಾನಸಿಕ ಹಾಗೂ ಬೌಧ್ಧಿಕ ಬದಲಾವಣೆಗಳು ಅಗುತ್ತವೆ.  ಇದು ಹುಡುಗೀರಿಗೊಂದೇ ಅಲ್ಲ. ಹುಡುಗರಿಗೂ ಆಗುತ್ತವೆ.
 +
 +
ಶಾರೀರಿಕವಾಗಿ, ಎತ್ತರ ಜಾಸ್ತಿ ಆಗಬಹುದು. ಬೇರೆ ಬೇರೆ ವಯಸ್ಸಲ್ಲಿ ದೊಡ್ಡೋರಾಗಬಹುದು. ಹುಡುಗರಿಗೆ ಧ್ವನಿ ಗಡಸು ಆಗಬಹುದು.
 +
 +
ಮಾನಸಿಕ ಬದಲಾವಣೆಗಳನ್ನು ನೋಡಿದರೆ, ನಮ್ಮ ಉಡುಪಿನ ಶೈಲಿ ಬದಲಾಗಬಹುದು. ನಾವು ಯಾವ ಥರ ಬಟ್ಟೆ ತೊಡಬೇಕು, ಕೂದಲು ಯಾವ ಥರ ಇರಬೇಕು ಎಂದು ನಾವೇ ಯೋಚಿಸಲು ಶುರು ಮಾಡಿರಬಹುದು.
 +
 +
ಯಶ್, ದರ್ಶನ್‌, ವಿಜಯ್ ಎಲ್ಲಾ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.
 +
 +
ಅಥವಾ ಗಂಡುಮಕ್ಕಳಿಗೆ ರಚಿತಾ ರಾಮ್‌, ತಮನ್ನಾ, ದೀಪಿಕಾ ಪಡುಕೋಣೆ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.
 +
 +
ಬೌಧ್ಧಿಕವಾಗಿ ಕೆಲವೊಂದು ವಿಷಯಗಳು ಅರ್ಥ ಆಗಲು ಶುರು ಆಗಬಹುದು.
 +
 +
ಚಿತ್ರಕಥೆ ಮೊದಲು ಅರ್ಥ ಆಗ್ತಾ ಇರಲಿಲ್ಲ, ಈಗ ಅರ್ಥ ಆಗುತ್ತೆ. ಪರಿಸರ, ಮಾಲಿನ್ಯದ ಬಗ್ಗೆ ಅರ್ಥ ಆಗುತ್ತದೆ.
 +
 +
ಹೀಗೇ ಹಲವಾರು ಬದಲಾವಣೆಗಳು ನಮ್ಮಲ್ಲಿ ಆಗಬಹುದು.
 +
 +
ಇವುಗಳನ್ನೆಲ್ಲ ಒಟ್ಟು ಸೇರಿಸಿ ನಾವು ಅದನ್ನ ಟೀನೇಜ್‌ ಅಂತ ಕರೆಯಬಹುದೆ? ಎಂದು ಕೇಳುವುದು.
 +
 +
ಹೌದು ಎಂದು ಕಿಶೋರಿಯರು ಹೇಳಬಹುದು.
 +
 +
ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ.
 +
 +
= ಬೇಕಾಗಿರುವ ಸಂಪನ್ಮೂಲಗಳು =
 +
• ಪಾತ್ರಾಭಿನಯಕ್ಕೆ ಬೇಕಾದ ಪ್ರಸಾಧನ(ಮೇಕಪ್‌) ಸಾಮಗ್ರಿಗಳು.
 +
 +
• ದಾವಣಿಗಳು - ೨
 +
 +
• ಸ್ಕೆಚ್‌ ಪೆನ್‌ - ೩ ಸೆಟ್
 +
 +
• ಕಿಶೋರಿಯರ ಹಾಗೂ ಮಗುವಿನ ಪ್ರಿಂಟ್‌ ತೆಗೆದ ಚಿತ್ರಗಳು
 +
 +
= ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ =
 +
ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೩, ಪಾತ್ರಾಭಿನಯ ಮಾಡಲು ೪
 +
 +
= ಒಟ್ಟು ಸಮಯ =
 +
೧೬೦ ನಿಮಿಷಗಳು (೨ ತರಗತಿಗಳು ಸೇರಿ)
 +
 +
= ಇನ್‌ಪುಟ್‌ಗಳು =
 +
• ನಾವು ಮಾಡುವ ಪಾತ್ರಾಭಿನಯಗಳು
 +
 +
• ಮಗು ಹಾಗೂ ಕಿಶೋರಿಯರ ಚಿತ್ರಗಳು
 +
 +
= ಔಟ್‌ಪುಟ್‌ಗಳು =
 +
• ಗುಂಪಿನ ಚರ್ಚೆಯಲ್ಲಿ ಬರುವ ಅಂಶಗಳು

೧೭:೪೦, ೩ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಸಾರಾಂಶ

ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ  ಹಾಗೂ  ಅವು  ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ.

ಫೆಸಿಲಿಟೇಟರ್‌ - ಆನುಷಾ

ಕೊ-ಫೆಸಿಲಿಟೇಟರ್‌ಗಳು - ಅಪರ್ಣ, ಕಾರ್ತಿಕ್‌, ಶ್ರೇಯಸ್‌

ಊಹೆಗಳು

1. ಎರಡನೇ ಮಾಡ್ಯೂಲ್‌ನಲ್ಲಿ ಕಿಶೋರಿಯರ ಸಮಸ್ಯೆಗಳನ್ನು ಗುರುತಿಸಲಾಗಿದೆ.

2. ಕಿಶೋರಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ವ್ಯಕ್ತವಾಗಿಲ್ಲ.

3. ಹಿಂದಿನ ವಾರಗಳ ಮಾತುಕತೆಯಲ್ಲಿ ವೀಡಿಯೋ ತೋರಿಸಿರುವುದರಿಂದ  ಈ  ವಾರ ಕೂಡ ವೀಡಿಯೋ ತೋರಿಸಬಹುದು ಎಂದು ಅಂದುಕೊಂಡಿರಬಹುದು.

4. ಎರಡನೇ ಮಾಡ್ಯುಲ್‌ನಲ್ಲಿ ಮಾಡಿದ ಸುರುಳಿ ಚಟುವಟಿಕೆ ಎಲ್ಲರಿಗೂ ತಿಳಿದಿರುವುದರಿಂದ, ಪುನಃ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ.

5. ಈ ಮಾಡ್ಯೂಲ್‌ನಲ್ಲಿ ಕೂಡ ಚಾರ್ಟ್‌ಗಳನ್ನು ಬಳಸಿದರೆ ಇವರು ಕೇವಲ ಇವುಗಳನ್ನೇ ಬಳಸುತ್ತಾರೆಂದು ಅನಿಸಬಹುದು. ಆದ್ದರಿಂದ ಬೇರೆ ತರಹದ ಚಟುವಟಿಕೆಗಳನ್ನು ಮಾಡಬೇಕು.

6. ಮೂರನೇ ಮಾಡ್ಯೂಲ್‌ ಆಗಿರುವುದರಿಂದ  ಹಾಗೂ ನಾವು ಸುಮಾರು ೨ ತಿಂಗಳಿನಿಂದ ಶಾಲೆಗೆ ಭೇಟಿ ಕೊಡುತ್ತಿರುವುದರಿಂದ, ಕಿಶೋರಿಯರ ಹಿನ್ನಲೆಗಳ ಬಗ್ಗೆ ಸ್ವಲ್ಪ ಗೊತ್ತಿದೆ. ಮನೆಯಲ್ಲಿ ಕಷ್ಟ ಇದೆ, ಜಗಳ ಅಗುತ್ತದೆ, ಮನೆಗೆಲಸ ಮಾಡಬೇಕು, ಬಣ್ಣದ ಬಟ್ಟೆ ಹಾಕಲು ಹಿಂಸೆ ಅಗುತ್ತಿದೆ ಎಂದು ಕಿಶೋರಿಯರು ಹೇಳಿದ್ದಾರೆ.

7. ಶಾಲೆ ಅನ್ನುವುದು ಅವರ ಹಿನ್ನಲೆಗಳಿಗೆ ಸ್ಪಂದಿಸಿ ಅವರ ಅವಶ್ಯಕತೆಗಳಿಗೆ ಪೂರಕವಾಗುವಂತೆ ಇಲ್ಲ.

8. ಹಿಂದಿನ ಮಾತುಕತೆ ಹಾಗು ಈ ಮಾತುಕತೆಯ ನಡುವೆ ಸಮಯದ ಅಂತರ ಜಾಸ್ತಿ ಇರುವುದರಿಂದ, ಕಿಶೋರಿಯರಿಗೆ ಉತ್ಸಾಹ ತರಿಸುವಂತೆ ಹಿಂದಿನ ವಾರಗಳ ಬಗ್ಗೆ ಮೆಲುಕು ಹಾಕಿಕೊಳ್ಳಬೇಕು.

9. ಹಿಂದಿನ ವಾರಗಳಲ್ಲಿ ಗುಂಪುಗಳಲ್ಲಿ ಕ್ಲಾಸಿನಿಂದ ಹೊರಗಡೆಗೆ ಕರೆದುಕೊಂಡು ಹೋಗಿರುವುದರಿಂದ, ಈ ವಾರ ಕೂಡ ಹೊರಗಡೆ  ಕರೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆ ಇರಬಹುದು.

ಉದ್ದೇಶ

ಕಿಶೋರಾವಸ್ಥೆಯ ಬಗ್ಗೆ ಎಲ್ಲರೂ ಸೇರಿ ವ್ಯಾಖ್ಯಾನಿಸುವಂತೆ ಮಾಡುವುದು.

ಬೇಕಾಗಿರುವ ಸಾಮಗ್ರಿಗಳು

  • ಫೆಸಿಲಿಟೇಟರ್‌ಗಳು - ಒಬ್ಬ ಮುಖ್ಯ ಫೆಸಿಲಿಟೇಟರ್‌ ಹಾಗೂ ೩ ಫೆಸಿಲಿಟೇಟರ್‌ಗಳು ಗುಂಪಿನ ಜೊತೆಗೆ ಮಾತನಾಡಲು
  • ಸ್ಕೆಚ್‌ಪೆನ್‌ಗಳು (ಗುಂಪು ಮಾಡಲು), ಚಿತ್ರಗಳ ಪ್ರಿಂಟ್‌ ಔಟ್‌ಗಳು,

ಪ್ರಕ್ರಿಯೆ

ಈ ಮಾಡ್ಯುಲ್‌ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್‌ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ.

ಗುಂಪುಗಳನ್ನು ಮಾಡುವುದು                                 ೨೦ ನಿಮಿಷ                                                                                                        

• ಮೂರು ಗುಂಪುಗಳನ್ನು ಮಾಡಿಕೊಳ್ಳಬೇಕು.

• ಗುಂಪುಗಳನ್ನು ಮಾಡಿಕೊಳ್ಳಲು ಸ್ಕೆಚ್ ಪೆನ್‌ಗಳನ್ನು (೧೨ ಬೇರೆ ಬೇರೆ ಬಣ್ಣಗಳು, ೪ ಬಣ್ನಗಳು ಒಬ್ಬೊಬ್ಬರ ಗುಂಪಿಗೆ. ೩ ಗುಂಪುಗಳಲ್ಲಿರುತ್ತವೆ ) ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಸ್ಕೆಚ್‌ ಪೆನ್‌ ಆರಿಸಿಕೊಳ್ಳತ್ತಾರೆ. ಪೂರ್ವ ನಿರ್ಧಾರದಂತೆ  ೩ ಫೆಸಿಲಿಟೇಟರ್‌ಗಳು ೩ ತರಹದ ಬಣ್ಣಗಳನ್ನು ತೆಗೆದುಕೊಡು ಗುಂಪು ಮಾಡಿಕೊಳ್ಳುತ್ತಾರೆ.

ಗುಂಪುಗಳ ಬಣ್ಣದ ಸಂಯೋಜನೆಗಳು

• ಗಿಳಿ ಹಸಿರು, ಹಸಿರು, ನೀಲಿ, ಆಕಾಶ ನೀಲಿ

• ಕೆಂಪು, ಗುಲಾಬಿ, ಕಂದು, ಕಿತ್ತಳೆ

• ಹಳದಿ, ಬಾದಾಮಿ, ನೇರಳೆ, ಕಪ್ಪು

ಕಿಶೋರಿಯರ ಜೊತೆಗಿನ ಹಿಂದಿನ ವಾರದ ಮಾತುಕತೆಗಳ ಆಧಾರದ ಮೇಲೆ ಪಾತ್ರಾಭಿನಯಗಳ ತಯಾರಿ ಮಾಡಿಕೊಂಡು ಹೋಗಿರುತ್ತೇವೆ. ಇವುಗಳಲ್ಲಿ ಪುರುಷ ಪಾತ್ರಗಳನ್ನು ಮಹಿಳಾ ಫೆಸಿಲಿಟೇಟರ್‌ಗಳು ಹಾಗೂ, ಮಹಿಳೆಯ ಪಾತ್ರಗಳನ್ನು ಪುರುಷ ಫೆಸಿಲಿಟೇಟರ್‌ಗಳು ಮಾಡುವಂತೆ ಉದ್ದೇಶ ಪೂರ್ವಕವಾಗಿ ರಚಿಸಲಾಗಿದೆ.

ಸ್ಕಿಟ್ ಪೂರ್ವತಯಾರಿ                             ೫ ನಿಮಿಷ   
ಪಾತ್ರಾಭಿನಯಗಳು                                 ೧೬ ನಿಮಿಷ
ಪಾತ್ರಾಭಿನಯ ೧ – ಬ್ಯೂ...ಟಿ
ಪಾತ್ರಗಳು

ಮೊನಿಷಾ - ಕಿಶೋರಿ

ಇಬ್ಬರು ಪೋಕರಿ ಹುಡುಗರು

ಮೊನಿಷಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾಳೆ. ಅವಳನ್ನು ನೋಡಿ ಹುಡುಗರು ಶಿಳ್ಳೆ ಹೊಡೆದು, ಬ್ಯೂಟಿ…. ಮೊ...ನಿ...ಷಾ... ಎಂದು ಚುಡಾಯಿಸುತ್ತಾರೆ.

ಸಮಯಾವಕಾಶದ ಆಧಾರದ ಮೇಲೆ ಪೋಕರಿ ಹುಡುಗರಿಗೆ ಸಂಭಾಷಣೆಗಳನ್ನು ಇಟ್ಟುಕೊಳ್ಳಬಹುದು. ಈ ಸಂಭಾಷಣೆಯು, ಅವರು ಪೋಕರಿ ಹುಡುಗರು ಎನ್ನುವುದನ್ನು ಬಿಂಬಿಸುವಂತೆ ಇರಬೇಕು.

ಪಾತ್ರಾಭಿನಯ ೨ - ಬಸ್ಸು                                      ೨ ನಿಮಿಷ
ಪಾತ್ರಗಳು

ಶ್ರೇಯಾ, ಮೊನಿಷಾ - ಕಿಶೋರಿಯರು

೧ ಪುರುಷ ಬಸ್‌ ನಿರ್ವಾಹಕ

೧ ಪುರುಷ ಪ್ರಯಾಣಿಕ

ಶ್ರೇಯಾ ಮತ್ತು ಮೊನಿಷಾ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುತ್ತಾರೆ. ಕಂಡಕ್ಟರ್‌ ಟಿಕೆಟ್‌ ಕೊಡಲು ಬಂದವನು ಮೈಮೇಲೆ ಬೀಳುತ್ತಾನೆ. ಪುರುಷ ಪ್ರಯಾಣಿಕ ಅವರನ್ನೇ ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಕಂಡಕ್ಟರ್‌ ಅವನನ್ನು ಹಿಂದೆ ಹೋಗಿ ಅಂದಾಗ ಹುಡುಗಿಯರ ಮೈಸವರಿ, ಅವರ ಕಾಲು ಮೆಟ್ಟಿ ಹೋಗುತ್ತಾನೆ.

ಸಂಭಾಷಣೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ, ಸಮಯಾವಕಾಶವನ್ನು ನೋಡಿಕೊಂಡು ಹಾಕಿಕೊಳ್ಳಬಹುದು. ಹುಡುಗಿಯರ ಮಾತುಗಳು ಅವರ ವಯಸ್ಸು ಹಾಗೂ ಅವರ ಶಾಲೆಯ ವಿಷಯಗಳ ಸುತ್ತ ಇದ್ದರೆ ಉತ್ತಮ. ಬಸ್‌ ನಿರ್ವಾಹಕನ ಮಾತುಗಳು ಶಾಲಾ ಮಕ್ಕಳ ಬಗ್ಗೆ ನಿರ್ವಾಹಕರ ಕಿರಿಕಿರಿಯನ್ನು ಸೂಚಿಸುವಂತಿರಬಹುದು.

ಪಾತ್ರಾಭಿನಯ ೩ – ಹುಡುಗಿ, ಒಪ್ಪಿಗೆನಾ?                              ೫ ನಿಮಿಷ
ಪಾತ್ರಗಳು

ಮೊನಿಷಾ - ಕಿಶೋರಿ

೧ ಕಿಶೋರಿಯ ಅಮ್ಮ

೧ ಕಿಶೋರಿಯ ಅಪ್ಪ

೧ ಮದುವೆ ಗಂಡು

ಮೊನಿಷಾ ಓದುತ್ತಿರುತ್ತಾಳೆ.

ಅವಳ ಅಮ್ಮ ಬಂದು "ಏ ಮೊನಿಷಾ, ರೆಡಿ ಆಗು. ನಿನ್ನ ನೋಡೋಕೆ ಗಂಡು ಬಂದಿದಾನೆ. ಬಂದು ಕಾಫಿ ಕೊಡು" ಅಂತ ಹೇಳ್ತಾಳೆ.

“ನನಗೆ ಇಷ್ಟು ಬೇಗ ಮದುವೆ ಬೇಡ. ನಾನು ರೆಡಿ ಆಗಲ್ಲ"  ಅಂತ ಮೊನಿಷಾ ಹೇಳ್ತಾಳೆ.

“ನನಗೊತ್ತು, ನೀನು ಚೆನ್ನಾಗಿ ಓದ್ತೀಯಾ ಅಂತ. ಆದ್ರೆ ಇವತ್ತು ಒಂದು ದಿವಸ ಹೋಗಿ ಕಾಫಿ ಕೊಡು. ಆಮೇಲೆ ಅಪ್ಪನ ಹತ್ರ ಮಾತಾಡೋಣ", ಅಂತ ಅಮ್ಮ ಹೇಳ್ತಾಳೆ.

ಮೊನಿಷಾ ಬಂದು ಮದುವೆ ಗಂಡಿಗೆ ಕಾಫಿ ಕೊಡುತ್ತಾಳೆ. ಮದುವೆ ಗಂಡು ಅವಳನ್ನು ನುಂಗುವಂತೆ ನೋಡಿ, ನನಗೆ  ಹೆಣ್ಣು ಒಪ್ಪಿಗೆ ಎಂದು, ಇನ್ನೊಮ್ಮೆ ಕೆಕ್ಕರಿಸಿ ನೋಡಿ, ಹೊರಡುತ್ತಾನೆ.

ಅವನು ಹೋದ ಮೇಲೆ, ಅಮ್ಮ - ಮಗಳು ಪಿಸು-ಪಿಸು ಮಾತನಾಡುತ್ತಿರುವುದನ್ನು ಕೇಳಿ, ಅಪ್ಪ ಏನು ಮಾತನಾಡುತ್ತಿರುವಿರಿ? ಎಂದು ಗದರುತ್ತಾನೆ. ಆಗ ಕಿಶೋರಿ ಏನೂ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸುತ್ತಾಳೆ.

ಹುಡುಗ ಹೋದಮೇಲೆ ಅಪ್ಪನ ಮಾತುಗಳು ಮನೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿರುತ್ತವೆ.

ಸಮಯಾವಕಾಶವನ್ನು ನೋಡಿಕೊಂಡು ಮದುವೆ ಗಂಡು ಹಾಗು ಕಿಶೋರಿಯ ಅಪ್ಪನ ನಡುವಿನ ಮಾತುಕತೆಯನ್ನು ಹಾಕಿಕೊಳ್ಳಬಹುದು. ಈ ಮಾತುಕತೆಯು ವರದಕ್ಷಿಣೆ, ಮದುವೆಯ ಬೇರೆ ಬೇರೆ ವಿಷಯಗಳ ಬಗ್ಗೆ ಇದ್ದರೆ ಉತ್ತಮ.

ಪಾತ್ರಾಭಿನಯ - ೪ - ಚಿಕ್ಕ ಹುಡುಗಿ                             ೪ ನಿಮಿಷ
ಪಾತ್ರಗಳು

ಶ್ರೇಯಾ - ಕಿಶೋರಿ ೧ - ವಯಸ್ಸಿನಲ್ಲಿ ದೊಡ್ಡವಳು

ಮೊನಿಷಾ - ಕಿಶೋರಿ ೨ - ವಯಸ್ಸಿನಲ್ಲಿ ಚಿಕ್ಕವಳು

ಶ್ರೇಯಾ ಮತ್ತು ಮೊನಿಷಾ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರು ಭಾರವಾದ ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡಿರತ್ತಾರೆ.

ಶ್ರೇಯಾ ನನಗೆ ಹೊಟ್ಟೆ ನೋವು ಎಂದು ಅಂತ ಹೇಳುತ್ತಾಳೆ.

ಆಗ ಮೊನಿಷಾ "ನೀನು ನಿನ್ನೆ ಆ ಕೆಟ್ಟ ನೀರಿನ ಗೋಲಗುಪ್ಪಾ ತಿಂದಿರ್ತೀಯಾ, ಅದಕ್ಕೆ ಬಂದಿರುತ್ತೆ ಹೊಟ್ಟೆ ನೋವು ನಿಂಗೆ" ಅಂತ ಹೇಳುತ್ತಾಳೆ.

ಶ್ರೇಯಾ ಏನೂ ಉತ್ತರ ನೀಡಲ್ಲ. ಹಾಗೆಯೇ ಆ ನೋವಲ್ಲೇ ನಡೆದುಕೊಂಡು ಹೋಗುತ್ತಿರುತ್ತಾಳೆ.

ಪುನಃ ಮೊನಿಷಾ "ಗೋಲಗುಪ್ಪಾ ಅಲ್ಲ ಅಂದ್ರೆ, ಬೇರೆ ಇನ್ನೇನೋ ತಿಂದಿರ್ತೀಯಾ. ಅಥವಾ ಗೋಭಿ ಮಂಚೂರಿ ತಿಂದ್ಯಾ? ಅಷ್ಟೊಂದು ದುಡ್ಡು ಎಲ್‌ ಸಿಕ್ತೆ? ಯಾರಾದ್ರೂ ಕೊಡ್ಸದ್ರ?” ಅಂತ ಎಲ್ಲಾ ಕೇಳುತ್ತಾಳೆ.

ಆಗ ಶ್ರೇಯಾಗೆ ಕಿರಿಕಿರಿಯಾಗಿ "ನೀನು ಚಿಕ್ಕ ಹುಡುಗಿ ನಿನಗೆ ಏನೂ ಗೊತ್ತಾಗಲ್ಲ, ಸುಮ್ಮನೆ ಇರು ನೀನು" ಅಂತ ಮೊನಿಷಾಳನ್ನು ಗದರಿಸುತ್ತಾಳೆ.

ಪಾತ್ರಾಭಿನಯ - ೫ -  ಹಾಡು ಕೇಳ್ತೀಯಾ?                             ೪ ನಿಮಿಷ
ಪಾತ್ರಗಳು

೧ ಪೋಲಿ ಹುಡುಗ

ಮೊನಿಷಾ - ಕಿಶೋರಿ

ಶಾರದಾ - ಕಿಶೋರಿಯ ಅಕ್ಕ

ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.

ಮೊನಿಷಾ ಮನೆಯ ಬಾಗಿಲಿನ ಹತ್ತಿರ ನಿಂತುಕೊಂಡು ಇಯರ್‌ ಫೋನ್‌ ಹಾಕಿಕೊಂಡು ಹಾಡು ಕೇಳುತ್ತಾ ಹುಡುಗನನ್ನೇ ನೋಡುತ್ತಿರುತ್ತಾಳೆ.

ಹಿನ್ನಲೆಯಲ್ಲಿ ಪ್ರೇಮಗೀತೆ ಬರುತ್ತಿರುತ್ತದೆ.

ಆಗ ಶಾರದ ಬಂದು, ಶ್ರೇಯಾಳನ್ನು ನೋಡಿ ಅವಳಿಗೆ, "ದಾರೀಲಿ ಹೋಗೊರನ್ನ ನೊಡ್ಕೊಂಡು ಹಲ್ಲು ಗಿಂಜಿಕೊಂಡಿರುತ್ತೀಯಾ, ಕೊಡೆ ಇಲ್ಲಿ ಮೊಬೈಲ್, ಮನೇಲಿ ಏನೂ ಕೆಲ್ಸ ಮಾಡಲ್ಲ, ನಡಿ" ಎಂದು, ಇಯರ್‌ ಫೋನ್‌  ತೆಗೆದುಕೊಂಡು ಫೋನ್ ಕಸಿದುಕೊಳ್ಳುತ್ತಾಳೆ.

ಆಗ ಮೊನಿಷಾ "ಈ ಹಾಡನ್ನಾದ್ರೂ ಕೇಳಿ ಕೊಡ್ತೀನಿ, ಫೋನ್ ಕೊಡೆ" ಅಂತ ಗೋಗರಿಯುತ್ತಾಳೆ. ಆದರೆ ಶ್ರೇಯಾ, ಮೊನಿಷಾಳನ್ನು ದರದರನೆ ಎಳೆದುಕೊಂಡು ಹೋಗುತ್ತಾಳೆ.

ಈ ೫ ಪಾತ್ರಾಭಿನಯಗಳನ್ನು ಮಾಡಿ ಮುಗಿಸಿದ ನಂತರ ತರಗತಿಯು ತಹಬಂದಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಕಿಶೋರಿಯರನ್ನು ಪಾತ್ರಾಭಿನಯಗಳನ್ನು ನೋಡಿ ನಿಮಗೆ ಏನನ್ನಿಸಿತು ಎಂದು ಕೇಳುತ್ತೇವೆ.

ಅವರು "ತುಂಬಾ ಚೆನ್ನಾಗಿತ್ತು”, "ಸೂಪರ್‌ ಆಗಿತ್ತು" ಎಂದು ಹೇಳಬಹುದು. ಕೆಲವರು ಪಾತ್ರಾಭಿನಯದ ಸಂಭಾಷಣೆಗಳನ್ನು ಹೇಳಬಹುದು.

ಇದಾದ ನಂತರ, ಅವರನ್ನು ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುತ್ತೇವೆ. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ.

ಗುಂಪಿನಲ್ಲಿ ಕುಳಿತುಕೊಂಡ ನಂತರ ಪಾತ್ರಾಭಿನಯಗಳ ಶೀರ್ಷಿಕೆಗಳನ್ನು ಬಳಸಿಕೊಂಡು ಗುಂಪಿನ ಚರ್ಚೆಯನ್ನು ಪ್ರಾರಂಭಿಸಬಹುದು.

ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು

  1. ಯಾವ ಪಾತ್ರಾಭಿನಯ ಇಷ್ಟ ಆಯಿತು? ಯಾಕೆ?
  2. ಯಾವ ಪಾತ್ರ ಇಷ್ಟ ಆಯಿತು? ಯಾಕೆ?
  3. ಕಥೆ ಇಷ್ಟ ಆಯ್ತು ಅಂದರೆ, ಯಾವ ಕಥೆ ಇಷ್ಟ ಆಯ್ತು?

ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ  ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು. ಹೀಗೆಯೇ ಪ್ರತಿ ಕಥೆಯ ಬಗ್ಗೆಯೂ ಕೇಳುವುದು.

ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಗುಂಪಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು.

"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.

"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್‌, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.

"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”

ಹೀಗೇಯೇ ಎಲ್ಲಾ ಕಥೆಗಳ ಬಗ್ಗೆಯೂ ಒಂದೊಂದಾಗಿ ಏನನ್ನಿಸಿತು ಎಂದು ಕೇಳವುದು.

"ಹಾಡು ಕೇಳ್ತೀಯಾ?ಕಥೆ ಬಗ್ಗೆ ಏನು ಅನ್ನಿಸಿತು?” ಎಂದು ಕೇಳಿದರೆ ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಚೆನ್ನಾಗಿತ್ತು.

• ಹುಡುಗಿನೇ ಹುಡುಗನನ್ನು ಹೆಚ್ಚು ನೋಡುತ್ತಿದ್ದಳು.

• ಅಕ್ಕ ಬಂದು ಬೈದಳು.

ಹೀಗೆ ಎಲ್ಲಾ ಕಥೆಗಳ ಬಗ್ಗೆ ಕೇಳುತ್ತೇವೆ.

ಇದಾದ ನಂತರ ಕಿಶೋರಿಯರಿಗೆ ಪಾತ್ರಾಭಿನಯಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.

"ಇದನ್ನೆಲ್ಲಾ ನೊಡಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಚುಡಾಯಿಸುವುದು.

• ಕಾಲು ತುಳಿಯುವುದು.

• ಹೊಟ್ಟೆ ನೋವು.

• ಹುಡುಗ ಹುಡುಗಿ ಕಥೆ

ಇಲ್ಲಿಯವರೆಗೆ ಒಂದು ವಾರದ ಸಮಯ ಮುಗಿದಿರುತ್ತದೆ.

ಎರಡನೇ ವಾರದ ಚಟುವಟಿಕೆಗಳು

ಚಟುವಟಿಕೆಗಳನ್ನು ಹಿಂದಿನ ವಾರದ ಗುಂಪುಗಳಲ್ಲೇ ಮುಂದುವರೆಸುತ್ತೇವೆ. ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುತ್ತೇವೆ.

೧ ಮಗುವಿನ ಚಿತ್ರ ೨ ಕಿಶೋರಿಯರ ವಯಸ್ಸಿನ ಚಿತ್ರ

<ಕಿಶೋರಿಯರ ಚಿತ್ರಗಳು>

೯-೧೦ ಜನರ ಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು ಹಾಗೂ ಅವರಲ್ಲೇ ೩ ಜನರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು.

ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.

“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.

ಅನ್ವಯ ಆದರೆ, ಏನೇನು ಅನ್ವಯ ಅಗುತ್ತವೆ? ಆಗಿಲ್ಲ ಅಂದರೆ ಏಕೆ ಆಗಲ್ಲ?

ಮಗುವಿನ ಚಿತ್ರದ ಬಗ್ಗೆ ಮೊದಲು ಕೇಳುತ್ತೇವೆ.  

"ಮಗುವಿಗೆ ಹೊಟ್ಟೆ ನೋವು ಬರುತ್ತೆ" ಎಂದು ಕಿಶೋರಿಯರು ಹೇಳಬಹುದು.

ಆಮೇಲೆ ಉಳಿದ ಎರಡು ಗುಂಪುಗಳಿಗೆ ಬಂದ ಚಿತ್ರಗಳಿಗೆ ಏನೇನು ಅನ್ವಯ ಆಗುತ್ತದೆ ಎಂದು ಕೇಳುತ್ತೇವೆ.

• ಕಿಶೋರಿಯರು ಎಲ್ಲ ಕಥೆಗಳ ಬಗ್ಗೆ ಹೇಳಬಹುದು.

ಇದಾದ ನಂತರ ಈ ಕಿಶೋರಿಯರಿಗೆ ಏಷ್ಟು ವರ್ಷ ಇರಬಹುದು ಎಂದು ಕೇಳುತ್ತೇವೆ.

ಇದಾದ ನಂತರ ಗುಂಪಿನಿಂದ, ಕ್ಲಾಸ್‌ರೂಮಿಗೆ ಬರುತ್ತೇವೆ.

ಪ್ರತಿ ಫಸಿಲಿಟೇಟರ್‌ಗಳು ಅವರವರ ಗುಂಪುಗಳಲ್ಲಿ ಬಂದ ಅಂಶಗಳನ್ನು ಎಲ್ಲರ ಮುಂದೆ ಓದುತ್ತಾರೆ

ಮುಖ್ಯ ಫೆಸಿಲಿಟೇಟರ್‌ “ಈ ಚಿತ್ರಗಳಲ್ಲಿ ನಿಮ್ಮನ್ನ ಯಾವ ಚಿತ್ರಕ್ಕೆ ಹೋಲಿಕೆ ಮಾಡ್ಕೋತೀರಾ?”

ಕಿಶೋರಿಯರು ಒಂದು ಚಿತ್ರವನ್ನು ಹೇಳುತ್ತಾರೆ.

"ಏಕೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಒಂದೇ ವಯಸ್ಸು.

• ಒಂದೇ ತರಹದ ಸಮಸ್ಯೆಗಳು.

• ಒಂದೇ ತರಹದ ಸನ್ನಿವೇಶಗಳು.

• ಅವರಿಗೆ ಆಗಿರೋದೆಲ್ಲಾ ನಮಗೂ ಅಗುತ್ತೆ.

ಉಪಸಂಹಾರ

ಫೆಸಿಲಿಟೇಟರ್‌ ಈ ಕೆಳಗಿನ ಅಂಶಗಳನ್ನು ಹೇಳಬಹುದು. ಹೇಳುವ ರೀತಿ ವಿಧಾನಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು.

ಹಿಂದಿನ ವಾರಗಳಲ್ಲಿ ನಿಮ್ಮ ಜೊತೆ ಮಾತನಾಡಿದಾಗ ಬೇರೆ ಬೇರೆ ಸಮಸ್ಯೆಗಳನ್ನು ಗುರುತಿಸಿದ್ದೇವೆ.

ಉದಾಹರೆಣೆಗೆ

• ಸ್ಕೂಲಿನಿಂದ ಹೋಗುವಾಗ ರೇಗಿಸುತ್ತಾರೆ

• ಬಸ್‌ನಲ್ಲಿ ಕಾಲು ತುಳಿಯುತ್ತಾರೆ.

ಹಾಗೂ, ಈ ಸಮಸ್ಯೆಗಳು ಕೇವಲ ನಮ್ಮದೊಂದೇ ಅಲ್ಲ, ಎಲ್ಲರದ್ದೂ ಅಂತ ತಿಳಿದುಕೊಂಡಿದ್ದೇವೆ.  

ಆಮೇಲೆ ಹಿಂದಿನ ವಾರ ಪಾತ್ರಾಭಿನಯಗಳ ಮಾಡಿದ್ದೆವು. ಈ ಪಾತ್ರಾಭಿನಯಗಳ ಮೂಲಕ ಹಾಗೂ ಗುಂಪಿನ ಚರ್ಚೆಗಳ ಮೂಲಕ ಯಾವ ವಯಸ್ಸಿನ ಹೆಣ್ಣುಮಕ್ಕಳಿಗೆ ಪಾತ್ರಾಭಿನಯಗಳಲ್ಲಿ ಹೇಳಿರುವ ಸಮಸ್ಯೆಗಳು ಬರಬಹುದು ಅಂತ ಗುರುತಿಸಿದ್ದೇವೆ.

ಆಮೇಲೆ ನೀವು ಹೇಳಿದ ಹಾಗೆ ಇವರೆಲ್ಲಾ ನಿಮ್ಮ ವಯಸ್ಸಿನ ಹುಡುಗಿಯರೇ ಅಂತ.

೧೨ ವರ್ಷಕ್ಕಿಂತ ಕಮ್ಮಿ ವಯಸ್ಸನ್ನ ಬಾಲ್ಯಾವಸ್ಥೆ ಅಂತ ಹೇಳಬಹುದು. ೧೯ ವರ್ಷಕ್ಕಿಂತ ಜಾಸ್ತಿ ವಯಸ್ಸನ್ನ ಪ್ರೌಢಾವಸ್ಥೆ ಅಂತ ಹೇಳಬಹುದು. ಹಾಗೇ ಆ ಮಧ್ಯದಲ್ಲಿ ಇರುವ ೧೨- ೧೯ ವಯಸ್ಸು. ಅದನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.

ಈ ವಯಸ್ಸನ್ನೇ ಅಥವಾ ನಿಮ್ಮ ವಯಸ್ಸನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.

ಇದನ್ನ ಹದಿಹರೆಯ, ಟೀನೇಜ್‌ ಎಂದು ಹೇಳಬಹುದು.  

ನಾವು ತರಗತಿಯಲ್ಲಿ ಏನೆಂದು ಕರೆಯೋಣ ಎಂದು ನಿರ್ಧರಿಸಿಕೊಳ್ಳುತ್ತೇವೆ.

ನಿಮಗೆ ಗೊತ್ತಿರುವ ಹಾಗೆ, ಟೀನೇಜ್‌ನಲ್ಲಿ, ಶಾರೀರಿಕ ಬದಲಾವಣೆ, ಮಾನಸಿಕ ಹಾಗೂ ಬೌಧ್ಧಿಕ ಬದಲಾವಣೆಗಳು ಅಗುತ್ತವೆ.  ಇದು ಹುಡುಗೀರಿಗೊಂದೇ ಅಲ್ಲ. ಹುಡುಗರಿಗೂ ಆಗುತ್ತವೆ.

ಶಾರೀರಿಕವಾಗಿ, ಎತ್ತರ ಜಾಸ್ತಿ ಆಗಬಹುದು. ಬೇರೆ ಬೇರೆ ವಯಸ್ಸಲ್ಲಿ ದೊಡ್ಡೋರಾಗಬಹುದು. ಹುಡುಗರಿಗೆ ಧ್ವನಿ ಗಡಸು ಆಗಬಹುದು.

ಮಾನಸಿಕ ಬದಲಾವಣೆಗಳನ್ನು ನೋಡಿದರೆ, ನಮ್ಮ ಉಡುಪಿನ ಶೈಲಿ ಬದಲಾಗಬಹುದು. ನಾವು ಯಾವ ಥರ ಬಟ್ಟೆ ತೊಡಬೇಕು, ಕೂದಲು ಯಾವ ಥರ ಇರಬೇಕು ಎಂದು ನಾವೇ ಯೋಚಿಸಲು ಶುರು ಮಾಡಿರಬಹುದು.

ಯಶ್, ದರ್ಶನ್‌, ವಿಜಯ್ ಎಲ್ಲಾ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.

ಅಥವಾ ಗಂಡುಮಕ್ಕಳಿಗೆ ರಚಿತಾ ರಾಮ್‌, ತಮನ್ನಾ, ದೀಪಿಕಾ ಪಡುಕೋಣೆ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.

ಬೌಧ್ಧಿಕವಾಗಿ ಕೆಲವೊಂದು ವಿಷಯಗಳು ಅರ್ಥ ಆಗಲು ಶುರು ಆಗಬಹುದು.

ಚಿತ್ರಕಥೆ ಮೊದಲು ಅರ್ಥ ಆಗ್ತಾ ಇರಲಿಲ್ಲ, ಈಗ ಅರ್ಥ ಆಗುತ್ತೆ. ಪರಿಸರ, ಮಾಲಿನ್ಯದ ಬಗ್ಗೆ ಅರ್ಥ ಆಗುತ್ತದೆ.

ಹೀಗೇ ಹಲವಾರು ಬದಲಾವಣೆಗಳು ನಮ್ಮಲ್ಲಿ ಆಗಬಹುದು.

ಇವುಗಳನ್ನೆಲ್ಲ ಒಟ್ಟು ಸೇರಿಸಿ ನಾವು ಅದನ್ನ ಟೀನೇಜ್‌ ಅಂತ ಕರೆಯಬಹುದೆ? ಎಂದು ಕೇಳುವುದು.

ಹೌದು ಎಂದು ಕಿಶೋರಿಯರು ಹೇಳಬಹುದು.

ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ.

ಬೇಕಾಗಿರುವ ಸಂಪನ್ಮೂಲಗಳು

• ಪಾತ್ರಾಭಿನಯಕ್ಕೆ ಬೇಕಾದ ಪ್ರಸಾಧನ(ಮೇಕಪ್‌) ಸಾಮಗ್ರಿಗಳು.

• ದಾವಣಿಗಳು - ೨

• ಸ್ಕೆಚ್‌ ಪೆನ್‌ - ೩ ಸೆಟ್

• ಕಿಶೋರಿಯರ ಹಾಗೂ ಮಗುವಿನ ಪ್ರಿಂಟ್‌ ತೆಗೆದ ಚಿತ್ರಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪

ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೩, ಪಾತ್ರಾಭಿನಯ ಮಾಡಲು ೪

ಒಟ್ಟು ಸಮಯ

೧೬೦ ನಿಮಿಷಗಳು (೨ ತರಗತಿಗಳು ಸೇರಿ)

ಇನ್‌ಪುಟ್‌ಗಳು

• ನಾವು ಮಾಡುವ ಪಾತ್ರಾಭಿನಯಗಳು

• ಮಗು ಹಾಗೂ ಕಿಶೋರಿಯರ ಚಿತ್ರಗಳು

ಔಟ್‌ಪುಟ್‌ಗಳು

• ಗುಂಪಿನ ಚರ್ಚೆಯಲ್ಲಿ ಬರುವ ಅಂಶಗಳು