"TIEE ಗಣಿತ-ವಿಜ್ಞಾನ ಶಿಕ್ಷಕರ ಕಾರ್ಯಾಗಾರ 2024-25" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೦ ನೇ ಸಾಲು: ೫೦ ನೇ ಸಾಲು:
 
|ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು.
 
|ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು.
 
ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ನಿವಾರಿಸಲು  ಸಹಾಯಕವಾಗುವ ಪರ್ಯಾಯ ಬೋಧನಾ ವಿಧಾನಗಳ ಮತ್ತು ಅದರ ಬಳಕೆ ವಿಧಾನ ಕುರಿತು ಚರ್ಚಿಸುವುದು. ಹಾಗೆಯೇ ವಿಜ್ಞಾನ ಕಲಿಕೆಯಲ್ಲಿ ಅಗತ್ಯವಾಗಿ ಅವಶ್ಯಕವಾಗಿರುವ ಪ್ರಕ್ರಿಯಾ ಕೌಶಲಗಳ ಬೆಳವಣಿಗೆಗೆ ಇದನ್ನು ಬಳಸುವ ವಿಧಾನವನ್ನು ಚರ್ಚಿಸುವುದು.
 
ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ನಿವಾರಿಸಲು  ಸಹಾಯಕವಾಗುವ ಪರ್ಯಾಯ ಬೋಧನಾ ವಿಧಾನಗಳ ಮತ್ತು ಅದರ ಬಳಕೆ ವಿಧಾನ ಕುರಿತು ಚರ್ಚಿಸುವುದು. ಹಾಗೆಯೇ ವಿಜ್ಞಾನ ಕಲಿಕೆಯಲ್ಲಿ ಅಗತ್ಯವಾಗಿ ಅವಶ್ಯಕವಾಗಿರುವ ಪ್ರಕ್ರಿಯಾ ಕೌಶಲಗಳ ಬೆಳವಣಿಗೆಗೆ ಇದನ್ನು ಬಳಸುವ ವಿಧಾನವನ್ನು ಚರ್ಚಿಸುವುದು.
|ಕರಪತ್ರ ಓದುವಿಕೆ -  
+
|ಕರಪತ್ರ ಓದುವಿಕೆ -ಕರ ಪ್ರತಿ-೧
ಪ್ರಸ್ತುತಿ ಸ್ಲೈಡ್‌ಗಳು -
+
ಪ್ರಸ್ತುತಿ ಸ್ಲೈಡ್‌ಗಳು -ವಿಜ್ಞಾನ ಏನು?
|ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಕಂಡುಬರುವ ತಪ್ಪು ಕಲ್ಪನೆಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳಿ - ಮೈಂಡ್‌ಮ್ಯಾಪ್ ಮಾಡಿ. ಇವುಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಚರ್ಚೆ - ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳಿ.
+
|ಅನುಭವಗಳು, ಚಿಂತನೆಗಳು  ಮತ್ತು ಚರ್ಚೆಗಳನ್ನು ನಡೆಸಿ ವಿಜ್ಞಾನದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು.
 
|-
 
|-
 
|11.30 ರಿಂದ 12 ಗಂಟೆಯವರೆ
 
|11.30 ರಿಂದ 12 ಗಂಟೆಯವರೆ

೨೧:೫೧, ೧೧ ಆಗಸ್ಟ್ ೨೦೨೪ ನಂತೆ ಪರಿಷ್ಕರಣೆ

See this page in English - TIEE Maths-Science teachers workshop 2024-25

ಕಾರ್ಯಕ್ರಮದ ಮೇಲ್ನೋಟ

2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' (TIEE - Technology integration for equitable education) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.

2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ  ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ವರ್ಷದಲ್ಲಿ (2023-2025), TIEE ಈ ಕೆಲವು ಸವಾಲುಗಳನ್ನು ಎದುರಿಸುವುದನ್ನು ಮುಂದುವರಿಸುತ್ತಾ ಡಿಜಿಟಲ್ ತಂತ್ರಾಂಶಗಳನ್ನು ಮತ್ತು ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸುವ ಮೂಲಕ ಶಾಲಾ-ತರಗತಿಗಳನ್ನು ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಕಲಿಕೆಯ ಸ್ಥಳವನ್ನಾಗಿ ಮಾಡುವುದರ ಮೂಲಕ ಶಿಕ್ಷಣದ ಸಮತೆ ಮತ್ತು ಸಮನ್ವತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು ಯೋಜನೆಯ ವಿಧಾನಗಳು ವಿವಿಧ ಡಿಜಿಟಲ್ ವಿಧಾನ/ತಂತ್ರಗಳನ್ನು ಬಳಸಿಕೊಂಡು ಸಮನ್ವಯ ಶಿಕ್ಷಣದ ವಾತಾವರಣವನ್ನು ಸೃಜಿಸುವ ಸಲುವಾಗಿ 'ಶೈಕ್ಷಣಿಕ ಬೆಂಬಲ ವ್ಯವಸ್ಥೆಯನ್ನು' ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾರ್ಯಕ್ರಮದ ಉದ್ದೇಶಗಳು

  • ಡಿಜಿಟಲ್ ತಂತ್ರಾಂಶಗಳನ್ನು ಮತ್ತು ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸುವ ಮೂಲಕ ಶಾಲಾ-ತರಗತಿಗಳನ್ನು ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಕಲಿಕೆಯ ಸ್ಥಳವನ್ನಾಗಿ ಮಾಡುವುದರ ಮೂಲಕ ಶಿಕ್ಷಣದ ಸಮತೆ ಮತ್ತು ಸಮನ್ವತೆಯನ್ನು ಉತ್ತೇಜಿಸುವುದು
  • ವೈವಿಧ್ಯಮಯ ಬೋಧನ ವಿಧಾನವನ್ನು  ಬಳಸಿಕೊಂಡು ತಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಶಿಕ್ಷಕರ ಸಾಮರ್ಥ್ಯಗಳನ್ನು ಬಲಪಡಿಸುವುದು
  • ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರವೇಶಿಸಿ ತಮ್ಮ ತರಗತಿಯಲ್ಲಿ ಬಳಸಲು ಶಿಕ್ಷಕರಿಗೆ ಅನುವು ಮಾಡಿಕೊಡಲು ಪ್ರಾಯೋಗಿಕ ಅನುಭವಗಳ ಮೂಲಕ ಸಹಕಾರ ಒದಗಿಸುವುದು
  • ಶಾಲಾ ಅಭಿವೃದ್ಧಿ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನಗಳನ್ನು ಸಂಯೋಜಿಸುವಲ್ಲಿ ಶಾಲೆಗಳನ್ನು ಬೆಂಬಲಿಸುವುದು
  • ಶಿಕ್ಷಕರ ಕಲಿಕಾ ಸಮುದಾಯವನ್ನು ರಚಿಸುವ ಮೂಲಕ ಶಿಕ್ಷಕರಲ್ಲಿ ಸಹಭಾಗಿತ್ವದ ಕಲಿಕೆಯನ್ನು ಉತ್ತೇಜಿಸುವುದು
  • ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗೆ ಬೆಂಬಲ ನೀಡುವುದು

ಕಾರ್ಯಾಗಾರದ ಉದ್ದೇಶಗಳು

  • ಶಿಕ್ಷಕರು ತಮ್ಮ ಪ್ರಸ್ತುತ ತರಗತಿಯ ಅಭ್ಯಾಸಗಳನ್ನು ಅವಲೋಕಿಸಲು ಮತ್ತು ಅವರ ನಂಬಿಕೆಗಳು ಹಾಗೂ ಅಭ್ಯಾಸದಲ್ಲಿ ಸಾಧ್ಯವಾಗುವ ಪರಿಷ್ಕರಣೆಯ(ಸರಿಪಡಿಸಿಕೊಳ್ಳುವ) ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವುದು.
  • ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಮತ್ತು ಗಣಿತ ತರಗತಿಯಲ್ಲಿ ತಂತ್ರಜ್ಞಾನ-ಆಧಾರಿತ ಬೋಧನ ವಿಧಾನವನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
  • ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
  • ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
  • ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.

ಶಿಕ್ಷಕರ ಮಾಹಿತಿ

ಶಿಕ್ಷಕರ ಮಾಹಿತಿ ನಮೂನೆ - TIEE ಗಣಿತ-ವಿಜ್ಞಾನ ಶಿಕ್ಷಕರ ಕಾರ್ಯಾಗಾರ - ಈ ನಮೂನೆಯು 'ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರ ಬಗ್ಗೆ ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವುದು.

ಕಾರ್ಯಾಗಾರದ ಕಾರ್ಯಸೂಚಿ

ದಿನ 1
ಸಮಯ ಅಧಿವೇಶನದ ಹೆಸರು ವಿವರಣೆ/ಪ್ರಕ್ರಿಯೆ ಸಂಪನ್ಮೂಲಗಳು ಪ್ರತಿಕ್ರಿಯೆಗಳು
10:00 ರಿಂದ 10:45 ಗಂಟೆಯವರೆ ಪೀಠಿಕೆ, ಕಾರ್ಯಕ್ರಮದ (TIEE) ಕಿರುನೋಟ/ ಮೇಲ್ನೋಟ ಮತ್ತು ಕಾರ್ಯಾಗಾರ ನಿರೀಕ್ಷೆಗಳನ್ನು ಹೊಂದಿಸುವುದು ITFC ಸಂಸ್ಥೆಯ ಮತ್ತು TIEE ಕಾರ್ಯಕ್ರಮದ ಬಗ್ಗೆ ಸಂಕ್ಷೀಪವಾಗಿ ಮಾಹಿತಿ ಒದಗಿಸುವುದು.

ಈ ಕಾರ್ಯಾಗಾರದ ಉದ್ದೇಶಗಳು ಮತ್ತು ಕಾರ್ಯಸೂಚಿಯನ್ನು ತಿಳಿಸುವುದು.

೧. TIEE ಕಾರ್ಯಕ್ರಮದ ಮೇಲ್ನೋಟ - ಪ್ರಸ್ತುತಿ ಸ್ಲೈಡ್‌ಗಳು

೨. QR ಕೋಡ್ ಪ್ರತಿ

ವಾಟ್ಸಾಪ್ ಗುಂಪು ಸೇರಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಅವರ ಹೆಸರು, ಶಾಲೆ, ಅವರು ಕಲಿಸುವ ಶ್ರೇಣಿಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳಿ
10:45 ರಿಂದ 11.30 ಗಂಟೆಯವರೆ ವಿಜ್ಞಾನ ಬೋಧನ ವಿಧಾನ ಕುರಿತು ಚರ್ಚೆ ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು.

ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ನಿವಾರಿಸಲು ಸಹಾಯಕವಾಗುವ ಪರ್ಯಾಯ ಬೋಧನಾ ವಿಧಾನಗಳ ಮತ್ತು ಅದರ ಬಳಕೆ ವಿಧಾನ ಕುರಿತು ಚರ್ಚಿಸುವುದು. ಹಾಗೆಯೇ ವಿಜ್ಞಾನ ಕಲಿಕೆಯಲ್ಲಿ ಅಗತ್ಯವಾಗಿ ಅವಶ್ಯಕವಾಗಿರುವ ಪ್ರಕ್ರಿಯಾ ಕೌಶಲಗಳ ಬೆಳವಣಿಗೆಗೆ ಇದನ್ನು ಬಳಸುವ ವಿಧಾನವನ್ನು ಚರ್ಚಿಸುವುದು.

ಕರಪತ್ರ ಓದುವಿಕೆ -ಕರ ಪ್ರತಿ-೧

ಪ್ರಸ್ತುತಿ ಸ್ಲೈಡ್‌ಗಳು -ವಿಜ್ಞಾನ ಏನು?

ಅನುಭವಗಳು, ಚಿಂತನೆಗಳು ಮತ್ತು ಚರ್ಚೆಗಳನ್ನು ನಡೆಸಿ ವಿಜ್ಞಾನದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು.
11.30 ರಿಂದ 12 ಗಂಟೆಯವರೆ ವಿಜ್ಞಾನ ಬೋಧನೆ-ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆ ಡಿಜಿಟಲ್ ಸಂಪನ್ಮೂಲಗಳು ಮತ್ತು ವಿವಿಧ ಬೋಧನ-ವಿಧಾನ ಹಾಗೂ ತಂತ್ರಗಳನ್ನು ಬಳಸಿಕೊಂಡು ತರಗತಿಯ ವಿಜ್ಞಾನ ಬೋಧನೆ-ಕಲಿಕೆಯಲ್ಲಿ ಹೇಗೆ ತಂತ್ರಜ್ಞಾನ ಸಂಯೋಜನೆ ಮಾಡಬಹುದೆಂದು ಆಯ್ದ ವಿಷಯಗಳಿಗೆ ಫೆಟ್ ಸಿಮ್ಯುಲೇಶನ್‌ಗಳು ( Phet.colorado.edu) ಮತ್ತು ವೀಡಿಯೋ ಸಂಪನ್ಮೂಲಗಳನ್ನು ಬಳಸುವುದನ್ನು ಪ್ರಸ್ತುತ ಪಡಿಸುವುದು.
12 ರಿಂದ 1 ಗಂಟೆಯವರೆ ಗಣಿತ ಬೋಧನ ವಿಧಾನ ಕುರಿತು ಚರ್ಚೆ ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು. ನಿರ್ದಿಷ್ಟ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರ ಪ್ರಸ್ತುತ ಅಭ್ಯಾಸಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಮಕ್ಕಳು ಎದುರಿಸುವ ಸವಾಲುಗಳು ಮತ್ತು ಬೋಧನೆಗೆ ಪರ್ಯಾಯ ವಿಧಾನಗಳು ಹೇಗೆ ಸಹಾಯ ಮಾಡಬಹುದೆಂಬುದನ್ನು ಚರ್ಚಿಸುವುದು. ಹಾಗೆಯೇ ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವ ಮೂಲಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಇದನ್ನು ಸಂದರ್ಭೋಚಿತಗೊಳಿಸಬಹುದೆಂದು ಚರ್ಚಿಸುವುದು. ಕರಪತ್ರ ಓದುವಿಕೆ -

ಪ್ರಸ್ತುತಿ ಸ್ಲೈಡ್‌ಗಳು -

1 ರಿಂದ 1.45 ಗಂಟೆಯವರೆ ಊಟದ ವಿರಾಮ
1.45 ರಿಂದ 2:30 ಗಂಟೆಯವರೆ ಗಣಿತ ಬೋಧನೆ-ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆ ಡಿಜಿಟಲ್ ಸಂಪನ್ಮೂಲಗಳು ಮತ್ತು ವಿವಿಧ ಬೋಧನ-ವಿಧಾನ ಹಾಗೂ ತಂತ್ರಗಳನ್ನು ಬಳಸಿಕೊಂಡು ಗಣಿತ ಬೋಧನೆ-ಕಲಿಕೆಯಲ್ಲಿ ಹೇಗೆ ತಂತ್ರಜ್ಞಾನ ಸಂಯೋಜನೆ ಮಾಡಬಹುದೆಂದು ಆಯ್ದ ವಿಷಯಗಳಿಗೆ ಜಿಯೋಜಿಬ್ರಾ ಮತ್ತು ಫೆಟ್ ಸಂಪನ್ಮೂಗಳ (geogebra.org ಮತ್ತು Phet.colorado.edu) ಮೂಲಕ ಪ್ರಸ್ತುತ ಪಡಿಸುವುದು. ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಕಂಡುಬರುವ ತಪ್ಪು ಕಲ್ಪನೆಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳಿ - ಮೈಂಡ್‌ಮ್ಯಾಪ್ ಮಾಡಿ. ಇವುಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಚರ್ಚೆ - ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳಿ.
2.30 ರಿಂದ 4.30 ಗಂಟೆಯವರೆ ಗುಂಪು ಚಟುವಟಿಕೆ ಮತ್ತು ಪ್ರಸ್ತುತಿ.

ದಿನದ ಚಟುವಟಿಕೆಗಳ ಸಂಕ್ಷೀಪ್ತ ಮಾಹಿತಿಯೊಂದಿಗೆ ಮುಕ್ತಾಯಗೊಳಿಸುವಿಕೆ

ಶಿಕ್ಷಕರ ಗುಂಪುಗಳನ್ನು ಮಾಡಿ. ಪ್ರತಿ ಗುಂಪಿಗೆ ಪರಿಕಲ್ಪನೆಗೆ ಸಂಬಂಧಿಸಿದ ಒಂದು PhET ಸಿಮ್ಯುಲೇಶನ್/Geogebra ಫೈಲ್ ಅನ್ನು ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕವಾಗಿ ನಿಯೋಜಿಸುವುದು, ಸಂಪನ್ಮೂಲವನ್ನು ಅನ್ವೇಷಿಸಲು ಶಿಕ್ಷಕರಿಗೆ ಕೆಲವು ಪ್ರಶ್ನೆಗಳು/ಸೂಚನೆಗಳನ್ನು ನೀಡಲಾಗುತ್ತದೆ. (30 ನಿಮಿಷ) ನಂತರ ಪ್ರತಿ ಗುಂಪನ್ನು ತಮ್ಮ ಅವಲೋಕನಗಳು / ಅನುಭವಗಳನ್ನು ಪ್ರಸ್ತುತಪಡಿಸಲು ಕೇಳಲಾಗುತ್ತದೆ (ಗರಿಷ್ಠ 10 ನಿಮಿಷಗಳು). ಗುಂಪು ಚಟುವಟಿಕೆಯ ಕರಪತ್ರ ಮತ್ತು ಶಿಕ್ಷಕರ ಕೈಪಿಡಿ.

ಆಫ್‌ಲೈನ್ PhET ಸಿಮ್ಯುಲೇಶನ್‌ಗಳು ಮತ್ತು ಜಿಯೋಜಿಬ್ರಾ ಫೈಲ್‌ಗಳನ್ನು ಆಯ್ಕೆ ಮಾಡಲಾಗಿದೆ

5 ಗುಂಪುಗಳು 6 ಶಿಕ್ಷಕರನ್ನು ಒಳಗೊಂಡಿರುತ್ತವೆ.

ಶಿಕ್ಷಕರ ಕೈಪಿಡಿಯಲ್ಲಿ ಪರಿಕಲ್ಪನೆಗೆ ಸಂಬಂಧಿಸಿದ ತಪ್ಪುಗ್ರಹಿಕೆಗಳನ್ನು ಚರ್ಚಿಸುವಂತಹ ಪ್ರಶ್ನೆಗಳನ್ನು ಸೇರಿಸಲಾಗಿರುತ್ತದೆ.

ದಿನ 2
10 ರಿಂದ 1 ಗಂಟೆಯವರೆ ಸಂಪನ್ಮೂಲಗಳು/ಪರಿಕರಗಳು/ಅಪ್ಲಿಕೇಶನ್‌ಗಳ ಅನ್ವೇಷಣೆ, ಜಿಯೋಜಿಬ್ರಾ ಮತ್ತು ಫೆಟ್ ವೆಬ್‌ಸೈಟ್ ಗಳನ್ನು (geogebra.org ಮತ್ತು Phet.colorado.edu) ಪರಿಚಯಿಸಿ, ಅದರಿಂದ ಬೇಕಾಗಿರುವ ಸಂಪನ್ಮೂಲಗಳನ್ನು ಹೆಗೆ ಪಡೆಯುವುದು ಮತ್ತು ಡೌನ್‌ಲೋಡ್ ಮಾಡುಬಹುದೆಂದು ಪ್ರದರ್ಶಿಸುವುದು. ಈ ವೆಬ್‌ಸೈಟ್ ಗಳು

ಲಭ್ಯವಿರುವ ಸಂಪನ್ಮೂಲಗಳನ್ನು ಮೊಬೈಲ್ ನಲ್ಲಿ ಹೇಗೆ ಡೌನ್‌ಲೋಡ್ ಮಾಡುವುದು ಮತ್ತು ಪ್ರತಿಯೊಂದು ಸಂಪನ್ಮೂಲವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸಿ ಶಿಕ್ಷಕರು ಅದನ್ನು ಅಭ್ಯಾಸಿಸಲು ಅವಕಾಶ ನಿಡುವುದು. ಕೊನೆಯಲ್ಲಿ, ಶಿಕ್ಷಕರು ಇತರ ಸಂಪನ್ಮೂಲಗಳನ್ನು (kalzium, simpop, ophysics, KOER, ಇತ್ಯಾದಿ) ಅನ್ವೇಷಿಸಲು ಅನುವು ಮಾಡಿಕೊಡುವುದು.

ಪ್ರವೇಶಿಸುವುದು, ಡೌನ್‌ಲೋಡ್ ಮಾಡುವುದು, ಹಂಚಿಕೊಳ್ಳುವುದು ಪ್ರಾಯೋಗಿಕ ಅಭ್ಯಾಸ,

(ಬೆಳಿಗ್ಗೆ 10 ರಿಂದ 11 ರವರೆಗೆ - ಫೆಟ್ ಸಿಮ್ಯುಲೇಶನ್, 11 - 1 ಗಂಟೆಗೆ ಜಿಯೋಜಿಬ್ರಾ ಮತ್ತು ಒಫಿಸಿಕ್ಸ್(Ophysics), CK-12 ಫೌಂಡೇಷನ್ಸ್ ಅಪ್ಲಿಕೇಶನ್‌ಗಳ ಅನ್ವೇಷಣೆಗಳು)

1:00 ರಿಂದ 2:00 ಗಂಟೆಯವರೆ ಊಟದ ವಿರಾಮ
2 ರಿಂದ 3.30 ಗಂಟೆಯವರೆ ತರಗತಿಯಲ್ಲಿ ತಂತ್ರಜ್ಞಾನ ಸಂಯೋಜನೆ ಶಾಲೆಯಲ್ಲಿ ಲಭ್ಯವಿರುವ ತಂತ್ರಜ್ಞಾನ ಉಪಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆ ಗಳನ್ನ ಕುರಿತು ಸಲಹೆಗಳು KOER ಪುಟಗಳು - ವಿಡಿಯೋಗಳು
3.30 ರಿಂದ 4.00 ಗಂಟೆಯವರೆ ಹಿಮ್ಮಾಹಿತಿ ಹಾಗು ಮುಂದಿನ ಯೋಜನೆಗಳು ಹಿಮ್ಮಾಹಿತಿ ನಮೂನೆಯನ್ನು ಭರ್ತಿ ಮಾಡುವುದು, ಕಾರ್ಯಾಗಾರದ ಚಟುವಟಿಕೆಗಳ ಕುರಿತು ಪ್ರತಿಫಲಗಳು ಮತ್ತು ಹಿಮ್ಮಾಹಿತಿ ಪಡೆಯುವುದು, ಮುಂದಿನ ನಡೆಯ ಬಗ್ಗೆ ಚರ್ಚೆ, ಗುಂಪು ಫೋಟೋ ಗಣಿತ-ವಿಜ್ಞಾನ ಶಿಕ್ಷಕರ ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಸಂಪನ್ಮೂಲಗಳು

ಗಣಿತ ವಿಷಯದ ಸಂಪನ್ಮೂಲಗಳು

  1. ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
  2. KOER ಪುಟಗಳು ; 2 ಮತ್ತು 3 ಆಯಾಮದ ಆಕಾರಗಳು , ರೇಖೆಗಳು ಮತ್ತು ಕೋನಗಳು
  3. ಫೆಟ್ (Phet) ಸಿಮ್ಯೂಲೇಷನ್ ಗಳು:
    1. ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು
    2. ಕ್ಷೇತ್ರ ಮಾದರಿ ಪರಿಚಯಿಸುವಿಕೆ
    3. ಕ್ಷೇತ್ರ ಮಾದರಿ ಗುಣಕಾರ
  4. ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು

ವಿಜ್ಞಾನ ವಿಷಯದ ಸಂಪನ್ಮೂಲಗಳು

  1. ನಮ್ಮ ಸುತ್ತಲಿನ ಬದಲಾವಣೆಗಳು
  2. ಪರಮಾಣುವನ್ನು ನಿರ್ಮಿಸಿ
  3. ಆಮ್ಲ_ಮತ್ತು_ಪ್ರತ್ಯಾಮ್ಲಗಳ_ಪತ್ತೆ_ಹಚ್ಚುವಿಕೆ

ತಂತ್ರಜ್ಞಾನ ಸಂಪನ್ಮೂಲಗಳು

  1. ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ
  2. ಫೆಟ್ ಬಳಸಲು ಸಹಾಯವಾಗುವ ಟಿಪ್ಪಣಿಯ ಪುಟ
  3. ರೋಬೋಕಾಂಪಸ್ ಕಲಿಯಿರಿ
  4. ಸ್ಟೆಲ್ಲಾರಿಯಮ್ ಕಲಿಯಿರಿ
  5. ಕ್ಯಾಲ್ಜಿಯಂ ಕಲಿಯಿರಿ
  6. ಇತರ ಅನ್ವಯಕಗಳನ್ನು ಅನ್ವೇಷಿಸಿ

ಗಣಿತ ಮತ್ತು ವಿಜ್ಞಾನ ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು

  1. ಜಿಯೋಜಿಬ್ರಾ ಫೈಲ್‌ಗಳು
  2. ಫೆಟ್ (ಪಿಎಚ್‌ಇಟಿ- PhET)
  3. ಮ್ಯಾನಿಪ್ಯುಲೇಟಿವ್ಸ್ - ವರ್ಚುವಲ್ ಮ್ಯಾನಿಪ್ಯುಲೇಟಿವ್ಸ್ ಸಂಗ್ರಹ.
  4. ರೋಬೋಕಾಂಪಾಸ್
  5. ಜಿಕಾಂಪ್ರಿಸ್
  6. ಝೈಗೋಟ್ ಬಾಡಿ 3D ಅನ್ಯಾಟಮಿ ಆನ್‌ಲೈನ್ ವಿಷುಲೈಜರ್
  7. SIMPOP- ವಿಜ್ಞಾನ ಸಿಮ್ಯುಲೇಶನ್‌ಗಳು ಮತ್ತು ಆಟಗಳು

ಇತರೆ ಸಂಪನ್ಮೂಲಗಳು

  1. ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
  2. ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫
  3. NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು
  4. ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ
  5. Primary resources : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
  6. ಗಣಿತ ಪ್ರಯೋಗ ಶಾಲೆ

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ನಡೆಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ.

ಮುಂದಿನ ಯೋಜನೆಗಳು

  1. ಶಾಲಾ ಹಂತದ ಡೆಮೊ ತರಗತಿಗಳು
  2. ಗಣಿತ ಶಿಕ್ಷಕರ ಕಲಿಕಾ ಬಳಗ - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದು.
  3. ಎರಡನೇ ಹಂತದ ಕಾರ್ಯಗಾರ