"ಭಾರತದ ಭೂ ಬಳಕೆ ಹಾಗೂವ್ಯವಸಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "<mm>[[" to "[[File:") |
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | [[File:BharatadaBhubalakehaguvyavasaya.mm | + | [[File:BharatadaBhubalakehaguvyavasaya.mm]] |
=ಪಠ್ಯಪುಸ್ತಕ= | =ಪಠ್ಯಪುಸ್ತಕ= |
೧೦:೨೧, ೬ ನವೆಂಬರ್ ೨೦೧೭ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:BharatadaBhubalakehaguvyavasaya.mm
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಭಾರತದ ಭೂ ಬಳಕೆ ಹಾಗೂವ್ಯವಸಾಯ
ಮತ್ತಷ್ಟು ಮಾಹಿತಿ
ಪ್ರೀಯ ಶಿಕ್ಷಕ ಮಿತ್ರರೇ, ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ತರಗತಿಯಲ್ಲಿ ಬೋಧಿಸಬೇಕಿದೆ.
- ಇತರೇ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಅತ್ಯಂತ ಕಡಿಮೆ ವ್ಯವಸಾಯ ಭೂಮಿಯನ್ನು ಒಳಗೊಂಡಿದೆ ಎಂದು ಮನದಟ್ಟು ಮಾಡುವುದು.
- ವ್ಯವಸಾಯದ ಮೂಲಕ ನಮ್ಮ ದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸ ಬಹುದು ಎಂದು ತಿಳುವಳಿಕೆ ಮೂಡಿಸುವುದು.
- ದೇಶದ ಜನ ಸಂಪನ್ಮೂಲವನ್ನು ವ್ಯವಸಾಯದಲ್ಲಿ ತೊಡಗಿಸುವುದರ ಮಹತ್ವವನ್ನು ತಿಳಿಯ ಪಡಿಸುವುದು.
- ಬಳಕೆಯಾಗದೇ ಉಳಿದಿರುವ ವ್ಯವಸಾಯ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸುವುದರ ಮಹತ್ವವನ್ನು ಮನವರಿಕೆ ಮಾಡುವುದು.
- ಕ್ಯಗಾರಿಕೆಗಳಿಗೆ ವ್ಯವಸಾಯೇತರ ಭೂಮಿಯನ್ನು ಉಪಯೋಗಿಸುದರ ಮಹತ್ವವನ್ನು ಖಚಿತ ಪಡಿಸುವುದು.
- ವ್ಯವಸಾಯವು ಒಂದು ಜೀವನಾಧಾರ ವೃತ್ತಿಯಾಗಿದೆ ಎಂದು ಮನದಟ್ಟು ಮಾಡುತ್ತಾ ವ್ಯವಸಾಯದಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಉದ್ಯೋಗವಕಾಶವಿದೆ ಎಂದು ಮನವರಿಕೆ ಮಾಡುವುದು.
- ಭಾರತದಲ್ಲಿ ಹಸಿವುಗಳಿಂದಲೇ ಅನೇಕಜನರು ಸಾಯುತ್ತಿರುವುದರ ಕಡೆಗೆ ಗಮನ ಸೆಳೆಯುತ್ತಾ ಬಳಕೆಯಾಗದ ಭೂಮಿಯನ್ನು ಉಪಯೋಗಿಸುವುದರ ಅಗತ್ಯತೆಯನ್ನು ತಿಳಿಸುವುದು.
- ದೇಶದ ವ್ಯವಸಾಯಾಧಾರಿತ ಕೈಗಾರಿಕಾ ಬೆಳವಣಿಗೆ ತೀರಾ ಕುಂಠಿತವಾಗಿದೆ ಎಂದು ಅರ್ಥೈಯಿಸುತ್ತಾ ವ್ಯವಸಾಯಾಧಾರಿತ ಕೈಗಾರಿಕಾ ಬೆಳವಣಿಗೆಗೆ ವ್ಯವಸಾಯ ಅತೀ ಮುಖ್ಯ ಎಂದು ಅರ್ಥೈಸುವುದು.
- ಭಾರತದ ಆರ್ಥಿಕ ಬೆಳವಣಿಗೆಯು ಅತ್ಯಂತ ಮಂದಗತಿಯಲ್ಲಿದೆ ಎಂದು ಮನವರಿಕೆ ಮಾಡುತ್ತಾ ದೇಶದ ಆರ್ಥಿಕಾಭಿವೃದ್ದಿಗೆ ವ್ಯವಸಾಯದ ಪ್ರಮುಖ್ಯತೆಯನ್ನು ತಿಳಿಯಪಡಿಸುವುದು.
- ಪುಷ್ಪ ಕೃಷಿಯಲ್ಲಿ ಲಾಭಗಳಿಸಬಹುದು ಎಂದು ವಿಶ್ವಾಸ ಮೂಡಿಸುವುದು.
- ನಮ್ಮಲ್ಲಿರುವ ಅತೀ ಕಡಿಮೆ ಭೂಮಿಯಲ್ಲಿಯೂ ತೋಟಗಾರಿಕಾ ಕೃಷಿ ಮಾಡುವುದರ ಮೂಲಕ ಲಾಭಗಳಿಸಬಹುದು ಎಂದು ಮನವರಿಕೆ ಮಾಡಬಹುದು.
- ನಮ್ಮ ವ್ಯವಸಾಯವು ಮಳೆಯಾಧಾರಿತ ಕೃಷಿಯಾದ್ದರಿಂದ ಕಡಿಮೆ ನೀರು ಬೇಕಾಗುವ ಕೃಷಿಯ ಕಡೆಗೆ ಗಮನಕೊಡುವುದರ ಮಹತ್ವವನ್ನು ತಿಳಿಸುವುದು.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಎನ್ .ಸಿ. ಇ. ಆರ್.ಟಿ, ಹತ್ತನೇ ತರಗತಿಯ ಪಠ್ಯದಲ್ಲಿ ವ್ಯವಸಾಯ ಎಂಬ ಪಾಠದಲ್ಲಿ ಭೂಬಳಕೆಯ ಪ್ರಕಾರಗಳು ,ವ್ಯವಸಾಯದ ಪ್ರಾಮುಖ್ಯತೆ, ವ್ಯವಸಾಯದ ವಿಧಗಳು, ಬೆಳೆಯನ್ನು ಬೆಳೆಯಲು ನಿರ್ದರಿಸುವ ಅಂಶಗಳು, ಪ್ರಮುಖ ಬೆಳೆಗಳ ಬಗ್ಗೆ ಚರ್ಚಿಸಿರುವರು. ಆದರೆ ಆ ಪುಸ್ತಕದಲ್ಲಿ ಕಂಡುಕೊಂಡಿರುವ ವಿಶೇಷತೆ ಏನು ಅಂದರೆ ಪ್ರತಿಯೊಂದು ಕಲಿವಿನ ಅಂಶವನ್ನು ಉದಾಹರಣೆ ಸಹಿತ ವಿವರಣೆ ಕಾಣಬಹುದು, ಹಾಗೂ ಭಾರತದಲ್ಲಿ ಅದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುವಲ್ಲಿ ಪ್ರಯತ್ನಗಳನ್ನು ನಾವು ಕಾಣಬಹುದು. ವಿವರಣೆಗಳು ಹೆಚ್ಚು ಗೊಂದಲಗಳಿಲ್ಲದೆ ಸ್ಪಷ್ಟವಾಗಿ ಸಂಕ್ಷಿಪ್ತವಾಗಿ ಇರುವುದನ್ನು ಕಾಣಬಹುದು.
- ಪ್ರತಿಯೊಂದು ಕಲಿವಿನ ಅಂಶದ ಮದ್ಯೆ ಕೆಲವೊಂದು ಚಿಂತನೆಗೆ ಅವಕಾಶವಿರುವ ಪ್ರಶ್ನೆಗಳನ್ನು ಕೇಳಿರುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ.
- ಪಾಠದ ಮದ್ಯೆ ಕೆಲವು ಪದಗಳ 'ಇತಿಹಾಸ'ವನ್ನು , ಆ ಪದ ಯಾವ ಭಾಷೆಯಿಂದ ಬಂದಿದೆ ಎಂದು ವಿವರಣೆಯಿದೆ.
- ಪಾಠದ ಮದ್ಯೆ ಕೆಲವೊಂದು ಕಥೆಗಳನ್ನು ಸೇರಿಸಿ (ವ್ಯವಸಾಯಕ್ಕೆ ಸಂಬಂದಿಸಿದ) ವಿದ್ಯಾರ್ಥಿಗೆ ಆಸಕ್ತಿ ಬರುವಂತೆ ಮಾಡಲಾಗಿದೆ.
- ಚಿತ್ರಗಳು ಅತ್ಯಂತ ಆಕರ್ಷಕವಾಗಿ ಮುದ್ರಣವಾಗಿವೆ.
- ಭಾರತದಲ್ಲಿ ಕೆಲವು ಬೆಳೆಗಳನ್ನು ಬೆಳೆಯುವ ಪ್ರದೇಶಗಳ ನಕಾಶೆ ಪ್ರತ್ಯೇಕ ಪ್ರತ್ಯೆಕ ಕೊಟ್ಟಿರುವುದು ಹೆಚ್ಚು ಗೊಂದಲವಿಲ್ಲದಂತೆ ಮಾಡಿವೆ.
- ಗಾಂಧೀಜಿಯವರ , ವಿನೋಭಾ ಭಾವೆಯವರ ಭೂ ದಾನ ಗ್ರಾಮದಾನ ಚಳುವಳಿ ಬಗ್ಗೆ ಮಾಹಿತಿಯನ್ನು ಕೊಟ್ಟಿರುವರು.
- ಚಟುವಟಿಕೆಯಂತೂ ಅತ್ಯಂತ ಆಕರ್ಷಕವಾಗಿ ಕೊಟ್ಟಿರುತ್ತಾರೆ.
ತಮಿಳುನಾಡಿನ ಪಠ್ಯವನ್ನು ಗಮನಿಸಿದಾಗ ಎನ್. ಸಿ. ಇ.ಆರ್.ಟಿ ಗೆ ಸಮಾನವಾಗಿ ಅದನ್ನು ರಚಿಸಿರುವಂತೆ ಕಾಣುತ್ತದೆ. ಅಲ್ಲಿಯೂ ಅತ್ಯಂತ ಆಕರ್ಷಕ ಚಿತ್ರ ಸಹಿತ ಪಠ್ಯ ವಿವರಣೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದು ಕಂಡುಬರುತ್ತಿದೆ.
ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು.
ಉಪಯುಕ್ತ ವೆಬ್ ಸೈಟ್ ಗಳು
'
1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ.
2.ಸಾಂದ್ರ ಬೇಸಾಯದ ಬಗ್ಗೆ ಚಿತ್ರ ನೋಡಲು,ಬೇಸಾಯದ ಕ್ರಮಗಳನ್ನು ಚಿತ್ರದ ಮೂಲಕ ನೋಡಲು ಇಲ್ಲಿ ಕ್ಲಿಕ್ಕಿಸಿ
4.ಜೀವನಾಧಾರ ಬೇಸಾಯ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ
5.ಬೆಳೆಗಳ ಮಾದರಿ ಮಾಹಿತಿ,ಯಾವ ಯಾವ ಬೆಳೆಗಳನ್ನು ಹೇಗೆ ಬೆಳೆಯುತ್ತಾರೆ, ಚಿತ್ರಸಹಿತ ವಿವರ ನೋಡಲು ಇಲ್ಲಿ ಕ್ಲಿಕ್ಕಿಸಿ
6.ಬೆಳೆಗಳ ಮಾದರಿ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ
9.ಆಹಾರ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
11.ವಾಣಿಜ್ಯ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
12.ನಾರಿನ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
14.ಪುಷ್ಪ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
15.ವ್ಯವಸಾಯ ಬಗೆಗಿನ ಕನ್ನಡದಲ್ಲಿ ಮಾಹಿತಿ ಇಲ್ಲಿದೆ
16.ವ್ಯವಸಾಯ ಚಿತ್ರಗಳು ಇಲ್ಲಿ ಕ್ಲಿಕ್ಕಿಸಿ
19.ವಾಣಿಜ್ಯ ಬೆಳೆಗಳ ಕುರಿತು ಮಾಹಿತಿ ಇದೆ
20.ಕಬ್ಬು ಬಗೆಗಿನ ಮಾಹಿತಿ ಇಲ್ಲಿದೆ
21.ಹೊಗೆಸೊಪ್ಪು ಬಗ್ಗೆ ,ಅದರ ಇತಿಹಾಸ ತಿಳಿಯಲು, ಯಾವ ದೇಶದಲ್ಲಿ ಬಳಕೆಯಲ್ಲಿ ಇತ್ತು ಎಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿ
26.ಸಪೋಟ ಹಣ್ಣಿನ ಬಗ್ಗೆ ಸಮಗ್ರ ಮಾಹಿತಿ, ಸಸ್ಯದ ಗುಣ ಲಕ್ಷಣಗಳು, ಅದರ ಉಪಯೋಗದ ಬಗ್ಗೆ ಮಾಹಿತಿ ಇಲ್ಲಿದೆ
ಪುಷ್ಪ ಕೃಷಿ ವಿಡಿಯೋ
ಸಂಬಂಧ ಪುಸ್ತಕಗಳು
- ಎನ್ . ಸಿ ಇ. ಆರ್ ಟಿ
- ಭೂಗೋಳ ಸಂಗಾತಿ
- ಕರ್ನಾಟಕದ ಪ್ರಾಕೃತಿಕ ಭೂಗೋಳ ಶಾಸ್ತ್ರ - ವಿ ಮಲ್ಲಪ್ಪ
- ಏಕಲವ್ಯ ಪುಸ್ತಕ
- ಭೂಗೋಳ ಪರಿಚಯ (ಎನ್ ಸಿ ಆರ್ ಟಿ)
- ಶಿಕ್ಷಕರ ಕೈಪಿಡಿ -೧೦ ನೇ ತರಗತಿ ಸಮಾಜ ವಿಜ್ಞಾನ
- ಸಾಮಾನ್ಯ ಭೂಗೋಳ ಶಾಸ್ತ್ರ - ಎ ಎಚ್ ಮಹೇಂದ್ರ
- ಸ್ಟಡೀ ಪ್ಯಾಕೇಜ್ - ಸಿ ಪಿ ಸಿ
- ಭಾರತದ ಆರ್ಥಿಕ ವ್ಯವಸ್ಥೆ - ಕೃಷ್ಣಯ್ಯ ಗೌಡ
- ಭಾರತದ ಆರ್ಥಿಕತೆ - ಕೆ ಡಿ ಬಸವ
- ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ
- ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯)
- ಈ ಪಾಠದ "ವ್ಯವಸಾಯ" ವಿಭಾಗಕ್ಕೆ ಸಂಬಂದಿಸಿದಂತೆ ಎನ್.ಸಿ.ಇ.ಆರ್.ಟಿ. ಪುಸ್ತಕವನ್ನು ಇಲ್ಲಿ ನೋಡಿ
- ಈ ಪಾಠದ "ಭೂ ಬಳಕೆಗೆ" ಸಂಬಂದಿಸಿದಂತೆ ಎನ್.ಸಿ.ಇ,ಆರ್.ಟಿ ಪುಸ್ತಕವನ್ನು ಇಲ್ಲಿ ನೋಡಿ
- ತಮಿಳುನಾಡಿನ ಪುಸ್ತಕದ 156 ರಿಂದ 194 ನೇ ಪುಟದವರೆಗೆ ವ್ಯವಸಾಯಕ್ಕೆ ಸಂಬಂದಿಸಿದಂತೆ ವಿವರವಿದೆ
ಬೋಧನೆಯ ರೂಪರೇಶಗಳು
ಎನ್ ಸಿ ಎಫ್ ನ ಆಶಯದಂತೆ ಬೋಧನೆಯು ರಚನಾವಾದದ ಪರಿಕಲ್ಪನೆಯಂತೆ ಇರಬೇಕಾದುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿಕ್ಷಕರಾದ ನಾವು ಈ ಅದ್ಯಾಯವನ್ನು ಅನುಕೂಲಿಸುವ ಸಂದರ್ಭದಲ್ಲಿ ಗಮನಿಸ ಬೇಕಾದ ವಿಷಯ ಎಂದರೆ ಕೇವಲ ಪಠ್ಯಕ್ಕೆ ಒತ್ತು ಕೊಡದೆ ವಿದ್ಯಾರ್ಥಿಗಳ ಸ್ಥಳೀಯ ಪ್ರದೇಶದ ಜ್ಞಾನವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಊರಿನಲ್ಲಿ ಯಾವರೀತಿಯ ಭೂಬಳಕೆ ಇದೆ.ಯಾಕೆ ಕೆಲವು ಭೂಭಾಗಗಳು ಕೃಷಿಗೆ ಬಳಸಲ್ಪಡುವುದಿಲ್ಲ,ಎಂದು ಅವರಿಂದಲೇ ಉತ್ತರಗಳನ್ನು ಪಡೆದುಕೊಂಡು ಪಾಠದ ಬೆಳವಣಿಗೆ ಮಾಡಬಹುದು.ಚಟುವಟಿಕೆಯನ್ನು ಮಾಡುವ ಸಂದರ್ಭದಲ್ಲಿ ತರಗತಿ ಕೋಣೆಯಲ್ಲಿ ಚಿತ್ರಗಳನ್ನು ತೋರಿಸಿ ಪಾಠವನ್ನು ಅನುಕೂಲಿಸುವುದರ ಬದಲು ಹತ್ತಿರದ ಹೊಲಗಳಿಗೆ ಹೋಗುವುದರ ಮೂಲಕ ವ್ಯವಸಾಯದ ಪರಿಕಲ್ಪನೆ ಮೂಡಿಸುವುದು ಹೆಚ್ಚು ಅನುಕೂಲ. ವ್ಯವಸಾಯಕ್ಕೆ ಸಂಬಂದಿಸಿದಂತೆ ವಿದ್ಯಾರ್ಥಿಗಳ ಮನೆಯಿಂದ ಕೆಲವು ಆಹಾರಬೆಳೆಗಳ ಸಸ್ಯಗಳು ,ವಾಣಿಜ್ಯ ಬೆಳೆಗಳ ಸಸ್ಯಗಳು, ತೋಟಗಾರಿಕಾಬೆಳೆಗಳ ಸಸ್ಯಗಳು , ಇತ್ಯಾದಿಯನ್ನು ವಿದ್ಯಾರ್ಥಿಯ ಮನೆಯಿಂದಲೇ ತರಿಸಿಕೊಂಡು, ಅದರ ಪರಿಚಯವನ್ನು ಮಾಡಿಸುವುದು,ಹೆಚ್ಚು ಉಪಯುಕ್ತವಾದಿತು.ಇಲ್ಲಿ ವಿದ್ಯಾರ್ಥಿಯ ಪೂರ್ವ ಜ್ಞಾನವನ್ನು ಪಡೆಯುವುದರಿಂದ ಜ್ಞಾನ ಕಟ್ಟುವಿಕೆಯಲ್ಲಿ ಸಹಾಯವಾಗುತ್ತದೆ. ಇಲ್ಲಿ ಜ್ಞಾನ ಪುನರಚನೆಯಾಗುತ್ತದೆ.
- ವ್ಯವಸಾಯವನ್ನು ಹೇಗೆ ಮಾಡುವುದು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಸ್ವತಃ ಹೊಲಕ್ಕೆ ಹೋಗುವುದರ ಮೂಲಕ ನಡೆಯಬೇಕು.
- ವ್ಯವಸಾಯ ಯಾಕೆ ಬೇಕು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿರಿ.
- ಇಂದಿನ ಜನಸಂಖ್ಯಾ ಸ್ಪೋಟದ ಪರಿಣಾಮವು ಆಹಾರ ಬೆಳೆಗಳ ಮೇಲೆ ಯಾವ ರೀತಿ ಆಗುತ್ತಿದೆ ಎಂದು ಅವರಿಗೆ ಮನದಟ್ಟು ಮಾಡಬೇಕು.
- ವ್ಯವಸಾಯ ಮಾಡುವುದರಿಂದಲೂ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ವಿವರಿಸಬೇಕು.
- ದಿನ ಪತ್ರಿಕೆಯಲ್ಲಿ ಬರುವ ಅನೇಕ ಸಾವಯವ ಕೃಷಿಕರ ಬಗ್ಗೆ , ಕೃಷಿಯಲ್ಲಿ ಭಾರೀ ಸಾಧನೆ ಮಾಡಿದವರ ಲೇಖನಗಳು, ನೀರಿಲ್ಲದ ಪ್ರದೇಶದಲ್ಲಿಯೂ ಕೃಷಿ ಸಾಧನೆ ಮಾಡಿದವರ ವಿವರಗಳನ್ನು ತರಗತಿಯಲ್ಲಿ ಪ್ರದರ್ಶಿಸುದರಿಂದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ ಬರಬಹುದು.
- ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಜನರು ಕೂಡ ಪುಷ್ಪ ಕೃಷಿ,ಜೇನು ಕೃಷಿ,ಕೋಳಿ ಸಾಕಾಣೆ,ಇಂತಹ ವ್ಯವಸಾಯ ಮಾಡುವುದರ ಮೂಲಕ ಸಂಪಾದನೆಯನ್ನು ಮಾಡಬಹುದು ಎಂದು ತಿಳಿಸಬೇಕು.
- ರೈತರಾಗುವುದು ಒಂದು ಅವಮಾನ ಎಂದು ಇಂದು ವಿದ್ಯಾವಂತ ಯುವ ಜನರು ತಿಳಿದುಕೊಂಡಿರುವರು. ಅಂತಹ ಕೆಟ್ಟ ಕಲ್ಪನೆಯನ್ನು ವಿದ್ಯಾರ್ಥಿಗಳಿಂದ ದೂರ ಮಾಡಬೇಕು.
- ಪಾಳು ಬಿದ್ದರುವ ಭೂಮಿಯ ವ್ಯವಸಾಯವು ಮಾಡಬೇಕಾದ ಅವಶ್ಯಕತೆಯನ್ನು ಅವರಿಗೆ ಹೇಳಬೇಕು. ದೇಶದ ಅಭಿವೃದ್ದಿಗೆ ಅದು ಪೂರಕ ಎಂದು ಅವರಿಗೆ ತಿಳಿಸಬೇಕು.
- ಕೆಲವು ನಿಷೇದಿತ ಬೆಳೆಗಳ ವಿವರವನ್ನು ಹೇಳುವುದರ ಮೂಲಕ ಮುಂದಕ್ಕೆ ಹಣದ ಆಸೆಗಾಗಿ ಅಂತಹ ಬೆಳೆ ಮಾಡದಿರುಂತೆ ತಿಳಿಸಬೇಕು.
- ದೇಶದಲ್ಲಿ ಹಸಿವೆಯಿಂದ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಹಾರ ಬೆಳೆಗಳನ್ನು ಬೆಳೆಯುದರ ಮಹತ್ವ ತಿಳಿಸ ಬೇಕು.
- ಕೃಷಿ ಭೂಮಿಯನ್ನು ಬೇರೆ ಯಾವುದೇ ಚಟುವಟಿಕೆಗಳಿಗೆ ಉಪಯೋಗಿಸುಕೊಳ್ಳುವುದರ ಅಪಾಯವನ್ನು ಅವರಿಗೆ ತಿಳಿಸಬೇಕು.
ಪರಿಕಲ್ಪನೆ #1ಭೂ ಬಳಕೆ
ಕಲಿಕೆಯ ಉದ್ದೇಶಗಳು
- ಭೂಮಿ ಒಂದು ಪ್ರಾಕೃತಿಕ ಸಂಪತ್ತು ಎಂದು ಅರಿವುಮೂಡಿಸುವುದು.
- ಜನರು ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಬಳಸುತ್ತಿದ್ದಾರೆ ಎಂದು ತಿಳಿಸುವುದು
ಶಿಕ್ಷಕರಿಗೆ ಟಿಪ್ಪಣಿ
ಆತ್ಮೀಯರೆ, ವಿದ್ಯಾರ್ಥಿಗಳು ಈಗಾಗಲೆ ಭೂಬಳಕೆಯ ಬಗ್ಗೆ ಕೆಲವೊಂದು ಪೂರ್ವ ಜ್ಞಾನವನ್ನು ಪಡೆದುಕೊಂಡಿರುವರು. ಅವರು ಪಡೆದಿರುವ ಮಾಹಿತಿಯಿಂದಲೇ ನಮ್ಮ ಪಾಠದ ಬೆಳವಣಿಗೆಯನ್ನು ಮಾಡಬೇಕು. ಪ್ರಶ್ನೆಗಳನ್ನು ಕೇಳುವುದರ ಮೂಲಕ ಸ್ಥಳೀಯವಾಗಿ ಯಾವ ರೀತಿಯಲ್ಲಿ ಭೂ ಬಳಕೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆಯುದರ ಮೂಲಕ ಜ್ಞಾನವನ್ನು ಪುನರಚಿಸಬಹುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭೂ ಬಳಕೆ - ಚಿತ್ರ ವೀಕ್ಷಣೆ
- ಚಟುವಟಿಕೆ ಸಂ 2,ಭೂ ಬಳಕೆ-ಭೂ ಬಳಕೆ ಮೇಲೆ ಪ್ರಭಾವ ಬೀರುವ ಅಂಶಗಳು-ಗುಂಪು ಚಟುವಟಿಕೆ
ಪರಿಕಲ್ಪನೆ #2ಭಾರತದ ಭೂ ಬಳಕೆಯ ಪ್ರಕಾರಗಳು
ಕಲಿಕೆಯ ಉದ್ದೇಶಗಳು
- ಭಾರತದ ಭೂ ಬಳಕೆಯ ವಿವಿಧ ಪ್ರಕಾರಗಳನ್ನು ತಿಳಿಯುವುದು.
- ಭೂಬಳಕೆಯಲ್ಲಿ ಭಾರತವು ಪ್ರಪಂಚದಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ ಎಂದು ತಿಳಿಯುವುದು.
- ಭಾರತದಲ್ಲಿರುವ ಅರಣ್ಯ ಭೂಮಿಯ ಪ್ರಮಾಣವನ್ನು ತಿಳಿಯುವುದು.
- ಬಳಕೆಯಾಗದ ವ್ಯವಸಾಯ ಭೂಮಿಯ ಬಗ್ಗೆ ತಿಳಿಯುವುದು.
- ಬೀಳು ಬಿದ್ದ ಭೂಮಿಯು ದೇಶದ ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
- ಕೃಷೀ ಯೋಗ್ಯ ಭೂಮಿಯಲ್ಲಿ ಕೃಷೀ ಮಾಡುವುದರ ಮಹತ್ವವನ್ನು ಅರ್ಥೈಸುವುದು.
- ವ್ಯವಸಾಯಕ್ಕೆ ಅರಣ್ಯಗಳು ಕೂಡ ಸಾಕಷ್ಟಿರ ಬೇಕು ಎಂದು ಮನವರಿಕೆ ಮಾಡುವುದು.
- ನಮ್ಮ ಅರ್ಥ ವ್ಯವಸ್ಥೆಯಲ್ಲಿ ಕೃಷಿಯ ಪಾತ್ರವನ್ನು ಅರ್ಥೈಸುವುದು.
- ವಿವಿಧ ದೇಶಗಳಲ್ಲಿ ವ್ಯವಸಾಯದ ಪ್ರಮಾಣವನ್ನು ತಿಳಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ಆತ್ಮೀಯ ಶಿಕ್ಷಕರೇ , ಭೂ ಬಳಕೆಯ ಪ್ರಕಾರಗಳನ್ನು ಅನುಕೂಲಿಸುವ ಸಂದರ್ಭದಲ್ಲಿ ನಾವು ಈ ಕೆಳಗಿನ ಅಂಶಗಳಿಗೆ ಹೆಚ್ಚು ಮಹತ್ವ ಕೊಡುವುದು ಸೂಕ್ತ ಎಂದು ಅನ್ನಿಸುತ್ತಿದೆ.
- ನಮ್ಮ ದೇಶದ ಸಾಗುವಳೀ ಭೂಮಿಯ ಪ್ರಮಾಣ ಎಷ್ಟಿದೆ, ಇತರ ದೇಶದಲ್ಲಿ ಎಷ್ಟಿದೆ ಎಂದು ಹೋಲಿಸುತ್ತಾ ನಮ್ಮ ಜನಸಂಖ್ಯೆಗೆ ಸರಿಯಾಗಿ ನಮ್ಮ ಸಾಗುವಳೀ ಭೂಮಿ ಸಾಲದು ಎಂದು ಮನವರಿಕೆ ಮಾಡುವುದು.
- ಭೂ ಬಳಕೆಯ ಯೋಗ್ಯ ಭೂಮಿ ಇದ್ದರೂ ನಾವು ಬಳಸುತ್ತಿಲ್ಲ ಎಂದು ಮನವರಿಕೆ ಮಾಡುತ್ತಾ ಭು ಬಳಕೆಯ ಮಹತ್ವವನ್ನು ತಿಳಿಸುವುದು.
- ಉತ್ತರ ಭಾರತದಲ್ಲಿ ಭೂಬಳಕೆಯು ಹೆಚ್ಚಾಗಿದೆ ಎಂದು ಪ್ರಶಂಸಿಸುತ್ತಾ ದಕ್ಷಿಣ ಭಾರತದಲ್ಲಿ ಭೂ ಬಳಕೆಯ ಮಹತ್ವವನ್ನು ಹೇಳುವುದು.
- ಸ್ವಾತಂತ್ರೈ ಸಂದರ್ಭದಲ್ಲಿ ಭಾರತದಲ್ಲಿ ಅರಣ್ಯದ ಪ್ರಮಾಣವನ್ನು ನೆನಪಿಸುತ್ತಾ ಅರಣ್ಯ ನಾಶವು ವ್ಯವಸಾಯದ ಮೇಲೆ ಬೀರುವ ಪ್ರಭಾವವನ್ನು ಹೇಳುವುದು.
- ಕಟ್ಟಡ ನಿರ್ಮಾಣಕ್ಕಾಗಿ ವ್ಯವಸಾಯೇತರ ಭೂ ಬಳಕೆಯ ಮಹತ್ವವನ್ನು ತಿಳಿಸುವುದು.
- ವ್ಯವಸಾಯದ ಅವಶ್ಯಕತೆಯನ್ನು ಅರಿವು ಮೂಡಿಸುತ್ತಾ ಕೈಗಾರಿಕೆಗಳಿಗೆ ವ್ಯವಸಾಯದ ಭೂಮಿ ಬಳಕೆಯ ಅಪಾಯವನ್ನು ಅರ್ಥೈಸುವುದು.
- ವ್ಯವಸಾಯವೇ ಭಾರತದ ಬೆನ್ನೆಲುಬು ಎಂಬುವುದನ್ನು ಮನದಟ್ಟು ಮಾಡುತ್ತಾ ಬಳಕೆಯಾಗದೇ ಉಳಿದಿರುವ ವ್ಯವಸಾಯ ಯೋಗ್ಯ ಭೂಮಿಯ ಬಳಕೆಯ ಮಹತ್ವವನ್ನು ತಿಳಿಯ ಪಡಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ
ಪರಿಕಲ್ಪನೆ #3ಪ್ರಮುಖ ಬೆಳೆಗಳು
ಕಲಿಕೆಯ ಉದ್ದೇಶಗಳು
- ಭಾರತದ ಪ್ರಮುಖ ಆಹಾರ ಬೆಳೆಗಳನ್ನು ತಿಳಿಯುವುದು.
- ಭತ್ತ ಬೆಳೆಯಲು ಬೇಕಾಗುವ ಹವಾಮಾನ ವಾಯುಗುಣವನ್ನು ತಿಳಿಯುವುದು.
- ಭತ್ತ ಮತ್ತು ಗೋಧಿಯನ್ನು ಬೆಳೆಯುವ ಪ್ರದೇಶವನ್ನು ತಿಳಿಯುವುದು.
- ಭಾರತದ ಇತರ ಆಹಾರ ಬೆಳೆಗಳ ಬಗ್ಗೆತಿಳಿಯುವುದು.
- ಪ್ರಮುಖ ನಾರಿನ ಬೆಳೆಗಳ ಬಗ್ಗೆ ತಿಳಿಯುವುದು
- ನಾರಿನ ಬೆಳೆಗಳನ್ನು ಬೆಳೆಯುವ ಭೂ ಭಾಗಗಳನ್ನು ತಿಳಿಯುವುದು
- ಪುಷ್ಪ ಕೃಷಿಯ ಬಗ್ಗೆ ತಿಳಿಯುವುದು.
- ಪಾನೀಯ ಬೆಳೆಗಳನ್ನು ಭಾರತದಲ್ಲಿ ಯಾವ ರೀತಿ ಬೆಳೆಯುತ್ತಾರೆ ಎಂದು ತಿಳಿಯುವುದು.
- ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಯುವುದು.
- ಭಾರತದ ವಾಯುಗುಣವು ಕೃಷಿ ಯಾವ ರೀತಿಯಲ್ಲಿ ಯೋಗ್ಯವಾಗಿದೆ ಎಂದು ತಿಳಿಯುವುದು.
- ಭಾರತದ ವಿವಿದ ಬೆಳೆಗಳನ್ನು ಬೆಳೆಯಲು ವಾತಾವರಣವು ಹೇಗೆ ಸಹಾಯಕಾರಿಯಾಗಿದೆ.
ಶಿಕ್ಷಕರಿಗೆ ಟಿಪ್ಪಣಿ
ಆತ್ಮೀಯ ಶಿಕ್ಷಕರೇ, ನಾವು ವ್ಯವಸಾಯದ ಪಾಠದಲ್ಲಿ ಪ್ರಮುಖ ಬೆಳೆಗಳ ಬಗ್ಗೆ ಅನುಕೂಲಿಸುವ ಸಂದರ್ಬದಲ್ಲಿ ಈ ಕೆಳಗಿನ ಪ್ರಮುಖವಾದ ಅಂಶಗಳನ್ನು ಗಮನಿಸಬಹುದು.
ಇಂದು ವ್ಯವಸಾಯ ಕ್ಷೇತ್ರವು ಅತ್ಯಂತ ಅಪಾಯ ಸ್ಥಿತಿಯಲ್ಲಿದ್ದು, ಭಾರತದ ಆರ್ಥಿಕತೆಯು ಇದರ ಮೇಲೆಯೇ ನಿಂತಿದೆ ಎಂದು ತಿಳಿಸುವುದು.ನಿರುದ್ಯೋಗದ ಸಮಸ್ಯೆಯನ್ನು ಅರ್ಥೈಸುತ್ತಾ ಕೃಷಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ತಿಳಿಸಬೇಕಾಗಿದೆ. ಮೊದಲಿಗೆ ನಮ್ಮ ಊರಿನಲ್ಲಿ ಮೊದಲು ವ್ಯವಸಾಯ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸುವುದು.
- ಪ್ರಮುಖ ಬೆಳೆ ಭತ್ತವನ್ನು ಕುರಿತು ಅನುಕೂಲಿಸುವಾಗ ಭತ್ತ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವ ಬಗ್ಗೆ ತಿಳಿಸಬೇಕು.
- ಕೃಷೀ ಭೂಮಿಯನ್ನು ಇನ್ನಿತರೇ ಉಪಯೋಗಕ್ಕೆ ಬಳಸುತ್ತಿರುವ ಬಗ್ಗೆ ಮನವರಿಕೆ ಮಾಡುವುದು.
- ವಾಣಿಜ್ಯ ಬೆಳೆ ಕಬ್ಬು , ಹೊಗೆಸಪ್ಪು ಇನ್ನಿತರೇ ಬೆಳೆಗಳ ಬಗ್ಗೆ ತಿಳಿಸುವಾಗ ಅದರ ಇನ್ನಿತರೇ ಉಪಯೋಗದ ಬಗ್ಗೆ ತಿಳಿಸುವುದು.
- ಹೊಗೆಸೊಪ್ಪು ಬಗ್ಗೆ ಮಾಹಿತಿ ಕಲಿಯುವಾಗ ಹೊಗೆಸೊಪ್ಪು ಆರೋಗ್ಯಕ್ಕೆ ಹಾನಿಕರ ಎಂದು ತಿಳಿಸುವುದು.ಇಂದು ಪ್ರಪಂಚದಲ್ಲಿ ಧೂಮಪಾನ, ಇನ್ನಿತರೇ ಮಾದಕ ವಸ್ತುಗಳು ಉಪಯೋಗಿಸುವುದರಿಂದ ಆಗಿರುವ ಹಾನಿಯನ್ನು ತಿಳಿಸುವುದು.
- ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಸುವುದು.
- ಮಹಿಳೆಯರಿಗೆ ಪರ್ಯಾಯ ಉದ್ಯೋಗವಾಗಿ ಪುಷ್ಪ ಉದ್ಯಮ ಸಹಕಾರಿ ಎಂದು ತಿಳಿಸುವುದು.
- ಹತ್ತಿ ಬೆಳೆಯ ಇತಿಹಾಸವನ್ನು ತಿಳಿಸುವುದು.
- ನಿರುದ್ಯೋಗಿಗಳು ಕೃಷಿಯಲ್ಲಿ ತಮ್ಮ ಜೀವನವನ್ನು ಸೊಗಸು ಗೊಳಿಸಬಹುದು ಎಂದು ಭರವಸೆ ಮೂಡಿಸುವುದು.
- ಇಂದು ಕೃಷೀ ಕ್ಷೇತ್ರದ ಮೇಲೆ ಆಗುತ್ತಿರುವ ಕೈಗಾರಿಕೆಯ ಆಕ್ರಮಣವನ್ನು ತಿಳಿಸುವುದು.
- ಇಸ್ರೇಲ್ ಮಾದರಿಯ ವ್ಯವಸಾಯದ ಕುರಿತು ಮಾಹಿತಿ ನೀಡುವುದು
- ಜಪಾನ್ ದೇಶವು ತಂತ್ರಜ್ಞಾನದ ಮೂಲಕ ಕೃಷೀ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ತಿಳಿಸುವುದು.
- ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ಮಾಡುವುದರ ಅವಶ್ಯಕತೆಯನ್ನು ತಿಳಿಸುವುದು.
- ವ್ಯವಸಾಯಕ್ಕೆ ಯೋಗ್ಯ ಭೂಮಿಯಲ್ಲಿ ಕೃಷಿ ಮಾಡುವ ಅಗತ್ಯತೆಯನ್ನು ತಿಳಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಆಹಾರ ಬೆಳೆಗಳು
- ಚಟುವಟಿಕೆ ಸಂ 2,ವಾಣಿಜ್ಯ ಬೆಳೆಗಳು
- ಚಟುವಟಿಕೆ ಸಂ 3,ನಾರಿನ ಬೆಳೆ
- ಚಟುವಟಿಕೆ ಸಂ 4.ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ
ಪರಿಕಲ್ಪನೆ #4ವ್ಯವಸಾಯ
ಕಲಿಕೆಯ ಉದ್ದೇಶಗಳು
- ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸುವುದು.
- ವ್ಯವಸಾಯದಲ್ಲಿರುವ ವಿಧಗಳನ್ನು ಅರ್ಥೈಸುವುದು.
- ಜೀವನಾಧಾರ ಬೇಸಾಯದ ಬಗ್ಗೆ ಚರ್ಚಿಸುವುದು.
- ಮಿಶ್ರ ಬೇಸಾಯ ಅಂದರೆ ಏನು ಎಂದು ತಿಳಿಸಿ, ನಮ್ಮ ಊರಿನ ಮಿಶ್ರ ಬೇಸಾಯದೊಂದಿಗೆ ಹೋಲಿಸುವುದು.
- ಪ್ರಮುಖ ತೋಟಗಾರಿಕಾ ಬೆಳೆಗಳನ್ನು ಪರಿಚಯಿಸುವುದು.
- ನಮ್ಮ ಊರಿನ ವಾಣಿಜ್ಯ ಬೇಸಾಯದ ಕುರಿತು ಮಾಹಿತಿ ಸಂಗ್ರಹಿಸುವುದು.
- ವ್ಯವಸಾಯ ಮಾಡುವ ಋತುಗಳ ಬಗ್ಗೆತಿಳಿಸುವುದು.
- ವ್ಯವಸಾಯದ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚಿಸುವುದು.
ಶಿಕ್ಷಕರಿಗೆ ಟಿಪ್ಪಣಿ
- ವ್ಯವಸಾಯ ಪಾಠವನ್ನು ಅನುಕೂಲಿಸುವಾಗ ಶಿಕ್ಷಕರು ಅವರ ಊರಿನ ವ್ಯವಸಾಯದೊಂದಿಗೆ ಹೋಲಿಸುತ್ತಾ ಕಲಿಕೆ ಸಾಗ ಬೇಕಾಗಿದೆ.
- ವಾಣಿಜ್ಯ ಬೇಸಾಯದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಕಲ್ಪನೆ ದೂರ ಮಾಡಬೇಕಿದೆ.
- ತಂತ್ರಜ್ಞಾನಾಧಾರಿತ ಸಹಜ ಕೃಷಿಯ ಬಗ್ಗೆ ಮಾಹಿತಿ ಕೊಡುವುದು.
- ಸಾವಯವ ಕೃಷಿಯ ಮಹತ್ವವನ್ನು ತಿಳಿಸಬೇಕು
- ಅತಿಯಾದ ಕ್ರಿಮಿನಾಶಕವನ್ನು ಸಿಂಪಡಿಸುವುದರಿಂದ ಆಗುವ ಅನಾಹುತವನ್ನು ತಿಳಿಸುವುದು.
- ಇತ್ತೀಚೆಗೆ ರೈತರ ಸಾಲಮನ್ನ ಮಾಡುವುದರ ಕೆಟ್ಟ ಪರಿಣಾಮವನ್ನು ತಿಳಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಕೋಳಿ ಸಾಕಾಣೆ, ದನಕರು ಸಾಕಾಣೆ ಮನೆಗಳಿಗೆ ಭೇಟಿ
- ಚಟುವಟಿಕೆ ಸಂ 2,ಬೆಳೆ ಋತುಗಳು ಮತ್ತು ಬೆಳೆಯ ಮಾದರಿ ನಿರ್ದರಿಸುವ ಅಂಶಗಳು
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
- ರೈತ ಗೀತೆಗಳನ್ನು ಹಾಡಿಸುವುದು
- ಭತ್ತ ನಾಟಿ ಮಾಡುವ ಸಂದರ್ಬದ ಹಾಡುಗಳನ್ನು ಹಾಡಿಸುವುದು. ಸಂಗ್ರಹಿಸುವುದು.
- ಭಾರತದ ನಕಾಶೆಯನ್ನು ಬಿಡಿಸುವುದು ಮತ್ತು ಅದರಲ್ಲಿ ಪ್ರಮುಖ ಬೆಳೆಗಳನ್ನು ಬೆಳೆಯುವ ಪ್ರದೇಶವನ್ನು ಗುರುತಿಸುವುದು
- ವಿದ್ಯಾರ್ಥಿ ಊರಿನ ಪ್ರಮುಖ ಆಹಾರ ಬೆಳೆಗಳನ್ನು ವಾಣಿಜ್ಯ ಬೆಳೆಗಳನ್ನು ತೋಟಗಾರಿಕಾಬೆಳೆಗಳನ್ನು ಪಟ್ಟಿ ಮಾಡಿಸುವುದು
- ತಂಬಾಕು ಹಾನಿಕಾರಕ ಎಂದು ಚರ್ಚೆ ಏರ್ಪಡಿಸುವುದು.
- ಹತ್ತಿರದ ಹೊಲಗಳಿಗೆ ಭೇಟಿಕೊಡುವುದು.
- ಪ್ರಮುಖ ಬೆಳೆಗಳ ಬಗ್ಗೆ ಡಿಬೇಟ್ ಏರ್ಪಡಿಸುವುದು.
- ಪ್ರಮುಖ ಬೆಳೆಗಳ ಹೆಸರನ್ನು ಚೀಟಿಯಲ್ಲಿ ಬರೆದು ಹಾಕಿ ಪಿಕ್ ಎಂಡ್ ಸ್ಪೀಕ್ ಸ್ಪರ್ದೆ ಏರ್ಪಡಿಸುವುದು.
- ಆಹಾರ ಬೆಳೆ ,ವಾಣಿಜ್ಯ ಬೆಳೆ, ತೋಟಗಾರಿಕಾ ಬೆಳೆಗಳ ಎಲೆಗಳು, ಗಿಡಗಳು, ಬೀಜಗಳನ್ನು ಸಂಗ್ರಹಿಸಿ ವಸ್ತು ಪ್ರದರ್ಶನ ಮಾಡಿ , ಗುರುತಿಸುವ ಸ್ಪರ್ದೆ, ಸ್ಮರಣ ಶಕ್ತಿ ಸ್ಪರ್ದೆ ಏರ್ಪಡಿಸುವುದು.
- ಹೆಣ್ಣು ಮಕ್ಕಳು ಸ್ವಾವಲಂಬಿಯಾಗಲು ಪುಷ್ಪ ಕೃಷಿಯು ಹೆಚ್ಚು ಪೂರಕ ಎಂದು ಚರ್ಚೆ ಏರ್ಪಡಿಸುವುದು.
- ಅರಣ್ಯ ನಾಶವೇ ನಮ್ಮ ಬೆಳೆಗಳ ಏರುಪೇರಿಗೆ ಕಾರಣ ಎಂದು ಚರ್ಚೆ ಏರ್ಪಡಿಸುವುದು.
- ಜನಸಂಖ್ಯಾ ಸ್ಫೋಟವು ವ್ಯವಸಾಯದ ಮೇಲೆ ಪರಿಣಾಮ ಬೀರಿರುತ್ತದೆಯೇ? ಚರ್ಚೆ
- ರಸಪ್ರಶ್ನೆ ಕಾರ್ಯಕ್ರಮವನ್ನು ಮಾಡಿ ಪಠ್ಯದ ಮುಖ್ಯಾಂಶವನ್ನು ಹೇಳುವುದು.
ಯೋಜನೆಗಳು
- ನಿಮ್ಮ ಊರಿನಲ್ಲಿ ಮಾಡುವ ಕೃಷಿ ಬೆಳೆಗಲ ಚಿತ್ರವನ್ನು ಸಂಗ್ರಹಿಸಿರಿ.
- ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಮಾಡಲು ಪುಷ್ಪ ಬೇಸಾಯವು ಹೇಗೆ ಪೂರಕವಾಗಿದೆ ಎಂಬುದನ್ನು ಚರ್ಚಿಸಿ.
- ನಿಮ್ಮ ಊರಿನಲ್ಲಿ ಬೆಳೆಯುವ ಖಾರಿಫ್ ಬೆಳೆಗಳು ಯಾವುವು? ಪಟ್ಟಿ ಮಾಡಿರಿ
- ಭಾರತದಲ್ಲಿ ಬೆಳೆಯುವ ವಿವಿಧ ಆಹಾರ ಮತ್ತು ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿರಿ
- ಭಾರತದ ನಕಾಶೆ ಬಿಡಿಸಿ ಅದರಲ್ಲಿ ಭತ್ತ ,ಗೋಧಿ ಬೆಳೆಯುವ ಪ್ರದೇಶಗಳನ್ನು ಗುರುತಿಸಿರಿ..
ಸಮುದಾಯ ಆಧಾರಿತ ಯೋಜನೆಗಳು
ಯಾವುದಾದರು ಒಂದು ತೋಟಗಾರಿಕಾ ಬೆಳೆಯ ಸಮಗ್ರ ಅಧ್ಯಯನ ಮಾಡಿ ,ನಿಮ್ಮ ಊರಿನ ವಿವಿಧ ಮನೆಗಳಿಗೆ ಭೇಟಿಕೊಟ್ಟು ರೈತರನ್ನು ಕೇಳಿ ಈ ಕೆಳಗಿನ ಮಾಹಿತಿ ಸಂಗ್ರಹಿಸಿ.
- ಆ ಬೆಳೆಯನ್ನು ಬೆಳೆಯುವ ಕ್ರಮಗಳು
- ಆ ಬೆಳೆ ಕೊಡುವ ಇಳುವರಿ
- ಅದನ್ನು ವೈಜ್ಞಾನಿಕವಾಗಿ ಬೆಳೆಯುವ ಕ್ರಮಗಳು
- ಅದರ ಉತ್ಪನ್ನದಿಂದ ಮಾಡುವ ವಸ್ತುಗಳು
- ಆ ಬೆಳೆಯಿಂದ ಭಾರತದ ಆರ್ಥಿಕ ಅಭಿವೃದ್ದಿ
- ಬೇಕಾಗುವ ವಾಯುಗುಣ
- ನಿಮ್ಮ ಊರಿನಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ
- ನಿಮ್ಮ ಊರಿನ ನಿರುದ್ಯೋಗ ಕಡಿಮೆ ಮಾಡುವಲ್ಲಿ ಸಹಾಯವಾಗಿದೆಯೇ?
- ಕೈಗಾರಿಕಾ ಬೆಳವಣಿಗೆಯಲ್ಲಿ ಆ ಬೆಳೆಯ ಪಾತ್ರ
ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸಿ. ಉದಾಹರಣೆಗೆ: ರಬ್ಬರ್ ಬೆಳೆ,
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
- ಎನ್ ಸಿ ಆರ್ ಟಿ ಪುಸ್ತಕದಲ್ಲಿರುವಂತೆ ಪಠ್ಯದ ಮಧ್ಯದಲ್ಲಿ ಚಟುವಟಿಕೆಯನ್ನು ಸೇರಿಸಿ, ಚಟುವಟಿಕೆಯ ಮೂಲಕವೇ ಪಾಠದ ಅಭಿವೃಧ್ಧಿಯನ್ನು ಮಾಡುತ್ತಿದ್ದರೆ ಉತ್ತಮವಾಗುತ್ತಿತ್ತು..
- ರಚನಾತ್ಮಕ ತತ್ವದಂತೆ ಸ್ಥಳೀಯ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಬಹುದಿತ್ತು
- ಚಿತ್ರಗಳು , ವ್ಯವಸಾಯದಲ್ಲಿ ಸಾಧನೆ ಮಾಡಿದ ವ್ಯಕ್ತಿ ಚಿತ್ರಗಳುನ್ನು ಕೊಡಬಹುದಿತ್ತು.