"ದುಡಿಮೆ ಮತ್ತು ಆರ್ಥಿಕ ಜೀವನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೩೧ ನೇ ಸಾಲು: | ೧೩೧ ನೇ ಸಾಲು: | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ದುಡಿಮೆಯಲ್ಲಿ ಭೇದ ಭಾವ]]" | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ದುಡಿಮೆಯಲ್ಲಿ ಭೇದ ಭಾವ]]" | ||
− | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು- [[ | + | |
+ | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ವೇತನ ತಾರತಮ್ಯ]]" | ||
==ಪರಿಕಲ್ಪನೆ #3 ನಿರುದ್ಯೋಗ == | ==ಪರಿಕಲ್ಪನೆ #3 ನಿರುದ್ಯೋಗ == |
೧೧:೩೧, ೨೫ ಫೆಬ್ರುವರಿ ೨೦೧೫ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ದುಡಿಮೆ ಮತ್ತು ಆರ್ಥಿಕ ಜೀವನ
ಮತ್ತಷ್ಟು ಮಾಹಿತಿ
ಪ್ರೀತಿಯ ಶಿಕ್ಷಕರೇ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಾವು ಬೋಧಿಸಬೇಕಾಗಿದೆ.
- ದುಡಿಮೆ ಎಂಬುವುದು ನಮ್ಮ ಜೇವನದ ಅತಿ ಮುಖ್ಯ ಅಂಗವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆಮಾಡಬೇಕಾಗಿದೆ.
- ದುಡಿಮೆಯ ಸ್ವರೂಪ ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ ಎಂದು ಮನವರಿಕೆ ಮಾಡಬೇಕು.
- ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಗಿಂತಲೂ ಉದ್ಯೋಗಿಗಳ ಸಂಖ್ಯೆಯೇ ಕಡಿಮೆ ಇದೆ ಕಾರಣವೇನು? ಎಂದು ಮನವರಿಕೆ ಮಾಡ ಬೇಕಿದೆ.
- ಸಂಘಟಿತವಾದ ದುಡಿಮೆಯಿಂದ ನಾವು ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ.
- ಇತ್ತೀಚೆಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಜನರ ವಲಸೆಗೆ ಕಾರಣವೇನು? ಎಂದು ವಿದ್ಯಾರ್ಥಿಗಳಿಗೆ ನಾವು ತಿಳಿಯಪಡಿಸಬೇಕಾಗಿದೆ.
- ಪಟ್ಟಣಕ್ಕೆ ವಲಸೆ ಬರುವುದರಿಂದ ಆಗುವ ತೊಂದರೆಗಳನ್ನು ತಿಳಿಸಬೇಕಾಗಿದೆ.
- ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಆಗುವ ತಾರತಮ್ಯತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿದೆ.
- ಲಿಂಗ ವಯಸ್ಸು ಸಾಮರ್ಥ್ಯದ ಆದಾರದ ಮೇಲೆ ದುಡಿಮೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಾ ಸಮಾನ ಸಾಮರ್ಥ್ಯಕ್ಕೆ ಸಮಾನ ವೇತನ ಎಂಬ ಕಲ್ಪಣೆಯನ್ನು ಕೊಡಬೇಕಾಗಿದೆ
- ನಿರುದ್ಯೋಗ ಒಂದು ಸಮಸ್ಯೆ ಎಂದು ವಿವರಿಸುತ್ತಾ ಕೃಷಿ ದುಡಿಮೆಯ ಮೂಲಕ ನಮ್ಮ ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ತಿಳಿಸಬೇಕಾಗಿದೆ.
- ನಿರುದ್ಯೋಗ ಒಂದು ಸಮಸ್ಯೆ ಎಂದು ವಿವರಿಸುತ್ತಾ ನಿರುದ್ಯೋಗ ಬಡತನ,ವಿಘಟನೆ , ಮೋಸ, ವಂಚನೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಯಪಡಿಸಬೇಕಾಗಿದೆ.
ದೈಹಿಕ ಶ್ರಮದ ವಿಡಿಯೋ ನೋಡಲು ಇದನ್ನು ಪ್ಲೇ ಮಾಡಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಗ್ರಾಮೀಣ ಕೆಲಸದ ವಿಡಿಯೋ ನೋಡಿ ಪಂಚಾಯತಿ ನೋಡಿ
- .ಸೂಕ್ಮ ಅರ್ಥಶಾಸ್ತ್ರ , ಸ್ಥೂಲ ಅರ್ಥಶಾಸ್ತ್ರ, ಕಾರ್ಮಿಕರ ವಿಭಜನೆ, ಆರ್ಥಿಕ ಮುಗ್ಗಟ್ಟು,ಬಡತನ ಮತ್ತು ಅಭಿವೃಧ್ಧಿ ,ನಿರುದ್ಯೋಗ ಇತ್ಯಾದಿಗಳ ಮಾಹಿತಿಗಾಗಿ ಶಿಕ್ಷಕರು ಇಲ್ಲಿ ಕ್ಲಿಕ್ ಮಾಡಬಹುದು.
- .ಮಾನವನ ಆರ್ಥಿಕ ಮತ್ತು ಸಾಮಾಜಿಕ ಪ್ರಜ್ಞೆ ಹೇಗೆ ಬೆಳೆಯಿತು,ಜಾತಿಯತೆ ಮತ್ತು ವರ್ಗ ವ್ಯವಸ್ಥೆ ಬೆಳೆದು ಬಂದ ದಾರಿ ಮತ್ತು ಅದಕ್ಕೂ ಆರ್ಥಿಕ ವ್ಯವಸ್ಥೆಗೂ ಇರುವ ಸಂಬಂಧ,ಆದುನಿಕ ಅರ್ಥಶಾಸ್ತ್ರದ ಬೆಳವಣಿಗೆ ಬಗ್ಗೆ ಸವಿವರವಾದ ಮಾಹಿತಿಗಾಗಿ ಈ ಲಿಂಕ್ ನ್ನು ಕ್ಲಿಕ್ ಮಾಡಬೇಕು
- .ನಿರುದ್ಯೋಗ ಎಂದರೇನು? ನಿರುದ್ಯೋಗದಲ್ಲಿ ಇರುವ ವಿಧಗಳು ಯಾವುವು? ನಿರುದ್ಯೋಗ ಯಾಕೆ ಉಂಟಾಗುತ್ತಿದೆ.ನಿರುದ್ಯೋಗದಿಂದಾಗುವ ವಿವಿಧ ಪರಿಣಾಮಗಳು ಇತ್ಯಾದಿ ವಿಷಯದ ಬಗ್ಗೆ ಸವಿವರವಾದ ಮಾಹಿತಿಯನ್ನು ಚರ್ಚಿಸಲಾಗಿದೆ. ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ.
- .ವಿವಿಧ ಕಾಲದಲ್ಲಿ ವೃತ್ತಿ ಬೆಳೆದ ರೀತಿಯನ್ನು ಇಲ್ಲಿ ಚರ್ಚಿಸಲಾಗಿದೆ.ಪುರಾತನ ಕಾಲದಿಂದಲೂ ಜಾತಿ ವ್ಯವಸ್ಥೆ ಮತ್ತು ವೃತ್ತಿಗೆ ಇರುವ ಸಂಬಂದವನ್ನು ಇಲ್ಲಿ ಚರ್ಚಿಸಲಾಗಿದೆ. ಈ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- .ದುಡಿಮೆ ಮತ್ತು ಆರ್ಥಿಕ ಜೀವನದ ಬಗ್ಗೆ ಮಾಹಿತಿಗಾಗಿ ರವಿ ಅಹೇರಿಯವರ ಭ್ಲಾಗ್ ವೀಕ್ಷಣೆ ಮಾಡಿ. ಇಲ್ಲಿ ಕ್ಲಿಕ್ಕಿಸಿ
- .ದುಡಿಮೆಯಲ್ಲಿರುವ ಬೇಧ ಭಾವವನ್ನು ಕುರಿತು ಮಾಹಿತಿಯನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
- .ದುಡಿಮೆಯಲ್ಲಿ ಇರುವ ಬೇಧ ಭಾವದ ಸ್ವರುಪವನ್ನು ಕುರಿತು ಮಾಹಿತಿ ತಿಳಿಯಲು ಈ ಲಿಂಕ್ ನ್ನು ನೋಡಿರಿ
- .ಭಾರತದಲ್ಲಿ ನಿರುದ್ಯೋಗದ ಮಾಹಿತಿಗಾಗಿ ಈ ಲಿಂಕ್ ನ್ನು ನೋಡಿರಿ.
- .ಭಾರತದಲ್ಲಿ ನಿರುದ್ಯೋಗದ ಸ್ವರೂಪ , ಭಾರತದಲ್ಲಿ ಯಾಕೆ ನಿರುದ್ಯೋಗ ಇವೆ, ನಿರುದ್ಯೋಗದ ವಿಧಗಳು ಯಾವುವು?,ನಿರುದ್ಯೊಗದ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂದು ಮಾಹಿತಿಯನ್ನು ತಿಳಿಯಲು ಈ ಲಿಂಕ್ ನ್ನು ನೋಡಿರಿ
- .ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿ ಇದೆ, ಭಾರತದಲ್ಲಿ ನಿರುದ್ಯೋಗವನ್ನು ಹೇಗೆ ನಿವಾರಿಸುವುದು,ನಿರುದ್ಯೋಗದ ಸ್ವರೂಪವನ್ನು ತಿಳಿಯಲು ಈ ಲಿಂಕ್ ನ್ನು ಒತ್ತಿರಿ
- .ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ , ಅವರ ಸಮಸ್ಯೆಗಳು ಭಾರತಗಳು ಹೇಗೆ ಇವೆ ಎಂಬುವುದನ್ನು ತಿಳಿಯಲು ಈ ಲಿಂಕ್ ನ್ನು ಕ್ಲಿಕ್ ಮಾಡಿರಿ
- .ಬಾಲಕಾರ್ಮಿಕರು ,ಅವರ ಸಮಸ್ಯೆಗಳು, ವಲಸೆ ಸಮಸ್ಯೆ, ಈ ಸಮಸ್ಯೆಗಳಿಗೆ ಪರಿಹಾರೋಪಾಯಗಳು, ಕಾರ್ಮಿಕ ಪಧ್ಧತಿಯ ಇತಿಹಾಸ, ಬಾರತದಲ್ಲಿ ಕಾರ್ಮಿಕ ಪಧ್ಧತಿ ಬೆಳೆದು ಬಂದ ರೀತಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಲಿಂಕ್ ನ್ನು ಕ್ಲಿಕ್ ಮಾಡಬೇಕು
ಪಾಠಕ್ಕೆ ಸ0ಬಂಧಿಸಿದ ಉಪಯುಕ್ತ ಚಿತ್ರಗಳು
- .ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಬಗ್ಗೆ ಚಿತ್ರ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ
- .ಶ್ರಮವಿಭಜನೆಗೆ ಸಂಬಂಧಿಸಿದ ಚಿತ್ರಗಳ ವೀಕ್ಷಣೆ, ಶ್ರಮ ವಿಭಜನೆ ಸಂಬಂಧಿಸಿದ ಬಾರ್ ಗ್ರಾಫ್ ಗಳನ್ನು ನೋಡಲು ಈ ಲಿಂಕ್ ನ್ನು ನೋಡಿರಿ
- .ನಿರುದ್ಯೋಗದ ಸಮಸ್ಯೆಯ ಕುರಿತು ಚಿತ್ರ ವಿಕ್ಷಣೆ ಮಾಡಲು ಈ ಲಿಂಕ್ ನೋಡಿರಿ,
ಸಂಬಂಧ ಪುಸ್ತಕಗಳು
- .ಶ್ರಮವಿಭಜನೆಗೆ ಸಂಬಂದಿಸಿದ ಎಮಿಲಿ ಡರ್ಕಿಮ್ ರವರ ಪುಸ್ತವನ್ನು ಓದಿರಿ
- .ಗ್ರಾಮೀಣ ಪ್ರದೇಶದ ನಿರುದ್ಯೋಗದ ಬಗ್ಗೆ ಮತ್ತು ಭಾರತದ ನಿರುದ್ಯೋಗದ ಬಗ್ಗೆ ಇರುವ ಪುಸ್ತಕವನ್ನು ವೀಕ್ಷಿಸಲು ಈ ಲಿಂಕ್ ನ್ನು ನೋಡಿರಿ.
ಬೋಧನೆಯ ರೂಪರೇಶಗಳು
ದುಡಿಮೆ ಎಂಬುವುದು ನಮ್ಮ ಜೀವನದ ಅತಿ ಅಗತ್ಯವಾದ ಅಂಗವಾಗಿದೆ. ಜೀವನ ನಡೆಸಲು ದುಡಿಮೆ ಅತೀ ಅಗತ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಆರ್ಥಿಕ ಜೀವನವನ್ನು ಮಾಡುತ್ತಾನೆ . ಆರ್ಥಿಕ ಜೀವನವು ಪ್ರದೇಶದಿಂದ ಪ್ರದೇಶಕ್ಕೆ , ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ.ಹಾಗೂ ಆರ್ಥಿಕ ಜೀವನವು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಶಿಕ್ಷಕ ಮಿತ್ರರೇ ಈ ಪಾಠವನ್ನು ಅನುಕೂಲಿಸುವ ಸಂದರ್ಬದಲ್ಲಿ ನಾವು ಗಮನಿಸಬೇಕಾದ ಅಂಶಗಳೆಂದರೆ ಭಾರತದಂತಹ ದೇಶಕ್ಕೆ ದುಡಿಮೆಯ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕಾಗಿದೆ. ಭಾರದಂತಹ ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಮಾತ್ರವಲ್ಲ, ಬಡತನವೂ ತಾಂಡವಾಡುತ್ತಿರುತ್ತದೆ. ಇಂತಹ ದೇಶದಲ್ಲಿ ದುಡಿಮೆಯ ಸಂದರ್ಬದಲ್ಲಿ ಶೋಷಣೆಗಳೂ ಕೂಡ ಎದುರಿಸಬೇಕಾಗುತ್ತದೆ. ಶೋಷಣೆ ಮುಕ್ತವಾಗಿರುವ, ಸಂಘಟಿತ ದುಡಿಮೆಯ ಬಗ್ಗೆ ಈ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಮನನ ಮಾಡಬೇಕಾಗಿದೆ.
ಪರಿಕಲ್ಪನೆ #1 ಶ್ರಮವಿಭಜನೆ ಮತ್ತು ವರ್ಗಗಳು
ಕಲಿಕೆಯ ಉದ್ದೇಶಗಳು
- . ಶ್ರಮವಿಭಜನೆ ಎಂದರೇನು ಎಂದು ಅರ್ಥೈಸಿಕೊಳ್ಳುವುದು.
- . ಶ್ರಮ ವಿಭಜನೆಯಲ್ಲಿ ವಿಶೇಷ ಪರಿಣತಿಯ ಮಹತ್ವವನ್ನು ತಿಳಿಯುವುದು.
- . ವರ್ಗವ್ಯವಸ್ಥೆ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ಅರ್ಥೈಸುವುದು.
ಶಿಕ್ಷಕರಿಗೆ ಟಿಪ್ಪಣಿ
ಮಿತ್ರರೇ ಈ ಕರುಣಾಜನಕ ಬಡತನ ನೋಡಲು ಕರುಳು ಕಿತ್ತುಬರುವಂತಿದೆ ಇದಕ್ಕೆ ಕಾರಣವೇನು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ.
ಶಿಕ್ಷಕರೇ ,ಒಂದು ಕಾಲದಲ್ಲಿ ದುಡಿಮೆಯನ್ನು ತನ್ನ ಬದುಕಿನ ಭಾಗ ಎಂದು ಸಂತೋಷದಿಂದ ತನ್ನನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರ್ಮಿಕ ಆಧುನಿಕ ಶ್ರಮದ ಸಂದರ್ಭದಲ್ಲಿ ಶ್ರಮ ಸಂಸ್ಕೃತಿಯ ಜಾಗೆಯಲ್ಲಿ ಕರ್ತವ್ಯ ಪ್ರಜ್ಞೆ ಎನ್ನುವಂತಹ ಒಂದು ಔಪಚಾರಿಕ ಪರಿಕಲ್ಪನೆಯನ್ನೇ ಪರಿಚಯಿಸಿದ. ದುಡಿಮೆ ಎನ್ನುವುದು ಸಂಪತ್ತಿನ ಗಳಿಕೆಯ ಸಾಧನ ಎನ್ನುವ ಅರ್ಥಕ್ಕೆ ಸೀಮಿತವಾಗಿ ಉಳಿಯುವಂತಾಯಿತು. ಜರ್ಮನಿಯ ಚಿಂತಕ ಮ್ಯಾಕ್ಸ್ ವೆಬರ್ ಹೇಳುವಂತೆ "’ಆಧುನಿಕ ಸಂದರ್ಭದ ಶ್ರಮ ಮನುಷ್ಯನನ್ನು ಅಪಾರ ಜನಸಂದಣಿಯ ನಡುವೆಯೂ ಏಕಾಂಗಿಯಾಗಿರುವ ಮನ:ಸ್ಥಿತಿಯನ್ನು ತಂದುಕೊಟ್ಟಿತು’" ಎಂದಿರುವುದನ್ನು ನೋಡಿದರೆ ಆಧುನಿಕ ಶ್ರಮದ ಕಲ್ಪನೆ ಹುಟ್ಟುಹಾಕಿರುವ ಮಾನಸಿಕ ಸ್ತರಗಳ ಬಗ್ಗೆ ಯೋಚಿಸಬಹುದು.
ಆಧುನಿಕ ಸಂದರ್ಭದ ಶ್ರಮ ಎನ್ನುವುದು ಮಧ್ಯಮ ಮತ್ತು ಮೇಲ್ವರ್ಗದ ಜನಗಳ ಪಾಲಿಗೆ ಐಹಿಕ ಅಬ್ಯುದಯದ ಒಂದು ಸಾಧನವಾದರೆ, ಕೆಳ ವರ್ಗದ ಕಾರ್ಮಿಕನ ಪಾಲಿಗೆ ಮಾತ್ರ ಅದೊಂದು ಒತ್ತಾಯವಾದ ದುಡಿಮೆಯಾಗಿ, ಬದುಕಿನ ನಿರ್ವಹಣೆಗೆ ನಿರ್ವಾಹವಿಲ್ಲದ ಒಂದು ಮಾರ್ಗವಾಗಿ ಪರಿಣಮಿಸಿತು. ಆರಕ್ಕೇರದ ಮೂರಕ್ಕಿಳಿಯದ ಮಿತಿಯ ಮಧ್ಯೆ ತೊಳಲಾಡುವ ಸನ್ನಿವೇಶವನ್ನು ಕೆಳವರ್ಗದ ಕಾರ್ಮಿಕನ ಪಾಲಿಗೆ ಆಧುನಿಕ ಸಂದರ್ಭದ ಸಂಕೀರ್ಣ ಶ್ರಮವಿಭಜನೆ ತಂದಿಟ್ಟಿರುವುದು ಕಟು ವಾಸ್ತವ. ಇಂತಹ ದಯನೀಯವಾಗಿರುವ ಕಾರ್ಮಿಕನ ಪರಿಸ್ಥಿತಿಯನ್ನು ನಾವು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡುತ್ತಾ ಈ ಪಾಠವನ್ನು ಅನುಕೂಲಿಸಿದರೆ ಪ್ರಸ್ತುತ ಕಾರ್ಮಿಕನ ಅನಿವಾರ್ಯತೆ ಏನು.? ಜೀವನದಲ್ಲಿ ದುಡಿಮೆ ಅನಿವಾರ್ಯತೆಯ ಕಲ್ಪಣೆಯನ್ನು ಮೂಡಿಸಲು ಸಾಧ್ಯವಿದೆ.
ಅದು ಮಾತ್ರವಲ್ಲದೆ , ಪ್ರಸ್ತುತ ಸಂದರ್ಭದಲ್ಲಿ ಶ್ರಮ ತನ್ನ ತೀವ್ರತೆಯ ಮೂಲಕ ಎರಡು ಅತಿ ಮುಖ್ಯವಾದ ಪರಿಣಾಮಗಳನ್ನು ಸಮಷ್ಟಿಯ ಮೇಲೆ ಉಂಟು ಮಾಡಿರುವುದಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಮಿತ್ರರೇ.
- . ಬಳಕೆದಾರರಿಗೆ ಉತ್ಕೃಷ್ಟವಾದುದನ್ನು ಕೊಡಬೇಕು ಎಂದು ಪೈಪೋಟಿಗಿಳಿದ ಉದ್ದಿಮೆಗಳು ಪರೋಕ್ಷವಾಗಿ ಸಾಂಸ್ಕೃತಿಕ ಕಾರ್ಮಿಕನನ್ನು ಆಲಸಿಗಳನ್ನಾಗಿ ಮಾಡುವ ಮೂಲಕ ಅವರಲ್ಲಿಯ ಕ್ರಿಯಾತ್ಮಕತೆಯನ್ನು ಕೊಲ್ಲತೊಡಗಿದವು. ನಮ್ಮ ಮನೆಗಳಲ್ಲಿಯ ಅಡುಗೆ ಸಾಧನಗಳನ್ನು ಗಮನಿಸಿದರೂ ಸಾಕು ಈ ಮಾತಿನ ತಾತ್ಪರ್ಯ ಮನದಟ್ಟಾಗುತ್ತದೆ. ಕೇವಲ ಐದೇ ನಿಮಿಷಗಳಲ್ಲಿ ಅಡುಗೆ ರೆಡಿ ಎನ್ನುವ ಜಾಹೀರಾತುಗಳು, ತರಹೇವಾರಿ ಉಪಕರಣಗಳು ಅಡುಗೆ ಮಾಡುವವರಲ್ಲಿಯ ಕೌಶಲ್ಯವನ್ನು ಕುಲಗೆಡಿಸಿ ಅವರನ್ನು ಕಿರುತೆರೆಯ ಮುಂದೆ ಕುಕ್ಕರು ಬಡಿದದ್ದು ಸುಳ್ಳಂತೂ ಅಲ್ಲ. ಕೇವಲ ಅಡುಗೆ ಮನೆಗೆ ಮಾತ್ರ ಇದು ಸೀಮಿತವಲ್ಲ.
- . ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ. ಈ ಸತ್ಯವನ್ನು ವಿದ್ಯಾರ್ಥಿಗಳಿಗೆ ತೆರೆದಿಡಬೇಕಾಗುತ್ತದೆ ಶಿಕ್ಷಕ ಮಿತ್ರರೆ. ಈ ಪಾಠವನ್ನು ಕೇವಲ ಶ್ರಮವಿಭಜನೆ ಅರ್ಥೈಸಲು ಪೂರಕವಾಗಿ ಇಟ್ಟಿರುವ ಪಾಠ ಎಂದು ಪರಿಗಣಿಸದೆ ಇಂದಿನ ಶ್ರಮವಿಭಜನೆಯ ಕ್ರೂರ ಮುಖವನ್ನು ಕೂಡ ತಿಳಿಸುವುದನ್ನು ಮರೆಯಬೇಡಿ ಶಿಕ್ಷಕರೆ. ಇದು ಮುಂದಕ್ಕೆ ವರ್ಗ ಸಂಘರ್ಷದ ಸಮಾಜ ತಯಾರಾಗುವುದನ್ನು ತಪ್ಪಿಸಬಹುದು ಶಿಕ್ಷಕ ಮಿತ್ರರೆ.
ಚಟುವಟಿಕೆಗಳು
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಶ್ರಮವಿಭಜನೆ ಮತ್ತು ವರ್ಗಗಳು
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂ 2"
ಪರಿಕಲ್ಪನೆ #2 ದುಡಿಮೆಯಲ್ಲಿ ಭೇದ ಭಾವ
ಕಲಿಕೆಯ ಉದ್ದೇಶಗಳು
- .ದುಡಿಮೆಯಲ್ಲಿ ಭೇದ ಭಾವ ಎಂದರೇನು ಎಂದು ತಿಳಿಯುವುದು.
- . ದುಡಿಮೆಯಲ್ಲಿ ಭೇದ ಭಾವವನ್ನು ಯಾವ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಯುವುದು.
- .ದುಡಿಮೆ ಹಂಚಿಕೆಯಲ್ಲಿ ಸಮಾನತೆಯ ಅವಶ್ಯಕತೆಯನ್ನು ಅರ್ಥೈಸುವುದು.
ಶಿಕ್ಷಕರಿಗೆ ಟಿಪ್ಪಣಿ
- . ಶಿಕ್ಷಕರು ಈ ಪಾಠವನ್ನು ಅನುಕೂಲಿಸುವ ಸಂದರ್ಬದಲ್ಲಿ ಅಸಂಘಟಿತ ಕ್ಷೇತ್ರದಲ್ಲಾಗುವ ತಾರತಮ್ಯತೆಯ ಕಡೆಗೆ ಹೆಚ್ಚು ಗಮನಕೊಡುವುದು.
- . ಕೆಲವು ವೀಡಿಯೊಗಳನ್ನು ಅಥವಾ ಕಥೆಗಳನ್ನು, ಶ್ರೇಷ್ಟ ಸಾಧನೆ ಮಾಡಿದ ಸ್ತ್ರೀಯರ ವಿವರಗಳನ್ನು ಹೇಳುವುದರ ಮೂಲಕ ತರಗತಿಯ ಹೆಣ್ಣು ಮಕ್ಕಳನ್ನು ಉತ್ತೇಜಿಸಬಹುದು.
- . ದುಡಿಮೆಯ ಭೇದ ಭಾವ ಹೋಗಲಾಡಿಸಲು ಶಿಕ್ಷಣ , ತಿಳುವಳಿಕೆ ಅತಿ ಅಗತ್ಯ ಎಂದು ಮನವರಿಕೆ ಮಾಡುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ದುಡಿಮೆಯಲ್ಲಿ ಭೇದ ಭಾವ"
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ವೇತನ ತಾರತಮ್ಯ"
ಪರಿಕಲ್ಪನೆ #3 ನಿರುದ್ಯೋಗ
ಕಲಿಕೆಯ ಉದ್ದೇಶಗಳು
- .ಭಾರತ ಎದುರಿಸುವ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು ಎಂದು ತಿಳಿಯುವುದು.
- . ನಿರುದ್ಯೋಗ ಸಮಸ್ಯೆ ಎಂಬುವುದು ಭಾರತದ ಆರ್ಥಿಕ ಅಭಿವೃಧ್ಧಿಗೆ ಮಾರಕ ಎಂಬುವುದನ್ನು ಮನವರಿಕೆ ಮಾಡುವುದು.
- .ನಿರುದ್ಯೋಗ ಸಮಸ್ಯೆ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಮನವರಿಕೆ ಮಾಡುವುದು.
- .ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದು ಹೇಗೆ ಎಂಬುವುದನ್ನು ಚಿಂತಿಸುವುದು.
- . ನಿರುದ್ಯೋಗ ಸಮಸ್ಯೆಯನ್ನು ಅರ್ಥೈಸಿಕೊಳ್ಳುತ್ತಾ ಮುಂದೆ ತಾನು ಉದ್ಯೋಗಿಯಾಗಿ ಇರಬೇಕಾದ ಅವಶ್ಯಕತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ನಿರುದ್ಯೋಗ ಸಮಸ್ಯೆಯನ್ನು ಮನವರಿಕೆ ಮಾಡುವುದು ಮಾತ್ರ ತಮ್ಮ ಕೆಲಸವಾಗಿರದೆ ತನ್ನ ಜೀವನದಲ್ಲಿ ತಾನು ಯಾಕೆ ಉದ್ಯೋಗವನ್ನು ಪಡೆಯಬೇಕು ಎಂದು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ. ಉದ್ಯೊಗದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಹೋಗಲಾಡಿಸುವಂತೆ ತಮ್ಮ ಬೋಧನೆಯು ಮುಂದುವರಿಯಲಿ.ಕಾಯಕವೇ ಕೈಲಾಸ ಎನ್ನುವ ಉಕ್ತಿ ಮಹತ್ವವನ್ನು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು -ನಿರುದ್ಯೋಗ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #4 ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು
ಕಲಿಕೆಯ ಉದ್ದೇಶಗಳು
- .ಸಂಘಟಿತ ಕೆಲಸ ಎಂದರೆ ಯಾವುದು ಎಂದು ತಿಳಿಯಪಡಿಸುವುದು.
- . ಅಸಂಘಟಿತ ಕೆಲಸ ಅಂದರೆ ಯಾವುದು ಎಂದು ತಿಳಿಯ ಪಡಿಸುವುದು.
- , ಅಸಂಘಡಿತ ಕೆಲಸಗಾರರ ಸಮಸ್ಯೆಯನ್ನು ತಿಳಿಯುವುದು.
- . ತಾವು ಮುಂದಿನ ಜೀವನದಲ್ಲಿ ಸಂಘಟಿತ ಕೆಲಸವನ್ನೇ ಮಾಡಬೇಕು ಎನ್ನುವುದನ್ನು ಅರ್ಥೈಸಿಕೊಳ್ಳುವಂತೆ ಮಾಡುವುದು.
- .ಅಸಂಘಟಿತ ಕೆಲಸದಲ್ಲಾಗುವ ತಾರತಮ್ಯತೆಯನ್ನು ಅರ್ಥೈಸಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
- . ಶಿಕ್ಷಕ ಮಿತ್ರರೆಲ್ಲರೂ ಈ ಪಾಠಾಂಶವನ್ನು ಅನುಕೂಲಿಸುವ ಸಂದರ್ಬದಲ್ಲಿ ಸಂಘಟಿತ ಕೆಲಸ ಮಾಡುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಬೇಕು.
- .ಸಂಘಟಿತ ಕೆಲಸದಲ್ಲಿಯೂ ಶೋಷಣೆಗಳು ಇರುತ್ತವೆ . ಅದರಿಂದ ಮುಕ್ತವಾಗುವುದು ಹೇಗೆ ಎಂಬುವುದನ್ನು ಮನವರಿಕೆ ಮಾಡಬೇಕಾಗಿದೆ.
- . ಕೃಷಿ ವಲಯದ ಅಸಂಘಟಿತ ಕೆಲಸಗಾರರಲ್ಲಿ ಆಗುವ ಶೋಷಣೆಯಿಂದ ಪರಿಣಾಮವೇನು ಎಂಬುವುದನ್ನು ತಿಳಿಯಪಡಿಸಬೇಕಾಗಿದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು -ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ನಿಮ್ಮ ಪ್ರದೇಶದಲ್ಲಿರುವ ಅಸಂಘಟಿತ ಕಾರ್ಮಿಕರನ್ನು ಸಂದರ್ಶನ ಮಾಡಿ ಅವರ ಸಮಸ್ಯೆಗಳ ಬಗ್ಗೆ ವರದಿ ಸಿಧ್ಧಪಡಿಸಿ.
ಸಮುದಾಯ ಆಧಾರಿತ ಯೋಜನೆಗಳು
ನಿಮ್ಮ ಊರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಭೇಟಿಕೊಟ್ಟು ಅವರ ಬಡತನಕ್ಕೆ ಕಾರಣಗಳನ್ನು ಪಟ್ಟಿ ಮಾಡಿರಿ.
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು