"ಕೆ-ವರ್ಡ್‌ಕ್ವಿಜ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೮ ನೇ ಸಾಲು: ೪೮ ನೇ ಸಾಲು:
 
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.  
 
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.  
  
====ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆ====
+
====ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು====
 
<gallery mode="packed" heights="200px" caption="ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆ">  
 
<gallery mode="packed" heights="200px" caption="ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆ">  
 
File:KWordQuiz_4_Flashcard_option.png|ಪ್ಲಾಶ್‌ಕಾರ್ಡ್‌ ಮೂಲಕ ರಸಪ್ರಶ್ನೆ
 
File:KWordQuiz_4_Flashcard_option.png|ಪ್ಲಾಶ್‌ಕಾರ್ಡ್‌ ಮೂಲಕ ರಸಪ್ರಶ್ನೆ

೦೯:೧೮, ೧೭ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹು ಆಯ್ಕೆಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕೆ-ವರ್ಡ್ ಕ್ವಿಜ್ ಎಂಬುದು ವಿಷಯ ಸಂಪನ್ಮೂಲ ರಚನೆ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ (ಭಾಷೆ ಮತ್ತು ಸಮಾಜವಿಜ್ಞಾನ).
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಕೆ-ವರ್ಡ್ ಕ್ವಿಜ್’ ಬಳಸಿ ಗಣಕ ಪರದೆಯ ಮೇಲೆ ಪ್ರಶ್ನೆಗಳನ್ನು ಮೂಡಿಸಿ ತರಗತಿಯಲ್ಲಿ ಏಕಕಾಲದಲ್ಲಿ ಪ್ರಶ್ನೋತ್ತರ ಚಟುವಟಿಕೆಯನ್ನು ನಿರ್ವಹಿಸಬಹುದು.
ಆವೃತ್ತಿ Version 0.9.2
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್‌ ಮೂಲಕ ಮಾಡಿಕೊಳ್ಳಬೇಕಾಗುತ್ತದೆ.
ಇತರೇ ಸಮಾನ ಅನ್ವಯಕಗಳು ಲಭ್ಯವಿಲ್ಲ
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಲಭ್ಯವಿಲ್ಲ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಸುಲಭವಾಗಿ ಬಳಸಬಹುದಾದ ಇಂಟರ್‌ಫೇಸ್, ಐದು ರೀತಿಯ ಪ್ರಾಯೋಗಿಕ ವಿಧಗಳು, ವಿವಿಧ ಫ್ಲಾಸ್‌ಕಾರ್ಡ್ ಮತ್ತು ಕ್ವಿಜ್ ಮಾದರಿಗಳ ಲಭ್ಯತೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ KWordQuiz” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kwordquiz

ಅನ್ವಯಕ ಬಳಕೆ

ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz ಮೂಲಕ ತೆರೆಯಬಹುದು.

ಕೆ-ವರ್ಡ್‌ಕ್ವಿಜ್‌ ಬಳಕೆ ಮತ್ತು ರಸಪ್ರಶ್ನೆ ರಚನೆ

  1. ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz ಮೂಲಕ ತೆರೆಯಬಹುದು. ಕೆ-ವರ್ಡ್‌ಕ್ವಿಜ್‌ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ ೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು.
  2. ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ ೧ ಮತ್ತು ಕಾಲಂ ೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ colum setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣಗೆ ಕಾಲಂ ೧ ನಲ್ಲಿ ರಾಜ್ಯದ ಹೆಸರು,ಕಾಲಂ 2- ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ.
  3. ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.

ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು

  1. ಮೊದಲನೇಯದು ಪ್ಲಾಶ್‌ಕಾರ್ಡ್‌ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್ನು ಒತ್ತಬೇಕು. ಈ ಪರದೆಯಲ್ಲಿ ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು.
  2. ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
  3. ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ.
  4. ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.

ರಸಪ್ರಶ್ನೆಯ ವಿಧಾನಗಳು

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು